HOME » NEWS » National-international » SANJAY RAUT SAYS PM MODI IS TOP LEADER OF COUNTRY SESR

Sanjay Raut : ಪ್ರಧಾನಿ ಮೋದಿ ದೇಶದ ಉನ್ನತ ನಾಯಕ; ಶಿವಸೇನಾ ನಾಯಕ ಸಂಜಯ್​ ರಾವತ್​

ನರೇಂದ್ರ ಮೋದಿ ಯಶಸ್ಸಿನಿಂದಲೇ ಕಳೆದ ಏಳು ವರ್ಷದಿಂದ ಬಿಜೆಪಿ ದೇಶದಲ್ಲಿ ಆಡಳಿತ ನಡೆಸುತ್ತಿದೆ, ದೇಶದ ಮತ್ತು ಬಿಜೆಪಿ ಪಕ್ಷದ ಉನ್ನತ ನಾಯಕ ಅವರಾಗಿದ್ದಾರೆ

news18-kannada
Updated:June 10, 2021, 9:06 PM IST
Sanjay Raut : ಪ್ರಧಾನಿ ಮೋದಿ ದೇಶದ ಉನ್ನತ ನಾಯಕ; ಶಿವಸೇನಾ ನಾಯಕ ಸಂಜಯ್​ ರಾವತ್​
ಸಂಜಯ್ ರಾವತ್
  • Share this:
ಪ್ರಧಾನಿ ನರೇಂದ್ರ ಮೋದಿ ದೇಶದ ಮತ್ತು ಬಿಜೆಪಿ ಪಕ್ಷದ ಉನ್ನತ ನಾಯಕ ಎಂದು ಶಿವಸೇನಾ ಸಂಸದ ಸಂಜಯ್​ ರಾವತ್​ ತಿಳಿಸಿದ್ದಾರೆ. ಮರಾಠ ಕೋಟಾ ವಿಚಾರವಾಗಿ ಕಳೆದೆರಡು ದಿನಗಳ ಹಿಂದೆ ಮಹಾರಾಷ್ಟ್ರ ಸಿಎಂ ಉದ್ಧವ್​​ ಠಾಕ್ರೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಭೆ ನಡೆಸಿದ್ದರು. ಇದಾದ ಬಳಿಕ ಸಂಜಯ್​ ರಾವತ್​ ಈ ಹೇಳಿಕೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ. ಈ ಮೂಲಕ ಹಳೆಯ ಮಿತ್ರ ಪಕ್ಷಗಳ ನಡುವೆ ಮೂಡಿದ್ದ ಬಿರುಕು ಸರಿ ಹೊಂದಿದೆ ಎಂಬ ಸುದ್ದಿ ಹೊರಬಿದ್ದಿದೆ. ಮೋದಿಯವರ ಜನಪ್ರಿಯತೆ ಕುಸಿಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ವರದಿ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಯಶಸ್ಸಿನಿಂದಲೇ ಕಳೆದ ಏಳು ವರ್ಷದಿಂದ ಬಿಜೆಪಿ ದೇಶದಲ್ಲಿ ಆಡಳಿತ ನಡೆಸುತ್ತಿದೆ, ದೇಶದ ಮತ್ತು ಬಿಜೆಪಿ ಪಕ್ಷದ ಉನ್ನತ ನಾಯಕ ಅವರಾಗಿದ್ದಾರೆ ಎಂದರು.

ಜಲ್​ಗಾವ್​ನಲ್ಲಿ ಮಾತಾನಾಡಿದ ರಾಜ್ಯ ಸಭಾ ಸದಸ್ಯ ರಾವತ್​, ಶಿವಸೇನೆ ನಿಲುವು ದೇಶ ಹಾಗೂ ಪ್ರಧಾನಿ ಮಂತ್ರಿಗೆ ಸೇರಿದ್ದಾಗಿದೆ.ಯಾವುದೇ ನಿರ್ದಿಷ್ಟ ಪಕ್ಷದ ಕುರಿತು ಅಲ್ಲ. ಇದೇ ಕಾರಣಕ್ಕೆ ಪ್ರಧಾನಿಗಳು ಕೂಡ ಪಕ್ಷಗಳ ಒತ್ತಡಕ್ಕೆ ಮಣಿದು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಬಾರದು. ಅವರು ದೇಶಕ್ಕೆ ಸೇರಿದ್ದವರಾಗಿದ್ದು, ಪಕ್ಷಕ್ಕೆ ಸೀಮಿತವಾಗಬಾರದು ಎಂದರು.

ಮೋದಿ ವರ್ಚಸ್ಸಿನಿಂದಾಗಿ ಬಿಜೆಪಿ 2014-2019ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿತು. ಆದರೆ, ಕಳೆದ ಪಂಚ ರಾಜ್ಯ ಚುನಾವಣೆಯಲ್ಲಿ ಪ್ರಧಾನಿ ಪಕ್ಷದ ಪರವಾಗಿ ಪ್ರಮುಖ ಪಾತ್ರವಹಿಸಿದ್ದು, ಪಶ್ಚಿಮ ಬಂಗಳಾ ಕೇರಳ ಹಾಗೂ ತಮಿಳುನಾಡಿನಲ್ಲಿ ಬಿಜೆಪಿ ಸೋಲಿನ ಕುರಿತು ಕೂಡ ತಿಳಿಸಿದರು.

ಇದೇ ವೇಳೆ ಬಿಜೆಪಿಯೊಂದಿಗೆ ಮತ್ತೆ ಮೈತ್ರಿ ನಡೆಸುವ ಸುದ್ದಿಯನ್ನು ತಳ್ಳಿಹಾಕಿದ ಅವರು ಹುಲಿಯೊಂದಿಗೆ ಯಾರೂ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ಯಾರೊಂದಿಗಾದರೂ ಸ್ನೇಹ ಮಾಡಬೇಕು ಎಂಬುದನ್ನು ಹುಲಿಯೇ (ಶಿವಸೇನಾ ಲಾಂಛನ) ನಿರ್ಧರಿಸುತ್ತದೆ ಎಂದು ತಿಳಿಸಿದರು.

ಇದನ್ನು ಓದಿ: 11 ಜಿಲ್ಲೆಗಳಲ್ಲಿ ಲಾಕ್​ಡೌನ್​ ಮುಂದುವರಿಕೆ; ವೀಕೆಂಡ್​​ ಕರ್ಫ್ಯೂ ಜಾರಿ

ಉತ್ತರ ಮಹಾರಾಷ್ಟ್ರದಲ್ಲಿನ ಪ್ರವಾಸದ ಕುರಿತು ಮಾತನಾಡಿದ ಅವರು, ಪಕ್ಷ ಸಂಘಟನೆ ಕುರಿತ ಅಭಿವೃದ್ಧಿ ಬಲಪಡಿಸುವಿಕೆಗಾಗಿ ಮುಂದಾಗಿರುವುದಾಗಿ ತಿಳಿಸಿದರು.

2019ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮೂಲಕ ಸ್ಪರ್ಧಿಸಿದ್ದ ಬಿಜೆಪಿ ಶಿವಸೇನೆ ನಡುವೆ ಅಧಿಕಾರ ಹಂಚಿಕೆ ಹೊಂದಾಣಿಕೆ ಸೂತ್ರ ಯಶಸ್ವಿಯಾಗಲಿಲ್ಲ. ಶಿವಸೇನಾ 50-50 ಸೂತ್ರಕ್ಕೆ ಒಪ್ಪದ ಹಿನ್ನಲೆ ಫಲಿತಾಂಶ ಬಳಿಕ ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬಿದ್ದಿತ್ತು
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Seema R
First published: June 10, 2021, 9:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories