ಉಮ್ರಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಸೌದಿ ಸರ್ಕಾರ ಎಚ್ಚರಿಕೆ

news18
Updated:December 6, 2018, 10:20 PM IST
ಉಮ್ರಾ ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ: ಸೌದಿ ಸರ್ಕಾರ ಎಚ್ಚರಿಕೆ
holy Kaaba
news18
Updated: December 6, 2018, 10:20 PM IST
ರಿಯಾದ್ (ಡಿ. 6) : ವಿದೇಶಗಳಿಂದ ಉಮ್ರಾ ನಿರ್ವಹಿಸಲು ಬರುವ ವ್ಯಕ್ತಿಗಳು ಉಮ್ರಾ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಶಿಕ್ಷೆ ಮತ್ತು ದಂಡ ವಿಧಿಸಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಎಚ್ಚರಿಸಿದೆ.

ಮುಸ್ಲಿಮರ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಉಮ್ರಾ ವೇಳೆ ಅನೇಕ ವಿದೇಶಿಯರು ಸೌದಿಯಲ್ಲಿ ಅವಧಿ ಮೀರಿ ನೆಲೆಸುತ್ತಾರೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿರುವ ಸೌದಿ ಆಡಳಿತ ಮಂಡಳಿ ನಿಯಮಗಳನ್ನು ಉಲ್ಲಂಘಿಸಿದವರಿಗೆ ಜೈಲು ಶಿಕ್ಷೆ ಹಾಗೂ ಭಾರೀ ಮೊತ್ತದ ದಂಡ ವಿಧಿಸಲಾಗುವುದು ಎಂದು ತಿಳಿಸಿದೆ.

ಉಮ್ರಾ ನಿರ್ವಹಿಸಲು ಯಾತ್ರಿಕರನ್ನು ಕರೆತರುವ ಟ್ರಾವಲ್ಸ್​ಗಳೂ ಇದರಲ್ಲಿ ಶಾಮೀಲಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಉಮ್ರಾ ಅವಧಿ ಮೀರಿ ನೆಲೆಸಿದವರಿಗೆ ಉದ್ಯೋಗ, ಆಶ್ರಯ ನೀಡುವ ವ್ಯಕ್ತಿಗಳೂ ಕೂಡ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಸಾರ್ವಜನಿಕ ಸಂಪರ್ಕ ಮತ್ತು ಮಾಹಿತಿ ಆಡಳಿತ ನಿರ್ದೇಶಕ ಬ್ರಿಗೇಡಿಯರ್ ಜನರಲ್ ಮುಹಮ್ಮದ್ ಬಿನ್ ಅಬ್ದುಲಝೀಝ್ ಅಲ್-ಸಆದ್ ಹೇಳಿದ್ದಾರೆ.

ಇದನ್ನೂ ಓದಿ: ಎಚ್ಚರ: ನೀವು ಮೊಬೈಲ್​ನಲ್ಲಿ ಅಶ್ಲೀಲ ವೀಡಿಯೊ ನೋಡುತ್ತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ಈ ಬಾರಿಯ ಉಮ್ರಾ ಅವಧಿಯ ಬಗ್ಗೆ ಪಾಸ್‌ಪೋರ್ಟ್ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅಬ್ದುಲಝೀಝ್, ಉಮ್ರಾ ನಿಯಮಾವಳಿಗಳನ್ನು ಉಲ್ಲಂಘಿಸಿದವರನ್ನು ಶಿಕ್ಷೆಗೆ ಗುರಿಪಡಿಸಿ, ದಂಡ ಪಾವತಿಸಿದ ಬಳಿಕ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ಹೊಸ ಉಮ್ರಾ ನಿಯಮಾವಳಿ ಅರಿವಿನ ಅಭಿಯಾನವು ಡಿಸೆಂಬರ್ 2 ರಿಂದ 2019 ಜೂನ್ 18 ರವರೆಗೆ ಜಾರಿಯಲ್ಲಿರಲ್ಲಿದೆ ಎಂದು ಅವರು ತಿಳಿಸಿದ್ದಾರೆ.

 ಹೊಸ ನಿಯಮಾವಳಿ ಯಾಕೆ ?

ಭಾರತ ಸೇರಿದಂತೆ ಅನೇಕ ವಿದೇಶಿಯರು ಅಲ್ಪಾವಧಿಗೆ ಸಿಗುವ ಉಮ್ರಾ ವೀಸಾದಲ್ಲಿ ಸೌದಿಗೆ ತೆರಳುತ್ತಾರೆ. ಬಳಿಕ ಅವಧಿ ಮುಗಿದರೂ ತಮ್ಮ ದೇಶಕ್ಕೆ ಹಿಂತಿರುಗಿದೆ ಅಕ್ರಮವಾಗಿ ನೆಲೆಸುತ್ತಾರೆ. ಅಲ್ಲದೆ ಕಾನೂನನ್ನು ಉಲ್ಲಂಘಿಸಿ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದು, ಇದರಿಂದ ಸೌದಿ ಅರೇಬಿಯಾ ಸರ್ಕಾರಕ್ಕೆ ಅಪಾರ ನಷ್ಟವಾಗುತ್ತಿದೆ. ಈ ಹಿನ್ನಲೆಯಲ್ಲಿ ಉಮ್ರಾ ಯಾತ್ರಿಕರ ಮೇಲೆ ಹದ್ದಿನ ಕಣ್ಣಿಟ್ಟು ಅಕ್ರಮವಾಗಿ ನೆಲೆಸುವ ವ್ಯಕ್ತಿಗಳ ಮೇಲೆ  ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ.
Loading...

ಇದನ್ನೂ ಓದಿ: VIDEO: ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್: ವಿರಾಟ್ ಕೊಹ್ಲಿಯನ್ನು ಪೆವಿಲಿಯನ್ ಕಳುಹಿಸಿದ ಖ್ವಾಜಾ

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...