Sardar Vallabhbhai Patel Death Anniversary: ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್​​ರವರ 70ನೇ ಪುಣ್ಯತಿಥಿ

ಸರ್ದಾರ್ ವಲ್ಲಭಬಾಯಿ ಪಟೇಲ್

ಸರ್ದಾರ್ ವಲ್ಲಭಬಾಯಿ ಪಟೇಲ್

ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಕ್ಟೋಬರ್ 31ರ 1875ರಲ್ಲಿ ಜನಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲ್ ಅವರ ಪಾತ್ರ ಪ್ರಮುಖವಾಗಿದೆ. ಅದೇ ರೀತಿ ಸ್ವಾತಂತ್ರ್ಯಾನಂತರ ಭಾರತವನ್ನು ಏಕೀಕರಣಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ(ಡಿ.15): ಇಂದು ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ 70ನೇ ಪುಣ್ಯತಿಥಿ. ಭಾರತದ ಸ್ವಾತಂತ್ರ್ಯ ಹೋರಾಟಗಾರ, ಭಾರತದ ಏಕೀಕರಣದ ಪಿತಾಮಹ ಸರ್ದಾರ್ ವಲ್ಲಭಬಾಯಿ ಪಟೇಲ್​ ಅವರನ್ನು ಸ್ಮರಿಸಬೇಕಿದೆ. ದೇಶದ ಮೊದಲ ಕಾಂಗ್ರೆಸ್​ ಸರ್ಕಾರದ ಗೃಹಮಂತ್ರಿ ಸರ್ದಾರ್ ಪಟೇಲ್ ಅವರ ಪುಣ್ಯತಿಥಿ ದಿನದಂದು ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.


ಬಲವಾದ ಮತ್ತು ಸಮೃದ್ಧ ಭಾರತಕ್ಕೆ ಅಡಿಪಾಯ ಹಾಕಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಗೌರವ ಸಲ್ಲಿಸುತ್ತಿದ್ದೇನೆ. ಸರ್ದಾರ್ ಪಟೇಲ್ ಅವರು ದೇಶದ ಏಕತೆ, ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಲು ತೋರಿಸಿಕೊಟ್ಟಿರುವ ಮಾರ್ಗ ನಮಗೆಲ್ಲರಿಗೂ ಪ್ರೇರಣೆಯಾಗಿದೆ ಎಂದು ಪ್ರಧಾನಿ ಮೋದಿ  ಹೇಳಿದ್ದಾರೆ.


ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಆವರಿಗೆ ಗೌರವಪೂರ್ವಕ ಪ್ರಣಾಮಗಳು. ಸ್ವಾತಂತ್ರ್ಯ ಹೋರಾಟಗಾರರಾಗಿ ಮಾತ್ರವಲ್ಲ, ಸ್ವತಂತ್ರ ಭಾರತದ ಮೊದಲ ಗೃಹ ಸಚಿವರಾಗಿ ಅವರ ನಿರ್ಣಾಯಕ ನಾಯಕತ್ವ, ದೇಶದ ಅಖಂಡತೆ ಮತ್ತು ಏಕೀಕರಣಕ್ಕಾಗಿ ಅವರ ಕೊಡುಗೆ ಅವಿಸ್ಮರಣೀಯ ಎಂದು ತಿಳಿಸಿದ್ದಾರೆ.


Corona Vaccine: ರಾಜ್ಯದಲ್ಲಿ ಕೊರೋನಾ ಲಸಿಕೆ ವಿತರಣೆಗೆ ಸಿದ್ಧತೆ; ಮೊದಲ ಆದ್ಯತೆ ಆರೋಗ್ಯ ಕಾರ್ಯಕರ್ತರಿಗೆ


ಸ್ವಾತಂತ್ರ್ಯಾನಂತರ ಭಾರತ ಒಂದು ಒಕ್ಕೂಟವಾಗಿ ಉಳಿದಿದ್ದರೆ ಅದಕ್ಕೆ ಕಾರಣ, ದೇಶದ ಪ್ರಪ್ರಥಮ ಗೃಹಮಂತ್ರಿ, ಉಕ್ಕಿನ ಮನುಷ್ಯ, ಭಾರತರತ್ನ ಸರ್ದಾರ್ ವಲ್ಲಭಭಾಯಿ ಪಟೇಲ್! ಅಂತಹ ಮಹಾನ್ ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಅದ್ವಿತೀಯ ಆಡಳಿತಗಾರ ಸರ್ದಾರ್ ಪಟೇಲರ ಪುಣ್ಯತಿಥಿಯಂದು ಅವರಿಗೆ ಅನಂತ ಶ್ರದ್ಧಾಪೂರ್ವಕ ಪ್ರಣಾಮಗಳು ಎಂದು ಯಡಿಯೂರಪ್ಪ ತಿಳಿಸಿದ್ದಾರೆ.


ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಅಕ್ಟೋಬರ್ 31ರ 1875ರಲ್ಲಿ ಜನಿಸಿದರು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪಟೇಲ್ ಅವರ ಪಾತ್ರ ಪ್ರಮುಖವಾಗಿದೆ. ಅದೇ ರೀತಿ ಸ್ವಾತಂತ್ರ್ಯಾನಂತರ ಭಾರತವನ್ನು ಏಕೀಕರಣಗೊಳಿಸುವಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ.


ವೃತ್ತಿಯಲ್ಲಿ ವಕೀಲರಾಗಿದ್ದ ಪಟೇಲ್​ ರವರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಬೆಂಬಲಿಗರಾಗಿದ್ದರು. ಪಟೇಲ್​ರವರ ಗಾಂಧೀಜಿ ಜೊತೆಗಿನ ಬಾಂಧವ್ಯ 1918ರಲ್ಲಿ ನಡೆದ ಖೇಡಾ ಸತ್ಯಾಗ್ರಹ ನಡೆಯುವಾಗ ಮತ್ತಷ್ಟು ಗಟ್ಟಿಯಾಯಿತು. ಬ್ರಿಟಿಷರ ವಿರುದ್ಧ ನಡೆದ ಬಾರ್ದೋಲಿ ಸತ್ಯಾಗ್ರಹದಲ್ಲಿ ಪಟೇಲ್ ರವರ ಹೋರಾಟ ಸ್ಮರಿಸುವಂತದ್ದು.


ಭಾರತದ ಏಕೀಕರಣದಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್​ ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ, ಹೈದಾರಾಬಾದ್, ಜಮ್ಮು ಮತ್ತು ಕಾಶ್ಮೀರವನ್ನು ಒಗ್ಗೂಡಿಸುವಲ್ಲಿ ಇವರು ನಿರ್ವಹಿಸಿದ ಪಾತ್ರ ಅಷ್ಟೇ ಮುಖ್ಯವಾಗಿದೆ. ಮೊದಲ ಉಪಪ್ರಧಾನಿಯೂ ಆಗಿದ್ದ ಪಟೇಲ್​ ಅವರು 1950ರ ಡಿ.15ರಂದು ನಿಧನರಾದರು.

First published: