HOME » NEWS » National-international » SAUDI ARABIA BANS ENTRY OF PEOPLE FROM 20 COUNTRIES INCLUDING INDIA STG SNVS

ಭಾರತ, ಅಮೆರಿಕ ಸೇರಿದಂತೆ 20 ದೇಶಗಳಿಂದ ಸೌದಿ ಅರೇಬಿಯಾ ಪ್ರವೇಶ ಬಂದ್

ಕೊರೋನಾ ವೈರಸ್ ಮರುದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಸೌದಿ ಅರೇಬಿಯಾ ಮೊನ್ನೆಯಿಂದಲೇ ಭಾರತ ಸೇರಿದಂತೆ 20 ದೇಶಗಳ ನಾಗರಿಕರ ಪ್ರವೇಶವನ್ನ ನಿಷೇಧಿಸಿದೆ.

news18
Updated:February 5, 2021, 10:33 AM IST
ಭಾರತ, ಅಮೆರಿಕ ಸೇರಿದಂತೆ 20 ದೇಶಗಳಿಂದ ಸೌದಿ ಅರೇಬಿಯಾ ಪ್ರವೇಶ ಬಂದ್
ಸಾಂದರ್ಭಿಕ ಚಿತ್ರ
  • News18
  • Last Updated: February 5, 2021, 10:33 AM IST
  • Share this:
ನವದೆಹಲಿ: ಮಾರಕ ಕೊರೊನಾ ವೈರಸ್‌ ಸಾಂಕ್ರಾಮಿಕ ರೋಗ ತಡೆಗಟ್ಟುವ ಪ್ರಯತ್ನದಲ್ಲಿ ಸೌದಿ ಅರೇಬಿಯಾ ದೇಶವು ಭಾರತ ಮತ್ತು ಅಮೆರಿಕ ಸೇರಿದಂತೆ 20 ದೇಶಗಳಿಂದ ಪ್ರಯಾಣಿಕರು ಆಗಮಿಸುವುದನ್ನು ನಿಷೇಧಿಸಿದೆ. ಸೆಪ್ಟೆಂಬರ್‌ 2020ರಲ್ಲೇ ಮಧ್ಯಪ್ರಾಚ್ಯ ದೇಶವು ಭಾರತದಿಂದ ವಿಮಾನ ಪ್ರಯಾಣವನ್ನು ಸ್ಥಗಿತಗೊಳಿಸಿತ್ತು. ಅದರೆ, ಈ ನಿಷೇಧಿತ ದೇಶಗಳ ಪಟ್ಟಿ ಈಗ ಹೆಚ್ಚಾಗಿದೆ. 

ಮೊನ್ನೆ ಬುಧವಾರವಾರವೇ ಪ್ರಾರಂಭವಾದ ಈ ''ತಾತ್ಕಾಲಿಕ ಅಮಾನತು'' ನಿಯಮ ರಾಜತಾಂತ್ರಿಕರು, ಸೌದಿ ನಾಗರಿಕರು, ವೈದ್ಯಕೀಯ ಸೇವೆಯಲ್ಲಿರುವವರು ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಸೌದಿ ಅರೇಬಿಯಾದ ನೆರೆಯ ರಾಷ್ಟ್ರಗಳಾದ ಈಜಿಪ್ಟ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಿಗೂ ಈ ನಿಷೇಧ ಅನ್ವಯಿಸುತ್ತದೆ. ನಿಷೇಧವು ಲೆಬನಾನ್, ಟರ್ಕಿ, ಐರ್ಲೆಂಡ್, ಇಟಲಿ, ಪೋರ್ಚುಗಲ್, ಸ್ವೀಡನ್ ಮತ್ತು ಸ್ವಿಟ್ಜರ್ಲೆಂಡ್ ಅನ್ನು ಸಹ ಒಳಗೊಂಡಿದೆ. ಯುಸ್ಎ ಮತ್ತು ಭಾರತದ ಹೊರತಾಗಿ, ಅರ್ಜೆಂಟೀನಾ, ಬ್ರೆಜಿಲ್, ಇಂಡೋನೇಷ್ಯಾ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾದ ಪ್ರಯಾಣಿಕರು ಸಹ ಸೌದಿ ಅರೇಬಿಯಾಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ, ಈ ನಿಷೇಧ ಜಾರಿಗೆ ಬರುವ 14 ದಿನಗಳಿಗೆ ಮೊದಲೇ 20 ನಿಷೇಧಿತ ದೇಶಗಳ ಮೂಲಕ ಹಾದುಹೋದ ಪ್ರಯಾಣಿಕರಿಗೂ ಈ ತಾತ್ಕಾಲಿಕ ನಿಷೇಧ ಅನ್ವಯಿಸುತ್ತದೆ ಎಂದು ಸೌದಿ ಅರೇಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಕೆಜಿ ಹೂಕೋಸಿಗೆ 1 ರೂ ದರ ವಿಧಿಸಿದ ಎಪಿಎಂಸಿ: 1000 ಕೆಜಿ ಹೂಕೋಸನ್ನು ರಸ್ತೆಗೆ ಎಸೆದ ಅನ್ನದಾತ

ಬ್ರಿಟನ್​ನಲ್ಲಿ ಹೊಸ ಮತ್ತು ರೂಪಾಂತರ ಕೊರೊನಾ ವೈರಸ್ ಪತ್ತೆಯಾದ ನಂತರ ಡಿಸೆಂಬರ್‌ನಲ್ಲಿ ಇದೇ ರೀತಿಯ ನಿಷೇಧವನ್ನು ಸೌದಿ ಅರೇಬಿಯಾದಲ್ಲಿ ವಿಧಿಸಲಾಗಿತ್ತು. ನಂತರ ಜನವರಿ 3, 2021 ರಂದು ಅಂತಾರಾಷ್ಟ್ರೀಯ ವಿಮಾನ ಸೇವೆ ಪುನಾರಂಭಿಸಿದ್ದು, ತನ್ನ ಬಂದರುಗಳನ್ನು ಮತ್ತೆ ತೆರೆಯಿತು.

ತನ್ನ ನಾಗರಿಕರಿಗೆ ಪ್ರಯಾಣ ನಿಷೇಧ ಕೊನೆಗೊಳಿಸುವ ದಿನಾಂಕವನ್ನು ಮಾರ್ಚ್ 31 ರಿಂದ ಮೇ 17 ಕ್ಕೆ ಮುಂದೂಡುವ ನಿರ್ಧಾರವನ್ನು ರಿಯಾದ್‌ ಈಗಾಗಲೇ ಘೋಷಣೆ ಮಾಡಿದೆ ಎಂದು ರಾಯಿಟರ್ಸ್‌ ವರದಿ ಮಾಡಿದೆ. ಅಲ್ಲದೆ, ಕೊರೊನಾ ವೈರಸ್‌ ಲಸಿಕೆಗಳ ವಿತರಣೆಯಲ್ಲಿನ ವಿಳಂಬದಿಂದಾಗಿ ಪ್ರಯಾಣ ನಿಷೇಧ ಹಿಂಪಡಿಕೆ ನಿರ್ಧಾರವನ್ನು ಹಿಂದಕ್ಕೆ ತೆಗೆದುಕೊಳ್ಳಲಾಗಿದೆ ಎಂದೂ ಸೌದಿಯ ಆರೋಗ್ಯ ಸಚಿವರು ಹೇಳಿದ್ದಾರೆ.

ಪ್ರಸ್ತುತ, ಸೌದಿ ಅರೇಬಿಯಾದಲ್ಲಿ 3.68 ಲಕ್ಷ ಕೋವಿಡ್ -19 ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 6,383 ಜನರು ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಡೇಟಾ ಹೇಳಿದೆ.
Published by: Vijayasarthy SN
First published: February 5, 2021, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories