ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ಅರವಿಂದ್​ ಕುಮಾರ್​, RAW ಮುಖ್ಯಸ್ಥರಾಗಿ ಸಮಂತ್​ ಗೋಯೆಲ್​ ನೇಮಕ

ಬಾಲಕೋಟ್​ ವಾಯುದಾಳಿ ಮಾಸ್ಟರ್​ ಮೈಂಡ್​ ರಾ ಮುಖ್ಯಸ್ಥನನ್ನಾಗಿ ಹಾಗೂ ಕಾಶ್ಮೀರಿ ತಜ್ಞ ಗುಪ್ತಚರ ಇಲಾಖೆ ಮುಖ್ಯಸ್ಥನನ್ನಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

Seema.R | news18
Updated:June 26, 2019, 2:31 PM IST
ಗುಪ್ತಚರ ಇಲಾಖೆ ಮುಖ್ಯಸ್ಥರಾಗಿ ಅರವಿಂದ್​ ಕುಮಾರ್​, RAW ಮುಖ್ಯಸ್ಥರಾಗಿ ಸಮಂತ್​ ಗೋಯೆಲ್​ ನೇಮಕ
ರಾ ಮುಖ್ಯಸ್ಥ ಸುಮಂತ್​ ಗೋಯೆಲ್​
  • News18
  • Last Updated: June 26, 2019, 2:31 PM IST
  • Share this:
ನವದೆಹಲಿ (ಜೂ.26): ಗುಪ್ತಚರ ಇಲಾಖೆ(IB) ಮುಖ್ಯಸ್ಥರನ್ನಾಗಿ ಅರವಿಂದ್​ ಕುಮಾರ್​ ಹಾಗೂ ರಿಸರ್ಚ್​ ಅಂಡ್​ ಅನಾಲಿಸಿಸ್​ ವಿಂಗ್​ (RAW) ಮುಖ್ಯಸ್ಥರನ್ನಾಗಿ ಸಮಂತ್​ ಗೋಯೆಲ್​​ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಮಿತಿ 1984ರ ಬ್ಯಾಂಚಿನ ಐಪಿಎಸ್​ ಅಧಿಕಾರಿಗಳನ್ನು ಈ ಹುದ್ದೆಗೆ ನೇಮಕ ಮಾಡಿ ಆದೇಶ ಪ್ರಕಟಿಸಲಾಗಿದೆ. ಗುಪ್ತಚರ ಇಲಾಖೆ ಅಧಿಕಾರಿ ರಾಜೀವ್​  ಜೈನ್​ ಸ್ಥಾನಕ್ಕೆ ಅರವಿಂದ್​ ಕುಮಾರ್​ ಹಾಗೂ ರಾ ಮುಖ್ಯಸ್ಥ ಅನಿಲ್​ ಧಾಸ್​ಮನ ಸ್ಥಾನಕ್ಕೆ ಸಮಂತ್​ ಗೋಯೆಲ್​ ಅವರನ್ನು ನೇಮಕ ಮಾಡಲಾಗಿದೆ. ರಾ ಸಂಸ್ಥೆಯು ದೇಶದ ಭದ್ರತೆ ದೃಷ್ಟಿಯಿಂದ ಹೊರ ದೇಶಗಳಲ್ಲಿ ಗೂಢಚಾರಿಕೆ ನಡೆಸುತ್ತದೆ.

ಅರವಿಂದ್ ಕುಮಾರ್​ ಅವರು ಅಸ್ಸಾಂ-ಮೇಘಾಲಯ ಕೇಡರ್​ ಅಧಿಕಾರಿಯಾಗಿದ್ದರೆ, ಗೋಯೆಲ್​ ಅವರು ಪಂಜಾಬ್​ ಕೇಡರ್​ ಅಧಿಕಾರಿಯಾಗಿದ್ದಾರೆ.  ಈ ತಿಂಗಳ ಕೊನೆಯಲ್ಲಿ ಈ ಇಬ್ಬರು ಅಧಿಕಾರಿಗಳು ತಮ್ಮ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಇದನ್ನು ಓದಿ: ಇನ್ಮುಂದೆ ಮಕ್ಕಳೇ ಬೇಡ ಎಂದು ನಿರ್ಧರಿಸಿದ ಬ್ರಿಟಿಷ್​ ತಾಯಂದಿರು; ಕಾರಣ ಗೊತ್ತಾ?

ಗೋಯೆಲ್​, 2019ರ ಫೆಬ್ರವರಿಯಲ್ಲಿ ನಡೆದ ಬಾಲಕೋಟ್​ ವಾಯುದಾಳಿ ಮತ್ತು 2016ರ ಸರ್ಜಿಕಲ್​ ಸ್ಟ್ರೈಕ್​ ಮುಂದಾಳತ್ವವಹಿಸಿದ್ದರು. ಎನ್​ಡಿಎ ಸರ್ಕಾರದ ಅವಧಿಯಲ್ಲಿ ಉಗ್ರರ ವಿರುದ್ಧ ನಡೆದ ಈ ಎರಡು ದಾಳಿಗಳು ಎನ್​ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾರಣವಾಗಿತ್ತು.

ಎಡಪಂಥೀಯ ಉಗ್ರವಾದ ವಿರುದ್ಧದ ಕಾರ್ಯಾಚರಣೆಯಲ್ಲಿ ಅರವಿಂದ್​ ಕುಮಾರ್​ ತೊಡಗಿಸಿಕೊಂಡಿದ್ದರು. ಹಾಗೆಯೇ ಅವರು ಕಾಶ್ಮೀರದಲ್ಲಿ ಭಯೋತ್ಪಾದನೆ ವಿಚಾರದಲ್ಲೂ ತಜ್ಞರೆನಿಸಿಕೊಂಡಿದ್ದಾರೆ. ಹೀಗಾಗಿ, ಅರವಿಂದ್ ಕುಮಾರ್ ಅವರು ರಾ ಮುಖ್ಯಸ್ಥರಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.

ಇದೀಗ ಎರಡು ಗುಪ್ತಚರ ಸಂಸ್ಥೆಗಳ ಮುಖ್ಯಸ್ಥರ ನೇಮಕವಾದ ಬಳಿಕ ಭಾರತೀಯ ಸೇನಾ ಮುಖ್ಯಸ್ಥರ ನೇಮಕಾತಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈಗಿನ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಅವಧಿ ಇದೇ ವರ್ಷದ ಕೊನೆಯಲ್ಲಿ ಅಂತ್ಯವಾಗುತ್ತದೆ.
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading