Sand Storm- ಮರಳು ಸುನಾಮಿ; ಚೀನಾದಲ್ಲಿ ಬೆಚ್ಚಿಬೀಳಿಸಿತು 100 ಮೀಟರ್ ಎತ್ತರದ ಮರಳು ಬಿರುಗಾಳಿ

ಚೀನಾದ ಪಶ್ಚಿಮಭಾಗದಲ್ಲಿರುವ ಗೋಬಿ ಮರಳುಗಾಡಿನ ಸಮೀಪದ ಹಾನ್ಸು ಪ್ರಾಂತ್ಯದ ಡುನ್​ಹುವಾಂಗ್ ನಗರದಲ್ಲಿ ಮೊನ್ನೆ ಭೀಕರ ಮರಳುಬಿರುಗಾಳಿ ಅಪ್ಪಳಿಸಿ ಜನರನ್ನ ಬೆಚ್ಚಿಬೀಳಿಸಿದೆ. ಈ ಬಿರುಗಾಳಿ 100 ಮೀಟರ್ ಎತ್ತರದವರೆಗೆ ಇತ್ತೆನ್ನಲಾಗಿದೆ.

ಮರಳು ಬಿರುಗಾಳಿ

ಮರಳು ಬಿರುಗಾಳಿ

  • Share this:
ಪ್ರಕೃತಿಯ ಮುಂದೆ ಎಲ್ಲರೂ ತೃಣಕ್ಕೆ ಸಮಾನ. ಪ್ರಕೃತಿಯ ಮುಂದೆ ಹೋರಾಡಿ ಗೆದ್ದವರಿಲ್ಲ. ಯಾವಾಗ, ಯಾವ ಸಮಯದಲ್ಲಿ ಪ್ರಕೃತಿ ತನ್ನ ರೌದ್ರ ನರ್ತನ ತೋರುತ್ತದೆ ಎಂದು ಯಾರು ಊಹಿಸಲು ಸಾಧ್ಯವಿಲ್ಲ. ಇದೀಗ ಪ್ರಪಂಚದ ನಾನಾ ಕಡೆ ಯಥೇಚ್ಛವಾಗಿ ತಾಪಮಾನ ಏರಿಕೆಯಾಗುತ್ತಿದೆ. ಜೊತೆಗೆ ಅತಿಯಾದ ಮಳೆಯು ಜನರನ್ನು ಬದುಕನ್ನು ಬೀದಿಗೆ ತಂದು ಇಳಿಸಿದೆ. ಇದರ ಜೊತೆಗೆ ಮುಂದಿನ ತಿಂಗಳು ಮೂರನೇ ಅಲೆ ಅಪ್ಪಳಿಸುವ ಬಗ್ಗೆಯೂ ಜನರಲ್ಲಿ ಆತಂಕವಿದೆ. ಇಂತಹ ಮೂರು ಪರಿಸ್ಥಿತಿಯ ಸಂದಿಗ್ಧತೆಯಲ್ಲಿರುವ ಜಗತ್ತಿಗೆ ದಿಕ್ಕು ತೋಚದಂತಾಗಿದೆ. ಇದೆಲ್ಲದರ ನಡುವೆ ಚೀನಾ ಮೊನ್ನೆ ಭೀಕರ ದೃಶ್ಯಕ್ಕೆ ಸಾಕ್ಷಿಯಾಗಿತ್ತು. ಈ ವಿಡಿಯೋ ನೋಡಿದ ಜನರು ಹೌಹಾರುವುದು ಮಾತ್ರ ಗ್ಯಾರಂಟಿ. ಚೀನಾದ ಗೋಬಿ ಮರುಭೂಮಿಯ ಅಂಚಿನಲ್ಲಿರುವ ಗನ್ಸು ಪ್ರಾಂತ್ಯದ ಡನ್‍ಹುವಾಂಗ್ ನಗರದಲ್ಲಿ ಮರಳಿನ ಬಿರುಗಾಳಿ ಕಾಣಿಸಿಕೊಂಡಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡನ್‍ಹುವಾಂಗ್ ನಗರದಲ್ಲಿ ಸಂಭವಿಸಿದ ಮರಳಿನ ಬಿರುಗಾಳಿಯು ಸುಮಾರು 100 ಮೀ ಎತ್ತರದ್ದಾಗಿತ್ತು. ಕೇವಲ 5 ಮೀಟರ್‍ನಷ್ಟು ದೂರದವರೆಗೆ ಮಾತ್ರ ಕಣ್ಣಿಗೆ ಗೋಚರವಾಗಲು ಸಾಧ್ಯವಾಗಿತ್ತು. ಅದರಿಂದಾಚೆ ನೋಡಲು ಅಸಾಧ್ಯವಾಗುವಷ್ಟರ ಮಟ್ಟಿಗೆ ಮರಳು ಬಿರುಗಾಳಿ ಭೀಕರವಾಗಿತ್ತು ಎಂದು ಚೀನಾದ ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸಂಭವಿಸಿದ ಮರಳ ಬಿರುಗಾಳಿ ಅಪಾಯಕಾರಿ ಸ್ಥಿತಿ ತಂದೊಡ್ಡಿತು. ಆಗ ಈ ಭೀಕರತೆಗೆ ಎದುರಿದ ಸ್ಥಳೀಯ ಪೊಲೀಸರು ಪ್ರಮುಖ ರಸ್ತೆಗಳನ್ನು ಮುಚ್ಚುವಂತೆ ಒತ್ತಾಯಿಸಿದರು ಮತ್ತು ಗೋಚರತೆ ಕಡಿಮೆಯಾದ ನಂತರ ತಮ್ಮ ವಾಹನಗಳನ್ನು ಎಕ್ಸ್ ಪ್ರೆಸ್‌ವೇಯಿಂದ ಇಳಿಸಲು ಚಾಲಕರಿಗೆ ಆದೇಶಿಸಿದರು.

ಘಟನೆಯ ವೈರಲ್ ವೀಡಿಯೊದಲ್ಲಿ ನಗರ ಪ್ರದೇಶಗಳು ಮತ್ತು ಹೆದ್ದಾರಿಗಳನ್ನು ಆವರಿಸಿರುವ ಮರಳ ಬಿರುಗಾಳಿಯು ದೊಡ್ಡ ಗೋಡೆಯಂತೆ ಎದ್ದು ನಿಂತಿರುವುದು ತೋರುತ್ತದೆ. ಈ ವಿಡಿಯೋವನ್ನು ನೀಲ್ ಸಾಚ್‍ಮಿಡ್ ಎಂಬುವವರು ಇಂದಿನ ಮರಳಿನ ಬಿರುಗಾಳಿ ಎಂಬ ಶೀರ್ಷಿಕೆಯಡಿ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Olympics Boxing: ಬಾಕ್ಸಿಂಗ್ ಸೆಮಿಫೈನಲ್​ನಲ್ಲಿ ಲವ್ಲಿನಾಗೆ ಸೋಲು; ಭಾರತಕ್ಕೆ ಕಂಚು ಪ್ರಾಪ್ತಿ

ಇದಲ್ಲದೇ ಅಮೆರಿಕದ ಉಟಾಹ್ ರಾಜ್ಯದಲ್ಲಿಯೂ ಮರಳು ಬಿರುಗಾಳಿ ಸಂಭವಿಸಿತ್ತು. ಇದರಲ್ಲಿ 22 ಮಂದಿಯಲ್ಲಿ 8 ಮಂದಿಯನ್ನು ಬಿರುಗಾಳಿ ಜೀವ ಬಲಿತೆಗೆದುಕೊಂಡಿದೆ. ಸತ್ತವರಲ್ಲಿ 8 ಮಂದಿ ಮಕ್ಕಳು ಕೂಡ ಇದ್ದರು. ಉತಾಹ್ ಹೆದ್ದಾರಿಯ ಗಸ್ತುದಳದ ಪ್ರಕಾರ, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ 10 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಇದರಲ್ಲಿ ಮೂವರು ಮಂದಿಯ ಸ್ಥಿತಿ ಚಿಂತಾಜನಕವಾಗಿತ್ತು. ಮರಳು ಬಿರುಗಾಳಿಗೆ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸಲು ನೆಲ ಹಾಗೂ ವಾಯು ಆ್ಯಂಬುಲೆನ್ಸ್ ಅನ್ನು ಬಳಸಲಾಯಿತು.ಇನ್ನು ಮಾರ್ಚ್ ತಿಂಗಳಲ್ಲಿ ಬೀಜಿಂಗ್‍ನಲ್ಲಿ ಹಳದಿ ಬಣ್ಣದ ದಟ್ಟವಾದ ಹೊಗೆ ಕಾಣಿಸಿಕೊಂಡಿತ್ತು. ಮಾಲಿನ್ಯ ಮಿತಿ ಮೀರಿದ ಕಾರಣ ಈ ಭಯಾನಕ ಘಟನೆ ಸಂಭವಿಸಿತ್ತು. ಗೋಬಿ ಮರುಭೂಮಿಯಲ್ಲಿ ಒಂದು ದಶಕದಲ್ಲಿ ಕಾಣಿಸಿಕೊಂಡು ಅತ್ಯಂತ ಕೆಟ್ಟ ಬಿರುಗಾಳಿಯೇ ಈ ಮರಳು ಬಿರುಗಾಳಿ. ಉಸಿರುಗಟ್ಟಿಸುವ ಧೂಳು ಮತ್ತು ಮರಳಿನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ನಿವಾಸಿಗಳು ಕನ್ನಡಕಗಳು, ಮುಖವಾಡಗಳು ಮತ್ತು ಹೇರ್‍ನೆಟ್‍ಗಳನ್ನು ಬಳಸುತ್ತಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: