ತಂತ್ರಜ್ಞಾನ ಬೆಳೆದಂತೆ ವಂಚನೆ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಆನ್‌ಲೈನ್ ಮೂಲಕ ನಾವು ನಿಮಗೆ ಸಾಲ ನೀಡುತ್ತೇವೆ ಎಂದು ಇತ್ತೀಚೆಗೆ ಕರೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಎಸ್‌ಬಿಐ ಬ್ಯಾಂಕ್ ತನ್ನ ಗ್ರಾಹಕರು ಮೋಸ ಹೋಗುವುದನ್ನು ತಪ್ಪಿಸಲು ಮುಂಜಾಗ್ರತಾ ಸಂದೇಶವನ್ನು ನೀಡುತ್ತಿದೆ. ಎಸ್‌ಬಿಐ ಬ್ಯಾಂಕ್‌ನಿಂದ ನಾವು ಕೂಡಲೇ ಸಾಲ ನೀಡುತ್ತೇವೆ ಎಂದು ಬರುವ ಕರೆ ಮತ್ತು ಸಂದೇಶಗಳಿಗೆ (ಲಿಂಕ್) ಪ್ರತಿಕ್ರಿಯೆ ಕೊಡಬೇಡಿ ಎಂದು ತನ್ನ ಗ್ರಾಹಕರಿಗೆ ತಿಳಿಸಿದೆ.
ಕ್ಷಣದಲ್ಲೇ ಲೋನ್ ನೀಡುತ್ತೇವೆ ಎನ್ನುವ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರ!
ಕ್ಷಣಾರ್ಧದಲ್ಲಿ ಲೋನ್ ಪಡೆಯಿರಿ ಎಂದು ಮೊಬೈಲ್‌ಗಳಿಗೆ ಲಿಂಕ್ ಮೂಲಕ ಸಂದೇಶಗಳು ಬರುತ್ತವೆ. ಈ ರೀತಿಯ ಲಿಂಕ್‌ಗಳನ್ನು ಒತ್ತಬೇಡಿ. ಇದರಿಂದ ನಿಮ್ಮ ಖಾತೆಯಲ್ಲಿನ ಹಣ ವಂಚನೆಗೆ ಒಳಗಾಗುವ ಸಾಧ್ಯತೆ ಇರುತ್ತದೆ ಎಂದು ಬ್ಯಾಂಕ್ ಎಚ್ಚರಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಸ್‌ಬಿಐ ಆನ್‌ಲೈನ್‌ನಲ್ಲಿ ನಾವು ನಿಮಗೆ ಕ್ಷಣಾರ್ಧದಲ್ಲಿ ಸಾಲ ನೀಡುತ್ತೇವೆ ಎಂದು ನಿಮ್ಮ ಗಮನಸೆಳೆದು ಲಿಂಕ್ ಮೇಲೆ ಒತ್ತುವಂತೆ ಪ್ರಚೋದಿಸುತ್ತಾರೆ. ಇಂತಹ ಲಿಂಕ್‌ಗಳನ್ನು ಕ್ಲಿಕ್ ಮಾಡಿದರೆ ನೀವು ಮೋಸ ಹೋಗುವ ಸಾಧ್ಯತೆ ಇದೆ ಎಂದು ಬ್ಯಾಂಕ್ ಹೇಳಿದೆ.
ಎಸ್‌ಬಿಐ ಅಧಿಕೃತ ಟ್ವೀಟ್‌ನಲ್ಲಿ ಏನಿದೆ?
ಎಸ್‌ಬಿಐ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಿದೆ. ತ್ವರಿತವಾಗಿ ಲೋನ್ ನೀಡುತ್ತೇವೆ ಎಂಬ ಕಾನೂನುಬಾಹಿರ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರವಹಿಸಿ! ದಯವಿಟ್ಟು ಗ್ರಾಹಕರು ಅನಧಿಕೃತ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ. ಆನ್‌ಲೈನ್‌ನಲ್ಲಿ ಎಸ್‌ಬಿಐ ಅಥವಾ ಇನ್ನಾವುದೇ ಬ್ಯಾಂಕ್ ಹೆಸರು ಹೇಳಿಕೊಂಡು ಕರೆ ಮಾಡುವವರಿಗೆ ನಿಮ್ಮ ವಿವರಗಳನ್ನು ನೀಡಬೇಡಿ. ನಿಮ್ಮ ಎಲ್ಲಾ ವ್ಯವಹಾರ ಮತ್ತು ಮಾಹಿತಿಗಾಗಿ https://bank.sbi ಗೆ ಭೇಟಿ ನೀಡಿ ಎಂದು ಗ್ರಾಹಕರಿಗೆ ಆನ್‌ಲೈನ್ ವಂಚಕರಿಂದ ದೂರವಿರಿ ಎಂದು ಸಂದೇಶ ನೀಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ