• Home
  • »
  • News
  • »
  • national-international
  • »
  • Gold: ಮದೀನಾದಲ್ಲಿ ಬೃಹತ್‌ ಚಿನ್ನದ ನಿಕ್ಷೇಪ ಪತ್ತೆ! ಈ ಬಂಗಾರದ ಹಿಂದಿರೋ ಗುಟ್ಟೇನು?

Gold: ಮದೀನಾದಲ್ಲಿ ಬೃಹತ್‌ ಚಿನ್ನದ ನಿಕ್ಷೇಪ ಪತ್ತೆ! ಈ ಬಂಗಾರದ ಹಿಂದಿರೋ ಗುಟ್ಟೇನು?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Gold: ಸೌದಿಯ ಭೂ ವೈಜ್ಞಾನಿಕ ಸಮೀಕ್ಷೆಯು ಚಿನ್ನದ ಅದಿರಿನ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದ್ದು, ಈ ಜಾಗ ಮದೀನಾ ಪ್ರದೇಶದ ಅಬಾ ಅಲ್-ರಾಹಾದ ಗಡಿಯಲ್ಲಿವೆ.

  • Share this:

ಮದೀನಾ:ಇಡೀ ವಿಶ್ವದ ಚಿತ್ತವು ಇದೀಗ ಸೌದಿ ಅರೇಬಿಯಾದತ್ತ ತಿರುಗಿದೆ. ಅದಕ್ಕೆ ಕಾರಣ ಅಲ್ಲಿ ಚಿನ್ನದ ನಿಕ್ಷೇಪ ಪತ್ತೆಯಾಗಿರೋದು. ಹೌದು, ಸೌದಿ ಅರೇಬಿಯಾದ  (Saudi Arabia) ಪವಿತ್ರ ನಗರವಾದ ಮದೀನಾದಲ್ಲಿ ಚಿನ್ನದ (Gold Deposits) ಹಾಗೂ ತಾಮ್ರದ ನಿಕ್ಷೇಪಗಳು ಪತ್ತೆ ಮಾಡಿರುವುದಾಗಿ ಸೌದಿ ಹೇಳಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಡಲಾದ ಪೋಸ್ಟ್‌ನಲ್ಲಿ ವಿವರ ನೀಡಿದೆ. ಸೌದಿಯ ಭೂ ವೈಜ್ಞಾನಿಕ ಸಮೀಕ್ಷೆಯು ಚಿನ್ನದ ಅದಿರಿನ ಆವಿಷ್ಕಾರದ ಬಗ್ಗೆ ಮಾಹಿತಿ ನೀಡಿದ್ದು, ಈ ಜಾಗ ಮದೀನಾ ಪ್ರದೇಶದ ಅಬಾ ಅಲ್-ರಾಹಾದ ಗಡಿಯಲ್ಲಿವೆ. ಮದೀನಾದ (Medina) ವಾಡಿ ಅಲ್-ಫರಾ ಪ್ರದೇಶದ ಅಲ್-ಮದಿಕ್ ಪ್ರದೇಶದ ನಾಲ್ಕು ಸ್ಥಳಗಳಲ್ಲಿ ತಾಮ್ರದ ಅದಿರು (Copper Deposits) ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನಮ್ಮ ಈ ಆವಿಷ್ಕಾರಗಳೊಂದಿಗೆ ಇಡೀ ಜಗತ್ತಿಗೆ ಹೊಸ ಹೂಡಿಕೆ ಅವಕಾಶಗಳಿರುತ್ತವೆ. ಈ ಬಗ್ಗೆ ನಾವು ಹೆಚ್ಚಿನ ನಿರೀಕ್ಷೆ ಹೊಂದಿರುವುದಾಗಿ ಭೂವೈಜ್ಞಾನಿಕ ಸಮೀಕ್ಷೆಯು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದೆ.


4,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆ
ಇನ್ನು ಅಲ್ ಅರೇಬಿಯಾದ ವರದಿಯ ಪ್ರಕಾರ, ಹೊಸ ಆವಿಷ್ಕಾರಗಳು ಈಗ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದಕ್ಕೆ ಪ್ರತಿಯಾಗಿ ರಾಷ್ಟ್ರೀಯ ಆರ್ಥಿಕತೆಯ ಅಭಿವೃದ್ಧಿಗೆ ಈ ಅಂಶ ಕೊಡುಗೆ ನೀಡುತ್ತದೆ. ಹೊಸದಾಗಿ ಪತ್ತೆಯಾದ ಸೈಟ್ $533 ಮಿಲಿಯನ್ ಹೂಡಿಕೆಯನ್ನು ಹೊಂದಿದೆ. ಇದರಿಂದಾಗಿ ಸುಮಾರು 4,000 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ.


5,300ಕ್ಕೂ ಹೆಚ್ಚು ಖನಿಜ ಸ್ಥಳಗಳಿಗೆ ನೆಲೆಯಾದ ಸ್ಥಳ
ಈ ಹೊಸ ಆವಿಷ್ಕಾರಗಳು ಕಿಂಗ್‌ ಡಮ್‌ ನಲ್ಲಿ ಗಣಿಗಾರಿಕೆಗೆಗೆ ಗುಣಾತ್ಮಕ ಅಂಶಗಳನ್ನು ರೂಪಿಸುತ್ತವೆ. ಹಾಗೆಯೇ ಭರವಸೆಯ ಹೂಡಿಕೆಯ ಅವಕಾಶಗಳಿಗೆ ಹೆಚ್ಚಿನ ನಿರೀಕ್ಷೆಗಳನ್ನು ತೆರೆಯುತ್ತದೆ ಎಂದು ವಿಶ್ಲೇಷಕರು ಹೇಳಿದ್ದಾರೆ.ಇನ್ನು ಸೌದಿ ಅರೇಬಿಯಾದಲ್ಲಿ ಖನಿಜ ನಿಕ್ಷೇಪಗಳು ಹೇರಳವಾಗಿವೆ. ಈ ಭೂಮಿ 5,300 ಕ್ಕೂ ಹೆಚ್ಚು ಖನಿಜ ಸ್ಥಳಗಳಿಗೆ ನೆಲೆಯಾಗಿದೆ ಎಂದು ಸೌದಿ ಭೂ ವಿಜ್ಞಾನಿಗಳ ಸಹಕಾರ ಸಂಘದ ಅಧ್ಯಕ್ಷ ಪ್ರೊಫೆಸರ್ ಅಬ್ದುಲ್ ಅಜೀಜ್ ಬಿನ್ ಲಾಬೊನ್ ತಿಳಿಸಿದ್ದಾರೆ. ಇವುಗಳಲ್ಲಿ ವೈವಿಧ್ಯಮಯ ಲೋಹ ಮತ್ತು ಲೋಹವಲ್ಲದ ಬಂಡೆಗಳು, ಕಟ್ಟಡ ಸಾಮಗ್ರಿಗಳು, ಅಲಂಕಾರಿಕ ಬಂಡೆಗಳು ಮತ್ತು ರತ್ನದ ಕಲ್ಲುಗಳು ಸೇರಿರುವುದು ವಿಶೇಷ.


ಇದನ್ನೂ ಓದಿ: Viral Video: ಬರಿಗೈಲಿ ಟಾಯ್ಲೆಟ್ ಕ್ಲೀನ್ ಮಾಡಿದ ಬಿಜೆಪಿ ಸಂಸದ! ವಿಡಿಯೋ ಫುಲ್ ವೈರಲ್


ಅಂದಹಾಗೆ, ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಸ್ಥಾಪಿಸಿದ ವಿಷನ್ 2030 ಗೋಡ್‌ನ ಭಾಗವಾಗಿ ವಿಸ್ತರಣೆಗಾಗಿ ಗುರುತಿಸಲಾದ ಕ್ಷೇತ್ರಗಳಲ್ಲಿ ಗಣಿಗಾರಿಕೆಯೂ ಒಂದಾಗಿದೆ. ಅಲ್ ಅರೇಬಿಯಾ ಪ್ರಕಾರ, ಜೂನ್‌ನಲ್ಲಿ ಕ್ರೌನ್ ಪ್ರಿನ್ಸ್ ಸಂಶೋಧನೆ ಮತ್ತು ಅಭಿವೃದ್ಧಿ ವಲಯಕ್ಕೆ ರಾಷ್ಟ್ರೀಯ ಆದ್ಯತೆಗಳನ್ನು ಘೋಷಿಸಿದರು. ಮೇ ತಿಂಗಳಲ್ಲಿ, ಕಿಂಗ್‌ಡಮ್‌ನ ಕೈಗಾರಿಕೆ ಮತ್ತು ಖನಿಜ ಸಂಪನ್ಮೂಲಗಳ ಸಚಿವಾಲಯವು ಗಣಿಗಾರಿಕೆ ವಲಯಕ್ಕೆ $32 ಶತಕೋಟಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುವಂಥ ಯೋಜನೆಗಳನ್ನು ವಿವರಿಸಿರೋದು ವಿಶೇಷ.


ಒಟ್ಟಾರೆ, ಈ ಹೊಸ ಆವಿಷ್ಕಾರಗಳು ಈಗ ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಇದಕ್ಕೆ ಪ್ರತಿಯಾಗಿ, ಸಾಮ್ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಅನ್ನೋದೂ ಸತ್ಯ.


ಇದನ್ನೂ ಓದಿ: PFI ವಿರುದ್ಧ ದಾಳಿ ನಡೆಸಿದ್ದೇಕೆ ಇಡಿ? ಮೋದಿ ವಿರುದ್ಧ ಸಂಚು, ಪಾಟ್ನಾ ರ್‍ಯಾಲಿ ರಹಸ್ಯ ಬಿಚ್ಚಿಟ್ಟ ಅಧಿಕಾರಿಗಳು


ಇನ್ನು ಸೌದಿಯಲ್ಲಿ ಚಿನ್ನದ ಹಾಗು ತಾಮ್ರದ ನಿಕ್ಷೇಪ ಪತ್ತೆಯಾದ ಬೆನ್ನಲ್ಲೇ ವಿಶ್ವ ಮಟ್ಟದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆ. ಈಗಾಗಲೇ ಗಗನಕ್ಕೇರಿರುವ ಚಿನ್ನದ ಬೆಲೆ ಕಡಿಮೆಯಾಗುತ್ತಾ ಅನ್ನೋ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಸ್ಥಳೀಯವಾಗಿ ಹಾಗೂ ಅಂತಾರಾಷ್ಟ್ರೀಯವಾಗಿ ಹೂಡಿಕೆದಾರರ ಚಿತ್ತವು ಸೌದಿ ಅರೇಬಿಯಾದ ಮೇಲಿದೆ. ಆಡಳಿತ ಕೂಡಾ ವಿಶ್ವದ ಹಲವು ದೇಶಗಳಿಗೆ ಹೂಡಿಕೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಬಂಗಾರದ ದರ ಕಡಿಮೆಯಾಗುತ್ತಾ ಎಂಬ ಬಗ್ಗೆ ಹೂಡಿಕೆದಾರರು ಹಾಗೂ ಆಭರಣ ಪ್ರಿಯರು ಎದುರು ನೋಡುತ್ತಿರುವುದಂತೂ ಸುಳ್ಳಲ್ಲ.

First published: