ನವದೆಹಲಿ; 2021ರ ಮೊದಲ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಗಣರಾಜ್ಯೋತ್ಸವದ ದಿನ ನಡೆದ ಕೆಂಪು ಕೋಟೆ ಹಿಂಸಾಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜನವರಿ 26ರಂದು ತ್ರಿವರ್ಣ ಧ್ವಜಕ್ಕೆ ಮಾಡಿದ ಅವಮಾನಕ್ಕೆ ಸಾಕ್ಷಿಯಾದ ದೇಶ ಆಘಾತಕ್ಕೊಳಗಾಗಿದೆ ಎಂದು ಹೇಳಿದರು. ಇದರ ಜೊತೆಗೆ ಪದ್ಮ ಪುರಸ್ಕಾರಕ್ಕೆ ಭಾಜನರಾದ ಸಾಧಕರನ್ನು ಅಭಿನಂದಿಸಿ, ದೇಶದ ಜನರು ಅವರಿಂದ ಸ್ಫೂರ್ತಿ ಪಡೆಯಬೇಕು ಎಂದು ಹೇಳಿದರು. ಮತ್ತು ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿದ ಭಾರತೀಯ ಕ್ರಿಕೆಟ್ ತಂಡವನ್ನು ಶ್ಲಾಘಿಸಿದರು.
2021 ರ ಮೊದಲ 'ಮನ್ ಕಿ ಬಾತ್'ಗೆ ಕೆಲವು ಗಂಟೆಗಳ ಮುನ್ನ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಚೀನಾ ವಿಷಯವಾಗಿ ಸಲಹೆ ನೀಡಿ ಟ್ವೀಟ್ ಮಾಡಿದ್ದಾರೆ. "ಹೆದರದಿರಿ, ಇಂದು ಚೀನಾ ಬಗ್ಗೆ ಮಾತನಾಡಲು ಪ್ರಯತ್ನಿಸಿ" ಎಂದು ಗಾಂಧಿ ಹೇಳಿದ್ದರು. ಪ್ರಧಾನಿ ಮೋದಿ ಅವರ ಮಾಸಿಕ ರೇಡಿಯೊ ಕಾರ್ಯಕ್ರಮದ 73 ನೇ ಸಂಚಿಕೆಯು ರಾಷ್ಟ್ರವ್ಯಾಪಿ ಪಲ್ಸ್ ಪೋಲಿಯೊ ಕಾರ್ಯಕ್ರಮಕ್ಕೆ ಚಾಲನೆ ನೀಡುವ ದಿನವೇ ನಡೆದಿದೆ. ಜೊತೆಗೆ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2021-22ರ ಕೇಂದ್ರ ಬಜೆಟ್ ಮಂಡಿಸುವ ಒಂದು ದಿನ ಮುಂಚೆ, ಮತ್ತು ಹೊಸ ಕೃಷಿ ಸುಧಾರಣೆಗಳ ವಿರುದ್ಧ ರೈತರು ನಡೆಸುತ್ತಿರುವ ಆಂದೋಲನದಲ್ಲಿ ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆಗೆ ನುಗ್ಗಿ ದೆಹಲಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ ಕೆಲವು ದಿನಗಳ ನಂತರ ಮನ್ ಕೀ ಬಾತ್ನಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದಾರೆ.
ಇದನ್ನು ಓದಿ: Mann ki Baat: 2021ರ ಪ್ರಧಾನಿಯ ಮೊದಲ ಮನ್ ಕೀ ಬಾತ್ನಲ್ಲಿ ಚೀನಾ ವಿಷಯ ಪ್ರಸ್ತಾಪಿಸಲು ರಾಹುಲ್ ಗಾಂಧಿ ಸಲಹೆ
ಕಳೆದ ಒಂದು ವರ್ಷದಲ್ಲಿ ಜನರ ದೃಷ್ಟಿಕೋನದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಈಗ ಬಹಳಷ್ಟು ಗ್ರಾಹಕರು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳನ್ನು ಬಳಸಲು ಮುಂದಾಗಿದ್ದಾರೆ. ಈ ಮೂಲಕ ವೋಕಲ್ ಫಾರ್ ಲೋಕಲ್ಗೆ ತಮ್ಮ ಬೆಂಬಲ ತೋರಿಸಿದ್ದಾರೆ ಮತ್ತು ವಿಶ್ವ ದರ್ಜೆಯ ಉತ್ಪನ್ನಗಳನ್ನು ತಯಾರಿಸಲು ತಯಾರಕರು ಮತ್ತು ಉದ್ಯಮಿಗಳಿಗೆ ಪ್ರಧಾನಿ ಮೋದಿ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ