ಎಸ್​ಬಿಐನಿಂದ ಗ್ರಾಹಕರಿಗೆ ಭರ್ಜರಿ ಉಡುಗೊರೆ; ಜನವರಿ 1ರಿಂದ ಗೃಹ ಸಾಲದ ಬಡ್ಡಿ ಇಳಿಕೆ

ಎಸ್​ಬಿಐ ರೆಪೊ ದರ ಪ್ರಸ್ತುತ ಶೇ.5.15ರಷ್ಟಿದೆ. ರೆಪೊ ದರಕ್ಕೆ ತಕ್ಕನಾಗಿ ಬ್ಯಾಂಕುಗಳು ತಮ್ಮ ಇಬಿಆರ್ ಗಳನ್ನು ಹೊಂದಿಸಬೇಕು. ಆಗಾದಾಗ ಮಾತ್ರ ರೆಪೊ ದರ ಇಳಿಕೆಯ ಪ್ರಯೋಜನ ಗ್ರಾಹಕರಿಗೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಎಸ್​ಬಿಐ ಒಂದಿಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಆದರೆ, ಅನೇಕ ಬ್ಯಾಂಕುಗಳು ರೆಪೊ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.

news18-kannada
Updated:December 31, 2019, 7:26 AM IST
ಎಸ್​ಬಿಐನಿಂದ ಗ್ರಾಹಕರಿಗೆ ಭರ್ಜರಿ ಉಡುಗೊರೆ; ಜನವರಿ 1ರಿಂದ ಗೃಹ ಸಾಲದ ಬಡ್ಡಿ ಇಳಿಕೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ: ಸರ್ಕಾರಿ ಸ್ವಾಮ್ಯದ ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಬಾಹ್ಯ ಮಾನದಂಡ ಆಧಾರಿತ ದರವನ್ನು (ಇಬಿಆರ್) 25 ಮೂಲಾಂಶಗಳಷ್ಟು (ಶೇ.0.25) ಇಳಿಕೆ ಮಾಡಿದೆ. ಇದರಿಂದಾಗಿ ಗೃಹ ಸಾಲದ ಬಡ್ಡಿ ದರ ಇಳಿಕೆಯಾಗಲಿದೆ.

ಇಬಿಆರ್ ಇಳಿಕೆಯಿಂದಾಗಿ ಬಡ್ಡಿ ದರವು ಈಗಿನ ಶೇ.8.05ರಿಂದ ಶೇ.7.80ಕ್ಕೆ ಇಳಿಕೆಯಾಗಲಿದೆ. ಹೊಸ ಪರಿಷ್ಕೃತ ದರಗಳು ಜನವರಿ 1ರಿಂದ ಜಾರಿಗೆ ಬರಲಿವೆ ಎಂದು ಎಸ್​ಬಿಐ ಪ್ರಕಟಣೆಯಲ್ಲಿ ಹೇಳಿದೆ.

ಇಬಿಆರ್ ಇಳಿಕೆ ಪರಿಣಾಮ ಗೃಹ ಸಾಲದ ಮೇಲಿನ ಬಡ್ಡಿದರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಿಗಳ (ಎಂಎಸ್​ಎಂಇ) ಸಾಲದ ಬಡ್ಡಿ ದರ ಶೇ.0.25ರಷ್ಟು ಕಡಿಮೆಯಾಗುತ್ತದೆ. ತಮ್ಮ ಸಾಲಗಳನ್ನು ಇಬಿಆರ್​ಗೆ ಜೋಡಣೆ ಮಾಡಿದ ಗ್ರಾಹಕರಿಗೆ ಇದು ಅನ್ವಯವಾಗುತ್ತದೆ. ಜೊತೆಗೆ ಹೊಸ ಗ್ರಾಹಕರಿಗೂ ಲಾಭವಾಗುತ್ತದೆ ಎಂದು ಎಸ್​ಬಿಐ ಹೇಳಿದೆ.

ಹೊಸದಾಗಿ ಗೃಹ ಸಾಲ ಪಡೆಯುವವರಿಗೆ ಇನ್ನು ಮುಂದೆ ವಾರ್ಷಿಕ ಶೇ.7.90ರ ಬಡ್ಡಿ ದರ ಅನ್ವಯವಾಗಲಿದೆ. ಈ ಮೊದಲು ಶೇ.8.15ರ ಬಡ್ಡಿದರ ಇತ್ತು.

ಇದನ್ನು ಓದಿ: Bank Holidays in January 2020: ಜನವರಿ ತಿಂಗಳಲ್ಲಿ ಬರೋಬ್ಬರಿ 8 ದಿನ ಬ್ಯಾಂಕ್​ ರಜೆ

ಎಸ್​ಬಿಐ ರೆಪೊ ದರ ಪ್ರಸ್ತುತ ಶೇ.5.15ರಷ್ಟಿದೆ. ರೆಪೊ ದರಕ್ಕೆ ತಕ್ಕನಾಗಿ ಬ್ಯಾಂಕುಗಳು ತಮ್ಮ ಇಬಿಆರ್ ಗಳನ್ನು ಹೊಂದಿಸಬೇಕು. ಆಗಾದಾಗ ಮಾತ್ರ ರೆಪೊ ದರ ಇಳಿಕೆಯ ಪ್ರಯೋಜನ ಗ್ರಾಹಕರಿಗೆ ಸಿಗಲು ಸಾಧ್ಯ. ಈ ನಿಟ್ಟಿನಲ್ಲಿ ಎಸ್​ಬಿಐ ಒಂದಿಷ್ಟು ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿದೆ. ಆದರೆ, ಅನೇಕ ಬ್ಯಾಂಕುಗಳು ರೆಪೊ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ.
First published:December 31, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ