ಗುಂಡಿಕ್ಕಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಶಾಸಕ ಸತ್ಯಜಿತ್​ ಬಿಸ್ವಾಸ್​ ಕೊಲೆ

ಕೋಲ್ಕತ್ತದಿಂದ 120 ಕಿ.ಮೀ.ದೂರದಲ್ಲಿರುವ ನದಿಯಾ ಜಿಲ್ಲೆಯ ಕೃಷ್ಣಗಂಜ್​ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಿಸ್ವಾಸ್​ ಪಾಲ್ಕೊಂಡಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ.  ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಬಿಸ್ವಾಸ್​ ಅವರಿಗೆ ಗುಂಡು ಹಾರಿಸಲಾಗಿದೆ.

HR Ramesh | news18
Updated:February 9, 2019, 10:31 PM IST
ಗುಂಡಿಕ್ಕಿ ಪಶ್ಚಿಮಬಂಗಾಳದ ತೃಣಮೂಲ ಕಾಂಗ್ರೆಸ್​ ಶಾಸಕ ಸತ್ಯಜಿತ್​ ಬಿಸ್ವಾಸ್​ ಕೊಲೆ
ಕೊಲೆಯಾದ ಶಾಸಕ ಸತ್ಯಜಿತ್ ಬಿಸ್ವಾಸ್
HR Ramesh | news18
Updated: February 9, 2019, 10:31 PM IST
ನವದೆಹಲಿ: ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯ  ಕೃಷ್ಣಗುಂಜ್​ನಲ್ಲಿ  ತೃಣಮೂಲ ಕಾಂಗ್ರೆಸ್ ಶಾಸಕ ಸತ್ಯಜಿತ್ ಬಿಸ್ವಾಸ್​ ಅವರನ್ನು ಶನಿವಾರ ರಾತ್ರಿ ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.

ಕೋಲ್ಕತ್ತದಿಂದ 120 ಕಿ.ಮೀ.ದೂರದಲ್ಲಿರುವ ನಾಡಿಯಾ ಜಿಲ್ಲೆಯ ಕೃಷ್ಣಗಂಜ್​ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮದಲ್ಲಿ ಬಿಸ್ವಾಸ್​ ಪಾಲ್ಕೊಂಡಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯಲಾಗಿದೆ.  ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸುತ್ತಿದ್ದಾಗ ಬಿಸ್ವಾಸ್​ ಅವರಿಗೆ ಗುಂಡು ಹಾರಿಸಲಾಗಿದೆ.

ನಾಡಿಯಾ ಜಿಲ್ಲೆ ಬಾಂಗ್ಲಾದೇಶ ಗಡಿಯಲ್ಲಿದೆ. ಮತ್ತು ಇತ್ತೀಚೆಗೆ ಈ ಭಾಗವನ್ನು ಬಿಜೆಪಿ ರಾಜಕೀಯವಾಗಿ ಅತಿಕ್ರಮಿಸಿಕೊಂಡಿದೆ. ಸತ್ಯಜಿತ್ ಬಿಸ್ವಾಸ್​ ಮಾಥುರ್ ಸಮುದಾಯಕ್ಕೆ ಸೇರಿದವರು. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಬಿಸ್ವಾಸ್​ ಶಾಸಕರಾಗಿದ್ದರು. ಇದೊಂದು ರಾಜಕೀಯಪ್ರೇರಿತ ಕೊಲೆ ಎಂದು ಟಿಎಂಸಿ ಪಕ್ಷ ಆರೋಪ ಮಾಡಿದೆ.

ಇದನ್ನು ಓದಿ: CBI vs Kolkata Police | ಕೋಲ್ಕತ್ತ ಪೊಲೀಸ್ ಆಯುಕ್ತ ರಾಜೀವ್ ಕುಮಾರ್​ನನ್ನು 8 ಗಂಟೆ ವಿಚಾರಣೆ ನಡೆಸಿದ ಸಿಬಿಐ

ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಶಾಸಕನನ್ನು ಕೊಂದ ಬಳಿಕ ಅಲ್ಲಿ ನೆರೆದಿದ್ದ ಜನರು ಚೆಲ್ಲಾಪಿಲ್ಲಿಯಾಗಿ ಓಡಿಹೋಗಿದ್ದಾರೆ. ಆರೋಪಿ ಹುಡುಕಾಟ ನಡೆದಿದೆ. ಕಾರ್ಯಕ್ರಮದ ವೇದಿಕೆ ಬಳಿಗೆ ಶಾಸಕ ಬಿಸ್ವಾಸ್​ ಹತ್ತಿರವಾಗುತ್ತಿದಂತೆ ಕೊಲೆಗಾರ ಹಲವು ಸುತ್ತು ಗುಂಡು ಹಾರಿಸುವ ಮೂಲಕ ಶಾಸಕರನ್ನು ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ನಡೆಯುವ ವೇಳೆ 37 ವರ್ಷದ ಬಿಸ್ವಾಸ್​ ಜೊತೆಗೆ ಸಚಿವರಾದ ರತ್ನ ಘೋಷ್ ಮತ್ತು ಟಿಎಂಸಿ ಪಕ್ಷದ ಜಿಲ್ಲಾಧ್ಯಕ್ಷ ಗೌರಿಶಂಕರ್​ ದತ್ ಜೊತೆಗಿದ್ದರು.​ ಇತ್ತೀಚೆಗಷ್ಟೇ ಶಾಸಕ ಬಿಸ್ವಾಸ್​ ಮದುವೆಯಾಗಿದ್ದರು.
First published:February 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...