ಲಕ್ನೋ (ಡಿ. 11): ಚುನಾವಣೆ ಹೊಸ್ತಿಲಲ್ಲಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಬೃಹತ್ ಯೋಜನೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕನಸಿನ ಕೂಸಾಗಿದ್ದ ರಾಷ್ಟ್ರೀಯ ಯೋಜನೆಯಾಗಿರುವ ಸರಯೂ ಕಾಲುವೆ ಯೋಜನೆಯನ್ನು (Saryu Canal national project) ಅವರು ಉದ್ಘಾಟಿಸಿದ್ದಾರೆ. ಈ ಯೋಜನೆ ಮೂಲಕ 25 ರಿಂದ 30 ಲಕ್ಷ ರೈತರು ಲಾಭ ಪಡೆಯಲಿದ್ದಾರೆ. 14 ಲಕ್ಷ ಹೆಕ್ಟೇರ್ ಪ್ರದೇಶದ ಈ ನೀರಾವರಿ ಯೋಜನೆಯ ಮೂಲಕ ಉತ್ತರ ಪ್ರದೇಶದ ಬಲರಾಮ್‌ಪುರ, ಗೊಡಾ ಸೇರಿದಂತೆ 9 ಜಿಲ್ಲೆಯ ರೈತರು ಇದರ ಉಪಯೋಗ ಪಡೆಯಲಿದ್ದಾರೆ.
ಯೋಜನೆ ಉದ್ಘಾಟನೆ ಬಳಿಕ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಅಧಿಕಾರ ಪಡೆದ ಕಾರಣಕ್ಎಕ 5 ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆ ಅಂತಿಮವಾಗಿ ಸಾಕಾರಗೊಂಡಿತು ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಅವರು, ಉತ್ತರ ಪ್ರದೇಶದಲ್ಲಿ ಮತ್ತೆ ಬಿಜೆಪಿ ಮುನ್ನೂರಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Prime Minister Narendra Modi inaugurates the Saryu Nahar National Project in Balrampur. pic.twitter.com/zD3bFteTtT
— ANI UP (@ANINewsUP) December 11, 2021
ಇದನ್ನು ಓದಿ: ಶಾಸ್ತ್ರೀಯ ಭಾಷೆಗಳ ಪೈಕಿ ಸಂಸ್ಕೃತಕ್ಕೆ ಬೆಣ್ಣೆ, ಕನ್ನಡಕ್ಕೆ ಸುಣ್ಣ: ರಾಜ್ಯಸಭೆಯಲ್ಲಿ ಜಿ.ಸಿ. ಚಂದ್ರಶೇಖರ್ ತರಾಟೆ
9 ಜಿಲ್ಲೆಗಳ 5 ನದಿಗಳ ಬೆಸುಗೆ
318 ಕಿ.ಮೀ ಉದ್ದದ ಈ ಯೋಜನೆಯನ್ನು 9,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಯೋಜನೆಯಲ್ಲಿ ಐದು ನದಿಗಳನ್ನು ಕೂಡ ಜೋಡಿಸಲಾಗಿದೆ. ಘಘ್ರಾ, ಸರಯು, ರಾಪ್ತಿ, ಬಂಗಂಗಾ ಮತ್ತು ರೋಹಿನ್ ನದಿಗಳನ್ನು ಸಂಪರ್ಕಿಸಲಿದೆ. ಈ ಕಾಲುವೆಯು ಪೂರ್ವಾಂಚಲ್‌ನ ಒಂಬತ್ತು ಜಿಲ್ಲೆಗಳಾದ ಬಹ್ರೈಚ್, ಶ್ರಾವಸ್ತಿ, ಬಲರಾಮ್‌ಪುರ, ಗೊಂಡ, ಬಸ್ತಿ, ಮಹಾರಾಜ್‌ಗಂಜ್‌ಗೆ ಸಂಪರ್ಕ ಹೊಂದಿದೆ.
ಈ ಯೋಜನೆಯನ್ನು ಒಟ್ಟು 9,800 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ, ಈ ಪೈಕಿ ಕಳೆದ ನಾಲ್ಕು ವರ್ಷಗಳಲ್ಲಿ 4,600 ಕೋಟಿಗೂ ಹೆಚ್ಚು ಹಣವನ್ನು ಒದಗಿಸಲಾಗಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಇದನ್ನು ಓದಿ: Omicron ಸೋಂಕಿಗೆ ತುತ್ತಾದ 3 ವರ್ಷದ ಕಂದಮ್ಮ; ದೇಶದಲ್ಲಿ 32ಕ್ಕೇರಿದ ಪ್ರಕರಣ ಸಂಖ್ಯೆ
ಈ ಯೋಜನೆಯು ಸರಯು ಮುಖ್ಯ ಕಾಲುವೆ, ರಾಪ್ತಿ ಮುಖ್ಯ ಕಾಲುವೆ ಮತ್ತು ಗೋಲಾ ಪಂಪ್ ಕಾಲುವೆ, ದುಮರಿಯಾಗಂಜ್ ಪಂಪ್ ಕಾಲುವೆ, ಅಯೋಧ್ಯಾ ಪಂಪ್ ಕಾಲುವೆ ಮತ್ತು ಉತ್ರೌಲಾ ಪಂಪ್ ಕಾಲುವೆಗಳನ್ನು ಒಳಗೊಂಡ ಒಟ್ಟು 6,590 ಕಿಮೀ ಉದ್ದದ ಕಾಲುವೆ ವಿಸ್ತಾರವನ್ನು ಹೊಂದಿರುತ್ತದೆ.
5 ದಶಕದ ಯೋಜನೆ
ಕಳೆದ ಐದು ದಶಕಗಳ ಹಿಂದೆ ಆಗಿನ ಕಾಂಗ್ರೆಸ್ ಸರ್ಕಾರವು 1971 ರಲ್ಲಿ ಯೋಜನೆಯನ್ನು ರೂಪಿಸಿತ್ತು. ಈ ಯೋಜನೆ ಈಗ ಪೂರ್ಣಗೊಂಡಿದೆ. ದೇಶದ 12 ಪ್ರಧಾನಿಗಳು ಮತ್ತು ಉತ್ತರ ಪ್ರದೇಶದ 15 ಮುಖ್ಯಮಂತ್ರಿಗಳ ಅಧಿಕಾರಾವಧಿಗೆಈ ಯೋಜನೆ ಸಾಕ್ಷಿಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಈ ಯೋಜನೆಯ ಕಾಮಗಾರಿ ಚುರುಕುಗೊಂಡಿದ್ದು, ಇದೀಗ ಉದ್ಘಾಟನೆಗೊಳ್ಳುತ್ತಿದೆ.
1978 ರಲ್ಲಿ 78 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ರೂಪುಗೊಂಡಿತು. ನಂತರ ಯೋಜನೆಯು ಇತರ ಜಿಲ್ಲೆಗಳಿಗೆ ವಿಸ್ತರಿಸಲ್ಪಟ್ಟಿತು ಮತ್ತು ಕಾಲಾನಂತರದಲ್ಲಿ, ಯೋಜನೆಯ ವೆಚ್ಚವು ಹೆಚ್ಚಾಯಿತು. 2015ರಲ್ಲಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಆರಂಭಿಸಿ ಪ್ರತಿ ಜಮೀನಿಗೆ ನೀರು ಒದಗಿಸುವ ಗುರಿ ಹಾಕಿಕೊಂಡಿತು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ