ಜಾರ್ಜ್​ ಫರ್ನಾಂಡಿಸ್​ ಕಂಡಲ್ಲಿ ಹತ್ಯೆ ಮಾಡಿ ಎಂದಿದ್ದರಂತೆ ಸಂಜಯ್​ ಗಾಂಧಿ!

ಕೇವಲ ದೇಶೀಯ ರಾಜಕಾರಣಿಗಳು ಮಾತ್ರವಲ್ಲ, ವಿದೇಶಿ ನಾಯಕರು ಜಾರ್ಜ್​ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯ ಹೇರಿದ್ದರು! ಆದರೆ, ಇಂದಿರಾ ಗಾಂಧಿ ಅವರೆಲ್ಲರ ಬಾಯಿ ಮುಚ್ಚಿಸಿದ್ದರು.

Rajesh Duggumane | news18
Updated:January 29, 2019, 5:00 PM IST
ಜಾರ್ಜ್​ ಫರ್ನಾಂಡಿಸ್​ ಕಂಡಲ್ಲಿ ಹತ್ಯೆ ಮಾಡಿ ಎಂದಿದ್ದರಂತೆ ಸಂಜಯ್​ ಗಾಂಧಿ!
ಇಂದಿರಾ ಗಾಂಧಿ-ಜಾರ್ಜ್​
  • News18
  • Last Updated: January 29, 2019, 5:00 PM IST
  • Share this:
ರವಿ ವಿಶ್ವೇಶ್ವರಯ್ಯ ಶಾರದಾ ಪ್ರಸಾದ್​

ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಕಂಡರೆ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್​ ಉರಿದು ಬೀಳುತ್ತಿದ್ದರು. ಜಾರ್ಜ್​ರನ್ನು ಕಂಡರೆ ಇಂದಿರಾ ಭಯ ಬೀಳುತ್ತಿದ್ದರು! ವಾರಾಣಾಸಿಯಲ್ಲಿ ಬಾಂಬ್​ ದಾಳಿ ಮಾಡುವ ಮೂಲಕ ಜಾರ್ಜ್​​​​ ತಮ್ಮನ್ನು ಹತ್ಯೆ ಮಾಡಬಹುದು ಎಂದು ಇಂದಿರಾ ಆಲೋಚಿಸಿದ್ದರಂತೆ!

ಅಂದು 1975ರ ಜೂನ್​ 25ರ ರಾತ್ರಿ. ಪ್ರಮುಖ ರಾಜಕಾರಣಿಯೊಬ್ಬರ ಬಂಧನಕ್ಕೆ ಸಿದ್ಧತೆ ನಡೆಯುತ್ತಿತ್ತು. ಆ ಪ್ರಮುಖ ರಾಜಕಾರಣಿ ಜಾರ್ಜ್​.  ಈ ಬಗ್ಗೆ ನಡೆದ ದೂರವಾಣಿ ಸಂಭಾಷಣೆಯ ವಿಷಯ ಜಾರ್ಜ್​ಗೆ ಮುಟ್ಟಿತ್ತು! ಈ ವೇಳೆ ಅವರು ಒಡಿಶಾ ಪ್ರವಾಸಕ್ಕೆ ತೆರಳಿದ್ದ ಅವರು ಕುಟುಂಬದ ಜೊತೆ ಹಾಯಾಗಿ ಸಮಯ ಕಳೆಯುತ್ತಿದ್ದರು. ಪೊಲೀಸರು ಬಂಧಿಸುವುದರೊಳಗೆ ಉಟ್ಟ ಲುಂಗಿಯಲ್ಲಿ ಜಾರ್ಜ್​ ತಪ್ಪಿಸಿಕೊಂಡರು!

ಒಡಿಶಾ ಕರಾವಳಿ ತೀರದಿಂದ ಮೀನುಗಾರರ ಜೊತೆ ಜಾರ್ಜ್​ ಗುಜರಾತ್​ಗೆ ಹೊರಟು ನಿಂತರು. ಇಂದಿರಾ ಗಾಂಧಿ ಹೇರಿರುವ ತುರ್ತು ಪರಿಸ್ಥಿತಿ ವಿರುದ್ಧ ಅವರು ಹೋರಾಟಕ್ಕೆ ನಿಂತಿದ್ದರು. ಅಚ್ಚರಿ ಎಂದರೆ, ವೇಷ ಬದಲಿಸಿಕೊಳ್ಳಲು ಜಾರ್ಜ್​ ಗಡ್ಡ ಬೆಳೆಸಿಕೊಂಡರು. ಅವರನ್ನು ನೋಡಿದ ಯಾರೇ ಆದರೂ ಸಿಖ್​ ವ್ಯಕ್ತಿ ಎಂದೇ ಭಾವಿಸುತ್ತಿದ್ದರೇನೋ! ಕುಶ್ವಂತ್​ ಸಿಂಗ್​ ಎನ್ನುವ ಹೊಸ ಹೆಸರನ್ನು ನಾಮಕರಣ ಮಾಡಿಕೊಳ್ಳುತ್ತಾರೆ ಜಾರ್ಜ್​!

ಇದನ್ನೂ ಓದಿ: ಜಾರ್ಜ್ ಫರ್ನಾಂಡಿಸ್ ಅವರನ್ನು ಕಂಡರೆ ಇಂದಿರಾ ಗಾಂಧಿ ಭಯ ಬೀಳುತ್ತಿದ್ದರಂತೆ!

ತುರ್ತು ಪರಿಸ್ಥಿತಿ ವಿರುದ್ಧ ಪ್ರತಿತಂತ್ರ ರೂಪಿಸಲು ಜಾರ್ಜ್​ ಅನೇಕ ರಾಜ್ಯಗಳಿಗೆ ಓಡಾಡುತ್ತಾರೆ​. ನಂತರ ಕೋಲ್ಕತ್ತಾದ ಸೇಂಟ್​ ಪೌಲ್​ ರೆಫ್ಯುಜಿಯಾಗಿ ಸೇರಿಕೊಳ್ಳುತ್ತಾರೆ ಅವರು. ಜಾರ್ಜ್​  ಗುರುತು ಪತ್ತೆ ಮಾಡಲು ಸಾಧ್ಯವಿಲ್ಲದೆ ಇದ್ದರೂ, ಕೋಲ್ಕತ್ತಾ ಪೊಲೀಸರಿಗೆ ಗಡ್ಡಧಾರಿ ಮೇಲೆ ಭಾರಿ ಅನುಮಾನವಿತ್ತಂತೆ!

ಒಮ್ಮೆ ಪೊಲೀಸರ ಜೊತೆ ಮಾತನಾಡುವಾಗ ಒಂದು ಮರಾಠಿ ಶಬ್ದ ಜಾರ್ಜ್​ ಬಾಯಿಯಿಂದ ಉದುರಿತ್ತು. ಪೊಲೀಸರಿಗೆ ಇವರೇ ಜಾರ್ಜ್​ ಎಂದು ಗುರುತಿಸಲು ಇಷ್ಟು ಸಾಕಿತ್ತು. ‘ಜಾರ್ಜ್​ ನೀನು ಸಿಕ್ಕಿ ಬಿದ್ದೆ’ ಎಂದು ನೇರಾನೇರ ಹೇಳಿ ಬಿಟ್ಟರು!“ಜಾರ್ಜ್​ ಸಿಕ್ಕ ತಕ್ಷಣ ಅವರನ್ನು ಹತ್ಯೆ ಮಾಡಿಬಿಡಿ”- ಹೀಗೆ ಮಾತಿನಲ್ಲೇ ಆದೇಶ ನೀಡಿದ್ದರು ಸಂಜಯ್​ ಗಾಂಧಿ! ಆದರೆ, ಪೊಲೀಸರು ಇದಕ್ಕೆ ಒಪ್ಪಲಿಲ್ಲ. ಇಂದಿರಾ ಗಾಂಧಿ ಈ ಬಗ್ಗೆ ಲಿಖಿತ ಆದೇಶ ನೀಡಿದರೆ ಮಾತ್ರ ನಾವು ಅವರನ್ನು ಹತ್ಯೆ ಮಾಡುತ್ತೇವೆ ಎಂದು ಹಠಕ್ಕೆ ಬಿದ್ದರು.

ಎಲ್ಲ ಅಂದುಕೊಳ್ಳುವ ಮೊದಲೇ ಪೊಲೀಸರು ಹಾಗೂ ಇಂದಿರಾ ಗಾಂಧಿ ನಡುವೆ ನಡೆದ ಈ ದೂರವಾಣಿ ಸಂಭಾಷಣೆ ಸೋರಿಕೆ ಆಗಿತ್ತು. ಮಾಧ್ಯಮಗಳಲ್ಲಿ ಇದು ಬ್ರೇಕಿಂಗ್​ ನ್ಯೂಸ್​​ ಆಯಿತು. ಪೇಪರ್​ಗಳಲ್ಲಿ ಜಾರ್ಜ್​ ಮುಖ ಪುಟದ ಹೆಡ್​ಲೈನ್​ ಆದರು. ಈ ಮೂಲಕ ಪೊಲೀಸರ ಬಂಧನದಲ್ಲಿ ಹತ್ಯೆಗೊಳಗಾಗುವುದರಿಂದ ಅವರು ಬಚಾವ್​ ಆದರು.

ಇದನ್ನೂ ಓದಿ: ಜಾರ್ಜ್​ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ರಾಷ್ಟ್ರಪತಿ, ಪ್ರಧಾನಿ ಸೇರಿ ರಾಜ್ಯದ ಹಲವು ನಾಯಕರು

ಕೇವಲ ದೇಶೀಯ ರಾಜಕಾರಣಿಗಳು ಮಾತ್ರವಲ್ಲ, ವಿದೇಶಿ ನಾಯಕರು ಜಾರ್ಜ್​ ಅವರನ್ನು ಬಿಡುಗಡೆ ಮಾಡುವಂತೆ ಒತ್ತಾಯ ಹೇರಿದ್ದರು! ಆದರೆ, ಇಂದಿರಾ ಗಾಂಧಿ ಇದಕ್ಕೆ ಜಗ್ಗಲಿಲ್ಲ.   ಅವರೆಲ್ಲರ ಬಾಯಿ ಮುಚ್ಚಿಸಿದ್ದರು.

ಜಾರ್ಜ್​ ಜೈಲು ಸೇರಿದ್ದ ಸಂದರ್ಭದಲ್ಲಿ ಇಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಂದರ್ಭದಲ್ಲಿ ಜಾರ್ಜ್​ ಪತ್ನಿ ಲೈಲಾ ಕಬೀರ್​ ಮಗುವಿನ ಜೊತೆ ಅಮೆರಿಕಕ್ಕೆ ಪರಾರಿಯಾದರು. ಈ ವೇಳೆ ಅಲ್ಲಿರುವ ಮಾನವ ಹಕ್ಕುಗಳ ಆಯೋಗದ ಜೊತೆ ಮಾತುಕತೆ ನಡೆಸಿದ್ದರು. ಈ ನಡುವೆ ಜಾರ್ಜ್​ ಸಹೋದರರಿಗೆ ಎಲ್ಲಿಲ್ಲದ ಹಿಂಸೆ ನೀಡಲಾಗಿತ್ತು!

ತುರ್ತು ಪರಿಸ್ಥಿತಿ ವೇಳೆ ಜೈಲು ವಾಸ ಅನುಭವಿಸಿದ್ದ ಜಾರ್ಜ್​ ಅವರ ಎರಡು ಚಿತ್ರಗಳು ಇಂದಿಗೂ ಕಾಡುತ್ತವೆ. ಅವರು ಕೈಗೆ ಕೋಳ ಧರಿಸಿ ನಿಂತಿದ್ದು ಹಾಗೂ ಮನೆಯಲ್ಲಿ ಪುಸ್ತಕ ಬಂಢಾರ ಹಾಗೂ ಎರಡು ಗೋಲ್ಡನ್​ ರಿಟ್ರೈವರ್​ ನಾಯಿಗಳ ಜೊತೆ ಜಾರ್ಜ್​ ಮಲಗಿದ್ದ ಫೋಟೋ ವಿಶ್ವದ ಗಮನ ಸೆಳೆದಿತ್ತು.

((ಲೇಖಕರ ಬಗ್ಗೆ: ರವಿ ಅವರು ಇಂದಿರಾ ಗಾಂಧಿ, ಮುರಾರ್ಜಿ ದೇಸಾಯಿ, ರಾಜೀವ್​ ಗಾಂಧಿ ಅವರ ಮಾಧ್ಯಮ ಸಲಹೆಗಾರಾಗಿ ಕೆಲಸ ಮಾಡಿದ್ದ ಶಾರದಾ ಪ್ರಸಾದ್​ ಅವರ ಮಗ))

First published: January 29, 2019, 5:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading