ಟ್ರೋಲ್​ ಮಾಡಿದ ಪಾಕಿಗಳಿಗೆ ಟ್ವಿಟ್ಟರ್​ನಲ್ಲೇ ತಿರುಗೇಟು ನೀಡಿದ ಸಾನಿಯಾ ಮಿರ್ಜಾ

ಪಾಕಿಸ್ತಾನಿ ಕ್ರಿಕೆಟಿಗರು ಫಿಟ್​ನೆಸ್​ ಕಡೆಗೆ ಸ್ವಲ್ಪವೂ ಗಮನ ಕೊಡದೆ ಪಂದ್ಯದ ಹಿಂದಿನ ರಾತ್ರಿಯೂ ಜಂಕ್​ ಫುಡ್​ ತಿಂದು, ಹುಕ್ಕಾ ಎಳೆದಿದ್ದು ಮತ್ತು ಸಾನಿಯಾ ಮಿರ್ಜಾ ಜೊತೆ ಕಾಣಿಸಿಕೊಂಡಿದ್ದಕ್ಕೆ ಪಾಕ್​ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕಿದ್ದರು.

ಟಿನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ

ಟಿನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ

  • News18
  • Last Updated :
  • Share this:
ಇಂಗ್ಲೆಂಡ್​ನ ಮ್ಯಾಂಚೆಸ್ಟರ್​ನಲ್ಲಿ ನಡೆದ ವಿಶ್ವ ಕಪ್​ನಲ್ಲಿ ಭಾರತದ ಎದುರು ಹೀನಾಯವಾಗಿ ಸೋತಿದ್ದ ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧ ಪಾಕ್​ ಅಭಿಮಾನಿಗಳು ರೊಚ್ಚಿಗೆದ್ದಿದ್ದು ಗೊತ್ತೇ ಇದೆ. ಈ ನಡುವೆ ಪಾಕ್​ ಆಟಗಾರ ಶೋಯಬ್ ಮಲಿಕ್ ಮತ್ತು ಅವರ ಪತ್ನಿ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜೊತೆ ಕೆಲ ಪಾಕ್​ ಕ್ರಿಕೆಟ್​ ಆಟಗಾರರು ಪಂದ್ಯದ ಹಿಂದಿನ ದಿನ ರಾತ್ರಿ ಮ್ಯಾಂಚೆಸ್ಟರ್​ನ ಶೀಶಾ ಕೆಫೆ ಬಾರ್​ನಲ್ಲಿ ಹುಕ್ಕಾ ಎಳೆಯುತ್ತ ಪಿಜ್ಜಾ, ಬರ್ಗರ್​ ತಿಂದು ಮಜಾ ಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

ಫಿಟ್​ನೆಸ್​ ಕಡೆಗೆ ಸ್ವಲ್ಪವೂ ಗಮನ ಕೊಡದೆ ಪಂದ್ಯದ ಹಿಂದಿನ ರಾತ್ರಿಯೂ ಜಂಕ್​ ಫುಡ್​ ತಿಂದು, ಹುಕ್ಕಾ ಎಳೆದಿದ್ದು ಮತ್ತು ಸಾನಿಯಾ ಮಿರ್ಜಾ ಜೊತೆ ಕಾಣಿಸಿಕೊಂಡಿದ್ದಕ್ಕೆ ಪಾಕ್​ ಅಭಿಮಾನಿಗಳು ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕಿದ್ದರು. ಭಾರತದ ಎದುರು ಸೋಲಲು ಈ ರೀತಿಯ ಬೇಜವಾಬ್ದಾರಿ ನಡವಳಿಕೆಯೇ ಕಾರಣ ಎಂದು ಟೀಕಿಸಿದ್ದರು. ಇನ್ನು, ಈ ವಿಡಿಯೋ ಬಗ್ಗೆ ಟ್ವಿಟ್ಟರ್​ನಲ್ಲಿ ಪ್ರತಿಕ್ರಿಯೆ ನೀಡಿದ್ದ ಸಾನಿಯಾ ಮಿರ್ಜಾ, 'ನಮ್ಮ ಅನುಮತಿ ಇಲ್ಲದೆ ವಿಡಿಯೋ ತೆಗೆದು ಅಪ್​ಲೋಡ್​ ಮಾಡುವ ಮೂಲಕ ನಮ್ಮ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ. ನಾವು ಊಟಕ್ಕೆ ತೆರಳಿದ್ದಾಗ ನಮ್ಮ ಜೊತೆ ಒಂದು ಮಗು ಕೂಡ ಇತ್ತು' ಎಂದು ಟ್ವೀಟಿಸಿದ್ದರು.

ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಸಾನಿಯಾ ಜೊತೆ ಪಾಕ್ ಕ್ರಿಕೆಟಿಗರ ಹುಕ್ಕಾ ಡಿನ್ನರ್; ಅಭಿಮಾನಿಗಳು ಕೆಂಡಾಮಂಡಲ!

ಈ ಟ್ವಿಟ್ಟರ್​ಗೆ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನಿ ನಟಿ ವೀಣಾ ಮಲಿಕ್,' ನಾನು ನಿಮಗಿಂತ ನಿಮ್ಮ ಜೊತೆಗಿದ್ದ ಆ ಮಗುವಿನ ಬಗ್ಗೆ ಹೆಚ್ಚು ಚಿಂತಿತಳಾಗಿದ್ದೇನೆ. ಚಿಕ್ಕ ಮಗುವನ್ನು ಶೀಶಾ ಬಾರ್​ಗೆ ಕರೆದುಕೊಂಡು ಹೋಗಿದ್ದು ಎಷ್ಟು ಸರಿ? ಮಗುವಿನ ತಾಯಿಯಾಗಿ ಮತ್ತು ಸ್ವತಃ ನೀವೇ ಓರ್ವ ಕ್ರೀಡಾಪಟುವಾಗಿದ್ದರೂ ಅಥ್ಲೀಟ್​ಗಳಿಗೆ ಜಂಕ್​ಫುಡ್​ ಒಳ್ಳೆಯದಲ್ಲ ಎಂದು ನಿಮಗೆ ಗೊತ್ತಿಲ್ಲವೇ?' ಎಂದು ಟ್ವೀಟಿಸಿದ್ದರು.

'ವಿಶ್ವಕಪ್​ನಲ್ಲಿ ಭಾರತ ತಂಡ ಪಾಕ್ ವಿರುದ್ಧ ಆಡಬಾರದು' ಎಂದವರೆಲ್ಲಾ ನಿನ್ನೆಯ ಪಂದ್ಯದಲ್ಲಿ ಹಾಜರು

ಆ ಟ್ವೀಟ್​ಗೆ ಖಾರವಾಗಿ ಉತ್ತರಿಸಿರುವ ಸಾನಿಯಾ ಮಿರ್ಜಾ, 'ನಾನು ನನ್ನ ಮಗುವನ್ನು ಬಾರ್​ಗೆ ಕರೆದುಕೊಂಡು ಹೋಗಿದ್ದೆ ಎಂದು ಹೇಳಿಲ್ಲ. ಅಷ್ಟಕ್ಕೂ ಈ ಬಗ್ಗೆ ನೀವಾಗಲೀ ಅಥವಾ ಜಗತ್ತಿನ ಬೇರೆ ಯಾರೇ ಆಗಲಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇದಕ್ಕೂ ನಿಮಗೂ ಯಾವುದೇ ಸಂಬಂಧವಿಲ್ಲ! ನನ್ನ ಮಗನ ಬಗ್ಗೆ ಈ ಜಗತ್ತಿನ ಬೇರಾರೋ ವಹಿಸುವ ಕಾಳಜಿಗಿಂತ ನೂರು ಪಟ್ಟು ಹೆಚ್ಚು ನಾನು ಎಚ್ಚರಿಕೆ ವಹಿಸುತ್ತೇನೆ. ಹಾಗೇ ಮತ್ತೊಂದು ವಿಷಯ.... ಪಾಕಿಸ್ತಾನಿ ಕ್ರಿಕೆಟಿಗರು ಜಂಕ್​ಫುಡ್​ ತಿನ್ನಬಾರದು ಎಂದು ಹೇಳಲು ನಾನು ಅವರ ಡಯಟಿಷಿಯನ್ ಅಲ್ಲ. ಹೀಗೇ ಮಾಡಬೇಕು ಎಂದು ಹೇಳಲು ನಾನು ಅವರ ತಾಯಿ, ಪ್ರಿನ್ಸಿಪಾಲ್, ಟೀಚರ್​ ಯಾವುದೂ ಅಲ್ಲ' ಎಂದು ಟಾಂಗ್​ ನೀಡಿದ್ದಾರೆ.

ವಾಘಾ ಗಡಿಯಲ್ಲಿ ತೋರಿದ ಉತ್ಸಾಹ ಫೀಲ್ಡ್​ಗೆ ಇಳಿದಾಗ ಎಲ್ಲೋಯ್ತು?; ಪಾಕ್​ ತಂಡಕ್ಕೆ ಶೋಯಬ್​ ಅಖ್ತರ್​ ಚಾಟಿ

ತನ್ನ ವಿರುದ್ಧ ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕುತ್ತಿರುವ ಪಾಕಿಸ್ತಾನಿ ಟ್ವಿಟ್ಟಿಗರಿಗೆ ತಿರುಗೇಟು ನೀಡಿರುವ ಸಾನಿಯಾ ಮಿರ್ಜಾ, 'ನಿಮ್ಮೊಳಗಿನ ಅಸಹನೆಯನ್ನು ಹೊರಹಾಕಲು ಟ್ವಿಟ್ಟರ್​ ಬದಲು ಬೇರೆ ಯಾವುದಾದರೂ ಸ್ಥಳವನ್ನು ಹುಡುಕಿಕೊಳ್ಳಿ. ಸದ್ಯಕ್ಕೆ ಸಮಾಧಾನ ಮಾಡಿಕೊಳ್ಳಿ. ಇದು ಬ್ರೇಕ್ ತೆಗೆದುಕೊಳ್ಳುವ ಸಮಯ' ಎಂದು ಕಿಚಾಯಿಸಿದ್ದಾರೆ.

First published: