Pandit Shivkumar Sharma: ಹೃದಯಾಘಾತದಿಂದ ಖ್ಯಾತ ಸಂತೂರ್ ವಾದಕ ಶಿವಕುಮಾರ್ ಶರ್ಮಾ ನಿಧನ - ಪ್ರಧಾನಿ ಸೇರಿದಂತೆ ಗಣ್ಯರ ಸಂತಾಪ

Musician: ಈ ಮಹಾನ್​ ವ್ಯಕ್ತಿಯ ನಿಧನಕ್ಕೆ ರಾಷ್ಟ್ರಪತಿ ರಮಾನಾಥ್​ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದು, ಟ್ವೀಟ್​ ಮೂಲಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಪಂಡಿತ್ ಶಿವಕುಮಾರ್ ಶರ್ಮಾ

ಪಂಡಿತ್ ಶಿವಕುಮಾರ್ ಶರ್ಮಾ

  • Share this:
ಖ್ಯಾತ ಸಂಗೀತಗಾರ (Musician) ಮತ್ತು ಸಂತೂರ್ ವಾದಕ ಪಂಡಿತ್ ಶಿವಕುಮಾರ್ ಶರ್ಮಾ (Santoor player Pandit Shivkumar Sharma) ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, 84 ವರ್ಷ ಸಾಧಕರ ಸಾವಿಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಳೆದ ಎರಡು ವರ್ಷಗಳಿಂದ , ಕರೋನವೈರಸ್ ಹಿನ್ನೆಲೆಯಲ್ಲಿ, ಪಂಡಿತ್ ಶಿವಕುಮಾರ್ ಶರ್ಮಾ ತಮ್ಮ ನಿವಾಸದಿಂದ ಅಷ್ಟೇನೂ ಹೊರ ಬಂದಿರಲಿಲ್ಲ. ಅವರನ್ನು ಸಾರ್ವಜನಿಕವಾಗಿ ನೋಡಿದ್ದು ಕಡಿಮೆ ಇತ್ತು. ಆದರೂ ಅವರು ಕೆಲವೊಮ್ಮೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.  ಇನ್ನು ಪಂಡಿತ್ ಶಿವಕುಮಾರ್ ಶರ್ಮಾ ಅವರು ಕಳೆದ ಆರು ತಿಂಗಳಿನಿಂದ ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಡಯಾಲಿಸಿಸ್‌ಗೂ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದು, ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎನ್ನಲಾಗಿದೆ.

ಸಂತೂರ್​ ವಾದ್ಯ ಜನಪ್ರಿಯಗೊಳಿಸಿದ್ದ ಖ್ಯಾತಿ

ಜಮ್ಮುವಿನಲ್ಲಿ ಜನಿಸಿದ ಪಂಡಿತ್ ಶಿವಕುಮಾರ್ ಶರ್ಮಾ ಅವರು ಹದಿಮೂರನೆಯ ವಯಸ್ಸಿನಲ್ಲಿ ಸಂತೂರ್ ಕಲಿಯಲು ಪ್ರಾರಂಭಿಸಿದರು. ಅರು 1955ರಲ್ಲಿ ಮುಂಬೈನಲ್ಲಿ ಮೊದಲ ಸಾರ್ವಜನಿಕ ಪ್ರದರ್ಶನ ಣಿಡಿ ಜನರ ಮೆಚ್ಚುಗೆಗ ಪಾತ್ರವಾಗಿದ್ದರು. ಇನ್ನು ಭಾರತದಲ್ಲಿ ಸಂತೂರ್​ ವಾದ್ಯವನ್ನು ಜನಪ್ರಿಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರೆ ತಪ್ಪಾಗಲಾರದು.


ಅಲ್ಲದೆ, ಪಂಡಿತ್ ಶಿವಕುಮಾರ್ ಶರ್ಮಾ ಅವರು 1956 ರ ಝಣಕ್ ಝಣಕ್ ಪಾಯಲ್ ಬಜೆ ಚಿತ್ರದ ಒಂದು ದೃಶ್ಯಕ್ಕೆ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ. ನಾಲ್ಕು ವರ್ಷಗಳ ನಂತರ, ಪಂಡಿತ್ ಶಿವಕುಮಾರ್ ಶರ್ಮಾ ಅವರ ಮೊದಲ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದರು.

ಇದನ್ನೂ ಓದಿ: ಭಾರತಕ್ಕೆ ಅವಳಿ ಸೈಕ್ಲೋನ್ ಭೀತಿ! ಅಸನಿ ಜೊತೆ ಬರ್ತಿದೆ ಸೈಕ್ಲೋನ್ ಕರಿಂ

ಹಲವು ಹಿಂದಿ ಚಿತ್ರಗಳಿಗೆ ಸಂಗೀತ ಸಂಯೋಜನೆ

ಪಂಡಿತ್ ಶಿವಕುಮಾರ್ ಶರ್ಮಾ 1967 ರಲ್ಲಿ ಫ್ಲೌಟಿಸ್ಟ್ ಹರಿಪ್ರಸಾದ್ ಚೌರಾಸಿಯಾ ಮತ್ತು ಗಿಟಾರ್ ವಾದಕ ಬ್ರಿಜ್ ಭೂಷಣ್ ಕಾಬ್ರಾ ಅವರೊಂದಿಗೆ ಸೇರಿ  ಕಾಲ್ ಆಫ್ ದಿ ವ್ಯಾಲಿ ಎಂಬ ಆಲ್ಬಂ ಅನ್ನು ನಿರ್ಮಿಸಿ, ದೇಶದಾದ್ಯಂತ ಹೆಸರುಗಳಿಸಿದ್ದಾರೆ. ಈ ಆಲ್ಬಂ ನಂತರ ಹರಿಪ್ರಸಾದ್ ಚೌರಾಸಿಯಾ ಅವರೊಂದಿಗೆ, ಪಂಡಿತ್ ಶಿವಕುಮಾರ್ ಶರ್ಮಾ ಅವರು ಸಿಲ್ಸಿಲಾ, ಚಾಂದಿನಿ ಮತ್ತು ಡರ್ ಸೇರಿದಂತೆ ಹಲವಾರು ಹಿಂದಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ.ಈ ಮಹಾನ್​ ವ್ಯಕ್ತಿಯ ನಿಧನಕ್ಕೆ ರಾಷ್ಟ್ರಪತಿ ರಮಾನಾಥ್​ ಕೋವಿಂದ್​, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದು, ಟ್ವೀಟ್​ ಮೂಲಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
Published by:Sandhya M
First published: