Bharat Bandh: ಕೃಷಿ ಕಾನೂನು ವಿರೋಧಿಸಿ ರೈತರ ಪ್ರತಿಭಟನೆ; ಸೆ.25ಕ್ಕೆ ಭಾರತ್ ಬಂದ್​ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ

Samyukt Kisan Morcha "ಕಾರ್ಪೊರೇಟ್ ಪರ ಇರುವ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಎಂಎಸ್‌ಪಿಗೆ ಕಾನೂನು ಖಾತರಿ, ವಿದ್ಯುತ್ ಬಿಲ್, 2021  ರದ್ದು, 'ಎನ್‌ಸಿಆರ್ ಮತ್ತು ಎಕ್ಯೂ ನಿರ್ವಹಣೆ ಪ್ರದೇಶಗಳ ಮಸೂದೆ 2021' ಅಡಿಯಲ್ಲಿ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸಬಾರದು ಎಂಬ ನಮ್ಮ ಬೇಡಿಕೆಗಳನ್ನು ಸಮಾವೇಶದ ಸಮಯದಲ್ಲಿ ಪುನರುಚ್ಚರಿಸಲಾಗಿದೆ ," ಎಂದು ಮಿತ್ತಲ್ ಅವರು ಹೇಳಿದರು.

ರೈತರ ಪ್ರತಿಭಟನೆ.

ರೈತರ ಪ್ರತಿಭಟನೆ.

 • Share this:
  ನವದೆಹಲಿ: (New Delhi) ಕೇಂದ್ರ ಸರ್ಕಾರ (Central Government) ಜಾರಿಗೆ ತರಲು ಮುಂದಾಗಿರುವ ಕೃಷಿ ಕಾನೂನುಗಳನ್ನು (Agri Laws) ವಿರೋಧಿಸಿ ವಿವಿಧ ರೈತ ಸಂಘಟನೆಗಳು (Farmer Associations) ನಡೆಸುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha)  ಸೆಪ್ಟೆಂಬರ್ 25 ರಂದು 'ಭಾರತ್ ಬಂದ್' ಗೆ ಕರೆ ನೀಡಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾದ ರೈತರ ಆಂದೋಲನವನ್ನು ಮತ್ತಷ್ಟು ಬಲಪಡಿಸುವ ಮತ್ತು ವಿಸ್ತರಿಸುವ ಉದ್ದೇಶದಿಂದ ಭಾರತ ಬಂದ್​ಗೆ ಕರೆ ನೀಡಲಾಗಿದೆ ಎಂದು ಶುಕ್ರವಾರ ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ.

  ದೆಹಲಿಯ ಸಿಂಗು ಗಡಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಆಶಿಶ್ ಮಿತ್ತಲ್, "ನಾವು ಸೆಪ್ಟೆಂಬರ್ 25 ರಂದು ಭಾರತ್ ಬಂದ್‌ಗೆ ಕರೆ ನೀಡುತ್ತಿದ್ದೇವೆ. ಕಳೆದ ವರ್ಷ ಅದೇ ದಿನಾಂಕದಂದು ಇದೇ ರೀತಿಯ 'ಬಂದ್' ಗೆ ಕರೆ ನೀಡಿದ ನಂತರ ಪ್ರತಿಭಟನೆ ಇಂದಿಗೂ ನಡೆಯುತ್ತಿದೆ. ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆ ನಡೆದ ಕಳೆದ ವರ್ಷಕ್ಕಿಂತ ಇದು ಹೆಚ್ಚು ಯಶಸ್ವಿಯಾಗುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

  ಶುಕ್ರವಾರ ಮುಕ್ತಾಯಗೊಂಡ ರೈತರ ಅಖಿಲ ಭಾರತ ಸಮಾವೇಶದ ಸಂಯೋಜಕರಾಗಿರುವ ಮಿತ್ತಲ್, ಎರಡು ದಿನಗಳ ಕಾರ್ಯಕ್ರಮವು ಯಶಸ್ವಿಯಾಗಿದೆ ಮತ್ತು 22 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಕೇವಲ 300 ಕೃಷಿ ಒಕ್ಕೂಟಗಳಲ್ಲ, ಮಹಿಳೆಯರು, ಕಾರ್ಮಿಕರು, ಬುಡಕಟ್ಟು ಜನಾಂಗದವರು ಹಾಗೂ ಯುವಕರು ಮತ್ತು ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುವ ಸಂಸ್ಥೆಗಳ ಸದಸ್ಯರು ಈ ಕೃಷಿ ಹೋರಾಟದ ಭಾಗವಾಗಿದ್ದಾರೆ. ಸಮಾವೇಶದ ಸಮಯದಲ್ಲಿ, ಕಳೆದ ಒಂಬತ್ತು ತಿಂಗಳುಗಳಿಂದ ನಡೆಯುತ್ತಿರುವ ರೈತರ ಹೋರಾಟದ ಬಗ್ಗೆ ಚರ್ಚೆ, ಸಂವಾದಗಳು ನಡೆದವು. ಇದು ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ದೇಶವ್ಯಾಪಿ ಚಳುವಳಿಯನ್ನಾಗಿ ಮಾಡುವತ್ತ  ಪ್ರಮುಖವಾಗಿದೆ ಎಂದು ಹೇಳಿದರು.

  ಸಮಾವೇಶದ ಸಮಯದಲ್ಲಿ, ಸರ್ಕಾರವು ಕಾರ್ಪೊರೇಟ್ ಪರ ಮತ್ತು ರೈತ ಸಮುದಾಯದ ಮೇಲೆ ಹೇಗೆ ದಾಳಿ ನಡೆಸುತ್ತಿದೆ ಎಂದು ಚರ್ಚಿಸಲಾಯಿತು.

  "ಕಾರ್ಪೊರೇಟ್ ಪರ ಇರುವ ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಲ್ಲಾ ಬೆಳೆಗಳ ಎಂಎಸ್‌ಪಿಗೆ ಕಾನೂನು ಖಾತರಿ, ವಿದ್ಯುತ್ ಬಿಲ್, 2021  ರದ್ದು, 'ಎನ್‌ಸಿಆರ್ ಮತ್ತು ಎಕ್ಯೂ ನಿರ್ವಹಣೆ ಪ್ರದೇಶಗಳ ಮಸೂದೆ 2021' ಅಡಿಯಲ್ಲಿ ರೈತರ ವಿರುದ್ಧ ಕಾನೂನು ಕ್ರಮ ಜರುಗಿಸಬಾರದು ಎಂಬ ನಮ್ಮ ಬೇಡಿಕೆಗಳನ್ನು ಸಮಾವೇಶದ ಸಮಯದಲ್ಲಿ ಪುನರುಚ್ಚರಿಸಲಾಗಿದೆ ," ಎಂದು ಮಿತ್ತಲ್ ಅವರು ಹೇಳಿದರು.

  ಗುರುವಾರ, ಮೂರು ವಿವಾದಾತ್ಮಕ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆ ದೆಹಲಿ ಗಡಿಗಳಿಗೆ ಮೊದಲಾಗಿ ಆಗಮಿಸಿ ಒಂಬತ್ತು ತಿಂಗಳುಗಳನ್ನು ಪೂರೈಸಿದೆ. ಎಂಎಸ್‌ಪಿ ವ್ಯವಸ್ಥೆಯನ್ನು ತೊಡೆದುಹಾಕುವ ಕಾನೂನುಗಳನ್ನು ರದ್ದುಗೊಳಿಸುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

  ಇದನ್ನು ಓದಿ: Youngest Pilot of India; ದೇಶದ ಅತ್ಯಂತ ಕಿರಿಯ ಪೈಲೆಟ್ ಹೆಗ್ಗಳಿಗೆ ಪಾತ್ರಳಾದ ರೈತನ ಮಗಳು!

  ಪ್ರತಿಭಟನೆ ಆರಂಭವಾದಾಗಿಂತ ಈವರೆಗೆ ಪ್ರತಿಭಟನಾಕಾರರು ಮತ್ತು ಕೇಂದ್ರ ಸರ್ಕಾರದ ನಡುವೆ 10 ಸುತ್ತುಗಳ ಮಾತುಕತೆ ನಡೆದಿವೆ. ಮೂರು ಕಾನೂನುಗಳನ್ನು ಕೆಲವು ವರ್ಷಗಳವರೆಗೆ ತಡೆಹಿಡಿಯುವುದಾಗಿ ಕೇಂದ್ರ ಹೇಳುತ್ತಿದೆ, ಆದರೆ, ಹೋರಾಟಗಾರರು ಈ ರೈತ ವಿರೋಧಿ ಕಾನೂನುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು ಎಂದು ಪ್ರಬಲವಾಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಮಾತುಕತೆ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ರೈತ ಹೋರಾಟಗಾರರು ಸೆಪ್ಟೆಂಬರ್ 25ಕ್ಕೆ ಭಾರತ್ ಬಂದ್​ಗೆ ಕರೆ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: