Sabarimala: ದೇವರ ನಾಡಲ್ಲಿ ರಣಮಳೆ ಆರ್ಭಟ, ಇಂದು ಭಕ್ತರಿಗಿಲ್ಲ ಶಬರಿಮಲೆ ಅಯ್ಯಪ್ಪನ ದರ್ಶನ !

Sabarimala: ಭಕ್ತಿರಿಗೆ ಯಾವುದೇ ತೊಂದರೆಯಾಗಬಾರದೆಂದು,ಇಂದು ಅಂದರೆ  ನವೆಂಬರ್​ 20 ರಂದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಪತ್ತನಂತಿಟ್ಟ ಜಿಲ್ಲಾಧಿಕಾರಿಗಳ ಹೇಳಿಕೆ ಪ್ರಕಾರ ಶಬರಿಮಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿಲ್ಲ.

ಶಬರಿಮಲೆ ಅಯ್ಯಪ್ಪನ ದೇಗುಲ

ಶಬರಿಮಲೆ ಅಯ್ಯಪ್ಪನ ದೇಗುಲ

  • Share this:
ಸ್ವಾಮಿಯೇ ಶರಣಂ ಅಯ್ಯಪ್ಪ.. ಹೌದು, ಎರಡು ತಿಂಗಳ ಕಾಲ ನಡೆಯುವ ಮಂಡಲ-ಮಕರವಿಳಕ್ಕು(ಮಕರ ಸಂಕ್ರಾಂತಿ)ಗಾಗಿ ಶಬರಿಮಲೆ ದೇಗುಲ(Sabarimala Temple)ವನ್ನು ನವೆಂಬರ್​ 15 ಸಂಜೆಯಿಂದ  ತೆರಯಲಾಗಿತ್ತು.  ನವೆಂಬರ್​ 16ರಿಂದ  ಸಾರ್ವಜನಿಕರ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು.  ಕೇರಳದ (Kerala) ಶಬರಿಮಲೆಯ ಅಯ್ಯಪ್ಪ ದೇವಾಲಯವು (Sabarimala Ayyappa Temple) ನವೆಂಬರ್​ 15ರಿಂದ ಎರಡು ತಿಂಗಳು ತೀರ್ಥಯಾತ್ರೆಗಾಗಿ ತೆರೆಯಲಿದೆ. ಇಲ್ಲಿಗೆ ಬಂದು ಅಯ್ಯಪ್ಪನ ದರ್ಶನ ಪಡೆಯುವ ಭಕ್ತರಿಗೆ ಕೋವಿಡ್​ ಲಸಿಕೆಯ ಪ್ರಮಾಣಪತ್ರ(Vaccine Certificate), ಜೊತೆಗೆ 72 ಗಂಟೆಗಳೊಳಗಿನ ಕೋವಿಡ್ ನೆಗೆಟಿವ್​ ವರದಿ(Negative Report)  ಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ದೇವರ ನಾಡು ಕೇರಳದಲ್ಲಿ ರಣ ಮಳೆ(Rain) ತನ್ನ ಆರ್ಭಟವನ್ನು ಮುಂದುವರಿಸಿದೆ. ಪಂಪಾ ನದಿ(Pampa River) ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ಭಕ್ತಿರಿಗೆ ಯಾವುದೇ ತೊಂದರೆಯಾಗಬಾರದೆಂದು,ಇಂದು ಅಂದರೆ  ನವೆಂಬರ್​ 20 ರಂದು ಶಬರಿಮಲೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿಲ್ಲ. ಪತ್ತನಂತಿಟ್ಟ ಜಿಲ್ಲಾಧಿಕಾರಿ(Pathanamthitta DC)ಗಳ ಹೇಳಿಕೆ ಪ್ರಕಾರ ಶಬರಿಮಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಇಂದು ಭಕ್ತರಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶವಿಲ್ಲ. 

ಪತ್ತಿನಂತಿಟ್ಟ ಜಿಲ್ಲಾಧಿಕಾರಿ ಆದೇಶ

ಪತ್ತನಂತಿಟ್ಟ ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಂಬಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ಕಕ್ಕಿ-ಆನಾತೋಡ್ ಜಲಾಶಯದ ಗೇಟ್‌ಗಳನ್ನು ತೆರೆಯಲಾಗಿದೆ ಪಂಪಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಸ್ಥಿತಿ ಉಂಟಾಗಿದೆ. ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಸಲುವಾಗಿ, ಈ ಮೂಲಕ ಇಂದು (20-11-2021) ಪಂಪಾ ಮತ್ತು ಶಬರಿಮಲೆಗೆ ಯಾತ್ರೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾ ಎಸ್ ಅಯ್ಯರ್ ಅವರು ಆದೇಶ ಹೊರಡಿಸಿದ್ದಾರೆ. ಈ ಸಮಯದಲ್ಲಿ ಯಾತ್ರಾರ್ಥಿಗಳು ಪ್ರಯಾಣ ಕೈಗೊಳ್ಳದೆ ಸಹಕರಿಸುವಂತೆ ಕೋರುತ್ತೇವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಭಕ್ತರು ಎಚ್ಚರದಿಂದ ಇರುವಂತೆ ಸೂಚನೆ

ಮಳೆಯಿಂದಾಗಿ ಇಲ್ಲಿನ ಅನೇಕ ರಸ್ತೆಗಳು, ಸೇತುವೆಗಳು ಮುಳುಗಿ ಅವಘಡ ಸಂಭವಿಸಿರುವ ಕಾರಣ ಮತ್ತು ಮಳೆಗೆ ಮತ್ತಷ್ಟುಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆಯಿಂದ ಭಕ್ತರ ಇರುವಂತೆ ಸೂಚನೆ  ನೀಡಲಾಗಿದೆ. ಶಬರಿಮಲೆ ದೇವಸ್ಥಾನಕ್ಕೆ ಟ್ರೆಕ್ಕಿಂಗ್ ಸ್ವಾಮಿ ಅಯ್ಯಪ್ಪನ್ ರಸ್ತೆಯ ಮೂಲಕ ಮಾತ್ರ ಅನುಮತಿ ನೀಡಲಾಗಿದೆ.  ಭಕ್ತರ ದರ್ಶನ ವೇಳೆ ಯಾವುದೇ ಅಹಿತಕರ ಘಟನೆ ಜರುಗದಂತೆ ಎಲ್ಲಾ ಮುಂಜಾಗ್ರತ ಕ್ರಮಗಳನ್ನು ಅಲ್ಲಿನ ಸರ್ಕಾರ ಕೈಗೊಂಡಿದೆ. ಇಂದು ಭಕ್ತರು ದೇವರ ದರ್ಶನಕ್ಕೆ ಆಗಮಿಸಬಾರದೆಂದು ಮನವಿ ಮಾಡಿಕೊಂಡಿದೆ.

ಇದನ್ನು ಓದಿ : ಇಂದಿನಿಂದ ಶಬರಿಮಲೆ ದೇಗುಲ ಓಪನ್‌: ಭಕ್ತರಿಗೆ 2 ಡೋಸ್​ ವ್ಯಾಕ್ಸಿನ್​ ಕಡ್ಡಾಯ!

ಪಂಪಾ ನದಿ ನೀರಿನ ಮಟ್ಟ ಹೆಚ್ಚಳ

ಕೇರಳದಲ್ಲಿ ಕೆಲವು ದಿನಗಳಿಂದ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿಯುತ್ತಿದ್ದು, ಪಂಪಾ ನದಿ ನೀರಿನ ಮಟ್ಟಹೆಚ್ಚಾಗಿದೆ.  ಈ ಮಧ್ಯೆ ನವೆಂಬರ್​ 16ರಿಂದ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇಲ್ಲಿಗೆ ಬರುವ ಭಕ್ತರು ಪಂಪಾ ನದಿಯಲ್ಲಿ ಮಿಂದೆದ್ದು ಬಳಿಕ ದೇವರ ದರ್ಶನ ಪಡೆಯುವುದು ವಾಡಿಕೆ. ಆದರೆ ಪಂಪಾ ನದಿ ನೀರಿನ ಮಟ್ಟ ಹೆಚ್ಚುರುವುದರಿಂದ ಅಲ್ಲಿಗೆ ಭಕ್ತರ ಪ್ರವೇಶವನ್ನು ನಿರ್ಬಂಧಗೊಳಿಸಲಾಗಿತ್ತು. ಇದೀಗ ಪಂಪಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದಾಳೆ.

ಇದನ್ನು ಓದಿ : ಶಬರಿಮಲೆಗೆ ಸಿಗುತ್ತಿದೆ ರೈಲ್ವೆ ಸಂಪರ್ಕ; 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಜೀವ


 ವೈದ್ಯಕೀಯ ಸೌಲಭ್ಯಗಳು ಲಭ್ಯ

ಪಂಪಾದಿಂದ ಅಯ್ಯಪ್ಪನ ದೇವಾಲಯವರೆಗಿನ 4.5 ಕಿಮೀ ಟ್ರೆಕ್ಕಿಂಗ್ ಮಾರ್ಗದಲ್ಲಿ ಐದು ಸ್ಥಳಗಳಲ್ಲಿ ತುರ್ತು ವೈದ್ಯಕೀಯ ಕೇಂದ್ರಗಳು ಮತ್ತು ಆಮ್ಲಜನಕ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.   ದೇವಸ್ಥಾನಕ್ಕೆ ಪ್ರಯಾಣಿಸುವಾಗ ಯಾರಾದರೂ ಅತಿಯಾದ ಹೃದಯ ಬಡಿತ, ಉಸಿರಾಟದ ತೊಂದರೆ ಅಥವಾ ಎದೆ ನೋವು ಅನುಭವಿಸಿದರೆ ತಕ್ಷಣ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ತರಬೇತಿ ಪಡೆದ ಸ್ಟಾಫ್ ನರ್ಸ್ ಮತ್ತು ಇತರ ವೈದ್ಯಕೀಯ ಸೌಲಭ್ಯಗಳು ಎಲ್ಲಾ ಸಮಯದಲ್ಲೂ ಲಭ್ಯವಿರುತ್ತವೆ ಅಂತ ಅವರು ತಿಳಿಸಿದ್ದಾರೆ. ಇನ್ನೂ ಮಳೆಯ ಅಬ್ಬರ ತಗ್ಗಿದ ನಂತರ ಅಯ್ಯಪ್ಪನ ದರ್ಶನ ಪಡೆಯಬಹುದಾಗಿದೆ.


Published by:Vasudeva M
First published: