• Home
  • »
  • News
  • »
  • national-international
  • »
  • Sania Mirza: ಸೇನೆಯಲ್ಲೂ ಸಾಧನೆ ಮಾಡಲು ಮುಂದಾದ ಸಾನಿಯಾ ಮಿರ್ಜಾ! ದೇಶದ ಮೊಟ್ಟ ಮೊದಲ ಮುಸ್ಲಿಂ ಫೈಟರ್ ಫೈಲಟ್ ಆಗ್ತಾರೆ ಇವ್ರು!

Sania Mirza: ಸೇನೆಯಲ್ಲೂ ಸಾಧನೆ ಮಾಡಲು ಮುಂದಾದ ಸಾನಿಯಾ ಮಿರ್ಜಾ! ದೇಶದ ಮೊಟ್ಟ ಮೊದಲ ಮುಸ್ಲಿಂ ಫೈಟರ್ ಫೈಲಟ್ ಆಗ್ತಾರೆ ಇವ್ರು!

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

Sania Mirza: ಉತ್ತರ ಪ್ರದೇಶದ ಈ ಸಾನಿಯಾ ಮಿರ್ಜಾ (Sania Mirza) ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ (Fighter Pilot) ಆಗೋಕೆ ಹೊರಟದ್ದಾಳೆ. ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರದ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಇಂಥದ್ದೊಂದು ಸಾಧನೆ ಮಾಡಿದ್ದಾರೆ.

  • Share this:

ಸಾನಿಯಾ ಮಿರ್ಜಾ ಟೆನ್ನಿಸ್‌ ತಾರೆಯ ಈ ಹೆಸರು ಈಗಾಗಲೇ ಪ್ರಖ್ಯಾತಿ ಪಡೆದಿದೆ. ಆದ್ರೆ ಇದೀಗ ಅದೇ ಹೆಸರಿನ ಮತ್ತೊಬ್ಬ ಹೆಣ್ಣುಮಗಳು ಇತಿಹಾಸ ನಿರ್ಮಿಸೋಕೆ ಹೊರಟಿದ್ದಾಳೆ. ಹೌದು, ಉತ್ತರ ಪ್ರದೇಶದ ಈ ಸಾನಿಯಾ ಮಿರ್ಜಾ (Sania Mirza) ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ (Fighter Pilot) ಆಗೋಕೆ ಹೊರಟದ್ದಾಳೆ. ಉತ್ತರ ಪ್ರದೇಶದ (Uttar Pradesh) ಮಿರ್ಜಾಪುರದ ನಿವಾಸಿಯಾಗಿರುವ ಸಾನಿಯಾ ಮಿರ್ಜಾ ಇಂಥದ್ದೊಂದು ಸಾಧನೆ ಮಾಡಿದ್ದಾರೆ. ಟಿವಿ ಮೆಕ್ಯಾನಿಕ್ ಶಾಹಿದ್ ಅಲಿ ಅವರ ಪುತ್ರಿಯಾಗಿರುವ ಸಾನಿಯಾ ಮಿರ್ಜಾ ಅವರು ಭಾರತದ ಮೊದಲ ಮುಸ್ಲಿಂ ಫೈಟರ್ ಪೈಲಟ್ ಆಗಲು ಸಿದ್ಧರಾಗಿದ್ದಾರೆ. ಅಂದಹಾಗೆ ಅವರು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪರೀಕ್ಷೆಯಲ್ಲಿ ಒಟ್ಟಾರೆ 149 ನೇ ರ್‍ಯಾಂಕ್ ಗಳಿಸಿದ್ದಾರೆ.


ಸಣ್ಣ ಹಳ್ಳಿಯಿಂದ ಬಂದ ಸಾನಿಯಾ:


ಸಾನಿಯಾ, ಉತ್ತರ ಪ್ರದೇಶದ ದೇಹತ್ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಜಸೋವರ್ ಎಂಬ ಸಣ್ಣ ಹಳ್ಳಿಯವರು. ಈಕೆ ಪ್ರೌಢ ಶಿಕ್ಷಣ ಪಡೆದಿದ್ದು ಪಂಡಿತ್ ಚಿಂತಾಮಣಿ ದುಬೆ ಇಂಟರ್ ಕಾಲೇಜಿನಲ್ಲಿ ತನ್ನ 10ನೇ ತರಗತಿ ಪೂರ್ಣಗೊಳಸಿದರು. 12ನೇ ತರಗತಿಯನ್ನು ಪೂರ್ಣಗೊಳಿಸಲು ಮಿರ್ಜಾಪುರ ನಗರದ ಗುರುನಾನಕ್ ಗರ್ಲ್ಸ್ ಇಂಟರ್ ಕಾಲೇಜಿಗೆ ಪ್ರವೇಶ ಪಡೆದರು. ಜಿಲ್ಲೆಯಲ್ಲಿ ಯುಪಿ ಬೋರ್ಡ್‌ನಲ್ಲಿ ಸಾನಿಯಾ 12ನೇ ತರಗತಿ ಟಾಪರ್ ಕೂಡ ಆಗಿದ್ದರು.


ಏಪ್ರಿಲ್ 2022ರಲ್ಲಿ, ಅವರು ಅಸ್ಕರ್ ಎನ್‌ಡಿಎ ಪರೀಕ್ಷೆಗೆ ಕುಳಿತು 149 ನೇ ಶ್ರೇಣಿಯೊಂದಿಗೆ ಉತ್ತೀರ್ಣರಾದರು. "ಫೈಟರ್ ಪೈಲಟ್ ವಿಭಾಗದಲ್ಲಿ ಮಹಿಳೆಯರಿಗೆ ಕೇವಲ ಎರಡು ಸೀಟುಗಳನ್ನು ಮೀಸಲಿಡಲಾಗಿತ್ತು. ಮೊದಲ ಪ್ರಯತ್ನದಲ್ಲಿ ನಾನು ಸೀಟು ಪಡೆಯಲು ವಿಫಲಳಾಗಿದ್ದೆ. ಆದರೆ, ಎರಡನೇ ಪ್ರಯತ್ನದಲ್ಲಿ ಸೀಟು ಪಡೆಯುವಲ್ಲಿ ಯಶಸ್ವಿಯಾದೆ " ಎಂದು ಸಾನಿಯಾ ಮಿರ್ಜಾ ಹೇಳುತ್ತಾರೆ. ಇನ್ನು, ಹಿಂದಿ ಮಾಧ್ಯಮದ ವಿದ್ಯಾರ್ಥಿಗಳು ಸಹ ದೃಢಸಂಕಲ್ಪ ಮಾಡಿದರೆ ಯಶಸ್ಸು ಗಳಿಸಬಹುದು ಎಂದು ಸ್ವತಃ ಹಿಂದಿ ಮಾಧ್ಯಮದ ವಿದ್ಯಾರ್ಥಿನಿಯಾಗಿದ್ದ ಸಾನಿಯಾ ಹೇಳುತ್ತಾರೆ.


ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಸ್ಪೂರ್ತಿ:


“ನಾನು ಫ್ಲೈಟ್ ಲೆಫ್ಟಿನೆಂಟ್ ಅವನಿ ಚತುರ್ವೇದಿ ಅವರಿಂದ ತುಂಬಾ ಸ್ಫೂರ್ತಿ ಪಡೆದಿದ್ದೇನೆ ಮತ್ತು ಅವರನ್ನು ನೋಡಿ ನಾನು NDA ಗೆ ಸೇರಲು ನಿರ್ಧರಿಸಿದೆ. ಒಂದು ದಿನ ಯುವ ಪೀಳಿಗೆ ನನ್ನಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂಬುದಾಗಿ ಸಾನಿಯಾ ಹೇಳುತ್ತಾರೆ. ಎನ್‌ಡಿಎಯಲ್ಲಿ ಮಹಿಳೆಯರಿಗೆ ಮೀಸಲಾದ 19 ಸ್ಥಾನಗಳಲ್ಲಿ ಸಾನಿಯಾ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Rahul Gandhi: ಅಜ್ಜಿ, ಅಮ್ಮನಂತ ಗುಣ ಇದ್ದ ಹುಡುಗಿ ಸಿಕ್ರೆ ಮದ್ವೆಯಾಗ್ತಾರಂತೆ ರಾಹುಲ್ ಗಾಂಧಿ! 'ಕಾಂಗ್ರೆಸ್ ಯುವರಾಜ'ನ ಕಲ್ಯಾಣ ಯಾವಾಗ?


ಇನ್ನು, ಸಾನಿಯಾ ಸಾಧನೆಯ ಬಗ್ಗೆ ಆಕೆಯ ಪಾಲಕರು ಗ್ರಾಮಸ್ಥರು ಹೆಮ್ಮೆ ಪಡುತ್ತಾರೆ. ಈ ಬಗ್ಗೆ ಮಾತನಾಡಿದ ಸಾನಿಯಾ ತಂದೆ ಶಾಹಿದ್ ಅಲಿ, ದೇಶದ ಮೊದಲ ಫೈಟರ್ ಪೈಲಟ್ ಅವ್ನಿ ಚತುರ್ವೇದಿ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸಿರುವ ಸಾನಿಯಾ ಮಿರ್ಜಾ ಮೊದಲಿನಿಂದಲೂ ಅವರಂತೆಯೇ ಇರಬೇಕೆಂದು ಬಯಸಿದ್ದರು. ಫೈಟರ್ ಪೈಲಟ್ ಆಗಿ ಆಯ್ಕೆಯಾದ ದೇಶದ ಎರಡನೇ ಹೆಣ್ಣುಮಗಳು ಸಾನಿಯಾ ಎಂದು ಹೇಳಿದ್ದಾರೆ.


ಇನ್ನು, ಸಾನಿಯಾ ತಾಯಿ ತಬಸ್ಸುಮ್ ಮಿರ್ಜಾ, "ನಮ್ಮ ಮಗಳು ನಮಗೆ ಮತ್ತು ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದ್ದಾಳೆ. ಫೈಟರ್ ಪೈಲಟ್ ಆಗುವ ಕನಸನ್ನು ನನಸಾಗಿಸಿದಳು. ಹಳ್ಳಿಯ ಪ್ರತಿಯೊಬ್ಬ ಹೆಣ್ಣುಮಕ್ಕಳಿಗೂ ಅವಳು ಪ್ರೇರಣೆಯಾಗಿದ್ದಾಳೆ” ಎಂದಿದ್ದಾರೆ. ಅಂದಹಾಗೆ, ಡಿಸೆಂಬರ್ 27, 2022 ರಂದು ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಸಾನಿಯಾ ಎನ್‌ಡಿಎ ಖಡಕ್ವಾಸ್ಲಾಗೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂದುಕೊಂಡಂತೆ ಎಲ್ಲವೂ ಆದರೆ ಸಾನಿಯಾ ಮಿರ್ಜಾ ಭಾರತೀಯ ವಾಯುಪಡೆಯ (ಐಎಎಫ್) ಮೊದಲ ಮುಸ್ಲಿಂ ಫೈಟರ್ ಆಗಲಿದ್ದಾರೆ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು