ಕೇವಲ 74 ರೂ.ಗೆ ಸಲೂನ್ ಮಾರಿದ ಮಾಲೀಕ! ಖರೀದಿಸಿದ್ದು ಯಾರು ಗೊತ್ತಾ?

ಹೇರ್ ಸೆಲೂನ್​ನ  ಹೊಸ ಮಾಲೀಕರಾದ ಕ್ಯಾಥಿ ಮೌರಾ ಅವರು ಅಂಗಡಿಯ ಬಾಡಿಗೆಯನ್ನು ಕಟ್ಟಬೇಕು. ಆದರೆ ಒಂದು ಲಾಭದ ವಿಷಯ ಏನೆಂದರೆ ಅಂಗಡಿಯಲ್ಲಿರುವಂತಹ ಎಲ್ಲಾ ಸಾಮಾನುಗಳು ಉಚಿತವಾಗಿ ಬಂದಿದ್ದು, ಯಾವುದೇ ಸಾಮಾನುಗಳನ್ನು ಹೊಸದಾಗಿ ತೆಗೆದುಕೊಳ್ಳಲು ಹೋದರೆ ತುಂಬಾ ಹಣವನ್ನು ಖರ್ಚು ಮಾಡಬೇಕಾಗುತ್ತಿತ್ತು.

Salon

Salon

  • Share this:
ತಾವು ಕೆಲಸ ಮಾಡುತ್ತಿರುವ ಅಂಗಡಿ ಅಥವಾ ಕಂಪೆನಿಯಲ್ಲಿ ಒಂದು ದಿನ ಅದೇ ಅಂಗಡಿ ಅಥವಾ ಕಂಪನಿಯ ಮಾಲೀಕರಾಗುವಂತಹ ಅದೃಷ್ಟ ಎಷ್ಟು ಜನರಿಗೆ ಸಿಗುತ್ತದೆ. ಇಂತಹದೇ ಅದೃಷ್ಟ ಇಲ್ಲೊಬ್ಬರಿಗೆ ಬಂದಿದ್ದು, ಮಾಲೀಕರಾದವರು ತಮ್ಮ ನೆಚ್ಚಿನ ಕೆಲಸಗಾರರೊಬ್ಬರಿಗೆ ಹೇರ್ ಸೆಲೂನ್ ಅಂಗಡಿಯನ್ನು ಕೇವಲ ಒಂದು ಡಾಲರ್ಗೆ ಮಾರಿ ಹೋಗಿದ್ದಾರೆ. ಹೌದು, ಯುಎಸ್​​ನಲ್ಲಿರುವ ಕನೆಕ್ಟಿಕಟ್ ನಗರದಲ್ಲಿರುವ ದಿ ಪಿಯೋ ಆಫ್ ಇಟಲಿ ಹೇರ್ ಸ್ಟುಡಿಯೋ ಎಂಬ ಹೇರ್ ಸಲೂನ್ ಅಂಗಡಿಯನ್ನು ಮಾಲೀಕರು ಆದಂತಹ ಪಿಯೋ ಇಂಪೇರಾಟಿ ತನ್ನ ಅಂಗಡಿಯಲ್ಲೇ 15 ವರ್ಷಗಳ ಹಿಂದೆ ಕೆಲಸಕ್ಕೆ ಸೇರಿದ ಕ್ಯಾಥಿ ಮೌರಾ ಎನ್ನುವ ಹೇರ್ ಸ್ಟೈಲಿಸ್ಟ್‌ಗೆ ಕೇವಲ ಒಂದೇ ಒಂದು ಡಾಲರ್​ಗೆ ತನ್ನ ಅಂಗಡಿಯನ್ನು ಮಾರಿದ್ದು, ನಿಜಕ್ಕೂ ಒಂದು ವಿಶಿಷ್ಟವಾದ ಘಟನೆಯಾಗಿದೆ. ಯಾರಿಗೆ ತಾನೇ ತಾನು ಕೆಲಸ ಮಾಡಿದ ಅಂಗಡಿಯ ಮಾಲೀಕರಾಗುವ ಅವಕಾಶ ದೊರೆಯುತ್ತದೆ ಹೇಳಿ, ಈ ವಿಷಯದಲ್ಲಿ ಕ್ಯಾಥಿ ಮೌರಾ ತುಂಬಾ ಅದೃಷ್ಟವಂತೆ ಎಂದರೆ ಅತಿಶಯೋಕ್ತಿಯಲ್ಲ.


ಹೇರ್ ಸೆಲೂನ್​ನ  ಹೊಸ ಮಾಲೀಕರಾದ ಕ್ಯಾಥಿ ಮೌರಾ ಅವರು ಅಂಗಡಿಯ ಬಾಡಿಗೆಯನ್ನು ಕಟ್ಟಬೇಕು. ಆದರೆ ಒಂದು ಲಾಭದ ವಿಷಯ ಏನೆಂದರೆ ಅಂಗಡಿಯಲ್ಲಿರುವಂತಹ ಎಲ್ಲಾ ಸಾಮಾನುಗಳು ಉಚಿತವಾಗಿ ಬಂದಿದ್ದು, ಯಾವುದೇ ಸಾಮಾನುಗಳನ್ನು ಹೊಸದಾಗಿ ತೆಗೆದುಕೊಳ್ಳಲು ಹೋದರೆ ತುಂಬಾ ಹಣವನ್ನು ಖರ್ಚು ಮಾಡಬೇಕಾಗುತ್ತಿತ್ತು.


15 ವರ್ಷಗಳ ಹಿಂದೆ ತನ್ನ ಪದವಿ ವ್ಯಾಸಂಗವನ್ನು ಮುಗಿಸಿ ಕೆಲಸಕ್ಕೆ ಅಲೆದಾಡುತ್ತಿದ್ದಾಗ ಕ್ಯಾಥಿ ಮೌರಾ ಶಿಕ್ಷಕರೊಬ್ಬರ ಬಳಿ ಹೋಗಿ ನನಗೆ ಯಾರು ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಏಕೆಂದರೆ ಮೊದಲು ಎಲ್ಲಿಯೂ ಕೆಲಸ ಮಾಡಿ ಅನುಭವವಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಳು.


ನಂತರ ಶಿಕ್ಷಕರೊಬ್ಬರು ಪಿಯೋ ಇಂಪೇರಾಟಿ ಅವರ ಫೋನ್ ನಂಬರ್ ಕೊಟ್ಟಿದ್ದು ಸಂಪರ್ಕಿಸಲು ಹೇಳಿದ್ದರು. ಆಗ ದಿ ಪಿಯೋ ಆಫ್ ಇಟಲಿ ಹೇರ್ ಸ್ಟುಡಿಯೋದಲ್ಲಿ ನನಗೆ ಕೆಲಸ ನೀಡಿದ್ದರು. ಅನಂತರ ಪಿಯೋ ನನ್ನನ್ನು ಅವರ ಸ್ವಂತ ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದು, ಯಾರೇ ಸೆಲೂನ್ಗೆ ಬಂದರೆ ತುಂಬಾ ಗೌರವದಿಂದ ಕಾಣಲಾಗುತ್ತಿತ್ತು, ಎಂದು ಕ್ಯಾಥಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.


ಪಿಯೋ ಹೇರ್ ಸ್ಟುಡಿಯೋದಲ್ಲಿ ಕೆಲಸ ಮಾಡುವಂತಹ ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದು, ಸಾಮಾನ್ಯ ಕೆಲಸಗಾರರನ್ನು ಉತ್ತಮ ಗುಣಮಟ್ಟ ಹೊಂದಿರುವಂತಹ ಕೆಲಸಗಾರನಾಗಿ ಮಾಡಿದ್ದಾರೆ ಮತ್ತು ಒಂದು ಕುಟುಂಬದವರಂತೆ ಬೆಳೆದು ಬಂದಿದ್ದೇವೆ ಎಂದು ಕ್ಯಾಥಿ ಹೇಳುತ್ತಾರೆ.


75 ವರ್ಷದ ಪಿಯೋ ತಮ್ಮ ಹೇರ್ ಸ್ಟುಡಿಯೋವನ್ನು ಯಾರಿಗಾದರೂ ಒಬ್ಬ ಉತ್ತಮ ಕೆಲಸಗಾರರಿಗೆ ಮಾರಬೇಕೆಂದು ಯೋಚನೆ ಮಾಡುತ್ತಿದ್ದಾಗ, ತಮ್ಮ ಅಂಗಡಿಯಲ್ಲಿಯೇ 15 ವರ್ಷದಿಂದ ಕೆಲಸ ಮಾಡುತ್ತಿರುವಂತಹ ಕ್ಯಾಥಿ ಮೌರಾ ಅವರಿಗೆ ಅತಿ ಕಡಿಮೆ ಬೆಲೆಗೆ ತಮ್ಮ ದಿ ಪಿಯೋ ಆಫ್ ಇಟಲಿ ಹೇರ್ ಸ್ಟುಡಿಯೋ ಮಾರಿದ್ದಾರೆ. ಕ್ಯಾಥಿ ಮೌರಾ ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿದ್ದು ಒಳ್ಳೆಯ ಹೇರ್ ಡ್ರೆಸ್ಸರ್ ಆಗಿದ್ದಾರೆ. ದಿ ಪಿಯೋ ಆಫ್ ಇಟಲಿ ಹೇರ್ ಸ್ಟುಡಿಯೋವನ್ನು ಒಬ್ಬ ಒಳ್ಳೆಯ ಕೆಲಸಗಾರರಿಗೆ ನೀಡಬೇಕು ಎನ್ನುವ ನನ್ನ ಬಹುದಿನದ ಕನಸು ಈಗ ನನಸಾಗಿದೆ ಎಂದು ತಮ್ಮ ಮನದಾಳದ ಮಾತನ್ನು ಪಿಯೋ ಇಂಪೇರಾಟಿ ಹೇಳಿದ್ದಾರೆ.

First published: