ಕಣಿವೆ ರಾಜ್ಯದಲ್ಲಿ ಕಾಶ್ಮೀರಿಯರಿಗಿಂತ ಭಯೋತ್ಪಾದಕರಿಂದ ಟೆಲಿಫೋನ್​ ಬಳಕೆ ಹೆಚ್ಚು; ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​​

ಈ ಹಿಂದೆ ಜನರ ಟೆಲಿಫೋನ್​ ಸಂಪರ್ಕವಿಲ್ಲದೇ ಜೀವಿಸುತ್ತಿದ್ದರು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ಸಂಪರ್ಕ ಸೇವೆಯನ್ನು ಉಗ್ರರು ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ

Seema.R | news18-kannada
Updated:October 14, 2019, 3:05 PM IST
ಕಣಿವೆ ರಾಜ್ಯದಲ್ಲಿ ಕಾಶ್ಮೀರಿಯರಿಗಿಂತ ಭಯೋತ್ಪಾದಕರಿಂದ ಟೆಲಿಫೋನ್​ ಬಳಕೆ ಹೆಚ್ಚು; ರಾಜ್ಯಪಾಲ ಸತ್ಯಪಾಲ್​ ಮಲ್ಲಿಕ್​​
ಸತ್ಯಪಾಲ್​ ಮಲಿಕ್​
  • Share this:
ಜಮ್ಮು (ಅ.14):  72 ದಿನಗಳ ಬಳಿಕ ಕಣಿವೆ ರಾಜ್ಯದಲ್ಲಿ ಫೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ ಆರಂಭವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ಸತ್ಯಪಾಲ ಮಲ್ಲಿಕ್​ ಕಾಶ್ಮೀರಿಯರಿಗೆ ಫೋನ್​ ಲೈನ್​ ಹೆಚ್ಚು ಪ್ರಮುಖ್ಯವಲ್ಲ. ಈ ಸಂಪರ್ಕವನ್ನು ಉಗ್ರರು ಮಾತ್ರ ಬಳಸುತ್ತಾರೆ ಎಂದಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೆಲಿಫೋನ್​ ಸಂಪರ್ಕಗಳು ನಮಗೆ ಹೆಚ್ಚು ಪ್ರಾಮುಖ್ಯವಲ್ಲ. ಆದರೆ, ಯಲ್ಲಿ ವಾಸಿಸುವ ಜನರಿಗೆ ಇದರ ಅವಶ್ಯಕತೆ ಹೆಚ್ಚಿದೆ ಎಂದಿದ್ದಾರೆ.

ಈ ಹಿಂದೆ ಜನರ ಟೆಲಿಫೋನ್​ ಸಂಪರ್ಕವಿಲ್ಲದೇ ಜೀವಿಸುತ್ತಿದ್ದರು. ಇದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. ಈ ಸಂಪರ್ಕ ಸೇವೆಯನ್ನು ಉಗ್ರರು ಬಳಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಮಾಡಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಸಂಪರ್ಕ ಸೇವೆಗಳನ್ನು ಕಡಿತಮಾಡಲಾಗಿತ್ತು. ಈಗ ಟೆಲಿಫೋನ್​ ಸೇವೆ ಪುನರ್​ ಆರಂಭಿಸಲಾಗಿದ್ದು, ಶೀಘ್ರದಲ್ಲಿಯೇ ಇಂಟರ್​ನೆಟ್​ ಸೇವೆಯನ್ನು ಮರು ಆರಂಭಿಸಲಾಗುವುದು ಎಂದರು.

ಇದನ್ನು ಓದಿ: ಎರಡು ತಿಂಗಳ ಬಳಿಕ ಇಂದಿನಿಂದ ಕಣಿವೆ ರಾಜ್ಯದಲ್ಲಿ ಆರಂಭಗೊಂಡ ಪೋಸ್ಟ್​ ಪೇಯ್ಡ್​ ಮೊಬೈಲ್​ ಸೇವೆ

ಸೋಮವಾರದಿಂದ ಪುನರಾರಂಭಗೊಂಡ ಪೋಸ್ಟ್​ ಪೇಯ್ಡ್​ ಸೇವೆಯನ್ನು 40 ಲಕ್ಷ ಜನರು ಬಳಕೆ ಮಾಡಿಕೊಳ್ಳುತ್ತಿದ್ದಾರೆ.

First published:October 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading