ಸ್ಥಗಿತಗೊಂಡಿದ್ದ ಭಾರತ-ಪಾಕ್​ ನಡುವಿನ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆ ನಾಳೆಯಿಂದ ಪುನಾರಂಭ

1971ರಲ್ಲಿ ಎರಡು ದೇಶಗಳ ನಡುವೆ ನಡೆದ ಶಿಮ್ಲಾ ಒಪ್ಪಂದ ನಂತರ 1976ರ ಜುಲೈ 22ರಂದು ಎರಡು ದೇಶಗಳ ನಡುವೆ ಮೊದಲ ಬಾರಿಗೆ ಸಂಜೋತಾ ಎಕ್ಸ್​ಪ್ರೆಸ್ ರೈಲು ಸೇವೆ ಆರಂಭಿಸಲಾಗಿತ್ತು.  

HR Ramesh | news18india
Updated:March 2, 2019, 5:19 PM IST
ಸ್ಥಗಿತಗೊಂಡಿದ್ದ ಭಾರತ-ಪಾಕ್​ ನಡುವಿನ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆ ನಾಳೆಯಿಂದ ಪುನಾರಂಭ
ಸಂಜೋತಾ ಎಕ್ಸ್​ಪ್ರೆಸ್​ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿರುವ ಸಿಬ್ಬಂದಿ
HR Ramesh | news18india
Updated: March 2, 2019, 5:19 PM IST
ನವದೆಹಲಿ: ಭಾರತ ಮತ್ತು ಪಾಕ್​ ನಡುವೆ ಕಳೆದ ಎರಡು ದಿನಗಳಿಂದ ಏರ್ಪಟ್ಟಿದ್ದ ವಿಷಮ ಪರಿಸ್ಥಿತಿಯಿಂದಾಗಿ ಸ್ಥಗಿತಗೊಳಿಸಲಾಗಿದ್ದ ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆಗೆ ನಾಳೆ  ಮರುಚಾಲನೆ ನೀಡಲಾಗುವುದು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ.

ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯುಸೇನೆಯ ಪೈಲಟ್​ ಅಭಿನಂದನ್​ ಅವರನ್ನು ಪಾಕ್​ ಬಿಡುಗಡೆ ಮಾಡಿದ ಒಂದು ದಿನದ ನಂತರ ರೈಲ್ವೆ ಇಲಾಖೆ ಈ ಆದೇಶ ಹೊರಡಿಸಿದೆ. ಮೊದಲ ರೈಲು ಭಾರತದಿಂದ ಮಾರ್ಚ್​ 3ಕ್ಕೆ ಹೊರಡಲಿದೆ. ಫೆಬ್ರವರಿ 26ರಂದು ಭಾರತ ಪಾಕ್​ ಪ್ರದೇಶದ ಮೇಲೆ ವಾಯು ದಾಳಿ ನಡೆಸಿದ ನಂತರ ರೈಲು ಸೇವೆಯನ್ನು ರದ್ದು ಮಾಡಿತ್ತು. ಭಾರತ ಕೂಡ ಫೆಬ್ರವರಿ 28ರಂದು ಸಂಜೋತಾ ಎಕ್ಸ್​ಪ್ರೆಸ್​ ರೈಲು ಸೇವೆಯನ್ನು ರದ್ದು ಮಾಡಿತ್ತು.

ಇದನ್ನು ಓದಿ: ರೈಲ್ವೆ ನೇಮಕಾತಿ : ಪಿಯುಸಿ, ಪದವಿ ಉತ್ತೀರ್ಣರಾದವರಿಗೆ ಸುವರ್ಣ ಅವಕಾಶ

ರೈಲು ಸೇವೆ ನಾಳೆ ಮೊದಲು ಭಾರತ ಕಡೆಯಿಂದಲೇ ಆರಂಭಗೊಳ್ಳಲಿದೆ. ಸೋಮವಾರ ಪಾಕಿಸ್ತಾನದ ರೈಲು ಸೇವೆ ಲಾಹೋರ್​ನಿಂದ ಆರಂಭಗೊಳ್ಳಲಿದೆ. ಭಾರತದ ಕಡೆಯ ರೈಲು ದೆಹಲಿಯಿಂದ ಅಟ್ಟಾರಿಗೆ ಹಾಗೂ ಪಾಕಿಸ್ತಾನದ ಕಡೆಯಿಂದ ಲಾಹೋರ್​ನಿಂದ ವಾಘಾಗೆ ರೈಲು ಸೇವೆ ಪುನಾರಂಭಗೊಳ್ಳಲಿವೆ. ಲಾಹೋರ್​ನಿಂದ ಸೋಮವಾರ ಮತ್ತು ಗುರುವಾರ ರೈಲು ಹೊರಡಲಿದೆ.

1971ರಲ್ಲಿ ಎರಡು ದೇಶಗಳ ನಡುವೆ ನಡೆದ ಶಿಮ್ಲಾ ಒಪ್ಪಂದ ನಂತರ 1976ರ ಜುಲೈ 22ರಂದು ಎರಡು ದೇಶಗಳ ನಡುವೆ ಮೊದಲ ಬಾರಿಗೆ ಸಂಜೋತಾ ಎಕ್ಸ್​ಪ್ರೆಸ್ ರೈಲು ಸೇವೆ ಆರಂಭಿಸಲಾಗಿತ್ತು.

 

First published:March 2, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...