• Home
  • »
  • News
  • »
  • national-international
  • »
  • Turkish Restaurant: ಹಿಂದೆ-ಮುಂದೆ ಯೋಚಿಸದೆ ಈ ರೆಸ್ಟೊರೆಂಟ್​ಗೆ ಕಾಲಿಟ್ಟರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಂಡಿತ..!

Turkish Restaurant: ಹಿಂದೆ-ಮುಂದೆ ಯೋಚಿಸದೆ ಈ ರೆಸ್ಟೊರೆಂಟ್​ಗೆ ಕಾಲಿಟ್ಟರೆ ನಿಮ್ಮ ಜೇಬಿಗೆ ಕತ್ತರಿ ಬೀಳೋದು ಖಂಡಿತ..!

ರೆಸ್ಟೋರೆಂಟ್‍ನ ದುಬಾರಿ ಬಿಲ್‍ನಿಂದಾಗಿ ಟ್ರೋಲ್​ ಆಗುತ್ತಿರುವ ಶೆಫ್​ ಗೋಪ್ಚೆ

ರೆಸ್ಟೋರೆಂಟ್‍ನ ದುಬಾರಿ ಬಿಲ್‍ನಿಂದಾಗಿ ಟ್ರೋಲ್​ ಆಗುತ್ತಿರುವ ಶೆಫ್​ ಗೋಪ್ಚೆ

ಸಾಲ್ಟ್ ಬೇ ಎಂಬ ಹೆಸರಿನಿಂದ ಖ್ಯಾತರಾಗಿರುವ ಟರ್ಕಿಯ ಹೆಸರಾಂತ ಶೆಫ್ ನುಸ್ರೆತ್ ಗೊಪ್ಚೆ ಅವರ ರೆಸ್ಟೊರೆಂಟ್ ಲಂಡನ್‍ನ ನೈಟ್ಸ್ ಬ್ರಿಡ್ಜ್‍ನ ಪಾರ್ಕ್ ಟವರ್ ಹೊಟೇಲ್‍ನಲ್ಲಿದೆ. ಆ ಹೊಸ ರೆಸ್ಟೊರೆಂಟ್‍ಗೆ ಭೇಟಿ ನೀಡಿದ ಗ್ರಾಹಕರೊಬ್ಬರು , ಅಲ್ಲಿನ ಬಿಲ್‍ನ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಮುಂದೆ ಓದಿ ...
  • Share this:

ಸಾಲ್ಟ್ ಬೇ ಎಂಬ ಹೆಸರಿನಿಂದ ಖ್ಯಾತರಾಗಿರುವ ಟರ್ಕಿಯ ಹೆಸರಾಂತ ಶೆಫ್ ನುಸ್ರೆತ್ ಗೋಪ್ಚೆ , ಲಂಡನ್‍ನಲ್ಲಿ ತಮ್ಮ ರೆಸ್ಟೊರೆಂಟ್‍ನ 15 ನೇ ಶಾಖೆಯನ್ನು ತೆರೆದಿದ್ದಾರೆ. ಅಡುಗೆ ಮಾತ್ರವಲ್ಲದೇ ತಮ್ಮ ವಿಭಿನ್ನ ಸ್ಟೈಲ್‍ನಿಂದಲೂ ಖ್ಯಾತರಾಗಿರುವ 38 ವರ್ಷದ ಗೊಪ್ಚೆ ವಿಶ್ವದಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಇದೀಗ, ಲಂಡನ್‍ನಲ್ಲಿ ಆರಂಭವಾಗಿರುವ ನುಸ್ರೆತ್ ಗೊಪ್ಚೆಯ ರೆಸ್ಟೊರೆಂಟ್‍ನ ಮೆನುವಿನಲ್ಲಿ ಇರುವ ಖಾದ್ಯಗಳ ದರಗಳನ್ನು ನೋಡಿ ಆತನ ಬಹಳಷ್ಟು ಅಭಿಮಾನಿಗಳು ದಂಗಾಗಿದ್ದು, ಕೆಲವರು ಅಸಮಾಧಾನ ಕೂಡ ವ್ಯಕ್ತಪಡಿಸಿದ್ದಾರೆ. ತನ್ನ ರೆಸ್ಟೋರೆಂಟ್‍ನ ದುಬಾರಿ ಬಿಲ್‍ನಿಂದಾಗಿ ಗೋಪ್ಚೆ ಟ್ರೋಲ್ ಆಗುತ್ತಿದ್ದಾರೆ.


ಗೋಪ್ಚೆ ಅವರ ಹೊಸ ರೆಸ್ಟೊರೆಂಟ್ ಲಂಡನ್‍ನ ನೈಟ್ಸ್ ಬ್ರಿಡ್ಜ್‍ನ ಪಾರ್ಕ್ ಟವರ್​​ನಲ್ಲಿದೆ. ಆ ಹೊಸ ರೆಸ್ಟೊರೆಂಟ್‍ಗೆ ಭೇಟಿ ನೀಡಿದ ಗ್ರಾಹಕರೊಬ್ಬರು, ಅಲ್ಲಿನ ಬಿಲ್‍ನ ಫೋಟೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.@Omnimojo ಎಂಬ ಟ್ವಿಟ್ಟರ್ ಬಳಕೆದಾರ ಆ ಬಿಲ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅವರು ಆ ಫೋಟೋವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೆ, “ ಲಂಡನ್‍ನಲ್ಲಿ ಇರುವ ರೆಸ್ಟೊರೆಂಟ್‍ಗೆ ಹೋಗುವುದಕ್ಕಿಂತ, ವಿಮಾನದಲ್ಲಿ ಟರ್ಕಿಗೆ ಹೋಗಿ ಮತ್ತು ಅಲ್ಲಿನ ಸಾಲ್ಟ್ ಬೇ ಯ ರೆಸ್ಟೊರೆಂಟ್‍ನಲ್ಲಿ ಊಟ ಮಾಡುವುದು ಅಗ್ಗವಾಗಿದೆ. ಕೋಕ್‍ಗೆ 9 ಪೌಂಡ್ ಮತ್ತು Tomahawk steakಗೆ 630 ಪೌಂಡ್, ಬೇಡ, ಧನ್ಯವಾದಗಳು” ಎಂದು ಕೂಡ ಬರೆದಿದ್ದಾರೆ.


ಇದನ್ನೂ ಓದಿ:ಕೂಲ್​ ಡ್ರಿಂಕ್ಸ್​ ಬಳಸಿ ಆಮ್ಲೆಟ್​ ಮಾಡಿದ ವಿಡಿಯೋ ವೈರಲ್‌: ಟ್ವಿಟ್ಟರ್‌ನಲ್ಲಿ ನೆಟ್ಟಿಗರ ಪ್ರತಿಕ್ರಿಯೆ ಹೀಗಿದೆ..!


ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೆ ಆಗುತ್ತಲೇ, ನೆಟ್ಟಿಗರು ಆ ರೆಸ್ಟೊರೆಂಟ್ ದರಗಳನ್ನು ಟೀಕಿಸಲು ಆರಂಭಿಸಿದ್ದು, ತಮ್ಮ ಪ್ರತಿಕ್ರಿಯೆಗಳನ್ನು ನೀಡಲು ಆರಂಭಿಸಿದ್ದಾರೆ. ಶೆಫ್ ಗೋಪ್ಚೆ ಅವರ ಜನಪ್ರಿಯ 24 ಕ್ಯಾರೆಟ್ ಚಿನ್ನದ Tomahawk steak ದರದ ಕುರಿತು ಕೂಡ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.ನುಸ್ರತ್ ಅವರ ಹೊಸ ರೆಸ್ಟೊರೆಂಟ್‍ನ ರಸೀದಿಯ ಪ್ರಕಾರ, ಒಂದು ಗೋಲ್ಡನ್ ಬರ್ಗರ್​ನ ಬೆಲೆ 100 ಪೌಂಡ್. ಅದನ್ನು ಕಂಡು ಕೂತೂಹಲಗೊಂಡ ಜನರು ರೆಸ್ಟೊರೆಂಟ್‍ನ ಮೆನು ಕಾರ್ಡ್‍ಗಾಗಿ ಅದರ ವೆಬ್‍ಸೈಟ್‍ನಲ್ಲಿ ಹುಡುಕಾಡಿದರು. ಆದರೆ ಅದು ವೆಬ್‍ಸೈಟ್‍ನಲ್ಲಿ ಇರಲಿಲ್ಲ. ಆ ರೆಸ್ಟೊರೆಂಟ್‍ನಲ್ಲಿ ಭಾರೀ ಗಾತ್ರ Tomahawkಗೆ 630 ಪೌಂಡ್, ನುಸ್ರೆತ್ ಸಲಾಡ್‍ಗೆ 23 ಪೌಂಡ್, ಎರಡು ಪ್ರಾವ್ನ್ ಟೆಂಪುರಾ ರೋಲ್‍ಗಳಿಗೆ 60 ಪೌಂಡ್ ದರವಿದೆ. ಅದೃಷ್ಟವಶಾತ್, ಚಹಾ ಉಚಿತವಾಗಿ ಸಿಗುತ್ತದೆಯಂತೆ.


ಇದನ್ನೂ ಓದಿ: ದುಬೈನ ಭಾರತೀಯ ರೆಸ್ಟೋರೆಂಟ್​ನಲ್ಲಿ ಸಿಗುತ್ತೆ ವಿಶ್ವದ ಅತ್ಯಂತ ದುಬಾರಿ ಬಿರಿಯಾನಿ..! ಇದರ ಬೆಲೆ ಎಷ್ಟು ಗೊತ್ತಾ..?


ಟ್ವಿಟ್ಟರ್ ಒಂದಷ್ಟು ಪ್ರತಿಕ್ರಿಯೆಗಳು ಈ ಕೆಳಗಿನಂತಿವೆ:


“ನಾಲ್ಕು ರೆಡ್‍ಬುಲ್‍ಗಳಿಗೆ 44 ಪೌಂಡ್??? ಸಾಲ್ಟ್ ಬೇ ಸರಿಯಾಗಿದ್ದಾರಾ. . .” ಎಂದು ಒಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು, “ಇಂಟರ್ನೆಟ್ ಪ್ರಚಾರದ ಮೂಲಕ ಒಂದು ಇಡೀ ಬ್ರಾಂಡ್ ಮತ್ತು ಅದರ ಶಾಖೆಗಳನ್ನ ಆರಂಭಿಸಿದ ಒಬ್ಬ ವ್ಯಕ್ತಿ ರೆಡ್‍ಬುಲ್‍ಗೆ ತನ್ನ ಗ್ರಾಹಕರಿಗೆ 11 ಪೌಂಡ್ ನಿಗದಿ ಪಡಿಸಿದ್ದಾನೆ. ನನಗೆ ಶಾಕ್ ಆಗಿದೆ..! “ ಎಂದು ಬರೆದುಕೊಂಡಿದ್ದಾರೆ.
ಈ ಮೊದಲು 2017 ರಲ್ಲಿ ನುಸ್ರತ್ ಗೋಪ್ಚೆ, ಅವರ ಸಾಲ್ಟ್ ಬೇ ಎಂಬ ಹೆಸರಿನ ಮೀಮ್ ತುಂಬಾ ವೈರಲ್ ಆಗಿತ್ತು. ಆತ ಮಾಂಸದ ತುಂಡಿನ ಮೇಲೆ ವಿವಿಧ ರೀತಿಯಲ್ಲಿ ಎತ್ತರದಿಂದ ಉಪ್ಪನ್ನು ಉದುರಿಸುವ ಫೋಟೋಗಳನ್ನು ಅದು ಹೊಂದಿತ್ತು. ಆ ಮಿಮ್ ಕಾರಣದಿಂದಾಗಿ ಗೋಪ್ಚೆ ರಾತೋರಾತ್ರಿ ಪ್ರಸಿದ್ಧರಾಗಿ ಬಿಟ್ಟಿದ್ದರು.

Published by:Anitha E
First published: