ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!

ಹನಿ-ಹನಿ ಸೇರಿದರೆ ಹಳ್ಳ ಎಂಬ ಮಾತಿದೆ. ಈ ಮಾತು ಹೂಡಿಕೆಗೂ ಅನ್ವಯಿಸುತ್ತದೆ. ದೀರ್ಘಾವಧಿವರೆಗೆ ನೀವು ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಪಾವತಿಸುತ್ತಿದ್ದರೆ, ಅದರಿಂದ ಸಿಗುವ ಆದಾಯ ಕೂಡ ಹೆಚ್ಚಾಗುತ್ತಾ ಹೋಗುತ್ತದೆ.

zahir | news18
Updated:January 12, 2019, 12:57 PM IST
ಕೇವಲ 1400 ರೂ. ಉಳಿತಾಯ ಮಾಡಿ, ಕೆಲಸಕ್ಕೆ ಸೇರುವ ಮುನ್ನ 1 ಕೋಟಿ ರೂ. ನಿಮ್ಮದಾಗಿಸಿ..!
ಸಾಂದರ್ಭಿಕ ಚಿತ್ರ
zahir | news18
Updated: January 12, 2019, 12:57 PM IST
ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿತರಾಗಿರುತ್ತಾರೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಮುಂದಿನ ಜೀವನಕ್ಕೆ ಭದ್ರ ಬುನಾದಿ ಹಾಕಲು ಬಯಸುತ್ತಾರೆ. ಆದರೆ ಒಂದು ಹಂತದವರೆಗೆ ಶಿಕ್ಷಣ ನೀಡಿದರೂ, ಬಳಿಕ ಆರ್ಥಿಕ ಸಂಕಷ್ಟದಿಂದ ಅದನ್ನು ಮುಂದುವರೆಸಲು ಸಾಧ್ಯವಾಗಿರುವುದಿಲ್ಲ.

ಮೇಲ್ನೋಟಕ್ಕೆ ಇಂತಹ ಸಮಸ್ಯೆಗಳು ಉಳಿತಾಯದ ಕೊರತೆಯಿಂದ ಉಂಟಾಗುತ್ತದೆ. ಇದಕ್ಕೆಲ್ಲಾ ಪರಿಹಾರ ಎಂಬಂತೆ ಮಕ್ಕಳ ಭವಿಷ್ಯಕ್ಕೆ ಅನುಕೂಲವಾಗುವಂತಹ ಯೋಜನೆವೊಂದರ ಬಗ್ಗೆ ನಾವು ತಿಳಿಸುತ್ತೇವೆ. ಈ ಯೋಜನೆಯಲ್ಲಿ ಮಕ್ಕಳ ಹೆಸರಿನಲ್ಲಿ ಬಂಡವಾಳ ಹೂಡಿದರೆ ಅವರು ವಿದ್ಯಾಭ್ಯಾಸ ಪೂರ್ಣಗೊಳಿಸುವ ಹೊತ್ತಿಗೆ ಅದರ ಮೌಲ್ಯ 1 ಕೋಟಿ ರೂ ಆಗಿರಲಿದೆ.

ಕಡಿಮೆ ಮೊತ್ತದ ಹೂಡಿಕೆಯಿಂದ ಈ ಯೋಜನೆಯನ್ನು ಪ್ರಾರಂಭಿಸಬಹುದು ಎಂಬುದೇ ಇದರ ವಿಶೇಷತೆ. ತಿಂಗಳಿಗೆ ಕೇವಲ 1400 ರೂ. ಹೂಡಿಕೆ ಮಾಡಿಕೊಳ್ಳುವ ಮೂಲಕ ಈ ಯೋಜನೆ ಪ್ರಾರಂಭಿಸಿದರೆ, ಪ್ರತಿ ವರ್ಷ ಶೇ.15 ರಷ್ಟು ನಿಮ್ಮ ಬಂಡವಾಳವನ್ನು ಹೆಚ್ಚಿಸಿಕೊಳ್ಳಬಹುದು. ಅಂದರೆ 1400 ರೂ ಹೂಡಿದರೆ, ಮುಂದಿನ ವರ್ಷ ಅದು 1610 ರೂ. ಆಗಿರಲಿದೆ. ಇದೇ ರೀತಿ ನಿಮ್ಮ ಹೂಡಿಕೆಯ ಮೇಲಿನ ಆದಾಯವು ಹೆಚ್ಚಾಗುತ್ತಾ ಹೋಗುತ್ತದೆ. ಈ ಹೂಡಿಕೆಯ ಮೇಲೆ ನಿಮಗೆ ಶೇ. 12 ರಷ್ಟು ರಿಟರ್ನ್​ ಆದಾಯ ಲಭಿಸುತ್ತಾ ಹೋದರೆ 25 ವರ್ಷಗಳಲ್ಲಿ ಆ ಮೊತ್ತ ಒಂದು ಕೋಟಿ ಆಗಲಿದೆ.

ಹೂಡಿಕೆ ಮಾಡುವುದೆಲ್ಲಿ?

ಕಳೆದ ಒಂದು ವರ್ಷದಲ್ಲಿ ಹನ್ನೆರಡಕ್ಕೂ ಹೆಚ್ಚಿನ ಮ್ಯೂಚುವಲ್ ಫಂಡ್​ಗಳು ಶೇ.50 ಕ್ಕಿಂತ ಹೆಚ್ಚಿನ ಆದಾಯ ರಿಟರ್ನ್ ಮಾಡಿದೆ​. ಇಂತಹ ಮ್ಯೂಚುವಲ್​ ಫಂಡ್​ ಕಂಪೆನಿಗಳಲ್ಲಿ ದೀರ್ಘಕಾಲದವರೆಗೆ ಬಂಡವಾಳ ಹೂಡಿದರೆ ಶೇ.12 ರಷ್ಟಿಕ್ಕಿಂತ ಹೆಚ್ಚಿನ ಆದಾಯ ಲಾಭ ಲಭಿಸುತ್ತದೆ. ಸದ್ಯ ಇರುವ ಅನೇಕ ಮ್ಯೂಚುವಲ್​ ಫಂಡ್​ಗಳ ಸ್ಕೀಂನಲ್ಲಿ ಈ ರೀತಿಯ ಹೂಡಿಕೆಯ ಅವಕಾಶವಿದೆ. ಇಂತಹ ಫಂಡ್​ಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು.

ಹೂಡಿಕೆ ಹೆಚ್ಚಾಗುವುದೇಗೆ?
ಹನಿ-ಹನಿ ಸೇರಿದರೆ ಹಳ್ಳ ಎಂಬ ಮಾತಿದೆ. ಈ ಮಾತು ಹೂಡಿಕೆಗೂ ಅನ್ವಯಿಸುತ್ತದೆ. ದೀರ್ಘಾವಧಿವರೆಗೆ ನೀವು ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಪಾವತಿಸುತ್ತಿದ್ದರೆ, ಅದರಿಂದ ಸಿಗುವ ಆದಾಯ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಇಂತಹ ಯೋಜನೆಗಳಲ್ಲಿ ಮೊದಲ ಐದು ವರ್ಷ ಹೂಡಿಕೆ ಮಾಡಿದ ಮೊತ್ತದ ಲಾಭ 1.5 ಲಕ್ಷಕ್ಕಿಂತ ಜಾಸ್ತಿ ಇರಲಿದೆ. ಆದರೆ ನಂತರ ಐದು ವರ್ಷಗಳಲ್ಲಿ ಅಂದರೆ 10ನೇ ವರ್ಷಕ್ಕೆ 5 ಲಕ್ಷ ರೂ. ದಾಟಿರುತ್ತದೆ. ಅಂದರೆ ಇಲ್ಲಿ ನಿಮ್ಮ ಹೂಡಿಕೆಯ ವರ್ಷ ಕಳೆದಂತೆ ಹೆಚ್ಚಾಗುತ್ತಾ ಹೋಗುತ್ತದೆ.
Loading...

ಹಾಗೆಯೇ 15 ನೇ ವರ್ಷದಲ್ಲಿ 16 ಲಕ್ಷಕ್ಕಿಂತ ಹೆಚ್ಚಾಗುತ್ತದೆ. 20 ನೇ ವರ್ಷದವರೆಗೆ ದೀರ್ಘಕಾಲದ ಹೂಡಿಕೆ ಮಾಡಿದರೆ 42 ಲಕ್ಷ ರೂ. ಸಿಗಲಿದೆ. ಅದೇ ರೀತಿ ಭವಿಷ್ಯದ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟು 25 ವರ್ಷಗಳಿಗೆ ಹೂಡಿಕೆ ಮಾಡಿದರೆ ಬರೋಬ್ಬರಿ 1 ಕೋಟಿ ರೂ. ಸಿಇಗಲಿದೆ.

First published:January 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ