ತಮಿಳುನಾಡು ಸಾತಾನ್ ಕುಳಂ ಲಾಕಪ್​ ಡೆತ್​ಗೆ 1 ವರ್ಷ; ಇನ್ನೂ ಮುಗಿಯದ CBI ತನಿಖೆ, ನ್ಯಾಯದ ನಿರೀಕ್ಷೆಯಲ್ಲಿ ಕುಟುಂಬ

ತಮಿಳುನಾಡಿನ ತೂತುಕುಡಿಯಲ್ಲಿ ಕಳೆದ ಜೂನ್‌ 19 ರಂದು ನಡೆದ ಲಾಕಪ್‌ ಡೆತ್ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ತಮಿಳುನಾಡಿನ ಪೊಲೀಸರ ಕ್ರೌರ್ಯದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಆದರೆ 1 ವರ್ಷಗಳ ನಂತರವೂ ತೂತುಕುಡಿ ಲಾಕಪ್‌ ಡೆತ್ ಪ್ರಕರಣದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ.

ಲಾಕಪ್ ಡೆತ್​ನಲ್ಲಿ ಮೃತಪಟ್ಟ ತಂದೆ-ಮಗ.

ಲಾಕಪ್ ಡೆತ್​ನಲ್ಲಿ ಮೃತಪಟ್ಟ ತಂದೆ-ಮಗ.

 • Share this:
  ಮೊದಲ ಅಲೆ ಕೊರೋನಾ ವೈರಸ್ ಹಾವಳಿ ಕಾರಣದಿಂದಾಗಿ ತಮಿಳುನಾಡಿನಲ್ಲಿ 2020 ರಲ್ಲಿ ಲಾಕ್​ಡೌನ್ ಹೇರಲಾಗಿತ್ತು. ಈ ವೇಳೆ ಜೂನ್ 19 ರಂದು ವಿಧಿಸಲಾಗಿದ್ದ ಕರ್ಫ್ಯೂ ಸಮಯದಲ್ಲಿ ತಮ್ಮ ಮೊಬೈಲ್ ಫೋನ್ ಅಂಗಡಿಯನ್ನು ತೆರೆದಿಟ್ಟಿದ್ದಕ್ಕಾಗಿ ಪಿ. ಜಯರಾಜ್ (59) ಮತ್ತು ಅವರ ಮಗ ಜೆ. ಬೆನಿಕ್ಸ್ (31) ಅವರನ್ನು ಪೊಲೀಸರು ಬಂಧಿಸಿದ್ದರು. ಆದರೆ, ಎರಡು ದಿನಗಳ ಬಳಿಕ ಅವರು ಠಾಣೆಯಲ್ಲೇ ಮೃತರಾಗಿದ್ದರು. ಈ ಪ್ರಕರಣ ಹಾಗೂ ಲಾಕಪ್​ ಡೆತ್ ಸಾವಿನ​ ಕ್ರೌರ್ಯ ಇಡೀ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಸ್ವತಃ ಮದ್ರಾಸ್ ಹೈಕೋರ್ಟ್ಈ ಪ್ರಕರಣದ ಸಂಬಂಧ ಪೊಲೀಸ್​ ಇಲಾಖೆಗೆ ಛೀಮಾರಿ ಹಾಕಿತ್ತು. ಇಂದು ಈ ಪ್ರಕರಣಕ್ಕೆ ಒಂದು ವರ್ಷ ತುಂಬಿದೆ. ಮೃತರ ಕುಟುಂಬ ಈಗಲೂ ನ್ಯಾಯಕ್ಕಾಗಿ ಕಾದು ಕುಳಿತಿದೆ.

  ತಮಿಳುನಾಡಿನ ತೂತುಕುಡಿಯಲ್ಲಿ ಕಳೆದ ಜೂನ್‌ 19 ರಂದು ನಡೆದ ಲಾಕಪ್‌ ಡೆತ್ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ತಮಿಳುನಾಡಿನ ಪೊಲೀಸರ ಕ್ರೌರ್ಯದ ವಿರುದ್ಧ ರಾಜ್ಯದಲ್ಲಿ ತೀವ್ರ ಆಕ್ರೋಶವನ್ನು ಹುಟ್ಟುಹಾಕಿತ್ತು. ಆದರೆ 1 ವರ್ಷಗಳ ನಂತರವೂ ತೂತುಕುಡಿ ಲಾಕಪ್‌ ಡೆತ್ ಪ್ರಕರಣದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಲೇ ಇದೆ. ಆದರೆ, ನ್ಯಾಯ ಸಿಗುವುದು ಎಂದು ಎಂಬುದು ಸಂತ್ರಸ್ತರ ಅಳಲು.

  ಆದರೆ, ಈ ಒಂದು ವರ್ಷದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಲಾಕಪ್‌ ಡೆತ್‌ನಲ್ಲಿ ಮೃತಪಟ್ಟ ಜಯರಾಜ್ ಅವರ ಪತ್ನಿ ಸೆಲ್ವರಾಣಿಯವರು 2020 ರ ಆಗಸ್ಟ್ ನಲ್ಲೇ ತಮ್ಮ ಸಾತಾನ್​ ಕುಳಂ ಮನೆಯನ್ನು ತೊರೆದು ಮಗಳು ಪೆರ್ಸಿಸ್ ಜೊತೆ ಪಕ್ಕದ ಟೆಂಕಾಸಿ ಜಿಲ್ಲೆಯ ಪುಲ್ಲಂಗುಡಿಯಲ್ಲಿ ವಾಸಿಸುತ್ತಿದ್ದಾರೆ.

  ಲಾಕಪ್‌ ಡೆತ್‌ ನಡೆದ ರಾತ್ರಿ ಪೊಲೀಸ್ ಠಾಣೆಯ ಆಚೆಗೆ ನಿಂತಿದ್ದ ಬಿನಿಕ್‌ ಅವರ ಸ್ನೇಹಿತ್ ರವಿ ತಮ್ಮ ಸ್ನೇಹಿತನನ್ನು ನೆನೆಸಿಕೊಂಡು ಮರುಗುತ್ತಾರೆ. ಬೆನಿಕ್‌ನನ್ನು ನೆನೆಯದ ಒಂದೇ ಒಂದು ದಿನವೂ ಇಲ್ಲ ಈ ಒಂದು ವರ್ಷದಲ್ಲಿ ಎಂದು ರವಿ ನೆನೆಸಿಕೊಂಡಿದ್ದಾರೆ. ಲಾಕಪ್‌‌‌ ಡೆತ್‌ಗೆ 1 ವರ್ಷವೆಂದರೆ ನಂಬಲಾಗದು ಎಂದು ರವಿ ತಮ್ಮ ದು:ಖವನ್ನು ಹಂಚಿಕೊಂಡಿದ್ದಾರೆ.

  1 ವರ್ಷ ಆಗಿಹೋಯಿತೇ ? ಬೆನಿಕ್ ಮುಖ ಇನ್ನೂ ಅಚ್ಚಳಿಯದಂತೆ ನನ್ನ ಕಣ್ಣ ಮುಂದಿದೆ ಎಂದು ಬೆನಿಕ್ ಅವರ ಮತ್ತೊಬ್ಬ ಸ್ನೇಹಿತ ತಮ್ಮ ನೋವನ್ನು ಹಂಚಿಕೊಳ್ಳುತ್ತಾರೆ. ಜೂನ್ 22 ರಂದು ಜಯರಾಜ್ ಮತ್ತು ಬೆನಿಕ್ ಅವರ ಕುಟುಂಬ ಲಾಕಪ್ ಡೆತ್‌ನಲ್ಲಿ ಮಡಿದವರ ನೆನಪಿನಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡಿದೆ.

  ಘಟನೆಯ ಹಿನ್ನಲೆ:

  2020 ರ ಜೂನ್ 18 ರಂದು ಜಯರಾಜ್ ಅವರ ಮೊಬೈಲ್ ಅಂಗಡಿಗೆ ಆಗಮಿಸಿದ ಪೊಲೀಸ್ ಪೇದೆಗಳು ಸರ್ಕಾರ ನಿಗದಿ ಪಡಿಸಿದ ಲಾಕ್‌ಡೌನ್ ಅವಧಿಯನ್ನು ಮೀರಿ ಅಂಗಡಿಯನ್ನು ತೆರೆದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿ ಹೋಗಿದ್ದರು. ಮಾರನೇ ದಿನ ಸಂಜೆ 7:45 ನಿಮಿಷಕ್ಕೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಾಲಕೃಷ್ಣನ್ ಕೆಲವು ಪೇದೆಗಳೊಂದಿಗೆ ಜಯರಾಜ್ ಅವರ ಅಂಗಡಿಗೆ ಆಗಮಿಸಿ ಮಾತಿನ ಚಕಮುಕಿ ನಡೆಸಿದ್ದಾರೆ.

  ಈ ವೇಳೆ ಪೊಲೀಸರು ಜಯರಾಜ್ ಮತ್ತು ಇಮ್ಯಾನುವೆಲ್ ಬೆನಿಕ್ ಅವರನ್ನು ಪೊಲೀಸ್ ಠಾಣೆಗೆ ಒಯ್ದಿದ್ದಾರೆ. ರಾತ್ರಿಯಿಡಿ ಪೊಲೀಸರು ಥಳಿಸಿದ ಪರಿಣಾಮ ಬೆನಿಕ್ ಅದೇ ರಾತ್ರಿ ಮೃತಪಟ್ಟಿದ್ದಾರೆ. ತಂದೆ ಜಯರಾಜ್ ಮಾರನೇಯ ದಿನ ಅಸು ನೀಗಿದ್ದಾರೆ.

  ಜಯರಾಜ್ ಮತ್ತು ಬೆನಿಕ್‌ರನ್ನು ಪೊಲೀಸರು ಲಾಟಿಗಳಿಂದ ಮನಸೋ ಇಚ್ಛೆ ಥಳಿಸಿದರು. ರಕ್ತ ಹರಿಯುತ್ತಿತ್ತು. ನಿಲ್ಲಿಸಿ ಎಂದರೆ ಮತ್ತಷ್ಟು ಹೊಡೆದರು. ಪರಿಣಾಮ ತಂದೆ ಮತ್ತು ಮಗ ಪೊಲೀಸ್ ಠಾಣೆಯಲ್ಲಿಯೇ ಕೊನೆ ಉಸಿರು ಎಳೆದಿದ್ದಾರೆ ಎಂದು 2020 ರ ಜೂನ್ 19 ರಂದು ಸತಾಂಕುಲಮ್ ಪೊಲೀಸ್ ಠಾಣೆಯ ಎದುರು ಕಾಯುತ್ತ ನಿಂತಿದ್ದ ಬೆನಿಕ್ ಸ್ನೇಹಿತರು ತಿಳಿಸಿದ್ದಾರೆ.

  ಇದನ್ನೂ ಓದಿ: ಕಳೆದ ಒಂದು ವರ್ಷದಲ್ಲಿ ಉತ್ತರಪ್ರದೇಶದಲ್ಲಿ 400 ಲಾಕಪ್‌ ಡೆತ್; ಸಂಸತ್‌ಗೆ ಮಾಹಿತಿ ನೀಡಿದ ಗೃಹ ಸಚಿವಾಲಯ

  ಪೊಲೀಸರು ದಾಖಲಿಸಿದ FIR ನಲ್ಲಿ ಸಾಕಷ್ಟು ದೋಷವಿರುವುದನ್ನು ಗಮನಿಸಿದ ತಮಿಳುನಾಡು ಹೈಕೋರ್ಟ್ ಸುಮೋಟೊ ಪ್ರಕರಣವನ್ನು ದಾಖಲಿಸಿಕೋಮಡು ವಿಚಾರಣೆಯನ್ನು ಆರಂಭಿಸಿತು. ಈ ನಡುವೆ ತಮಿಳುನಾಡಿನಾದ್ಯಂತ ಪೊಲೀಸರ ಕ್ರೌರ್ಯದ ವಿರುದ್ಧ ಸಾಕಷ್ಟು ಪ್ರತಿಭಟನೆಗಳು ನಡೆದವು. ತಮಿಳುನಾಡು ಹೈಕೋರ್ಟ್‌ ಪ್ರಕತರಣವನ್ನು ಸಿಬಿಐಗೆ ವಹಿಸಿತ್ತು.

  CBI ಲಾಕಪ್‌ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸತಾಂಕುಲಮ್ ಠಾಣಾಧಿಕಾರಿಯಾಗಿದ್ದ ಎಸ್‌.ಶ್ರೀಧರ್, ಕೆ. ಬಾಲಕೃಷ್ಣನ್ ಮತ್ತು ಮತ್ತೊಬ್ಬ ಸಬ್‌ ಇನ್ಸ್‌ಪೆಕ್ಟರ್, ಇಬ್ಬರು ಹೆಡ್‌ ಕಾನ್ಸಟೇಬಲ್, 4 ಜನ ಕಾನ್ಸಟೇಬಲ್ ಸೇರಿ 9 ಜನರನ್ನು ಬಂಧಿಸಿತ್ತು. ಅಪರಾಧಿಕ ಸಂಚು, ಕೊಲೆ, ಸುಳ್ಳು ಪ್ರಕರಣ ದಾಖಲು, ಸಾಕ್ಷಿ ನಾಶ, ಅಕ್ರಮ ಬಂಧನ ಸೇರಿ ಹಲವು ಪ್ರಕರಣಗಳನ್ನು ದಾಖಲಿಸಿದೆ. 9 ಜನರಲ್ಲಿ ಒಬ್ಬರು ಈಗಲೇ ಕೋವಿಡ್‌ ಕಾರಣಕ್ಕೆ ಮೃತಪಟ್ಟಿದ್ದಾರೆ. ಉಳಿದ 8 ಜನರು ಇನ್ನೂ ಜೈಲಿನಲ್ಲಿ ಇದ್ದಾರೆ.

  ಇದನ್ನೂ ಓದಿ: Swiss Bank: ಸ್ವಿಸ್ ಬ್ಯಾಂಕ್​ನಲ್ಲಿನ ಭಾರತೀಯರ ಠೇವಣಿ 20,700 ಕೋಟಿಗೆ ಏರಿಕೆ; ಕಳೆದ 13 ವರ್ಷದಲ್ಲೇ ಅತಿ ಹೆಚ್ಚು!

  ಕುಂಟುತ್ತ ಸಾಗುತ್ತಿರುವ CBI ವಿಚಾರಣೆ

  ಕಳೆದ 8 ತಿಂಗಳಿನಿಂದ CBI ಲಾಕಪ್‌ ಡೆತ್ ಪ್ರಕರಣದ ತನಿಖೆಯನ್ನು ನಡೆಸುತ್ತಲೇ ಇದೆ. ಈ ಸಂಬಂಧ ವಿಚಾರಣೆಯನ್ನು ಕೂಡ ನಡೆಸುತ್ತಿದೆ. ಮಾರ್ಚ್‌ 2021 ಜಯರಾಜ್ ಅವರ ಪತ್ನಿ ಸೆಲ್ವರಾಣಿಯವರು ಸಿಬಿಐ ತನಿಖೆಯನ್ನು ಶೀಘ್ರವೇ ಮುಗಿಸುವಂತೆ ಆದೇಶಿಸಬೇಕು ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ತನಿಖೆ ಯಾಕೆ ಮುಗಿಯುತ್ತಿಲ್ಲ ? 8 ತಿಂಗಳು ಬೇಕೆ ? ಎಂದು ಸುಪ್ರೀಂ ಕೋರ್ಟ್‌ ಕೇಳಿದ ಪ್ರಶ್ನೆಗೆ ಸಿಬಿಐ ಸಮರ್ಪಕವಾಗಿ ಉತ್ತರಿಸಿರಲಿಲ್ಲ.

  1 ವರ್ಷವಾದರೂ ಸಿಬಿಐ ತನಿಖೆಯನ್ನು ನಡೆಸುತ್ತಲೇ ಇದೆ. ಮಧುರೈ ಹೈಕೋರ್ಟ್‌ ಬೆಂಚ್ 2021 ಮಾರ್ಚ್‌ 28 ರಂದು 6 ತಿಂಗಳಲ್ಲಿ ವಿಚಾರಣೆಯನ್ನು ಮುಗಿಸುವಂತೆ ಮುಧರೈನ ಜಿಲ್ಲಾ ನ್ಯಾಯಾಧೀಶರಿಗೆ ಆದೇಶಿಸಿದೆ. ಸುಪ್ರೀಂ ಕೋರ್ಟ್‌ ಮೇ 25 ರಂದು ಪ್ರಕರಣದ ಆರೋಪಿಯೊಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.
  Published by:MAshok Kumar
  First published: