Saudi Arabia: ಭಾರತೀಯರು ಇನ್ನು ಆರಾಮಾಗಿ ಸೌದಿ ಅರೇಬಿಯಾಗೆ ಹೋಗಿಬರಬಹುದು, ಶೀಘ್ರದಲ್ಲೇ ನಿರ್ಬಂಧ ತೆರವಾಗಲಿದೆ

ಈ ದೇಶಗಳಿಂದ ಆಗಮಿಸುವ ಜನರು ಸಂಪೂರ್ಣ ಲಸಿಕೆ ಪಡೆದಿರಬೇಕು. ಅಂತಹವರು ಇನ್ಮುಂದೆ 14 ದಿನ ಕ್ವಾರಂಟೈನ್​​ನಲ್ಲಿ ಕಳೆಯುವ ಅಗತ್ಯವಿರುವುದಿಲ್ಲ. ನೇರವಾಗಿ ಸೌದಿ ಅರೇಬಿಯಾಗೆ ಪ್ರವೇಶಿಸಬಹುದು ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸೌದಿ ಅರೇಬಿಯಾ(Saudi Arabia)ವು ಭಾರತ ಸೇರಿದಂತೆ 6 ದೇಶಗಳ ಜನರಿಗೆ ಹೇರಿದ್ದ ಪ್ರಯಾಣ ನಿರ್ಬಂಧವನ್ನು(Travel Ban) ಶೀಘ್ರದಲ್ಲೇ ತೆಗೆದು ಹಾಕಲಿದೆ. ಇದರೊಂದಿಗೆ ಭಾರತ(India), ಪಾಕಿಸ್ತಾನ(Pakistan), ಬ್ರೆಜಿಲ್(Brazil), ವಿಯೆಟ್ನಾಂ, ಈಜಿಪ್ಟ್ ಮತ್ತು ಇಂಡೋನೇಷ್ಯಾ ದೇಶಗಳ ಜನರು ಡಿಸೆಂಬರ್ 1ರಿಂದ ನೇರವಾಗಿ ಸೌದಿ ಅರೇಬಿಯಾ(Saudi Arabia)ವನ್ನು ಪ್ರವೇಶಿಸಬಹುದಾಗಿದೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಈ ದೇಶಗಳಿಂದ ಆಗಮಿಸುವ ಜನರು ಸಂಪೂರ್ಣ ಲಸಿಕೆ ಪಡೆದಿರಬೇಕು. ಅಂತಹವರು ಇನ್ಮುಂದೆ 14 ದಿನ ಕ್ವಾರಂಟೈನ್​​ನಲ್ಲಿ ಕಳೆಯುವ ಅಗತ್ಯವಿರುವುದಿಲ್ಲ. ನೇರವಾಗಿ ಸೌದಿ ಅರೇಬಿಯಾಗೆ ಪ್ರವೇಶಿಸಬಹುದು ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯವು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Earthquake: ಮ್ಯಾನ್ಮಾರ್-ಭಾರತದ ಗಡಿಭಾಗದಲ್ಲಿ 6.0 ತೀವ್ರತೆಯ ಪ್ರಬಲ ಭೂಕಂಪನ; ಬೆಚ್ಚಿ ಬಿದ್ದ ಜನರು

ಹೊಸ ಮಾರ್ಗಸೂಚಿಯಲ್ಲಿ ಏನಿದೆ?

ಆದಾಗ್ಯೂ ಈ ದೇಶಗಳಿಂದ ಬರುವ ಜನರ ವ್ಯಾಕ್ಸಿನೇಶನ್​ ಸ್ಥಿತಿಯನ್ನು ತಿಳಿಯಲು ಸೌದಿ ಅರೇಬಿಯಾದ ಹೊರಗೆ 5 ದಿನಗಳನ್ನು ಕಳೆಯಬೇಕು ಎಂದು ಸ್ಥಳೀಯ ಪತ್ರಿಕೆಗಳು ವರದಿ ಮಾಡಿವೆ. ಎಲ್ಲಾ ಕಾರ್ಯವಿಧಾನಗಳು ಮತ್ತು ಕ್ರಮಗಳು ಸೌದಿ ಅರೇಬಿಯಾದ ಆರೋಗ್ಯಾಧಿಕಾರಿಗಳಿಂದ ನಿರಂತರ ಮೌಲ್ಯಮಾಪನಕ್ಕೆ ಒಳಪಟ್ಟಿರುತ್ತವೆ ಎಂದು ಸಚಿವಾಲಯ ತಿಳಿಸಿದೆ.

ಸೌದಿಗೆ ಮರಳುವವರಿಗೆ ಯಾವ ರೂಲ್ಸ್​?

ತಮ್ಮ ತವರಿಗೆ(ಸೌದಿ ಅರೇಬಿಯಾ) ಮರಳಲು ಇಚ್ಛಿಸುವ ವಲಸಿಗರು ಸೋಂಕಿನಿಂದ ಮುಕ್ತರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಆರೋಗ್ಯ ಕ್ರಮಗಳಿಗೆ ಒಳಪಡಬೇಕು ಎಂದು ಸಚಿವಾಲಯ ಹೇಳಿದೆ.

ಯಾವ ದೇಶಗಳಿಗೆ ನಿರ್ಬಂಧ ಹೇರಲಾಗಿತ್ತು?

ಈ ವರ್ಷದ ಆರಂಭದಲ್ಲಿ ಕೋವಿಡ್​ -19 ವೈರಸ್ ಹರಡುವಿಕೆ ಹೆಚ್ಚಾದಾಗ ಹೊರಗಿನ ದೇಶಗಳಿಗೆ ನಿರ್ಬಂಧ ಹೇರಲಾಯಿತು. ಲೆಬನಾನ್, ಯುಎಇ, ಈಜಿಪ್ಟ್, ಟರ್ಕಿ, ಯುಎಸ್, ಬ್ರಿಟನ್, ಜರ್ಮನಿ, ಫ್ರಾನ್ಸ್, ಇಟಲಿ, ಐರ್ಲೆಂಡ್, ಪೋರ್ಚುಗಲ್, ಸ್ವಿಟ್ಜರ್ಲೆಂಡ್, ಸ್ವೀಡನ್, ಬ್ರೆಜಿಲ್, ಅರ್ಜೆಂಟೀನಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಭಾರತ, ಇಂಡೋನೇಷ್ಯಾ ಮತ್ತು ಜಪಾನ್ ದೇಶಗಳಿಗೆ ಸೌದಿ ಅರೇಬಿಯಾ ನಿಷೇಧ ಹೇರಿತ್ತು. ಆದಾಗ್ಯೂ ರಾಜತಾಂತ್ರಿಕರು, ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳು ರಾಜ್ಯವನ್ನು ಪ್ರವೇಶಿಸಲು ಅನುಮತಿ ನೀಡಲಾಯಿತು.

ಇದನ್ನೂ ಓದಿ: Gender Equality: ಈ ಶಾಲೆಯಲ್ಲಿ ಹುಡುಗ-ಹುಡುಗಿಯರಿಬ್ಬರಿಗೂ ಒಂದೇ ಥರದ ಯೂನಿಫಾರ್ಮ್!

ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ ಎರಡು ವಾರಗಳ ನಂತರ ಮಾರ್ಚ್ 14, 2020 ರಂದು ಸೌದಿ ಅರೇಬಿಯಾಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಮೊದಲು ಸ್ಥಗಿತಗೊಳಿಸಲಾಯಿತು.
Published by:Latha CG
First published: