Mohan Bhagwat| ಸಾವರ್ಕರ್ ಮುಸ್ಲಿಮರ ಶತ್ರು ಅಲ್ಲ, ಭಿನ್ನ ಸಂಸ್ಕೃತಿಯರಲ್ಲಿ ಎಂದಿಗೂ ವ್ಯತ್ಯಾಸವನ್ನು ಕಂಡವರಲ್ಲ; RSS ಮುಖ್ಯಸ್ಥ ಭಾಗವತ್

ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ಸಾವರ್ಕರ್​ ಬ್ರಿಟಿಷರಿಗೆ ಕ್ಷಮಾದಾನದ ಅರ್ಜಿಗಳನ್ನು ಬರೆದಿದ್ದರು. ಆದರೆ, ಮಾರ್ಕ್ಸ್ವಾದಿ ಮತ್ತು ಲೆನಿನಿಸ್ಟ್ ಸಿದ್ಧಾಂತದ ಜನರು ಅದನ್ನು ತಪ್ಪಾಗಿ ಅರ್ಥೈಸಿದ್ದಾರೆ ಎಂದು ರಾಜ್​ನಾಥ್ ಸಿಂಗ್ ತಿಳಿಸಿದ್ದಾರೆ.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್​ನಾಥ್ ಸಿಂಗ್-ಮೋಹನ್ ಭಾಗವತ್.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಜ್​ನಾಥ್ ಸಿಂಗ್-ಮೋಹನ್ ಭಾಗವತ್.

 • Share this:
  ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಮಂಗಳವಾರ,  "ಸಾವರ್ಕರ್​ ಅವರ ಹಿಂದುತ್ವದ ಸಿದ್ಧಾಂತವು ಜನರ ಸಂಸ್ಕೃತಿ ಮತ್ತು ದೇವರನ್ನು ಆರಾಧಿಸುವ ವಿಧಾನದ ಆಧಾರದ ಮೇಲೆ ಭಿನ್ನತೆ ತೋರಿಸಲು ಎಂದಿಗೂ ಸೂಚಿಸಿಲ್ಲ" ಎಂದು ಹೇಳಿದ್ದಾರೆ. "ನಾವು ಏಕೆ ಭಿನ್ನರಾಗುತ್ತೇವೆ? ನಾವು ಒಂದೇ ತಾಯ್ನಾಡಿನ ಮಕ್ಕಳು, ನಾವು ಸಹೋದರರು. ಪೂಜೆಯ ವಿಭಿನ್ನ ವಿಧಾನಗಳು ನಮ್ಮ ದೇಶದ ಸಂಪ್ರದಾಯವಾಗಿದೆ. ನಾವು ದೇಶಕ್ಕಾಗಿ ಒಟ್ಟಾಗಿ ಹೋರಾಡುತ್ತಿದ್ದೇವೆ" ಎಂದು ಸಾವರ್ಕರ್​ (Savarkar)​ ಹೇಳುತ್ತಿದ್ದರು ಎಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮೋಹನ್ ಭಾಗವತ್ ಸ್ಮರಿಸಿದ್ದಾರೆ.

  ಪುಸ್ತಕ ಬಿಡಗಡೆ ಸಮಾರಂಭದಲ್ಲಿ ಸಾವರ್ಕರ್ ಮುಸ್ಲಿಮರ ಶತ್ರುವಲ್ಲ ಎಂಬುದನ್ನು ಒತ್ತಿಹೇಳಿದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್​, "ಸಾವರ್ಕರ್​ ಉರ್ದುವಿನಲ್ಲಿ ಅನೇಕ ಗಜಲ್‌ಗಳನ್ನು ಬರೆದಿದ್ದಾರೆ. ಹಲವಾರು ಜನರು ಹಿಂದುತ್ವ ಮತ್ತು ಭಾರತೀಯ ಸಮಾಜದಲ್ಲಿ ಏಕತೆಯ ಬಗ್ಗೆ ಮಾತನಾಡಿದ್ದಾರೆ. ಆದರೆ, ಸಾವರ್ಕರ್ ಅದರ ಬಗ್ಗೆ ಗಟ್ಟಿಯಾಗಿ ಮಾತನಾಡಿದವರಲ್ಲಿ ಪ್ರಮುಖರು. ಈಗ, ಬಹಳ ವರ್ಷಗಳ ನಂತರ, ಎಲ್ಲರೂ ಗಟ್ಟಿಯಾಗಿ ಮಾತನಾಡಿದರೆ, ದೇಶದ ವಿಭಜನೆ ಆಗುವುದಿಲ್ಲ ಎಂದು ಭಾವಿಸಲಾಗುತ್ತಿದೆ.

  ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಬಂದ ಮುಸ್ಲಿಮರು ಆ ದೇಶದಲ್ಲಿ ಯಾವುದೇ ಪ್ರತಿಷ್ಠೆಯನ್ನು ಹೊಂದಿಲ್ಲ, ಏಕೆಂದರೆ ಅವರು ಭಾರತಕ್ಕೆ ಸೇರಿದವರು ಮತ್ತು ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಒಂದೇ ಪೂರ್ವಜರನ್ನು ಹೊಂದಿದ್ದೇವೆ. ನಮ್ಮ ಪೂಜಾ ವಿಧಾನ ಮಾತ್ರ ವಿಭಿನ್ನವಾಗಿದೆ ಮತ್ತು ನಾವು ಸನಾತನ ಧರ್ಮದ ನಮ್ಮ ಉದಾರವಾದ ಸಂಸ್ಕೃತಿಯ ಬಗ್ಗೆ ಎಲ್ಲರೂ ಹೆಮ್ಮೆ ಪಡುತ್ತಾರೆ. ಆ ಪರಂಪರೆ ನಮ್ಮನ್ನು ಮುನ್ನಡೆಸುತ್ತದೆ. ಅದಕ್ಕಾಗಿಯೇ ನಾವೆಲ್ಲರೂ ಇಲ್ಲಿ ಒಟ್ಟಿಗೆ ವಾಸಿಸುತ್ತಿದ್ದೇವೆ" ಎಂದು ಭಾಗವತ್ ಹೇಳಿದ್ದಾರೆ.

  "ಸಾವರ್ಕರ್ ಅವರ ಹಿಂದುತ್ವವಾಗಲಿ ಅಥವಾ ವಿವೇಕಾನಂದರ ಹಿಂದುತ್ವವಾಗಲಿ ಎಲ್ಲವೂ ಒಂದೆ. ಇಬ್ಬರೂ ಸಹ ಭಿನ್ನವಾಗಿರದ ಒಂದೇ ಸಾಂಸ್ಕೃತಿಕ ರಾಷ್ಟ್ರೀಯತೆಯ ಬಗ್ಗೆ ಮಾತನಾಡುತ್ತಾರೆ" ಎಂದು ಮೋಹನ್ ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.

  20 ನೇ ಶತಮಾನದಲ್ಲಿ ಸಾವರ್ಕರ್ ಅವರನ್ನು ಕಟ್ಟಾ ರಾಷ್ಟ್ರೀಯವಾದಿ ಮತ್ತು ಭಾರತದ ಮೊದಲ ಸೇನಾ ತಂತ್ರಜ್ಞ ಎಂದು ಶ್ಲಾಘಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, "ಮಹಾತ್ಮ ಗಾಂಧಿಯವರ ಕೋರಿಕೆಯ ಮೇರೆಗೆ ಸಾವರ್ಕರ್​ ಬ್ರಿಟಿಷರಿಗೆ ಕ್ಷಮಾದಾನದ ಅರ್ಜಿಗಳನ್ನು ಬರೆದಿದ್ದರು. ಆದರೆ, ಮಾರ್ಕ್ಸ್ವಾದಿ ಮತ್ತು ಲೆನಿನಿಸ್ಟ್ ಸಿದ್ಧಾಂತದ ಜನರು ಅದನ್ನು ತಪ್ಪಾಗಿ ಫ್ಯಾಸಿಸ್ಟ್ ಮನಸ್ಥಿತಿ ಎಂದು ಬಿಂಬಿಸಿದ್ದಾರೆ. ಹೀಗಾಗಿ ಸಾವರ್ಕರ್​ ಓರ್ವ 'ರಾಷ್ಟ್ರೀಯ ಐಕಾನ್' ಅವರು 'ದೇಶಕ್ಕೆ ದೃಢವಾದ ರಕ್ಷಣೆ ಮತ್ತು ರಾಜತಾಂತ್ರಿಕ ಸಿದ್ಧಾಂತ'ವನ್ನು ನೀಡಿದ್ದಾರೆ" ಎಂದು ಹಾಡಿ ಹೊಗಳಿದ್ದಾರೆ.

  "ಸಾವರ್ಕರ್​ ಭಾರತೀಯ ಇತಿಹಾಸದಲ್ಲಿ ಒಂದು ಮಾದರಿಯಾಗಿ ಉಳಿಯುತ್ತಾರೆ. ಅವರ ಬಗ್ಗೆ ಭಿನ್ನಾಭಿಪ್ರಾಯವಿರಬಹುದು, ಆದರೆ ಅವರನ್ನು ಕೀಳಾಗಿ ಕಾಣುವುದು ಸೂಕ್ತವಲ್ಲ ಮತ್ತು ಸಮರ್ಥನೀಯವಲ್ಲ. ಆತ ಸ್ವಾತಂತ್ರ್ಯ ಹೋರಾಟಗಾರ ಮತ್ತು ಕಟ್ಟಾ ರಾಷ್ಟ್ರೀಯವಾದಿ. ಆದರೆ ಮಾರ್ಕ್ಸಿಸ್ಟ್ ಮತ್ತು ಲೆನಿನಿಸ್ಟ್ ಸಿದ್ಧಾಂತವನ್ನು ಅನುಸರಿಸುವ ಜನರು ಸಾವರ್ಕರ್ ಅವರನ್ನು ಫ್ಯಾಸಿಸ್ಟ್ ಎಂದು ಆರೋಪಿಸುತ್ತಾರೆ.

  ಸಾವರ್ಕರ್ ಮೇಲಿನ ದ್ವೇಷ ತಾರ್ಕಿಕವಲ್ಲ. ಸಾವರ್ಕರ್ ಬಗ್ಗೆ ಮಾತನಾಡುತ್ತಾ ಸ್ವಾತಂತ್ರ್ಯ ಹೋರಾಟಗಾರ, ಸ್ವಾತಂತ್ರ್ಯಕ್ಕಾಗಿ ಅವರ ಬದ್ಧತೆ ಎಷ್ಟು ಪ್ರಬಲವಾಗಿದೆಯೆಂದರೆ ಬ್ರಿಟಿಷರು ಅವರಿಗೆ ಎರಡು ಬಾರಿ ಜೀವಾವಧಿ ಶಿಕ್ಷೆ ವಿಧಿಸಿದರು. ಆದರೆ, ಸಾವರ್ಕರ್ ಬಗ್ಗೆ ಪದೇ ಪದೇ ಸುಳ್ಳು ಹರಡಲಾಯಿತು. ಜೈಲಿನಿಂದ ತನ್ನ ಬಿಡುಗಡೆಗಾಗಿ ಅವರು ಅನೇಕ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದರೆಂದು ಹರಡಿತು. ಆದರೆ, ಮಹಾತ್ಮ ಗಾಂಧಿಯವರೇ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸುವಂತೆ ಕೇಳಿಕೊಂಡಿದ್ದರು" ಎಂದು ರಾಜ್​ನಾಥ್​ ಸಿಂಗ್ ತಿಳಿಸಿದ್ದಾರೆ.

  ಇದನ್ನೂ ಓದಿ: Single Vote BJP| ತ.ನಾಡು ಸ್ಥಳೀಯ ಚುನಾವಣೆ ಕೇವಲ ಒಂದು ಮತಕ್ಕೆ ತೃಪ್ತಿಪಟ್ಟ ಬಿಜೆಪಿ ಅಭ್ಯರ್ಥಿ; ಜಾಲತಾಣಗಳಲ್ಲಿ ಭಾರೀ ಟ್ರೋಲ್!

  "ಸಾವರ್ಕರ್ ಅವರ ಹಿಂದುತ್ವದ ಪರಿಕಲ್ಪನೆಯನ್ನು ಚರ್ಚಿಸಿ, "ಹಿಂದು" ಎಂಬ ಪದವು ಯಾವುದೇ ಧರ್ಮದೊಂದಿಗೆ ಸಂಬಂಧ ಹೊಂದಿಲ್ಲ. ಇದು ಭಾರತದ ಭೌಗೋಳಿಕ ಮತ್ತು ರಾಜಕೀಯ ಗುರುತಿನೊಂದಿಗೆ ಸಂಬಂಧ ಹೊಂದಿದೆ. ಸಾವರ್ಕರ್‌ಗೆ ಹಿಂದುತ್ವವು ಸಾಂಸ್ಕೃತಿಕ ರಾಷ್ಟ್ರೀಯತೆಯೊಂದಿಗೆ ಸಂಬಂಧ ಹೊಂದಿದೆ. ಸಾವರ್ಕರ್‌ಗಾಗಿ ಆದರ್ಶ ರಾಜ್ಯವು ತನ್ನ ನಾಗರಿಕರನ್ನು ಅವರ ಸಂಸ್ಕೃತಿ ಮತ್ತು ಧರ್ಮದ ಆಧಾರದ ಮೇಲೆ ಬೇರ್ಪಡಿಸಿಲ್ಲ. ಹೀಗಾಗಿ ಅವರ ಹಿಂದುತ್ವವನ್ನು ಆಳವಾಗಿ ಅರ್ಥಮಾಡಿಕೊಳ್ಳುವ ಅವಶ್ಯಕತೆಯಿದೆ" ಎಂದು ರಾಜ್​ನಾಥ್ ಸಿಂಗ್ ತಿಳಿಸಿದ್ದಾರೆ.
  Published by:MAshok Kumar
  First published: