Sansera Engineering IPO ನಾಳೆ ಅಸ್ತಿತ್ವಕ್ಕೆ; ಕಂಪನಿ ಕುರಿತು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು?

ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್‌ನ ಐಪಿಒ ಚಂದಾದಾರಿಕೆಗೆ ಲಭ್ಯವಾಗುವ ಮುನ್ನ ನೀವು ಸಂಸ್ಥೆಯ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬೇಕು.

ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್‌ನ ಐಪಿಒ ಚಂದಾದಾರಿಕೆಗೆ ಲಭ್ಯವಾಗುವ ಮುನ್ನ ನೀವು ಸಂಸ್ಥೆಯ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬೇಕು.

ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್‌ನ ಐಪಿಒ ಚಂದಾದಾರಿಕೆಗೆ ಲಭ್ಯವಾಗುವ ಮುನ್ನ ನೀವು ಸಂಸ್ಥೆಯ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬೇಕು.

  • Share this:
ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್ ತನ್ನ ಆರಂಭಿಕ ಸಾರ್ವಜನಿಕ ಆಫರಿಂಗ್ (Sansera Engineering IPO) ಅನ್ನು 1,282.98 ಕೋಟಿಗೆ ಈ ವಾರ ತೆರೆಯಲಿದ್ದು ಕಂಪೆನಿಯು ಮಾರುಕಟ್ಟೆಗೆ ತನ್ನ ಆಫರ್‌ಗಳನ್ನು ಅಸ್ತಿತ್ವಕ್ಕೆ ತರಲು ಎದುರು ನೋಡುತ್ತಿದ್ದು ಮೋಟಾರ್ ವಾಹನಗಳ ಬಿಡಿಭಾಗಗಳ ತಯಾರಕ ಸಂಸ್ಥೆಯು ಮಾರುಕಟ್ಟೆ ವ್ಯವಹಾರದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ. 1981 ರಲ್ಲಿ ಸ್ಥಾಪನೆಯಾದ ಸಂಸ್ಥೆಯು ಮೋಟಾರ್ ವಾಹನಗಳ ಬಿಡಿಭಾಗಗಳು ತಯಾರಿಕೆ ಹಾಗೂ ಮೋಟಾರ್ ವಾಹನಗಳಲ್ಲದ ಕ್ಷೇತ್ರದಲ್ಲೂ ಪರಿಣತಿ ಪಡೆದಿದೆ.

ಕಂಪನಿಯು ಪ್ರಮುಖವಾಗಿ ದ್ವಿಚಕ್ರ ವಾಹನ ವಿಭಾಗ ಹಾಗೂ ಪ್ರಯಾಣಿಕರ ವಾಹನಗಳು ಹಾಗೂ ವಾಣಿಜ್ಯ ವಾಹನಗಳಿಗೆ ಆದ್ಯತೆಯನ್ನು ನೀಡುತ್ತಿದ್ದು ಕೃಷಿ ಹಾಗೂ ಅಂತರಿಕ್ಷ ಕ್ಷೇತ್ರದಲ್ಲೂ ಸಿದ್ಧಹಸ್ತ ಎಂದೆನಿಸಿದೆ.

ಸನ್ಸೇರಾ ಎಂಜಿನಿಯರಿಂಗ್ ಲಿಮಿಟೆಡ್‌ನ ಐಪಿಒ ಚಂದಾದಾರಿಕೆಗೆ ಲಭ್ಯವಾಗುವ ಮುನ್ನ ನೀವು ಸಂಸ್ಥೆಯ ಕುರಿತು ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳಬೇಕು.

1.ಸನ್ಸೇರಾ ಎಂಜಿನಿಯರಿಂಗ್ ಐಪಿಒ ಷೇರು ಗಾತ್ರ, ಅವಲೋಕನ:

ಸಂಸ್ಥೆಯ ಐಪಿಒ ಷೇರು 1282.98 ಕೋಟಿ ಬೆಲೆಯದ್ದಾಗಿದೆ. ಐಪಿಒ ಒಟ್ಟು 17,244,328 ಈಕ್ವಿಟಿ ಷೇರುಗಳನ್ನು ಹೊಂದಿದೆ.

2. ಸನ್ಸೇರಾ ಎಂಜಿನಿಯರಿಂಗ್ ಐಪಿಒ ದಿನಾಂಕಗಳು:

ಸಾರ್ವಜನಿಕ ಆಫರ್ ಅನ್ನು ಸಪ್ಟೆಂಬರ್ 14 ರಂದು ತೆರೆಯಲಾಗುವುದು ಹಾಗೂ ಇದು ಮೂರು ದಿನಗಳವರೆಗೆ ತೆರೆದಿರುತ್ತದೆ. ಸಪ್ಟೆಂಬರ್ 16 ರಂದು ಚಂದಾದಾರಿಕೆಗಳನ್ನು ಮುಚ್ಚುತ್ತದೆ. ಯಾವುದೇ ಆ್ಯಂಕರ್ ಬುಕ್ಕಿಂಗ್‌ಗಳನ್ನು ಸಪ್ಟೆಂಬರ್ 13 ರಂದು ನಡೆಸಲಾಗುತ್ತದೆ.

ಇದನ್ನು ಓದಿ: ಆಧಾರ್​ನಂತೆ ಇನ್ಮುಂದೆ ದೇಶದ ಪ್ರತಿಯೊಬ್ಬರಿಗೂ ಸಿಗಲಿದೆ ಹೆಲ್ತ್​ ಕಾರ್ಡ್​; ಏನಿದರ ವಿಶೇಷತೆ?

3.ಷೇರು ಬೆಲೆ ಬಾಂಡ್:

ಸಾರ್ವಜನಿಕ ಆಫರ್ ಐಪಿಒ ನ ಮುಖ ಬೆಲೆಯಂತೆ ಪ್ರತಿ ಈಕ್ವಿಟಿಗೆ ರೂ 2 ರಂತೆ ಪ್ರತಿ ಇಕ್ವಿಟಿ ಷೇರಿಗೆ ರೂ. 734 ರಿಂದ ರೂ .744 ಬೆಲೆಯನ್ನು ಹೊಂದಿದೆ.

4.ಸನ್ಸೇರಾಎಂಜಿನಿಯರಿಂಗ್ ಐಪಿಒ (ಜಿಎಮ್‌ಪಿ):

ಈ ಲೇಖನದ ಸಮಯದಲ್ಲಿ ಸನ್‌ಸೇರಾ ಎಂಜಿನಿಯರಿಂಗ್ ಜಿಎಮ್‌ಪಿ ರೂ 80 ಆಗಿದೆ ಎಂದು ಐಪಿಒ ವಿಶ್ಲೇಷಣೆಗಳಿಂದ ತಿಳಿದು ಬಂದಿದೆ.

5.ಸನ್ಸೇರಾ ಎಂಜಿನಿಯರಿಂಗ್ ಐಪಿಒ ಹಂಚಿಕೆ, ಲಿಸ್ಟಿಂಗ್:

.ಸಪ್ಟೆಂಬರ್ 21 ರಂದು ಹಂಚಿಕೆ ನೀಡಲು ತೀರ್ಮಾನಿಸಿದ್ದು ಇದು ಅದೃಷ್ಟಹೀನ ಹೂಡಿಕೆದಾರರಿಗೆ ಸಪ್ಟೆಂಬರ್ 22 ರಂದು ಮರುಪಾವತಿ ಆರಂಭಿಸಲು ಯೋಜಿಸಿದೆ.

6.ಐಪಿಒ ಉದ್ದೇಶ:

ಕಂಪನಿಯು ಷೇರುದಾರರನ್ನು ಮಾರಾಟ ಮಾಡುವ ಮೂಲಕ 17,244,328 ಈಕ್ವಿಟಿ ಷೇರುಗಳ OFS ಅನ್ನು ನಿರ್ವಹಿಸಲು ಯೋಜಿಸಿದೆ. ಇದು ಷೇರು ವಿನಿಮಯ ಕೇಂದ್ರಗಳಲ್ಲಿ ಈಕ್ವಿಟಿ ಷೇರುಗಳನ್ನು ಪಟ್ಟಿ ಮಾಡುವ ಲಾಭವನ್ನು ಸಾಧಿಸಲು ಯೋಜಿಸಿದೆ.

ಇದನ್ನು ಓದಿ: ಡ್ರ್ಯಾಗನ್ ಫ್ರೂಟ್ ಮೂಲಕ ಲಾಭಾಗಳಿಸುತ್ತಿರುವ ಕೊಪ್ಪಳ ರೈತರು; ವಿದೇಶಿ ಹಣ್ಣಿಗೆ ಹೆಚ್ಚಿದ ಬೇಡಿಕೆ

7.ಸನ್ಸೇರಾ ಎಂಜಿನಿಯರಿಂಗ್ ಐಪಿಒ ಲಾಟ್ ಗಾತ್ರ:

ಷೇರು ಅಪ್ಲಿಕೇಶನ್ ಮೊತ್ತ ರೂ 14,880 ರಲ್ಲಿ ಕನಿಷ್ಠ 20 ಷೇರುಗಳನ್ನು ಲಾಟ್ ಸೈಜ್ ಆಗಿ ಹೊಂದಿದೆ. ಇನ್ನು ರೂ 193,440 ರ ಅಪ್ಲಿಕೇಶನ್‌ಗಾಗಿ 260 ಷೇರುಗಳನ್ನು ಹೊಂದಿದೆ.

8.ಸನ್ಸೆರಾ ಎಂಜಿನಿಯರಿಂಗ್ IPO ಗಾಗಿ ಹೂಡಿಕೆದಾರರ ಮೀಸಲಾತಿ:

ಆಫರ್‌ಗಾಗಿ ಕಾಯ್ದಿರಿಸಿದ ಭಾಗಗಳ ವಿಷಯದಲ್ಲಿ, ಚಿಲ್ಲರೆ ವೈಯಕ್ತಿಕ ಹೂಡಿಕೆದಾರರು ಶೇ  35 ರಷ್ಟು ಹಂಚಿಕೆಯನ್ನು ಹೊಂದಿದ್ದಾರೆ. ಅರ್ಹ ಸಾಂಸ್ಥಿಕ ಖರೀದಿದಾರರು (QIB ಗಳು) ಅತ್ಯಧಿಕ ಮೀಸಲು ಭಾಗವನ್ನು ಹೊಂದಿದ್ದು ಅದು 50% ದಷ್ಟಿದೆ.

9.ಕಂಪನಿ ಪ್ರವರ್ತಕರು:

ಕಂಪನಿಯ ಸಾರ್ವಜನಿಕ ಆಫರ್‌ನ ಪ್ರವರ್ತಕರು ಎಸ್ ಶೇಖರ್ ವಾಸನ್, ಎಫ್ ಆರ್ ಸಿಂಘ್ವಿ, ಉನ್ನಿ ರಾಜಗೋಪಾಲ್ ಕೆ ಮತ್ತು ಡಿ ದೇವರಾಜ್.

10.ಸನ್ಸೇರಾ ಕುರಿತು:

ಸನ್ಸೇರಾ ಎಂಜಿನಿಯರಿಂಗ್ ಸಂಸ್ಥೆಯು ವ್ಯಾಪಕವಾದ ಮಾರುಕಟ್ಟೆಯನ್ನು ಹೊಂದಿದೆ. ಆಟೋಮೋಟಿವ್ ವಲಯವು 88.45% ರಷ್ಟು ಆದಾಯ ಮತ್ತು ಆಟೋಮೋಟಿವ್ ಅಲ್ಲದೇ 11. 45ರಷ್ಟು ಕೊಡುಗೆ ನೀಡಿದೆ. ಕಂಪನಿಯು ತನ್ನ ಆದಾಯದ  ಶೇ 65 ರಷ್ಟನ್ನು ಭಾರತದಿಂದ ಪಡೆಯುತ್ತದೆ ಮತ್ತು ಉಳಿದ 35% ದಷ್ಟನ್ನು ಇತರ ದೇಶಗಳಿಂದ ಪಡೆಯುತ್ತದೆ
First published: