ಚೆನ್ನೈ (ಜೂನ್ 14); ಚುನಾವಣಾ ಪೂರ್ವ ಕಾಲದಿಂದಲೂ ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದ ತಮಿಳುನಾಡು ರಾಜಕಾರಣ ಮತ್ತು ಎಐಎಡಿಎಂಕೆ ಪಕ್ಷ ಇದೀಗ ಮತ್ತೆ ಸುದ್ದಿಯ ಕೇಂದ್ರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ಚಿನ್ನಮ್ಮ ವಿ.ಕೆ. ಶಶಿಕಲಾ ಎಐಎಡಿಎಂಕೆ ಪಕ್ಷದಲ್ಲಿ ತಮ್ಮ ಬಣದ ಶಾಸಕರ ಮೂಲಕ ಭಿನ್ನಮತ ಹುಟ್ಟುಹಾಕುವ ಸೂಚನೆ ನೀಡಿದ್ದರು. ಆದರೆ, ನಂತರ ಸುಮ್ಮನಾಗಿ ದ್ದರು. ಇದೀಗ ತಮಿಳುನಾಡಿನ ರಾಜಕೀಯದಲ್ಲಿ ಮತ್ತೆ ದಿಡೀರ್ ಬೆಳವಣಿಗೆ ಯೊಂದು ನಡೆದಿದ್ದು, ವಿರೋಧಪಕ್ಷ ಎಐಡಿಎಂಕೆ ನಾಯಕ ಇ. ಪಳನಿಸ್ವಾಮಿ ಮತ್ತು ಎಐಡಿಎಂಕೆ ಉಚ್ಛಾಟಿತ ನಾಯಕಿ ವಿ.ಕೆ. ಶಶಿಕಲಾ ಬಣಗಳ ನಡುವೆ ಬಿರುಸಿನ ರಾಜಕೀಯ ತಿಕ್ಕಾಟ ಆರಂಭವಾಗಿದೆ. ಈ ಬೆಳವಣಿಗೆಯಲ್ಲಿ ಶಶಿಕಲಾ ಬಣದ 16 ಜನ ನಾಯಕರನ್ನು ಇಂದು ಎಐಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ಪಕ್ಷದಿಂದ ಉಚ್ಛಾಟನೆಗೊಂಡವರಲ್ಲಿ ಎಐಡಿಎಂಕೆ ವಕ್ತಾರ ವಿ ಪುಗಲೆಂದಿ ಸೇರಿದಂತೆ ಇತರೆ ಅನೇಕ ನಾಯಕರು ಸೇರಿದ್ದಾರೆ ಎನ್ನಲಾಗಿದೆ.
ಘಟನೆಯ ಹಿನ್ನಲೆ:
ನಿನ್ನೆ ಭಾನುವಾರ ಜೂನ್ 13 ರಂದು ಏಐಡಿಎಂಕೆಯ ನಾಯಕಿ ವಿ.ಕೆ. ಶಶಿಕಲಾ ಅವರು ರಾಜಕೀಯಕ್ಕೆ ಮರಳುವುದಾಗಿ ಪತ್ರ ಬರೆದಿದ್ದರು. ನಂತರದಲ್ಲಿ ಶಶಿಕಲಾ ತಮಿಳುನಾಡು ರಾಜಕೀಯ ಮರುಪ್ರವೇಶದ ಕುರಿತು ತಮ್ಮ ಬೆಂಬಲಿಗರೊಂದಿಗೆ ಮಾತನಾಡಿದ ದೂರವಾಣಿ ಕರೆ ಕೂಡ ಎಲ್ಲೆಡೆ ಹರಿದಾಡಿತ್ತು. ಈ ವೇಳೆ ಶಶಿಕಲಾ ರಾಜಕೀಯದ ಎರಡನೇ ಇನ್ನಿಂಗ್ಸ್‌ಗೆ ಅನೇಕರು ಬೆಂಬಲ ಸೂಚಿಸಿದ್ದರು. ಈಗ ಶಶಿಕಲಾರವರನ್ನು ಬೆಂಬಲಿಸಿದ ಎಐಡಿಎಂಕೆಯ ನಾಯಕರನ್ನು ಪಕ್ಷದಿಂದ ವಜಾಮಾಡಲಾಗಿದೆ.
ಏಐಡಿಎಂಕೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು ವಿ.ಕೆ. ಶಶಿಕಲಾ ರಾಜಕೀಯ ಪ್ರವೇಶವೆಂಬುದು ಒಂದು ನಾಟಕ. ಪಕ್ಷವನ್ನು ಯಾವುದೇ ಕಾರಣಕ್ಕೂ ಒಂದು ಕುಟುಂಬದ ಹಿಡಿತಕ್ಕೆ ನೀಡಲು ಸಾಧ್ಯವಿಲ್ಲ. V K ಶಶಿಕಲಾ ತೆಕ್ಕೆಗೆ ಪಕ್ಷವನ್ನು ಒಪ್ಪಿಸಿದರೆ ಏಐಡಿಎಂಕೆ ನಾಶವಾಗುತ್ತದೆ ಎಂದು ಹೇಳಿಕೆ ನೀಡಿದೆ.
ಶಶಿಕಲಾ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಎಐಡಿಎಂಕೆ ಮುಖಂಡ ಸಿ. ಪೊನ್ನಿಯನ್ ಮಾತನಾಡಿ V K ಶಶಿಕಲಾ ಪಕ್ಷದಿಂದ ಉಚ್ಛಾಟನೆಗೊಂಡಿರುವ ವ್ಯಕ್ತಿ. ಅವರು ಬಂದು ಏಐಡಿಎಂಕೆಯನ್ನು ಮರುಸಂಘಟನೆ ಮಾಡುತ್ತೇನೆ ಎನ್ನುತ್ತಾರೆ. ಆದರೆ ಸಾಧ್ಯವಿಲ್ಲ. ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Crime News| ನಾಗ್ಪುರದ ಶಾಲೆಯ ಶೌಯದಲ್ಲಿ 7 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯ ಬಂಧನ
ವಿ.ಕೆ. ಶಶಿಕಲಾ ಟಿಟಿವಿ ದಿನಕರನ್ ಅವರ ಬಣಕ್ಕೆ ಸೇರಿದವರು. ಯಾರು ಶಶಿಕಲಾ ಜೊತೆ ಇರುತ್ತಾರೋ ಅವರಿಗೆ ಎಐಡಿಎಂಕೆಯಲ್ಲಿ ಸ್ಥಳವಿಲ್ಲ ಎಂದು ಸಿ ಪೊನ್ನಿಯನ್ ಅಭಿಪ್ರಾಯ ಪಟ್ಟಿದ್ದಾರೆ. ಟಿಟಿವಿ ದಿನಕರನ್ ಎಐಎಡಿಎಂಕೆ ಪಕ್ಷದಿಂದ ಹೊರ ನಡೆದು ಕಳೆದ ಚುನಾವಣೆಯಲ್ಲಿ ಅಮ್ಮ ಮುನ್ನೇಟ್ರಕಳಗಂ ಎಂಬ ಪಕ್ಷವನ್ನು ಸ್ಥಾಪಿಸಿ ಚುನಾವಣಾ ಕಣಕ್ಕೆ ಧುಮುಕಿದ್ದರು. ಆದರೆ, ಅದಕ್ಕೆ ತಕ್ಕ ಫಲ ಸಿಕ್ಕಿರಲಿಲ್ಲ.
ಇದನ್ನೂ ಓದಿ: CoronaVirus| ತೀವ್ರವಾದ ಕೋವಿಡ್ 19 ಸೋಂಕು ನಿಮಗೆ ಬಲವಾದ ರೋಗ ನಿರೋಧಕ ಶಕ್ತಿ ನೀಡುವುದೇ?
ಇದೀಗ ವಿ.ಕೆ. ಶಶಿಕಲಾ ಮತ್ತೆ ರಾಜಕೀಯಕ್ಕೆ ಪ್ರವೇಶ ಮಾಡಿರುವುದು ಟಿಟಿವಿ ದಿನಕರನ್ ಸೇರಿದಂತೆ ಅನೇಕರಿಗೆ ರಾಜಕೀಯ ಮರುಹುಟ್ಟಿಗೆ ಕಾರಣವಾಗಲಿದೆ ಎಂದು ರಾಜಕೀಯ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಆದರೆ, ಮುಂದೆ ಏನಾಗಲಿದೆ? ವಿ.ಕೆ. ಶಶಿಕಲಾ ಅವರ ಮುಂದಿನ ನಡೆ ಏನು? ಎಂಬುದನ್ನು ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ