ಸಿಎಂ ಆಗಿದ್ದಾಗ ಕಂಡ ಕನಸು ಪ್ರಧಾನಿಯಾದ ಬಳಿಕ ಈಡೇರಿದೆ; ಪುತ್ಥಳಿ ಅನಾವರಣಗೊಳಿಸಿ ಮನದಾಳದ ಮಾತು ಹಂಚಿಕೊಂಡ ಮೋದಿ

Latha CG | news18
Updated:October 31, 2018, 3:00 PM IST
ಸಿಎಂ ಆಗಿದ್ದಾಗ ಕಂಡ ಕನಸು ಪ್ರಧಾನಿಯಾದ ಬಳಿಕ ಈಡೇರಿದೆ; ಪುತ್ಥಳಿ ಅನಾವರಣಗೊಳಿಸಿ ಮನದಾಳದ ಮಾತು ಹಂಚಿಕೊಂಡ ಮೋದಿ
ಏಕತಾ ಪ್ರತಿಮೆ ವೀಕ್ಷಿಸುತ್ತಿರುವ ಮೋದಿ
  • News18
  • Last Updated: October 31, 2018, 3:00 PM IST
  • Share this:
-ನ್ಯೂಸ್​ 18 ಕನ್ನಡ

ಗುಜರಾತ್​,(ಅ.31): ಇಂದು ಉಕ್ಕಿನ ಮನುಷ್ಯ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅವರ 143ನೇ ಜನ್ಮದಿನೋತ್ಸವದ ಹಿನ್ನೆಲೆ ಗುಜರಾತ್​ನ ನರ್ಮದಾ ನದಿ ತೀರದಲ್ಲಿ ನಿರ್ಮಿಸಲಾಗಿರುವ 182 ಮೀಟರ್ ಎತ್ತರದ ಸರ್ದಾರ್​ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದರು. ಸ್ಟ್ಯಾಚು ಆಫ್ ಯುನಿಟಿ ಎಂದು ಕರೆಯಲಾಗುತ್ತಿರುವ ಈ ಪ್ರತಿಮೆ ಪ್ರಪಂಚದ ಅತಿ ಎತ್ತರದ ಪ್ರತಿಮೆ ಇದಾಗಿದೆ.

ಸರ್ದಾರ್​ ಪಟೇಲ್​ರ ಬಾನೆತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ ಮೋದಿ,ದೇಶದ ಅದ್ಭುತ ಶಿಲ್ಪಿಗಳು ಈ ಮೂರ್ತಿಯನ್ನು ಸಾಕಾರಗೊಳಿಸಿದ್ದಾರೆ. ಏಕತಾ ಪ್ರತಿಮೆ ನಮ್ಮ ಎಂಜಿನಿಯರ್​ಗಳ ಸಾಮರ್ಥ್ಯದ ಸಂಕೇತ. ಈ ಮಹಾನ್​ ಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಸಾಮಾನ್ಯ ರೈತರು ಪಟೇಲರ ಪ್ರತಿಮೆಗೆ ನೆರವಾಗಿದ್ದಾರೆ. ಪಟೇಲರ ಪ್ರತಿಮೆ ಪ್ರವಾಸೋದ್ಯಮ ಸ್ಥಳವಾಗಿ ಬದಲಾಗಲಿದೆ. ಪ್ರವಾಸೋದ್ಯಮದಿಂದ ಇಲ್ಲಿನ ಜನರ ಜೀವನವೂ ಸುಧಾರಿಸಲಿದೆ ಎಂದು ಹೇಳಿದರು.

ಪಂಚಾಯತ್​ ವ್ಯವಸ್ಥೆಯಲ್ಲಿ ಅನ್ಯಾಯವಾಗುತ್ತಿದ್ದಾಗ ಪಟೇಲರು ಧ್ವನಿ ಎತ್ತಿದ್ದರು. ಮಹಿಳೆಯರಿಗೆ ಸಮಾನ ಅಧಿಕಾರ ಸಿಗಲು ಹೋರಾಡಿದವರಲ್ಲಿ ಪಟೇಲರ ಪಾತ್ರ ದೊಡ್ಡದು. ಕೆಚ್ಚೆದೆಯೊಂದಿಗೆ ಪಟೇಲರು ದೇಶ ಒಗ್ಗೂಡಿಸಿದರು. ಇಂಥಹ ಲೋಹ ಪುರುಷನಿಗೆ ನಾವು ಗೌರವ ಸಲ್ಲಿಸುತ್ತಿದ್ದೇವೆ ಎಂದರು.ವಿಶ್ವಮಟ್ಟದಲ್ಲಿ ಭಾರತದ ಭವಿಷ್ಯದ ಬಗ್ಗೆ ಅಂಧಕಾರ ಇತ್ತು. ಪಟೇಲರು​ ಪಾರದರ್ಶಕತೆ , ಜವಾಬ್ದಾರಿಯೊಂದಿಗೆ ದೇಶ ಕಟ್ಟೋಣ ಎಂದಿದ್ದರು. ದೇಶದ ಜನತೆಗಾಗಿ ಪಟೇಲರು ಪ್ರತಿ ಕ್ಷಣವನ್ನು ಸಮರ್ಪಿಸಿದರು. ನಮ್ಮೊಳಗಿನ ಆಂತರಿಕ ಜಗಳ, ಆಂತರಿಕ ಶತ್ರುಗಳೇ ಅಂದು ದೊಡ್ಡ ಸವಾಲಾಗಿದ್ದರು. ಅವರನ್ನೆಲ್ಲಾ ಮೆಟ್ಟಿ ಪಟೇಲರು ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶವನ್ನು ಒಂದುಗೂಡಿಸಿದರು. ಇಂದು ದೇಶದ ವ್ಯಕ್ತಿಗೆ ಮಹಾನ್ ಗೌರವ ಸಂದಿದೆ. ಭಾರತ ಮಾತೆಯ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.ಕೆಲವರು ಕಾಲೆಳೆದರು, ಆದರೆ ಇಂದು ಪ್ರಸನ್ನನಾಗಿದ್ದೇನೆ. ದೇಶದ ಸಾಮರ್ಥ್ಯ ಇಂದು ಶಿಖರಕ್ಕೇರಿದೆ. ಈ ಪ್ರತಿಮೆ ಭವಿಷ್ಯದ ಪೀಳಿಗೆಗೆ ಸಾಮರ್ಥ್ಯದ ಸಂಕೇತವಾಗಿದೆ. ಜನರ ಪ್ರೀತಿಗೆ ನಾನು ಚಿರರುಣಿ. ನಿಮ್ಮ ಪ್ರೀತಿ ನನಗೆ ತಾಯಿ ಪ್ರೀತಿಯಂತೆ ಅನಿಸುತ್ತಿದೆ. ಇಡೀ ದೇಶವೇ ಇಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಿದೆ. ಗುಜರಾತ್​ ಸಿಎಂ ಆಗಿದ್ದಾಗ ಕಂಡ ಕನಸು ಈಗ ನನಸಾಗಿದೆ. ವಿಶ್ವದೆತ್ತರ ಪ್ರತಿಮೆಯನ್ನು ಉದ್ಘಾಟಿಸುವ ಭಾಗ್ಯ ನನಗೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು.
First published:October 31, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading