• Home
  • »
  • News
  • »
  • national-international
  • »
  • Sar Tan Se Juda: ಪಾಕಿಸ್ತಾನದಲ್ಲಿ ಭಯಂಕರ ಉದ್ಯಮ, ಏನಿದು ಸರ್ ತನ್ ಸೇ ಜುದಾ?

Sar Tan Se Juda: ಪಾಕಿಸ್ತಾನದಲ್ಲಿ ಭಯಂಕರ ಉದ್ಯಮ, ಏನಿದು ಸರ್ ತನ್ ಸೇ ಜುದಾ?

ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅತ್ತಾರಿ

ಗೌಸ್ ಮೊಹಮ್ಮದ್ ಮತ್ತು ರಿಯಾಜ್ ಅತ್ತಾರಿ

ದಾವತ್-ಇ-ಇಸ್ಲಾಮಿ ಕುರಿತು ಸುದ್ದಿಸಂಸ್ಥೆ ನಡೆಸಿದ ವಿಶೇಷ ತನಿಖೆಗೆ ಕೂಡ ಮೌಲಾನಾ ದಾವತ್ ಪ್ರತಿಕ್ರಿಯಿಸಿದ್ದು, ಸರ್‌ ತಾನ್ ಸೆ ಜುದಾ ಕುರಿತು ಐದು ತಿಂಗಳ ಹಿಂದೆ ಪಾಕ್‌ನ ಇಸ್ಲಾಮಿಕ್ ವಿದ್ವಾಂಸರೊಬ್ಬರು ಧರ್ಮೋಪದೇಶದ ಭಾಷಣದಲ್ಲಿ ಉಲ್ಲೇಖಿಸಿದ್ದು, ಇದೀಗ ಬಹು-ಶತಕೋಟಿ ಡಾಲರ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಹೇಳಿರುವುದಾಗಿ ಸರೇಶ್ವಾಲಾ ತಿಳಿಸಿದ್ದಾರೆ. ದಾವತ್-ಇ-ಇಸ್ಲಾಮಿ ಹಾಗೂ ಸರ್ ತಾನ್ ಸೆ ಜುದಾಗೆ ನಿಕಟತೆಯಿಂದ ಎಂಬುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.

ಮುಂದೆ ಓದಿ ...
  • Share this:

ರಾಜಕೀಯ ವಿಶ್ಲೇಷಕ ಹಾಗೂ ಮೌಲಾನಾ ಆಜಾದ್ ರಾಷ್ಟ್ರೀಯ ಉರ್ದು ವಿಶ್ವವಿದ್ಯಾಲಯದ ಮಾಜಿ ಕುಲಪತಿ ಜಾಫರ್ ಸರೇಶ್ವಾಲಾ (Zafar Sareshwala) ತಿಳಿಸಿರುವಂತೆ ಪಾಕಿಸ್ತಾನದಿಂದ ಉಗಮಗೊಂಡಿರುವ ಸರ್ ತಾನ್ ಸೆ ಜುದಾ (ತಲೆಯನ್ನು ದೇಹದಿಂದ ಬೇರ್ಪಡಿಸುವುದು) ಇದೀಗ ವ್ಯಾಪಾರವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ. ದಾವತ್-ಇ-ಇಸ್ಲಾಮಿ (Dawat-e-Islami) ಕುರಿತು ಸುದ್ದಿಸಂಸ್ಥೆ ನಡೆಸಿದ ವಿಶೇಷ ತನಿಖೆಗೆ ಕೂಡ ಮೌಲಾನಾ ದಾವತ್ ಪ್ರತಿಕ್ರಿಯಿಸಿದ್ದು, ಸರ್‌ ತಾನ್ ಸೆ ಜುದಾ ಕುರಿತು ಐದು ತಿಂಗಳ ಹಿಂದೆ ಪಾಕ್‌ನ ಇಸ್ಲಾಮಿಕ್ ವಿದ್ವಾಂಸರೊಬ್ಬರು ಧರ್ಮೋಪದೇಶದ ಭಾಷಣದಲ್ಲಿ ಉಲ್ಲೇಖಿಸಿದ್ದು, ಇದೀಗ ಬಹು-ಶತಕೋಟಿ ಡಾಲರ್ ವ್ಯವಹಾರವಾಗಿ ಮಾರ್ಪಟ್ಟಿದೆ ಎಂದು ಹೇಳಿರುವುದಾಗಿ ಸರೇಶ್ವಾಲಾ ತಿಳಿಸಿದ್ದಾರೆ. ದಾವತ್-ಇ-ಇಸ್ಲಾಮಿ ಹಾಗೂ ಸರ್ ತಾನ್ ಸೆ ಜುದಾಗೆ (Sar tan se juda) ನಿಕಟತೆಯಿಂದ ಎಂಬುದನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದಾರೆ.


ದಾವತ್-ಇ-ಇಸ್ಲಾಮಿ ವಿರೋಧಿಸುತ್ತಿರುವ ಮಾಜಿ ಕುಲಪತಿ
25 ವರ್ಷಗಳಿಂದ ದಾವತ್-ಇ-ಇಸ್ಲಾಮಿಯನ್ನು ವಿರೋಧಿಸುತ್ತಿರುವುದಾಗಿ ಸರೇಶ್ವಾಲಾ ಹೇಳಿದ್ದು ಇದೊಂದು ವಿಷ ಹರಡುವ ಪ್ರಕ್ರಿಯೆಯಾಗಿದ್ದು, ಹರಡುವಿಕೆಯನ್ನು ತಡೆಯಬೇಕು ಎಂದು ಸುಮಾರು ಹತ್ತು ವರ್ಷಗಳ ಹಿಂದೆ ಪಾಕಿಸ್ತಾನಿ ಇಸ್ಲಾಮಿಕ್ ವಿದ್ವಾಂಸರಿಗೆ ತಿಳಿಸಿದ್ದೆ ಎಂದು ಸರೇಶ್ವಾಲಾ ಹೇಳಿದ್ದಾರೆ.


ಉದಯಪುರದಲ್ಲಿ ದರ್ಜಿಯನ್ನು ಹಾಡುಹಗಲೇ ಕೊಲೆಗೈದ ತಿಂಗಳುಗಳ ನಂತರ ದಾವತ್-ಇ-ಇಸ್ಲಾಮಿ ಸಂಘಟನೆಯು ಇಸ್ಲಾಮ್‌ನ ಮೂಲಭೂತ ಉದ್ದೇಶವನ್ನು ಭಾರತೀಯ ಮುಸ್ಲಿಂ ಮನೆಗಳಿಗೆ ತಲುಪಿಸಲು ಡಿಜಿಟಲ್ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡಿರುವುದರ ವಿವರವನ್ನು ಸುದ್ದಿಸಂಸ್ಥೆ ವರದಿ ಮಾಡಿತ್ತು.


ಇದನ್ನೂ ಓದಿ:  UNGA: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾದ ಬೇಡಿಕೆ ವಿರುದ್ಧ ಮತ ಚಲಾಯಿಸಿದ ಭಾರತ!


ಲಾಭದ ಉದ್ದೇಶವಿಲ್ಲದ ಸಂಸ್ಥೆಯಾಗಿ ತನ್ನನ್ನು ತಾನು ಗುರುತಿಸಿಕೊಂಡಿರುವ ದಾವತ್-ಇ-ಇಸ್ಲಾಮಿ ಭಾರತೀಯ ಮುಸ್ಲೀಮರಲ್ಲಿ ವೈಮನಸ್ಸು ಉಂಟುಮಾಡಲು ಪ್ರಯತ್ನಿಸುತ್ತಿದೆ ಹಾಗೂ ವಿಷಬೀಜವನ್ನು ಬಿತ್ತುತ್ತಿದೆ ಎಂಬುದಾಗಿ ತನಿಖೆ ತಿಳಿಸಿತ್ತು.


ದಾವತ್-ಇ-ಇಸ್ಲಾಮಿ ವೆಬ್‌ಸೈಟ್
ಈ ಸಂಸ್ಥೆಯು ತನ್ನದೇ ಆದ ವೆಬ್‌ಸೈಟ್ ಆದ www.dawateislami.net ಅನ್ನು ಹೊಂದಿದ್ದು ಹಲವಾರು ಆನ್‌ಲೈನ್ ಕಾರ್ಯಕ್ರಮಗಳನ್ನು ನೀಡುತ್ತದೆ ಅಂತೆಯೇ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಕೆನಡಾ, ಹಾಂಗ್ ಕಾಂಗ್, ಕೊರಿಯಾ, ಯುಕೆ ಮತ್ತು ಯುಎಸ್ ತನ್ನ ಕಾರ್ಯಾಚರಣೆಯ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಆದರೆ ಭಾರತದಲ್ಲಿ ಇನ್ನೂ ತನ್ನ ಸ್ಥಾನವನ್ನು ಭದ್ರಪಡಿಸಿಲ್ಲ. ಧರ್ಮದ ಕುರಿತಾಗಿ ಅನೇಕ ಕೋರ್ಸ್‌ಗಳನ್ನು ನಡೆಸುತ್ತಿರುವ ಸಂಸ್ಥೆಯು ಭಾರತದಲ್ಲಿರುವ ಮುಸ್ಲಿಂ ಪ್ರಜೆಗಳನ್ನು ಗುರಿಯಾಗಿರಿಸಿಕೊಂಡಿದೆ.


ಪಾಕ್ ನಿರಾಕರಣೆ
ಇತ್ತೀಚೆಗೆ ಬಿಜೆಪಿ ನಾಯಕಿ ನೂಪುರ್ ಶರ್ಮಾ ಪೈಗಂಬರ್ ಬಗ್ಗೆ ನೀಡಿದ್ದ ಹೇಳಿಕೆಯ ಸಂದರ್ಭದಲ್ಲಿ ಉಂಟಾಗಿದ್ದ ವಿವಾದ, ಆಕ್ರೋಶದ ನಡುವೆ ಏರ್ಪಟ್ಟಿದ್ದ ಮುಸ್ಲಿಂ ಪ್ರತಿಭಟನೆಗಳಲ್ಲಿ ಸರ್ ತಾನ್ ಸೇ ಜುದಾ ಎನ್ನುವ ಘೋಷಣೆಗಳು ಕೇಳಿಬಂದಿದ್ದವು. ಉದಯಪುರದಲ್ಲಿ ಭೀಕರವಾಗಿ ಕೊಲೆಯಾದ ಟೈಲರ್ ಕನ್ಹಯ್ಯಾ ಲಾಲ್‌ನ ಹಂತಕರು ಕರಾಚಿ ಇಸ್ಲಾಮಿಕ್ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಜಸ್ಥಾನ ಪೊಲೀಸರು ಪತ್ತೆಮಾಡಿದಾಗ ಪಾಕ್ ಈ ಹೇಳಿಕೆಯನ್ನು ತ್ವರಿತವಾಗಿ ನಿರಾಕರಿಸಿತು. ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮಿಯ ವ್ಯಾಪ್ತಿಯು, ವಾಸ್ತವವಾಗಿ, ಕನ್ಹಯ್ಯಾ ಲಾಲ್‌ನ ಹಂತಕರಂತಹ ಬೆರಳೆಣಿಕೆಯ ಅಪರಾಧಿಗಳಿಗೆ ಮಾತ್ರ ಸೀಮಿತವಾಗಿರುವಂತೆ ತೋರುತ್ತಿಲ್ಲ.


ಪಾಕ್‌ ಅನ್ನು ಬೆಂಬಲಿಸಲು ಸಂದೇಶ ಸಾರುತ್ತಿರುವ ದಾವತ್-ಇ-ಇಸ್ಲಾಮ್ ಸಂಸ್ಥೆ
ಸುದ್ದಿಸಂಸ್ಥೆಯ ವರದಿಗಾರರೊಬ್ಬರು ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ದಾವತ್-ಇ-ಇಸ್ಲಾಮ್‌ನ ವೆಬ್‌ಸೈಟ್‌ಗೆ ಹೆಸರು ನೋಂದಾಯಿಸಿದಾಗ ವೆಬ್‌ಸೈಟ್ ತ್ವರಿತವಾಗಿ ಪ್ರತಿಕ್ರಿಯಿಸಿದೆ. ಈ ಸಂದರ್ಭದಲ್ಲಿ ವೆಬ್‌ಸೈಟ್‌ನ ಕಾಲರ್ ಒಬ್ಬರು ಅರ್ಜಿದಾರರೊಂದಿಗೆ ಮಾತನಾಡಿದ್ದು ಸಂಸ್ಥೆಯು ಒದಗಿಸುವ ಕೋರ್ಸ್‌ಗಳ ಕುರಿತು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.


ಇದನ್ನೂ ಓದಿ: Russia-Ukraine war: 24 ತಾಸಿನಲ್ಲಿ ರಷ್ಯಾದ 75 ಕ್ಷಿಪಣಿ ದಾಳಿಗೆ ನಲುಗಿದ ಕೀವ್: 8 ಸಾವು, 24 ಮಂದಿಗೆ ಗಾಯ!


ಸಂಸ್ಥೆಯು ಕೋರ್ಸ್‌ಗಳನ್ನು ಸ್ಕೈಪ್ ಮೂಲಕ ಒದಗಿಸುತ್ತಿದ್ದು ಶುಲ್ಕಗಳನ್ನು ಒಳಗೊಂಡಿದೆ. ಹಾಗೂ ಆಡಿಯೋ ಮೂಲಕ ಮಾತ್ರವೇ ಪಾಠಗಳನ್ನು ಒದಗಿಸುತ್ತದೆ ವಿಡಿಯೋ ಸ್ಟ್ರೀಮಿಂಗ್ ಇಲ್ಲ ಎಂಬುದು ತಿಳಿದು ಬಂದಿದೆ. ಕೆಲವೊಂದು ಕೋರ್ಸ್‌ಗಳು ಪಾಕ್‌ ಅನ್ನು ವೈಭವೀಕರಿಸುವ ಅಂಶವನ್ನು ಉಲ್ಲೇಖಿಸಿದ್ದು ಭಾರತದಲ್ಲಿನ ದಾವತ್-ಎ-ಇಸ್ಲಾಮಿ ಸಂಘಟನೆಯಲ್ಲಿ ಪಾಲ್ಗೊಂಡವರಿಗೆ ಇಸ್ಲಾಂನ ಕೋಟೆಯಾಗಿ ಪಾಕಿಸ್ತಾನವನ್ನು ನಿರ್ಮಿಸಲು ಕೊಡುಗೆ ನೀಡುವಂತೆ ಉತ್ತೇಜಿಸಿತು.

Published by:Ashwini Prabhu
First published: