Sanskrit University: ಸಂಸ್ಕೃತ ವಿಶ್ವವಿದ್ಯಾಲಯಗಳು ಭವಿಷ್ಯದಲ್ಲಿ ಏನಾಗಲಿವೆ? ಶಿಕ್ಷಣ ಸಚಿವರ ಮಾತಿನ ಅರ್ಥವೇನು?

ಸಂಸ್ಕೃತ ವಿಶ್ವವಿದ್ಯಾಲಯಗಳ ಬಗ್ಗೆ ಕೇಂದ್ರದ ಶಿಕ್ಷಣ ಸಚಿವರು ಒಂದು ಹೇಳಿಕೆಯನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣದ ಬಹುಶಿಸ್ತೀಯ ಸಂಸ್ಥೆಗಳಾಗುವತ್ತ ಸಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಹೇಳಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಭಾರತದ ಹಾಗೂ ಜಗತ್ತಿನ ಪುರಾತನ ಭಾಷೆಗಳ ಪೈಕಿ ಸಂಸ್ಕೃತ (Sanskrit) ಭಾಷೆಯನ್ನು ಸಹ ಒಂದೆಂದು ಪರಿಗಣಿಸಲಾಗಿದೆ. ಈಗ ಸಂಸ್ಕೃತ ವಿಶ್ವವಿದ್ಯಾಲಯಗಳ ಬಗ್ಗೆ ಕೇಂದ್ರದ ಶಿಕ್ಷಣ ಸಚಿವರು (Education Minister) ಒಂದು ಹೇಳಿಕೆಯನ್ನು ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಸಂಸ್ಕೃತ ವಿಶ್ವವಿದ್ಯಾಲಯಗಳು (Sanskrit University) ಉನ್ನತ ಶಿಕ್ಷಣದ ಬಹುಶಿಸ್ತೀಯ ಸಂಸ್ಥೆಗಳಾಗುವತ್ತ ಸಾಗಲಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. “ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ (NEP) ಕಲ್ಪಿಸಿದಂತೆ, ಸರ್ಕಾರವು ಸಂಸ್ಕೃತ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಿಗೆ ಪ್ರಾಮುಖ್ಯತೆಯನ್ನು ನೀಡಿದೆ. ವಿವಿಧ ಭಾರತೀಯ ಭಾಷೆಗಳನ್ನು ಒಗ್ಗೂಡಿಸುವಲ್ಲಿ ಇದು ಉತ್ತಮ ಕೊಡುಗೆಯನ್ನು ಹೊಂದಿದೆ ಮತ್ತು ಸಂಸ್ಕೃತ ವಿಶ್ವವಿದ್ಯಾನಿಲಯಗಳು ಉನ್ನತ ಶಿಕ್ಷಣದ ದೊಡ್ಡ ಬಹುಶಿಸ್ತೀಯ ಸಂಸ್ಥೆಗಳಾಗುವತ್ತ ಸಾಗುತ್ತವೆ ಎಂದು ಪ್ರಧಾನ್ ಹೇಳಿದ್ದಾರೆ.

ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಆಯೋಜಿಸಿದ್ದ ಮೂರು ದಿನಗಳ ಉತ್ಕರ್ಷ ಮಹೋತ್ಸವದ ಅಂತಿಮ ದಿನದಲ್ಲಿ ಭಾಗಿಯಾಗಿದ್ದ ಕೇಂದ್ರ ಸಚಿವರು ತಮ್ಮ ಭಾಷಣದಲ್ಲಿ ಈ ವಿಷಯ ತಿಳಿಸಿದರು.ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದೊಂದು ಭಾವನೆ
ಈ ಸಂದರ್ಭದಲ್ಲಿ ಅವರು, “ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಅದೊಂದು ಭಾವನೆ. ನಮ್ಮ ಜ್ಞಾನ ಮತ್ತು ಬುದ್ಧಿವಂತಿಕೆಯೇ ನಮ್ಮ ಸಂಪತ್ತು. ಶತಮಾನಗಳವರೆಗೆ ನಮ್ಮ ನಾಗರಿಕತೆಯನ್ನು ಮುಂದಕ್ಕೆ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ... ಸಂಸ್ಕೃತ ಶಿಕ್ಷಣವು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ, ”ಎಂದು ಹೇಳಿದರು.

ಇದನ್ನೂ ಓದಿ:   Viral Video: ಪುಟ್ಟ ಕಂದಮ್ಮನ ಜೊತೆ ಪದವಿ ಸ್ವೀಕರಿಸಿದ ತಾಯಿ, ವಿಡಿಯೋ ವೈರಲ್

“ಹ್ಯೂಯೆನ್ ತ್ಸಾಂಗ್‌ನ ಕಾಲದಿಂದ ಇಂದಿನ ರೈಸಿನಾ ಡೈಲಾಗ್‌ಗಳವರೆಗೆ, ಸಂಸ್ಕೃತದ ಸ್ವಾಭಾವಿಕತೆ, ಆಧುನಿಕತೆ ಮತ್ತು ವೈಜ್ಞಾನಿಕತೆಗೆ ಯಾವುದೇ ಪುರಾವೆ ಅಗತ್ಯವಿಲ್ಲ. 'ಉತ್ಕರ್ಷ್ ಮಹೋತ್ಸವ'ದ ಸಂದರ್ಭದಲ್ಲಿ ನಡೆದ ಚರ್ಚೆಗಳು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು ಮತ್ತು ಜಾಗತಿಕ ಕಲ್ಯಾಣಕ್ಕೆ ದಾರಿ ಮಾಡಿಕೊಡಲು 21 ನೇ ಶತಮಾನದ ಶಿಕ್ಷಣ ವ್ಯವಸ್ಥೆಗೆ ಮಾರ್ಗಸೂಚಿಯನ್ನು ತೋರಿಸುತ್ತವೆ ಎಂದು ನಾನು ಭಾವಿಸುತ್ತೇನೆ,” ಎಂದು ಅವರು ಹೇಳಿದರು.

ಸಂಸ್ಕೃತ ಭಾಷೆಯ ಮಹತ್ವವನ್ನು ಹಾಡಿ ಹೊಗಳಿದ ಕೇಂದ್ರ ಶಿಕ್ಷಣ ಸಚಿವರು
ತಮ್ಮ ಭಾಷಣದುದ್ದಕ್ಕೂ ಸಂಸ್ಕೃತ ಭಾಷೆಯ ಮಹತ್ವವನ್ನು ಹಾಡಿ ಹೊಗಳಿದ ಕೇಂದ್ರ ಶಿಕ್ಷಣ ಸಚಿವರು ಸಂಸ್ಕೃತ ಶಿಕ್ಷಣವು ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು ಹಾಗೂ ಈ ವೇದಗಳ ಭಾಷೆ ಅಂದರೆ ಸಂಸ್ಕೃತದ ಪುನರುಜ್ಜೀವನ, ಸಂಸ್ಕೃತಕ್ಕೆ ಸಂಬಂಧಿಸಿದ ಭಾರತೀಯತೆ ಮತ್ತು ಭಾಷಾ ಆಧಾರಿತ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕೇಂದ್ರ ಸಚಿವರು ತಮ್ಮ ಆಲೋಚನೆಗಳನ್ನು ವಿವರವಾಗಿ ಹಂಚಿಕೊಂಡರು.

ಮೂರು ದಿನಗಳ ಉತ್ಕರ್ಷ ಮಹೋತ್ಸವ
ನವದೆಹಲಿಯಲ್ಲಿ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಿಂದ ಮೂರು ದಿನಗಳ ಉತ್ಕರ್ಷ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಉತ್ಕರ್ಷ್ ಮಹೋತ್ಸವವನ್ನು ಆಯೋಜಿಸುವ ಹಿಂದಿನ ಉದ್ದೇಶವು ಸಂಸ್ಕೃತ ಭಾಷೆಯನ್ನು ದೇಶಾದ್ಯಂತ ಮತ್ತು ಹೊರಗೆ ಪ್ರಚಾರ ಮಾಡುವುದು. ಈ ನಿಟ್ಟಿನಲ್ಲಿ ದೇಶ ಮತ್ತು ವಿದೇಶಗಳಲ್ಲಿ ಸಂಸ್ಕೃತ ಭಾಷೆಯನ್ನು ಪ್ರಚಾರ ಮಾಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅದರ ಕೇಂದ್ರಬಿಂದು "ಹೊಸ ಶೈಕ್ಷಣಿಕ ಯುಗ - ಸಂಸ್ಕೃತ ಅಧ್ಯಯನದ ಜಾಗತಿಕ ದೃಷ್ಟಿಕೋನ" ಎಂದಾಗಿದೆ.

ಚಾಮು ಕೃಷ್ಣ ಶಾಸ್ತ್ರಿ, ಭಾರತೀಯ ಭಾಷೆಗಳ ಪ್ರಚಾರಕ್ಕಾಗಿ ಉನ್ನತ ಅಧಿಕಾರ ಸಮಿತಿಯ ಅಧ್ಯಕ್ಷರು; ಯುಜಿಸಿ ಅಧ್ಯಕ್ಷ ಪ್ರೊ.ಎಂ.ಜಗದೇಶ್ ಕುಮಾರ್, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಶ್ರೀನಿವಾಸ ವರಖೇಡಿ; ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ಮುರಳಿಮನೋಹರ ಪಾಠಕ್ ಮತ್ತು 17 ಸಂಸ್ಕೃತ ವಿಶ್ವವಿದ್ಯಾಲಯಗಳ ಉಪಕುಲಪತಿಗಳು, ವಿದ್ವಾಂಸರು ಮತ್ತು ವಿದ್ಯಾರ್ಥಿಗಳು ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:   Youngest CEO: ಬೋಟ್‌ ಸಂಸ್ಥೆಗೆ ಒಂದು ದಿನ ಸಿಇಒ ಆದ 11 ವರ್ಷದ ದೃಷ್ಟಿಹೀನ ಬಾಲಕ ಪ್ರಥಮೇಶ್‌ ಸಿನ್ಹಾ

ಹಾಗೆ ನೋಡಿದರೆ, ಮೊದಲಿನಿಂದಲೂ ಸಂಸ್ಕೃತ ಭಾಷೆಗೆ ಭಾರತದಲ್ಲಿ ತನ್ನದೆ ಆದ ವಿಶಿಷ್ಟ ಸ್ಥಾನವಿದೆ ಅಂತ ಹೇಳಬಹುದು. ಕಂಪ್ಯೂಟರ್ ಕೋಡಿಂಗ್ ನಲ್ಲೂ ಸಹ ದೇವನಾಗರಿ ಲಿಪಿ ಹೊಂದಿರುವ ಸಂಸ್ಕೃತ ಭಾಷೆಯನ್ನು ಸುಲಲಿತವಾಗಿ ಬಳಸಬಹುದು ಎಂಬುದು ಹಲವು ಕಂಪ್ಯೂಟರ್ ತಂತ್ರಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ನಮ್ಮ ಸಂಸ್ಕೃತಿಯೊಂದಿಗೆ ಆದಿ ಕಾಲದಿಂದಲೂ ಬಂದಿರುವ ಈ ಭಾಷೆಯು ಅಳಿಯದಂತೆ ಉಳಿಸಿಕೊಂಡು ಹೋಗಬೇಕಾಗಿದೆ.
Published by:Ashwini Prabhu
First published: