Save Soil: ಮಣ್ಣಿನ ಉಳಿವಿಗಾಗಿ ಬೈಕ್ ಏರಿದ ಸದ್ಗುರು, ಎಲ್ಲಿಗೆ ಬಂತು ಜಗ್ಗಿ ವಾಸುದೇವ್ ಪ್ರಯಾಣ?

ಜಗ್ಗಿ ವಾಸುದೇವ್ ಅವರು ಸದ್ಯ ಪ್ರಪಂಚದಾದ್ಯಂತ ‘ಮಣ್ಣು ಉಳಿಸಿ’ (Save Soil) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೀಗ ಅವರು ಕೆರಿಬಿಯನ್ ದ್ವೀಪಗಳಲ್ಲಿ 'ಮಣ್ಣು ಉಳಿಸಿ' ಆಂದೋಲನದ ಸಂದೇಶವನ್ನು ಸಾರಿದ ನಂತರ, ಸದ್ಗುರುಗಳು 30,000 ಕಿಮೀ ಪ್ರಯಾಣದ ಯುರೋಪಿಯನ್ ಲೆಗ್ ಅನ್ನು ಪ್ರಾರಂಭಿಸಿದ್ದಾರೆ.

ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನ

ಸದ್ಗುರು ಅವರ ಮಣ್ಣು ಉಳಿಸಿ ಅಭಿಯಾನ

  • Share this:
ಜಗ್ಗಿ ವಾಸುದೇವ್ (Jaggi Vasudev) ಇಂದಿನ ದಿನಮಾನಗಳಲ್ಲಿ ಯುವ ಸಮುದಾಯದವರಿಂದ ಹಿಡಿದು ಹಿರಿಯರವರೆಗೂ ತಿಳಿದಿರುವ ಓರ್ವ ಪ್ರಸಿದ್ಧ ವ್ಯಕ್ತಿ ಎಂದರೂ ತಪ್ಪಾಗಲಾರದು. ಯೋಗ ಶಿಕ್ಷಕರಾಗಿಯೂ (Yoga Teacher), ಸಾಮಾಜಿಕ ಕಾರ್ಯಕರ್ತರಾಗಿ (Social Activist), ಪರಿಸರವಾದಿಯಾಗಿ (Environmentalist) ಹೀಗೆ ಅನೇಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಅವರು, ಪ್ರಪಂಚದಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಸದ್ಯ ಅವರು ಪ್ರಪಂಚದಾದ್ಯಂತ ‘ಮಣ್ಣು ಉಳಿಸಿ’ (Save Soil) ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದೀಗ ಅವರು ಕೆರಿಬಿಯನ್ ದ್ವೀಪಗಳಲ್ಲಿ 'ಮಣ್ಣು ಉಳಿಸಿ' ಆಂದೋಲನದ ಸಂದೇಶವನ್ನು ಸಾರಿದ ನಂತರ, ಸದ್ಗುರುಗಳು 30,000 ಕಿಮೀ ಪ್ರಯಾಣದ ಯುರೋಪಿಯನ್ ಲೆಗ್ ಅನ್ನು ಪ್ರಾರಂಭಿಸಿದ್ದಾರೆ.

ಮಣ್ಣು ಉಳಿಸಿ ಆಂದೋಲನ:

ಮಣ್ಣುನ್ನು ಉಳಿಸಿ ಎಂಬುದು ಸದ್ಗುರುಗಳು ಆರಂಭಿಸಿದ ಜಾಗತಿಕ ಆಂದೋಲನವಾಗಿದೆ. ಇದರೊಂದಿಗೆ ಇಶಾ ಫೌಂಡೇಶನ್ ಮಣ್ಣಿನ ಬಿಕ್ಕಟ್ಟನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಮಣ್ಣಿನ ಆರೋಗ್ಯವನ್ನು ಪ್ರತಿಪಾದಿಸಲು ಪ್ರಪಂಚದಾದ್ಯಂತದ ಜನರನ್ನು ಒಟ್ಟುಗೂಡಿಸುವ ಮೂಲಕ ಮತ್ತು ರಾಷ್ಟ್ರೀಯ ನೀತಿಗಳು ಮತ್ತು ಕ್ರಮಗಳನ್ನು ಸ್ಥಾಪಿಸುವಲ್ಲಿ ಎಲ್ಲಾ ರಾಷ್ಟ್ರಗಳ ನಾಯಕರನ್ನು ಬೆಂಬಲಿಸುವ ಮೂಲಕ. ಕೃಷಿಯೋಗ್ಯ ಮಣ್ಣಿನ ಸಾವಯವ ಅಂಶವನ್ನು ಹೆಚ್ಚಿಸುವುದು ಈ ಆಂದೋಲನದ ಪ್ರಮುಖ ಅಂಶವಾಗಿದೆ ಎಂದು ಸದ್ಗುರುಗಳು ತಿಳಿಸಿದ್ದಾರೆ.

30 ಸಾವಿರ ಕಿಲೋ ಮೀಟರ್ ಬೈಕ್ ಪ್ರಯಾಣ:

ಇಶಾ ಫೌಂಡೇಶನ್ ಪ್ರಕಾರ, ಸದ್ಗುರುಗಳು 3.5 ಶತಕೋಟಿ ಜನರ ಬೆಂಬಲವನ್ನು ಪ್ರದರ್ಶಿಸಲು ಮೋಟಾರ್ ಸೈಕಲ್‌ನಲ್ಲಿ 24 ರಾಷ್ಟ್ರಗಳಾದ್ಯಂತ 30,000 ಕಿಲೋಮೀಟರ್‌ಗಳಷ್ಟು ಪ್ರಯಾಣಿಸುತ್ತಾರೆ ಎಂದು ತಿಳಿಸಿದೆ. ಲಂಡನ್‌ನಲ್ಲಿ ಆರಂಭವಾಗುವ ಈ ರೈಡ್ ದಕ್ಷಿಣ ಭಾರತದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೊನೆಗೊಳ್ಳಲಿದೆ. ಅಂದರೆ  ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಹಾದು  ಕೊನೆಗೆ ಭಾರತ ತಲುಪಲಿದ್ದಾರೆಂದು ತಿಳಿದು ಬಂದಿದೆ.

ಇದನ್ನೂ ಓದಿ: Sadguru: ಕಾವೇರಿ ಬಳಿಕ ಈಗ ಮಣ್ಣಿನ ಉಳಿವಿಗಾಗಿ ಕ್ಯಾಂಪೇನ್, ಲಂಡನ್‌ನಿಂದ ಭಾರತಕ್ಕೆ ಸದ್ಗುರು ಬೈಕ್ ಸವಾರಿ

ಸದ್ಗುರುಗಳ ಕಾವೇರಿ ಕರೆ ಯೋಜನೆಯು ಇಲ್ಲಿಯವರೆಗೆ 1,25,000 ರೈತರಿಗೆ 62 ಮಿಲಿಯನ್ ಮರಗಳನ್ನು ನೆಟ್ಟು ಮಣ್ಣನ್ನು ಪುನರುಜ್ಜೀವನಗೊಳಿಸಲು ಮತ್ತು ಕಾವೇರಿ ನದಿಯ ಕ್ಷೀಣಿಸುತ್ತಿರುವ ನೀರನ್ನು ಪುನಃ ತುಂಬಿಸಲು ಅನುವು ಮಾಡಿಕೊಟ್ಟಿದ್ದಾರೆ ಎಂದು ಇಶಾ ಫೌಂಡೇಶನ್ ಹೇಳಿದೆ.

UNCCD ಮಣ್ಣಿನ ಉಳಿಸಿ ಆಂದೋಲನದ ಪ್ರಮುಖ ಪಾಲುದಾರರು:

1994 ರಲ್ಲಿ ಸ್ಥಾಪಿತವಾದ ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಟು ಕಾಂಬ್ಯಾಟ್ ಡೆಸರ್ಟಿಫಿಕೇಶನ್ (UNCCD) ಪರಿಸರ ಮತ್ತು ಅಭಿವೃದ್ಧಿಯನ್ನು ಸುಸ್ಥಿರ ಭೂ ನಿರ್ವಹಣೆಗೆ ಸಂಪರ್ಕಿಸುವ ಏಕೈಕ ಕಾನೂನುಬದ್ಧ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಇಶಾ ಫೌಂಡೇಶನ್‌ನ ಪ್ರಕಾರ, UNCCD ಮಣ್ಣಿನ ಉಳಿಸಿ ಆಂದೋಲನದ ಪ್ರಮುಖ ಪಾಲುದಾರರಾಗಿದ್ದು, ವೈಜ್ಞಾನಿಕ ಜ್ಞಾನ, ಸಂವಹನದಂತಹ ವಿವಿಧ ಕ್ಷೇತ್ರಗಳಲ್ಲಿ ಸಹಯೋಗ ಹೊಂದಿದೆ ಎಂದು ತಿಳಿಸಿದೆ.ಅನೇಕ ನಗರಗಳಲ್ಲಿ ಕಾರ್ಯಕ್ರಮ:

ಸದ್ಗುರುಗಳು ಆರಂಭಿಸಿದ ‘ಮಣ್ಣು ಉಳಿಸಿ‘ ಆದೊಂದಲವು ಈಗಾಗಲೇ ಆರಂಭವಾಗಿದ್ದು, ಅವರು ಬೈಕ್​ ಮೂಲಕ ಬರೋಬ್ಬರಿ 30 ಸಾವಿರ ಕಿ.ಮೀ ಪ್ರಯಾಣ ಮಾಡುವ ಮೂಲಕ ಮಣ್ಣಿನ ಸಂರಕ್ಷಣೆಯ ಕುರಿತು ಅರಿವು ಮೂಡಿಸಲಿದ್ದಾರೆ. ಅಲ್ಲದೇ ಈ ವೇಳೆ ಅವರು kಎಲವು ಪ್ರಮುಖ ನಗರಗಳಲ್ಲಿ ಈಗಾಗಲೇ ನಿಗದಿಪಡಿಸಲಾಗಿರುವಂತೆ ಈ ಸಂಬಂಧ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ಅಂತಿಮವಾಗಿ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸಮಯಕ್ಕಿಂತ 75 ದಿನಗಳ ಮುಂಚಿತವಾಗಿ ನವದೆಹಲಿಗೆ ಬಂದು ಸೇರಲಿದ್ದಾರೆಂದು ತಿಳಿದುಬಂದಿದೆ.

ಇದನ್ನೂ ಓದಿ: Cauvery Calling: ಕಾವೇರಿ ಕೂಗಿಗಾಗಿ ಸದ್ಗುರು ಜೊತೆ ಕೈ ಜೋಡಿಸಿದ ರಕ್ಷಿತ್​, ದಿಗಂತ್​

ಸದ್ಗುರು ಮಾತು:

ನಾವು ಈಗಲೇ ಮಣ್ಣಿನ ಸಂರಕ್ಷಣೆಯ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ನಾನು ಈ ಬಗ್ಗೆ ಅನೇಕ ವರ್ಷಗಳಿಂದ ಮಾತನಾಡುತ್ತಿದ್ದೇನೆ. ಆದರೆ, ಇದಕ್ಕೆ ಪರಿಹಾರ ಸೆಗಬೇಕಾದರೆ ಪ್ರತಿಯೊಂದು ರಾಷ್ಟ್ರಗಳು ಧನಾತ್ಮಕ ನೀತಿಯನ್ನು ರೂಪಿಸಿದಾಗ ಮಾತ್ರವೇ ಸಾಧ್ಯವಾಗುತ್ತದೆ. ಅಲ್ಲದೇ ಕ್ರಿಕೆಟ್ ಮೈದಾನವೇ ಇರಲಿ ಅಥವಾ ಜೀವನದ ಮೈದಾನವೇ ಇರಲಿ ನಾವು ಉತ್ತಮವಾಗಿ ಆಡಬೇಕೆಂದರೆ ಮಣ್ಣು ಸಹ ಉತ್ತಮವಾಗಿರಬೇಕು ಎಂದು ಹೇಳಿದ್ದಾರೆ.
Published by:shrikrishna bhat
First published: