ತಮ್ಮ ಕಂಪೆನಿ (Company) ಉತ್ತಮವಾಗಿ ಲಾಭ ಗಳಿಸಿದರೂ ಎಷ್ಟೋ ಜನ ಮಾಲೀಕರು ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸಂಬಳ ಹೊರತುಪಡಿಸಿ ಮತ್ತೇನು ನೀಡುವುದಿಲ್ಲ. ಕೆಲವೊಮ್ಮೆ ಕೆಲವು ಕಂಪೆನಿಯ ಮಾಲೀಕರು ನಷ್ಟದಲ್ಲಿದ್ದೇವೆ ಎಂದು ಕಾರಣ ನೀಡಿ ತಮ್ಮ ಉದ್ಯೋಗಿಗಳ ಸಂಬಳಕ್ಕೆ ಕತ್ತರಿ ಹಾಕುತ್ತಾರೆ. ಉದ್ಯೋಗಿಗಳಿಗೆ (employees) ತಮ್ಮ ಕೆಲಸ ಗುರುತಿಸಿ ಕಾಲಕಾಲಕ್ಕೆ ಅವರ ಸಂಬಳವನ್ನು (salary) ಹೆಚ್ಚು ಮಾಡುವುದು ಮತ್ತು ಉಡುಗೊರೆಗಳನ್ನು ನೀಡುವುದರಿಂದ ಉದ್ಯೋಗಿಗಳು ಹೆಚ್ಚು ವರ್ಷಗಳ ಕಾಲ ಅದೇ ಕಂಪೆನಿಯಲ್ಲಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತದೆ. ಬಾಸ್ ನಮ್ಮ ಸಮಸ್ಯೆಗಳ ಬಗ್ಗೆ ವೈಯಕ್ತಿಕ ಆಸಕ್ತಿ ಹೊಂದಿರುವಾಗ ಮತ್ತು ಅವುಗಳನ್ನು ಪರಿಹರಿಸಲು ಸಕ್ರಿಯವಾಗಿ ಕೆಲಸ ಮಾಡಿದಾಗ ಜೀವನವು ಸುಲಭವಾಗುತ್ತದೆ ಎಂಬುದು ವಾಸ್ತವ.
ಇಲ್ಲೊಬ್ಬ ಮಹಿಳೆ ಬಾಸ್ ಇದ್ದಾರೆ, ಇವರು ತಮ್ಮ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ನೀಡಿರುವ ಉಡುಗೊರೆ ನೋಡಿದರೆ ನೀವು ಬೆಚ್ಚಿ ಬಿಳ್ತೀರಾ. ಈ ಮಹಿಳಾ ಬಾಸ್‌ನ ಹೆಸರು ಸಾರಾ ಬ್ಲೇಕ್ಲಿ (Sara Blakely) ಆಗಿದ್ದು, ತನ್ನ ಎಲ್ಲಾ ಉದ್ಯೋಗಿಗಳಿಗೆ ದೊಡ್ಡ ಉಡುಗೊರೆಗಳನ್ನು ನೀಡಿ ಈಗ 'ವಿಶ್ವದ ಅತ್ಯುತ್ತಮ ಬಾಸ್' ಆಗಿದ್ದಾರೆ.
ಸಾರಾ ಒಡೆತನದ ಸ್ಪ್ಯಾಂಕ್ಸ್ ಕಂಪನಿಯು (Spanx Company) ಇತ್ತೀಚೆಗೆ ಹೂಡಿಕೆ ಸಂಸ್ಥೆಯು ಅದರಲ್ಲಿ ಒಂದು ಪಾಲನ್ನು ಖರೀದಿಸಿದ ನಂತರ ಕಂಪೆನಿಯು 1.2 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ.
Sara Blakely sold fax machines door-to-door and started Spanx with $5,000 in savings & no experience.
She never raised money & has now sold a majority stake in the brand at a $1.2 billion valuation.
The best part?
The gift she gave her 500+ employees to celebrate.
Amazing 🙏 pic.twitter.com/JvdpbgVWX5
— Joe Pompliano (@JoePompliano) October 23, 2021
ಈ ಸಂತೋಷದ ಕ್ಷಣ ಆಚರಿಸಲು ಸಾರಾ ತನ್ನ ಉದ್ಯೋಗಿಗಳಿಗೆ ಭವ್ಯವಾದ ಪಾರ್ಟಿ ಏರ್ಪಡಿಸಿ ಮತ್ತು ಅವರಿಗೆ ತಲಾ 10,000 ಡಾಲರ್ ಮತ್ತು ವಿಶ್ವದ ಯಾವುದೇ ಸ್ಥಳಕ್ಕೆ ಹೋಗಲು ತಲಾ ಎರಡು ಪ್ರಥಮ ದರ್ಜೆ ವಿಮಾನ ಟಿಕೆಟ್‌ಗಳನ್ನು ಸಹ ನೀಡಿದ್ದಾರೆ.
ತನ್ನ ಕಂಪೆನಿಯು ತನ್ನ ಉದ್ಯೋಗಿಗಳಿಗಾಗಿ ಏರ್ಪಡಿಸಿದ ಪಾರ್ಟಿಯೊಂದರಲ್ಲಿ ಸಾರಾ ಈ ಉಡುಗೊರೆಗಳನ್ನು ಘೋಷಿಸಿದರು. ಇದನ್ನು ಕೇಳಿದ ಕಂಪೆನಿಯ ಉದ್ಯೋಗಿಗಳು ಖುಷಿ ಪಟ್ಟಿದ್ದಾರೆ.
ಉದ್ಯೋಗಿಗಳ ಶ್ರಮಕ್ಕೆ ಫಲ
"ನಾವು ಎಷ್ಟು ದೂರ ಬಂದಿದ್ದೇವೆ ಎಂಬುದನ್ನು ನೆನೆಸಿಕೊಂಡರೆ ಇದು ಒಂದು ಭಾವನಾತ್ಮಕವಾದ ಪ್ರಯಾಣ ಅಂತಾನೆ ಹೇಳಬಹುದು. ನಾನು ವಿಶ್ವದ ಯಾವುದೇ ಸ್ಥಳಕ್ಕೆ ಹೋಗಲು ನಿಮಗೆ 2 ಪ್ರಥಮ ದರ್ಜೆ ವಿಮಾನ ಟಿಕೆಟ್‌ಗಳು ಮತ್ತು ಪ್ರವಾಸಕ್ಕಾಗಿ ಖರ್ಚು ಮಾಡಲು 10,000 ಡಾಲರ್ ನಗದು ಹಣವನ್ನು ಈ ಉಡುಗೊರೆ ನೀಡುತ್ತೇನೆ" ಎಂದು ಸಾರಾ ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅದರ ಜೊತೆಗೆ ವಿಡಿಯೋವನ್ನು ಸಹ ಪೋಸ್ಟ್ ಮಾಡಿದ್ದಾರೆ.
"ಪ್ರತಿಯೊಬ್ಬ ಉದ್ಯೋಗಿಯೂ ಈ ಕ್ಷಣವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸಬೇಕು ಮತ್ತು ಅವರಿಗೆ ಜೀವಿತಾವಧಿಯವರೆಗೆ ನೆನಪಿನಲ್ಲಿ ಉಳಿಯುವಂತಹ ಸುಮಧುರ ಕ್ಷಣಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ನಾನು ನಿಜವಾಗಿಯೂ ಬಯಸುತ್ತೇನೆ. 21 ವರ್ಷಗಳ ಈ ಮ್ಯಾಜಿಕ್ ಗೆ ಚಿಯರ್ಸ್ ಮತ್ತು ಇನ್ನೂ ಹೀಗೆ ಅನೇಕ ಸಂದರ್ಭಗಳು ಬರಲಿವೆ" ಎಂದು ಅವರು ಹೇಳಿದರು.
ಈ ಕ್ಲಿಪ್ ಈಗ ಇನ್‌ಸ್ಟಾಗ್ರಾಮ್‌ನಲ್ಲಿ 6.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳೊಂದಿಗೆ ವೈರಲ್ ಆಗಿದೆ. ಇದನ್ನು ಇತರ ಸಾಮಾಜಿಕ ಮಾಧ್ಯಮಗಳಲ್ಲಿಯೂ ಹಂಚಿಕೊಳ್ಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ