ಮಹಾರಾಷ್ಟ್ರ ಬೆನ್ನಲ್ಲೀಗ ಗೋವಾದಲ್ಲೂ ಬಿಜೆಪಿ ಸರ್ಕಾರಕ್ಕೆ ಕಾದಿದೆಯಾ ಕಂಟಕ: ಅನುಮಾನ ಮೂಡಿಸಿದ ಶಿವಸೇನೆ ನಡೆ

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ಗೋವಾ ಫಾರ್ವರ್ಡ್​ ಪಾರ್ಟಿ ಸಹಕಾರದೊಂದಿಗೆ ಮೈತ್ರಿ ಸರ್ಕಾರ ರಚನೆ ಮಾಡಿತ್ತು.

news18-kannada
Updated:November 29, 2019, 7:03 PM IST
ಮಹಾರಾಷ್ಟ್ರ ಬೆನ್ನಲ್ಲೀಗ ಗೋವಾದಲ್ಲೂ ಬಿಜೆಪಿ ಸರ್ಕಾರಕ್ಕೆ ಕಾದಿದೆಯಾ ಕಂಟಕ: ಅನುಮಾನ ಮೂಡಿಸಿದ ಶಿವಸೇನೆ ನಡೆ
ಶಿವಸೇನೆ ಕಾರ್ಯಕರ್ತರು
  • Share this:
ಮುಂಬೈ(ನ.29): ಮಹಾರಾಷ್ಟ್ರದಲ್ಲಿ ಅಧಿಕಾರದ ಗದ್ದುಗೆಗೇರಿದ ಬೆನ್ನಲ್ಲೇ ಶಿವಸೇನೆ ಕಣ್ಣು ಗೋವಾ ಮೇಲೆ ನೆಟ್ಟಿದಂತಿದೆ. ಹಾಗಾಗಿಯೇ ಭಾರತೀಯ ಜನತಾ ಪಕ್ಷ ಸರ್ಕಾರವಿರುವ ಗೋವಾದಲ್ಲಿ ಶೀಘ್ರದಲ್ಲೇ ಪವಾಡ ನಡೆಯಲಿದೆ ಎಂದು ಶಿವಸೇನೆ ಮುಖ್ಯಸ್ಥ ಸಂಜಯ್​​ ರಾವತ್​​​​ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಶುಕ್ರವಾರ(ಇಂದು) ಸುದ್ದಿಗಾರರೊಂದಿಗೆ ಮಾತಾಡಿದ ಶಿವಸೇನೆ ಮುಖ್ಯಸ್ಥ ಸಂಜಯ್​​ ರಾವತ್​​​, ಗೋವಾದ ಮಾಜಿ ಸಿಎಂ ವಿಜಯ್​​​​ ಸರ್​​ ದೇಸಾಯಿ ನಮ್ಮ ಸಂಪರ್ಕದಲ್ಲಿದ್ದಾರೆ. ಗೋವಾ ಫಾರ್ವರ್ಡ್​​ ಪಕ್ಷದ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ. ಮಹಾರಾಷ್ಟ್ರದ ರೀತಿಯಲ್ಲಿ ಗೋವಾದಲ್ಲೂ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

ದೇಶಾದ್ಯಂತ ಹೊಸ ರಾಜಕೀಯ ಬೆಳವಣಿಗೆ ಆಗುತ್ತಿದೆ. ಬಿಜೆಪಿ ವಿರುದ್ಧದ ಎಲ್ಲಾ ಪಕ್ಷಗಳು ಒಂದಾಗುತ್ತಿವೆ. ಕೇವಲ ಮಹಾರಾಷ್ಟ್ರ ಮತ್ತು ಗೋವಾದ ಜತೆಗೆ ಇಡೀ ದೇಶದಲ್ಲಿ ಈ ರೀತಿಯ ಬೆಳವಣಿಗೆ ಆಗಲಿದೆ. ಗೋವಾ ಬಳಿಕ ಶಿವಸೇನೆ ಉಳಿದ ರಾಜ್ಯಗಳಿಗೆ ಕಾಲಿಡಲಿದೆ. ಬಿಜೆಪಿ ಮುಕ್ತ ಭಾರತಕ್ಕೆ ನಾವು ಮುಂದಾಗಿದ್ದೇವೆ ಎಂದರು.

ಇದನ್ನೂ ಓದಿ: ಅಂದು ಸಿದ್ದರಾಮಯ್ಯ ಮೈಯಲ್ಲಿ ಕಾಂಗ್ರೆಸ್ ರಕ್ತ ಇಲ್ಲ ಎಂದಿದ್ದ ಕೋಳಿವಾಡ; ಇಂದು ಮಾಜಿ ಸ್ಪೀಕರ್ ಪರವಾಗಿ ಟಗರು ಗುಟುರು

2017ರ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಬಿಜೆಪಿ ಗೋವಾ ಫಾರ್ವರ್ಡ್​ ಪಾರ್ಟಿ ಸಹಕಾರದೊಂದಿಗೆ ಮೈತ್ರಿ ಸರ್ಕಾರ ರಚನೆ ಮಾಡಿತ್ತು. ಇನ್ನು ಬಿಜೆಪಿ ಪಾಲಿಗೆ ಆಪತ್ಭಾಂದವರಾಗಿದ್ದ ಬಿಜೆಪಿ ಹಿರಿಯ ನಾಯಕ ಮನೋಹರ್​ ಪರಿಕ್ಕರ್ ಸಾವನ್ನಪ್ಪಿದ ಬಳಿಕ ಗೋವಾದಲ್ಲಿ ರಾಜಕೀಯ ಬಿಕ್ಕಟ್ಟು ಶುರುವಾಗಿದೆ. ಮನೋಹರ್​​ ಪರಿಕ್ಕರ್​​​ ಸಾವಿನ ಬಳಿಕ ಪ್ರಮೋದ್​ ಸಾವಂತ್​ ಗೋವಾ​ ಮುಖ್ಯಮಂತ್ರಿಯಾಗಿದ್ದಾರೆ.

ಪ್ರಮೋದ್​​ ಸಾವಂತ್​​ ಮುಖ್ಯಮಂತ್ರಿಯಾದ ಬಳಿಕ ಗೋವಾ ಫಾರ್ವರ್ಡ್​​ ಪಕ್ಷದ ರಾಜ್ಯಾಧ್ಯಕ್ಷ ವಿಜಯ್​​ ಸರ್​​ ದೇಸಾಯಿಗೆ ಡಿಸಿಎಂ ಪೋಸ್ಟ್​ ನೀಡಲಾಗಿತ್ತು. ಈ ಮಧ್ಯೆ ಕಾಂಗ್ರೆಸ್​​ನ 10 ಮಂದಿ ಶಾಸಕರು ಬಿಜೆಪಿ ಸೇರ್ಪಡೆಯಾದರು. ಈ ವೇಳೆ ಗೋವಾ ಫಾರ್ವಡ್ ಪಕ್ಷದ ಶಾಸಕರನ್ನು ಮಂತ್ರಿ ಸ್ಥಾನದಿಂದ ಕಿತ್ತೊಗೆಯಲಾಯ್ತು. ಹೀಗಾಗಿ ಬಿಜೆಪಿ ಮತ್ತು ಗೋವಾ ಫಾರ್ವರ್ಡ್​​​ ಪಾರ್ಟಿ ನಡುವೇ ಭಿನ್ನಾಭಿಪ್ರಾಯ ಏರ್ಪಟ್ಟಿದೆ.
First published: November 29, 2019, 6:47 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading