SBI interest rates - ಎಸ್​​ಬಿಐ, ಐಸಿಐಸಿಐ ಗ್ರಾಹಕರಿಗೆ ಶಾಕ್; ದೇಶದ ಎರಡು ಅತಿದೊಡ್ಡ ಬ್ಯಾಂಕುಗಳಿಂದ ಬಡ್ಡಿ ಇಳಿಕೆ

ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ತನ್ನ ಗ್ರಾಹಕರ ಉಳಿತಾಯ ಖಾತೆಯ ಠೇವಣಿಗೆ ನೀಡುವ ಬಡ್ಡಿ ದರ ಈಗ ಶೇ. 2.70ಗೆ ಇಳಿದಿದೆ. ಅಂದರೆ ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಒಂದು ವರ್ಷದವರೆಗೆ 1 ಸಾವಿರ ರೂಪಾಯಿ ಇರಿಸಿದರೆ 27 ರೂ ಬಡ್ಡಿ ಸಿಗುತ್ತದೆ ಅಷ್ಟೇ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಎಸ್​ಬಿಐ ಮತ್ತು ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ತಮ್ಮ ಗ್ರಾಹಕರ ಖಾತೆಯಲ್ಲಿರುವ ಹಣದ ಮೇಲೆ ನೀಡಲಾಗುವ ಬಡ್ಡಿಯನ್ನು ಕಡಿಮೆಗೊಳಿಸಿವೆ. ಐಸಿಐಸಿಐ 25 ಮೂಲಾಂಕ, ಅಂದರೆ ಶೇ. 0.25ರಷ್ಟು ಬಡ್ಡಿ ಇಳಿಕೆ ಮಾಡಿದೆ. ಎಸ್​ಬಿಐ ಕೆಲವೇ ದಿನಗಳ ಅಂತರದಲ್ಲಿ ಎರಡನೇ ಬಾರಿ ಬಡ್ಡಿ ಇಳಿಸುವ ಕ್ರಮ ಕೈಗೊಂಡಿದೆ. ಏಪ್ರಿಲ್ ತಿಂಗಳಲ್ಲಿ 25 ಮೂಲಾಂಕ ಇಳಿಸಿದ್ದ ಎಸ್​ಬಿಐ ಇದೀಗ ಇನ್ನೂ 5 ಮೂಲಾಂಕ ಇಳಿಕೆ ಮಾಡಿದೆ. ಇದರೊಂದಿಗೆ ಎಸ್​ಬಿಐನ ಉಳಿತಾಯ ಖಾತೆಯ ಠೇವಣಿಯ ಮೇಲಿನ ಬಡ್ಡಿ ದರ ಶೇ. 2.70ಗೆ ಇಳಿಕೆಯಾಗಿದೆ. ಮೇ 31ರಿಂದಲೇ ಇದು ಅನ್ವಯವಾಗಲಿದೆ.

ಎಸ್​ಬಿಐ ಖಾತೆಯ ಎಲ್ಲಾ ಪ್ರಮಾಣದ ಠೇವಣಿಗೂ ಇದೇ ಬಡ್ಡಿ ದರ ಅನ್ವಯವಾಗಲಿದೆ. ಸಾಮಾನ್ಯವಾಗಿ ಎಸ್​ಬಿಐನಲ್ಲಿ 1 ಲಕ್ಷದೊಳಗಿನ ಬ್ಯಾಲೆನ್ಸ್ ಇರುವ ಹಣಕ್ಕೆ ಪ್ರತ್ಯೇಕ ಬಡ್ಡಿ ದರ ಇತ್ತು. ಹಾಗೆಯೇ, ಲಕ್ಷಕ್ಕಿಂತ ಹೆಚ್ಚು ಹಣ ಇರುವ ಖಾತೆಗೆ ಹೆಚ್ಚು ಬಡ್ಡಿ ಕೊಡಲಾಗುತ್ತಿತ್ತು. ಈಗ ಎರಡೂ ಸ್ಲಾಬ್​ಗಳಿಗೆ ನೀಡುವ ಬಡ್ಡಿ ದರ ಶೇ. 2.70 ಮಾತ್ರ. ಉದಾಹರಣೆಗೆ, ಗ್ರಾಹಕರು ತಮ್ಮ ಉಳಿತಾಯ ಖಾತೆಯಲ್ಲಿ ಒಂದು ವರ್ಷದವರೆಗೆ 1 ಸಾವಿರ ರೂಪಾಯಿ ಇರಿಸಿದರೆ 27 ರೂ ಬಡ್ಡಿ ಸಿಗುತ್ತದೆ ಅಷ್ಟೇ.

ಎಸ್​ಬಿಐ ಮೇ 27ರಂದು ತನ್ನಲ್ಲಿನ ಟರ್ಮ್ ಡೆಪಾಸಿಟ್, ಅಂದರೆ ನಿಶ್ಚಿತ ಠೇವಣಿಯಂತಹ ನಿಗದಿತ ಅವಧಿಯ ಠೇವಣಿಗಳಿಗೆ ನೀಡುತ್ತಿದ್ದ ಬಡ್ಡಿ ದರದಲ್ಲಿ ಶೇ. 0.40ರಷ್ಟು ಕಡಿತ ಮಾಡಿದೆ. 45 ದಿನಗಳವರೆಗಿನ ಠೇವಣಿಗಳಿಗೆ ಬಡ್ಡಿ ದರ ಶೇ. 3.30ರಿಂದ ಶೇ. 2.90ಗೆ ಇಳಿಸಿದೆ. 180ರಿಂದ 210 ದಿನಗಳವರೆಗಿನ ಅವಧಿಯ ಠೇವಣಿಗಳಿಗೆ ಬಡ್ಡಿದರವನ್ನು ಶೇ. 4.40ಗೆ ಇಳಿಕೆ ಮಾಡಿದೆ. 5ರಿಂದ 10 ವರ್ಷ ಅವಧಿಯ ಠೇವಣಿಗೆ ನೀಡುತ್ತಿದ್ದ ಶೇ. 5.70 ಬಡ್ಡಿ ದರ ಶೇ. 5.40ಗೆ ಇಳಿದಿದೆ. ಇನ್ನು, 2 ಕೋಟಿಗಿಂತ ಹೆಚ್ಚು ಮೊತ್ತದ ಠೇವಣಿಗೆ ನೀಡಲಾಗುವ ಬಡ್ಡಿ ದರ ಕೂಡ ಶೇ. 0.50ಯಷ್ಟು ಇಳಿಸಲು ಎಸ್​ಬಿಐ ನಿರ್ಧಾರ ಕೈಗೊಂಡಿದೆ.

ಇದನ್ನೂ ಓದಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಿಂದ ಮಹತ್ವದ ನಿರ್ಧಾರ; ಗೃಹ ಸಾಲ-ಉಳಿತಾಯ ಖಾತೆ ಮೇಲಿನ ಬಡ್ಡಿ ದರ ಇಳಿಕೆ

ಎಸ್​ಬಿಐಗೆ ಹೋಲಿಸಿದರೆ ತುಸು ಹೆಚ್ಚು ಬಡ್ಡಿ ನೀಡುವ ಐಸಿಐಸಿಐ ಬ್ಯಾಂಕು ಈಗ ಶೇ 25ರಷ್ಟು ಬಡ್ಡಿ ಇಳಿಕೆ ಮಾಡಿದೆ. ಈಗ 50 ಲಕ್ಷದೊಳಗಿನ ಎಲ್ಲಾ ರೀತಿಯ ಠೇವಣಿಗಳಿಗೆ ನೀಡಲಾಗುವ ಬಡ್ಡಿದರವನ್ನು ಶೇ. 3.25ರಿಂದ ಶೇ. 3ಕ್ಕೆ ಇಳಿಕೆ ಮಾಡಿದೆ. 50 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ ಶೇ. 3.50ರಷ್ಟು ಬಡ್ಡಿ ನೀಡಲಾಗುತ್ತದೆ. ಐಸಿಐಸಿಐ ಬ್ಯಾಂಕ್​ನ ನೂತನ ದರಗಳು ಜೂನ್ 4ರಿಂದ, ಅಂದರೆ ನಾಳೆಯಿಂದ ಜಾರಿಗೆ ಬರುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕು ರಿವರ್ಸ್ ರೆಪೋ ದರವನ್ನು ಇಳಿಕೆ ಮಾಡಿದ ಪರಿಣಾಮವಾಗಿ ಎಲ್ಲಾ ಬ್ಯಾಂಕುಗಳು ಗ್ರಾಹಕರ ಠೇವಣಿಗಳಿಗೆ ಕೊಡುವ ಬಡ್ಡಿ ದರಗಳನ್ನ ಇಳಿಕೆ ಮಾಡುತ್ತಿವೆ. ಹಾಗೆಯೇ, ಆರ್​ಬಿಐ ರೆಪೋ ದರವನ್ನ ಸತತವಾಗಿ ಇಳಿಸುತ್ತಾ ಬಂದಿರುವುದರಿಂದ ಸಾಲದ ಮೇಲಿನ ಬಡ್ಡಿ ದರವೂ ಕೂಡ ಗಮನಾರ್ಹವಾಗಿ ಇಳಿಕೆಯಾಗಿದೆ.
First published: