Samantha Naga Chaitanya Divorce: ನಾವು ಬೇರೆಯಾಗುತ್ತಿದ್ದೇವೆ ವಿಚ್ಛೇದನ ನಿಜ ಎಂದ ಸಮಂತಾ-ನಾಗ ಚೈತನ್ಯ

ಇದೇ ಮೊದಲ ಬಾರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಎದ್ದಿರುವ ಬಿರುಗಾಳಿಯ ಕುರಿತಾಗಿ ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ನಾಲ್ಕು ವರ್ಷ ತುಂಬುವ ಮೊದಲೇ ಈ ಜೋಡಿಯ ಮದುವೆ ಮುರಿದು ಬಿದ್ದಿದೆ.

ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ

ನಾಗಚೈತನ್ಯ ಹಾಗೂ ಸಮಂತಾ ಅಕ್ಕಿನೇನಿ

  • Share this:
ಕಳೆದ ಕೆಲ ಸಮಯದಿಂದ ಟಾಲಿವುಡ್​ನ ಸೆಲೆಬ್ರಿಟಿ ಕಪಲ್ ನಾಗ ಚೈತನ್ಯ (Naga Chaitanya) ಹಾಗೂ ಸಮಂತಾ ಅಕ್ಕಿನೇನಿ (Samanth Akkineni) ಅವರ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಿದೆ ಅನ್ನೋ ಸುದ್ದಿಗಳು ಸಾಕಷ್ಟು ಹರಿದಾಡಿದ್ದವು.ಈ ಕುರಿತಾಗಿ ಇಲ್ಲಿಯವರೆಗೆ ಸಮಂತಾ ಹಾಗೂ ನಾಗ ಚೈತನ್ಯ ಆಗಲಿ ಅಥವಾ ಅವರ ಕುಟುಂಬದವರಾಗಲಿ ಯಾರೂ ಮಾತನಾಡಿರಲಿಲ್ಲ. ಇನ್ನೂ ವಿಚ್ಛೇದನದ (Divorce) ವಿಷಯವನ್ನು ತಮ್ಮ ನಾಲ್ಕನೇ ವಿವಾಹವಾರ್ಷಿಕೋತ್ಸವದಂದು ಸಮಂತಾ  ಋತು ಪ್ರಭು ಅವರೇ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ನಟಿ ಸಮಂತಾ ಋತು ಪ್ರಭು  ಹಾಗೂ ನಾಗ ಚೈತನ್ಅಯ ಅವರು ತಮ್ಮ ವೈವಾಹಿಕ ಜೀವನದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. 

ಇದೇ ಮೊದಲ ಬಾರಿಗೆ ತಮ್ಮ ವೈವಾಹಿಕ ಜೀವನದಲ್ಲಿ ಎದ್ದಿರುವ ಬಿರುಗಾಳಿಯ ಕುರಿತಾಗಿ ನಟಿ ಸಮಂತಾ ಹಾಗೂ ನಾಗ ಚೈತನ್ಯ ಅವರು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ತಾನು ಹಾಗೂ ನಾಗ ಚೈತನ್ಯ ದೂರಾಗುವ ನಿರ್ಧಾರಕ್ಕೆ ಬಂದಿರುವುದಾಗಿ ಸಮಂತಾ ತಿಳಿಸಿದ್ದಾರೆ.


View this post on Instagram


A post shared by S (@samantharuthprabhuoffl)


ಅಂತೆಯೇ ಅಕ್ಕಿನೇನಿ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಸಹ ಪತ್ನಿ ಸಮಂತಾರಿಂದ ದೂರಾಗಲು ನಿರ್ಧರಿಸಿರುವ ವಿಷಯವನ್ನು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಹಬ್ಬಿದ್ದ ಗಾಳಿ ಸುದ್ದಿಗಳಿಗೆ ಬ್ರೇಕ್​ ಹಾಕಿರುವ ನಟಿ, ಈಗ ಅಧಿಕೃತವಾಗಿ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ತುಂಬಾ ಯೋಚನೆ ಮಾಡಿ ನಾನು ಮತ್ತು ಚೈತನ್ಯ ನಮ್ಮದೇ ಆದ ದಾರಿಗಳಲ್ಲಿ ಸಾಗಲು ತೀರ್ಮಾನಿಸಿದ್ದೇವೆ. 10ಕ್ಕೂ ವರ್ಷಗಳ ನಮ್ಮ ಗೆಳೆತನ ನಂತರ ಮದುವೆ, ನಾವು ಪ್ರತ್ಯೇಕವಾದರೂ ಒಂದು ಅವಿನಾಭಾವ ಸಂಬಂಧ ಇದ್ದೇ ಇರುತ್ತೆ. ನಮ್ಮ ಕಷ್ಟದ ಸಮಯದಲ್ಲಿ ನಮಗೆ ಜೊತೆಯಾಗಿರಿ ಎಂದು ಪೋಸ್ಟ್​ ಮಾಡಿದ್ದಾರೆ.

ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು...

2017ರ ಅಕ್ಟೋಬರ್ 7ರಂದು ಗೋವಾದಲ್ಲಿ ಈ ಜೋಡಿಯ ಮದುವೆಯಾಗಿತ್ತು. ಅಕ್ಟೋಬರ್ 7ರಂದು ಈ ಜೋಡಿ ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಿತ್ತು. ಸಮಂತಾ ಅಕ್ಕಿನೇನಿ ಕಳೆದ ಕೆಲ ಸಮಯದಿಂದ ಪತಿ ನಾಗ ಚೈತನ್ಯ ಹಾಗೂ ಅವರ ಕುಟುಂಬದವರ ಜೊತೆ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅಲ್ಲದೆ ಪತಿಯ ಸಿನಿಮಾ ಲವ್ ಸ್ಟೋರಿ ಕಾರ್ಯಕ್ರಮಗಳಲ್ಲೂ ಗೈರಾಗಿದ್ದರು. ನಾಗಾರ್ಜುನ ಅವರ ಹುಟ್ಟುಹಬ್ಬ, ಅಮೀರ್ ಖಾನ್​ ಜತೆಗಿನ ಡಿನ್ನರ್ ಪಾರ್ಟಿ ಹೀಗೆ ಸಾಲು ಸಾಲು ಕಾರ್ಯಕ್ರಮಗಳಲ್ಲಿ ಸಮಂತಾ ಕಾಣಿಸಿಕೊಂಡಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅಕ್ಕಿನೇನಿ ಹೆಸರನ್ನು ತೆಗೆದಿದ್ದ ಸಮಂತಾ...

ಕೆಲ ಸಮಯದ ಹಿಂದೆ ಸಮಂತಾ ಅಕ್ಕಿನೇನಿ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ತಮ್ಮ ಹೆಸರಿನ ಜೊತೆ ಸೇರಿಸಿಕೊಂಡಿದ್ದ ಪತಿ ನಾಗ ಚೈತನ್ಯ ಅವರ ಕುಟುಂಬದ ಹೆಸರು ಅಕ್ಕಿನೇನಿ ಅನ್ನು ತೆಗೆದು ಹಾಕಿದರು. ಇಲ್ಲಿಂದಲೇ ಸಮಂತಾ ಹಾಗೂ ನಾಗ ಚೈತನ್ಯ ಅವರ ವೈವಾಹಿಕ ಜೀವನದ ಕುರಿತಾಗಿ ಗುಸು ಗುಸು ಆರಂಭವಾಗಿದ್ದು. ಸಮಂತಾ ಅಕ್ಕಿನೇನಿ ಹಾಗೂ ನಾಗ ಚೈತನ್ಯ ಅವರ ವೈವಾಹಿಕ ಜೀವನದಲ್ಲಿ ಏನೂ ಸರಿಯಾಗಿಲ್ಲ. ಅವರ ಸಂಬಂಧದಲ್ಲಿ ಬಿರುಕು ಮೂಡಿದ್ದು, ದೂರಾಗಿದ್ದಾರೆ ಅನ್ನೋ ಸುದ್ದಿಗಳು ಹರಿದಾಡಲಾರಂಭಿಸಿದವು.

ಇದನ್ನೂ ಓದಿ: ಗಾಳಿ ಸುದ್ದಿಗೆ ಬ್ರೇಕ್​ ಹಾಕಿದ Samantha Akkineni: ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ..!

ಅಲ್ಲದೆ, ನಾಗ ಚೈತನ್ಯ ತಮ್ಮ ಅಪ್ಪನ ಮನೆಗೆ ಹೋಗಿದ್ದಾರೆ. ಸಮಂತಾ ಅವರೂ ಮುಂಬೈಗೆ ಶಿಫ್ಟ್​ ಆಗಲಿದ್ದಾರೆ ಎಂದೂ ಹೇಳಲಾಗುತ್ತಿತ್ತು. ಇನ್ನು ಮುಂಬೈಗೆ ಶಿಫ್ಟ್​ ಆಗುವ ವಿಷಯಕ್ಕೆ ಸಂಬಂಧಿಸಿದಂತೆ ಸಮಂತಾ ಇತ್ತೀಚೆಗಷ್ಟೆ ಪ್ರತಿಕ್ರಿಯೆ ಕೊಟ್ಟಿದ್ದರು. ನಾನು ಹೈದರಾಬಾದಿನಲ್ಲಿ ಖುಷಿಯಾಗಿದ್ದೇನೆ. ಇದು ನನ್ನ ಮನೆ. ನಾನು ಮುಂಬೈಗೆ ಶಿಫ್ಟ್​ ಆಗೋಲ್ಲ ಎಂದಿದ್ದರು.

ವಿಚ್ಛೇದನದ ನಿರ್ಧಾರಕ್ಕೆ ಕಾರಣವಾಯ್ತಾ ಆ ಪಾತ್ರ...

ಇನ್ನು ಫ್ಯಾಮಿಲಿ ಮ್ಯಾನ್​ 2 ವೆಬ್​ ಸರಣಿಯಲ್ಲಿ ಸಮಂತಾ ಅಕ್ಕಿನೇನಿ ಅವರು ಕೊಂಚ ಬೋಲ್ಡ್​ ಆಗಿ ನಟಿಸಿದ್ದೇ ಅವರ ವೈವಾಹಿಕ ಜೀವನದಲ್ಲಿ ಬಿರುಕುಂಟಾಗಲು ಕಾರಣ ಎಂದು ಹೇಳಲಾಗುತ್ತಿದೆ. ಸಮಂತಾ ಅವರ ಬೋಲ್ಟ್​ ಲುಕ್​ನಿಂದಾಗಿ ಮನೆಯಲ್ಲಿ ಕೊಂಚ ಅಸಮಾಧಾನ ವಿದ್ದು, ಈ ವಿಷಯವಾಗಿ ಮಾತುಕತೆ ನಡೆದು ಮನಸ್ತಾಪ ಆಗಿದೆ ಎನ್ನಲಾಗಿದೆ.
Published by:Anitha E
First published: