ಚರ್ಚೆಗೆ ಗ್ರಾಸವಾಗಿದೆ ಸಾನಿಯಾ-ಮಲಿಕ್ ಮಗುವಿನ ಪೌರತ್ವ ವಿಚಾರ

  • News18
  • Last Updated :
  • Share this:
ನ್ಯೂಸ್ 18 ಕನ್ನಡ

ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರು ಇಂದು ಬೆಳಗಿನ ಜಾವ ಗಂಡು ಮಗುವಿಗೆ ಜನ್ನ ನೀಡಿದ್ದಾರೆ. ಈ ಬಗ್ಗೆ ಗಂಡ, ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶೋಯೆಬ್ ಮಲಿಕ್ ಅವರು ಟ್ವಿಟರ್​​​ನಲ್ಲಿ 'ನನ್ನ ಹೆಂಡತಿ ಮಗನಿಗೆ ಜನ್ಮ ನೀಡಿದ್ದಾಳೆ. ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ' ಎಂದು ಟ್ವೀಟ್ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ. ಈ ಮಧ್ಯೆ  ಸಾನಿಯಾ-ಮಲಿಕ್ ಮಗು ಯಾವ ದೇಶದ ಪೌರತ್ವ ಪಡೆದುಕೊಳ್ಳಲಿದೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿದೆ.

 2010ರಲ್ಲಿ ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರ ಶೋಯೆಬ್ ಮಲಿಕ್ ಅವರು ಮದುವೆಯಾಗಿದ್ದರು. ಬಳಿಕ ಕಳೆದ ಏಪ್ರಿಲ್​​ನಲ್ಲಿ ಶೋಯೆಬ್ ಮತ್ತು ಸಾನಿಯಾ  ಅವರು 'ನಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಸಾನಿಯಾ ಅವರು ಮಲಿಕ್​​ರನ್ನು ಮದುವೆಯಾಗಿದ್ದರೂ ಭಾರತದ ಪೌರತ್ವವನ್ನು ಉಳಿಸಿಕೊಂಡಿದ್ದರು. ಆದರೆ, ಸದ್ಯ ಸಾನಿಯಾ-ಮಲಿಕ್ ಮಗು ಯಾವ ದೇಶದ ಪೌರತ್ವ ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್​ಗೆ ಯುವರಾಜ್ ಸಿಂಗ್ ವಿದಾಯ..?

ಇನ್ನು ಇತ್ತೀಚೆಗಷ್ಟೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದ ಮಲಿಕ್ ಅವರು, ನಮ್ಮ ಮಗು ಪಾಕಿಸ್ತಾನ ಅಥವಾ ಭಾರತ ದೇಶದ ಪೌರತ್ವ ಪಡೆಯುವುದಿಲ್ಲ. ಬದಲಾಗಿ ಬೇರೆ ರಾಷ್ಟ್ರದ ಪೌರತ್ವ ಪಡೆಯಲಿದೆ ಎಂದು ಹೇಳಿದ್ದರು. ಹಾಗೆಯೇ ಈ ಹಿಂದೆ ಮಗುವಿನ ನಿರೀಕ್ಷೆಯಲ್ಲಿದ್ದ ಸಾನಿಯಾ ಮಿರ್ಜಾ ಕೂಡ ಮಗುವಿನ ಉಪನಾಮ ಮಿರ್ಜಾ+ಮಲಿಕ್ ಎಂದು ಇರಲಿದೆ ಎಂಬ ಸುಳಿವು ನೀಡಿದ್ದರು. ಯಾಕಂದ್ರೆ ಸಾನಿಯಾ ಅವರದ್ದು ಹೈದರಾಬಾದ್​ನ ಮಿರ್ಜಾ ಫ್ಯಾಮಿಲಿಯಾಗಿದ್ದರೆ, ಶೊಯೆಬ್ ಪಾಕ್​ನ ಮಲಿಕ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಇದನ್ನೂ ಓದಿ: 2019ರ ವಿಶ್ವಕಪ್​​ಗೆ ಧೋನಿ ಬೇಕೆ ಎಂಬ ಪ್ರಶ್ನೆಗೆ ಗವಾಸ್ಕರ್ ಹೇಳಿದ್ದೇನು..?

ಭಾರತ ಸರ್ಕಾರದ ನೀತಿಯ ಪ್ರಕಾರ ಭಾರತದಲ್ಲಿ ಮಗು ಜನನವಾದರೆ ಅಥವಾ ಭಾರತೀಯ ನಾಗರಿಕರಾಗಿದ್ದರೆ ಅವರು ಭಾರತೀಯ ಪೌರತ್ವಕ್ಕೆ ಅರ್ಹರಾಗಿರುತ್ತಾರೆ. ಅಲ್ಲದೆ ಶೋಯೆಬ್ ಹಾಗೂ ಸಾನಿಯಾ ಅವರು ಸದ್ಯ ದುಬೈನಲ್ಲಿ ನೆಲೆಸಿರುವುದರಿಂದ ದುಬೈ ಪೌರತ್ವಕ್ಕೆ ಸೇರಲಿದ್ದಾರ ಎಂಬುದು ತಿಳಿಯಬೇಕಿದೆ.

First published: