SBI ATM: ಎಟಿಎಂನಿಂದ ಹಣ ತೆಗೆಯೋಕೆ ನಿಯಮ ಬದಲಾಯಿಸಿದ ಎಸ್​ಬಿಐ; ಗ್ರಾಹಕ ಮಾಡಬೇಕಾಗಿದ್ದೇನು?

ನೀವು ಎಟಿಎಂಗೆ ತೆರಳಿದಾಗ ಕಾರ್ಡ್​ ಹಾಕಿ ಅಲ್ಲಿ ಪಿನ್​ ಎಂಟರ್​ ಮಾಡುತ್ತೀರಿ. ಈ ಮೂಲಕ ಹಣ ವಿತ್​ ಡ್ರಾ ಮಾಡುತ್ತೀರಿ. ಆದರೆ, ಈಗ ಎಸ್​ಬಿಐ ಹಣ ವಿತ್​ಡ್ರಾ ಮಾಡಲು ಹೊಸ ನಿಯಮ ಜಾರಿಗೆ ತಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಎಟಿಎಂನಿಂದ ಹಣ ವಿತ್​ಡ್ರಾ ಮಾಡುವ ವಿಚಾರದಲ್ಲಿ ಸಾಕಷ್ಟು ಫ್ರಾಡ್​ಗಳು ನಡೆಯುತ್ತಿವೆ. ಸಾಕಷ್ಟು ಜನರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದನ್ನು ತಡೆಯುವ ಉದ್ದೇಶದಿಂದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಎಟಿಎಂನಿಂದ ಹಣ ತೆಗೆಯಲು ಹೊಸ ನಿಯಮವನ್ನು ಜಾರಿಗೆ ತಂದಿದೆ. ಸೆಪ್ಟೆಂಬರ್ 18ರಿಂದ ಈ ನಿಯಮ ಅನ್ವಯ ಆಗಲಿದೆ. ಅಷ್ಟಕ್ಕೂ ಎಟಿಎಂನಿಂದ ಹಣ ವಿತ್​ ಡ್ರಾ ಮಾಡುವವರು ಏನು ಮಾಡಬೇಕು? ಅವರು ಅನುಸರಿಸಬೇಕಾದ ಕ್ರಮಗಳೇನು ಎನ್ನುವುದಕ್ಕೆ ಇಲ್ಲಿದೆ ಸಂಪೂರ್ಣ ಮಾಹಿತಿ.

  ನೀವು ಎಟಿಎಂಗೆ ತೆರಳಿದಾಗ ಕಾರ್ಡ್​ ಹಾಕಿ ಅಲ್ಲಿ ಪಿನ್​ ಎಂಟರ್​ ಮಾಡುತ್ತೀರಿ. ಈ ಮೂಲಕ ಹಣ ವಿತ್​ ಡ್ರಾ ಮಾಡುತ್ತೀರಿ. ಆದರೆ, ಇನ್ನುಮುಂದೆ ಎ​ಸ್​ಬಿಐ ಎಟಿಎಂನಿಂದ 10 ಸಾವಿರ ಹಾಗೂ ಅದಕ್ಕಿಂತ ಮೇಲ್ಪಟ್ಟು ನೀವು ಹಣ ತೆಗೆಯುತ್ತೀರಿ ಎಂದಾದರೆ ನಿಮ್ಮ ಮೊಬೈಲ್​ಗೆ ಒನ್​ ಟೈಮ್​ ಪಾಸ್ವರ್ಡ್​ (ಒಟಿಪಿ) ಬರುತ್ತದೆ. ಅದನ್ನು ಎಂಟರ್​ ಮಾಡಿದ ನಂತರವೇ ಹಣ ವಿತ್​ ಡ್ರಾ ಆಗುತ್ತದೆ.

  "ಇತ್ತೀಚೆಗೆ ಹೆಚ್ಚುತ್ತಿರುವ ಫ್ರಾಡ್​ಗಳನ್ನು ತಪ್ಪಿಸುವ ಉದ್ದೇಶದಿಂದ ನಾವು ಒಟಿಪಿ ಆಧಾರಿತ ಹಣ ವಿತ್​ ಡ್ರಾ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. 10 ಸಾವಿರಕ್ಕೂ ಅಧಿಕ ಹಣ ವಿತ್​ ಡ್ರಾ ಮಾಡುವವರಿಗೆ ಈ ನಿಯಮ ಅನ್ವಯ ಆಗುತ್ತದೆ," ಎಂದು ಎಸ್​ಬಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

  ಇದನ್ನೂ ಓದಿ: ಭಾರತ-ಚೀನಾ ಗಡಿ ಸಂಘರ್ಷ: ‘ಶಾಂತಿಗೆ ಬದ್ಧ, ಸಮರಕ್ಕೂ ಸಿದ್ಧ‘ ಎಂದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​​

  ಗ್ರಾಹಕರು ಏನು ಮಾಡಬೇಕು?

  ಸಾಮಾನ್ಯವಾಗಿ ಬ್ಯಾಂಕ್​ ಖಾತೆಯೊಂದಿಗೆ ನಿಮ್ಮ ಮೊಬೈಲ್​ ನಂಬರ್​ ಲಿಂಕ್​ ಆಗಿರುತ್ತದೆ. ಒಂದೊಮ್ಮೆ ಲಿಂಕ್​ ಆಗಿಲ್ಲ ಎಂದಾದರೆ ಇಂದೇ ಬ್ಯಾಂಕ್​ಗೆ ತೆರಳಿ ಮೊಬೈಲ್​ ಸಂಖ್ಯೆ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೆ, ಎಟಿಎಂಗೆ ತೆರಳುವಾಗ ನೀವು ಮೊಬೈಲ್​ಅನ್ನು ಕೊಂಡೊಯ್ಯಬೇಕು.
  Published by:Rajesh Duggumane
  First published: