HOME » NEWS » National-international » SALDA LAKE IN TURKEY MAY YIELD ANSWERS ON LIFE ON MARS SNVS

Life in Mars - ಟರ್ಕಿ ದೇಶದ ಈ ಸರೋವರದಲ್ಲಿದೆಯಾ ಮಂಗಳ ಗ್ರಹದ ಜೀವರಹಸ್ಯ?

ಜೀವ ಸೃಷ್ಟಿಗೆ ಬೇಕಾದ ವಾತಾವರಣ ನಿರ್ಮಾಣಕ್ಕೆ ಕಾರಣವಾಗುವ ಸೂಕ್ಷ್ಮಜೀವಿಗಳ ಪಾಚಿಯಿಂದ ನಿರ್ಮಾಣವಾಗಿರುವ ಶಿಲೆಯೊಂದು ಸಾಲ್ಡಾ ಸರೋವರದಲ್ಲಿ ಪತ್ತೆಯಾಗಿದೆ. ಮಂಗಳ ಗ್ರಹದಲ್ಲೂ ಇದೇ ಮಾದರಿಯ ಖನಿಜ ಇರುವ ಸುಳಿವಿದೆ. ಇದರಿಂದ ಸಾಕಷ್ಟು ಕುತೂಹಲ ಗರಿಗೆದರಿದೆ.

Vijayasarthy SN | news18
Updated:August 2, 2020, 11:13 AM IST
Life in Mars - ಟರ್ಕಿ ದೇಶದ ಈ ಸರೋವರದಲ್ಲಿದೆಯಾ ಮಂಗಳ ಗ್ರಹದ ಜೀವರಹಸ್ಯ?
ಮಂಗಳ ಗ್ರಹದ ಜೆಜೆರೋ ಕುಳಿ ಮತ್ತು ಟರ್ಕಿಯ ಸಾಲ್ಡಾ ಸರೋವರ
  • News18
  • Last Updated: August 2, 2020, 11:13 AM IST
  • Share this:
ಟರ್ಕಿ: ಮಂಗಳ ಗ್ರಹದ ಬಗ್ಗೆ ಮಾನವನ ಕುತೂಹಲದ ಶೋಧ ನಿರಂತರವಾಗಿ ನಡೆದಿದೆ. ಇದೀಗ ಈ ನಿಟ್ಟಿನಲ್ಲಿ ಆಸಕ್ತಿ ಹೆಚ್ಚಿಸುವ ವಿಚಾರವೊಂದು ಬೆಳಕಿಗೆ ಬಂದಿದೆ. ಮಾರ್ಸ್ ಜೀವರಹಸ್ಯ ಬಗ್ಗೆ ಬೆಳಕು ಚೆಲ್ಲಬಲ್ಲಂಥ ಸರೋವರವೊಂದು ಟರ್ಕಿ ದೇಶದಲ್ಲಿದೆ. ಟರ್ಕಿಯ ಬುರ್ದೂರ್ ಪ್ರಾಂತ್ಯದಲ್ಲಿರುವ ಹಲವು ಸರೋವರಗಳ ಪೈಕಿ ಸಾಲ್ಡಾ ಕೆರೆ ಬಹಳ ಗಮನ ಸೆಳೆದಿದೆ. ಮಾರ್ಸ್ ಗ್ರಹದಲ್ಲಿ ಪತ್ತೆಯಾಗಿರುವ ಜೆಜೋರೊ (Jezero Crater) ಹೆಸರಿನ ಬೃಹತ್ ಕುಳಿಗೂ ಈ ಸಾಲ್ಡಾ ಸರೋವರಕ್ಕೂ ಬಹಳ ಸಾಮ್ಯತೆ ಇರುವುದೂ ಕೂಡ ಈಗ ಬೆಳಕಿಗೆ ಬಂದಿದೆ. ನಾಸಾದ ಅರ್ಥ್ ಅಬ್ಸರ್ವೇಟರಿ ಪತ್ರಿಕೆಯಲ್ಲೂ ಈ ವಿಚಾರವನ್ನು ಖಚಿತಪಡಿಸಲಾಗಿದೆ ಎಂದು ಅನಾಡೋಲು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮುಂದಿನ ವರ್ಷದ ಫೆಬ್ರುವರಿ ತಿಂಗಳಲ್ಲಿ ಅಮೆರಿಕ ನಾಸಾ ಸಂಸ್ಥೆಯು ಮಂಗಳ ಗ್ರಹಕ್ಕೆ ನೌಕೆಯನ್ನು ಕಳುಹಿಸಲಿದ್ದು, ಅದರ ರೋವರ್ ಸುಮಾರು 687 ದಿನಗಳ ಕಾಲ (ಒಂದು ಮಾರ್ಸ್ ವರ್ಷ) ಮಂಗಳದ ನೆಲವನ್ನು ಜಾಲಾಡಲಿದೆ. ಈ ವೇಳೆ, ಜೆಜೋರೋ ಕ್ರೇಟರ್ ಅನ್ನೂ ಅಧ್ಯಯನ ಮಾಡಲಿದೆ. ಆಗ ಮಾರ್ಸ್ ಜೀವರಹಸ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ನಿರೀಕ್ಷೆ ಇದೆ.

ಟರ್ಕಿಯ ಈ ಸರೋವರದಲ್ಲಿ ಏನಿದೆ ರಹಸ್ಯ?

ಸಾಲ್ಡಾ ಕೆರೆಗೂ ಮಂಗಳ ಗ್ರಹದ ಆ ದೊಡ್ಡ ಕುಳಿಗೂ ಭೌಗೋಳಿಕ ಸಾಮ್ಯತೆಗಳಿವೆ. ಒಂದೇ ರೀತಿಯ ಖನಿಜ ಶೇಖರಣೆ ಹೊಂದಿವೆ. ಸಾಲ್ಡಾ ಸರೋವರದಲ್ಲಿರುವ ಶಿಲೆಯೊಂದು (Sedimentary) ಕುತೂಹಲ ಮೂಡಿಸಿದೆ. ಜೀವ ಬೆಳವಣಿಗೆಗೆ ಅಗತ್ಯ ಇರುವ ವಾತಾವರಣವನ್ನು ಸೃಷ್ಟಿಸಲು ಪ್ರಮುಖ ಕಾರಣಕರ್ತವೆಂದು ನಂಬಲಾದ ಸೂಕ್ಷ್ಮಜೀವಿಗಳಿಂದ (Microbes) ತಯಾರಾಗುವ ಪಾಚಿ (Alge) ಗಳಿಂದ ಸಾಲ್ಡಾ ಸರೋವರದ ಈ ಶಿಲೆ ತಯಾರಾಗಿದೆ. ಮಂಗಳ ಗ್ರಹದ ಜೆಜೆರೋ ಕುಳಿಯಲ್ಲಿ ಪತ್ತೆಯಾಗಿರುವ ಖನಿಜಕ್ಕೂ ಸಾಲ್ಡಾ ಸರೋವರದಲ್ಲಿರುವ ಈ ಶಿಲೆಗೂ ಬಹಳಷ್ಟು ಸಾಮ್ಯತೆ ಇರುವುದನ್ನು ಟರ್ಕಿಯ ಸಂಶೋಧಕರು ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್?

ಅಂದಹಾಗೆ, 45 ಕಿಮೀ ವಿಸ್ತಾರದ ಜೆಜೆರೋ ಕುಳಿಯಲ್ಲಿ ಈ ಕುರುಹುಗಳು ಪತ್ತೆಯಾಗಿದ್ದು ದೂರ ಸಂವೇದಿ (ರಿಮೋಟ್ ಸೆನ್ಸಿಂಗ್) ತಂತ್ರಜ್ಞಾನ ಮತ್ತು ಆಕಾರಶಾಸ್ತ್ರದ (ಮಾರ್ಫೋಲಾಜಿಕಲ್) ಮೂಲಕ. ಒಂದು ವೇಳೆ, ಮುಂದಿನ ವರ್ಷ ಮಾರ್ಸ್ ಗ್ರಹದಲ್ಲಿ ನಾಸಾದ ರೋವರ್ ನಡೆಸುವ ಅಧ್ಯಯನದಲ್ಲಿ ಇದಕ್ಕೆ ಪೂರಕವಾದ ಸಂಗತಿಗಳು ದೃಢಪಟ್ಟರೆ ಮಂಗಳ ಗ್ರಹದ ಜೀವ ರಹಸ್ಯ ಬೆಳಕಿಗೆ ಬರುತ್ತದೆ ಎನ್ನುತ್ತಾರೆ ಟರ್ಕಿ ದೇಶದ ವಿಜ್ಞಾನಿಗಳು.

ಹಾಗೇನಾದರೂ ಸಾಮ್ಯತೆಗಳಿರುವುದು ಖಚಿತಪಟ್ಟಲ್ಲಿ ಮಂಗಳ ಗ್ರಹದಲ್ಲಿ ಜೀವ ಸೃಷ್ಟಿ ಪ್ರಕ್ರಿಯೆ ಈಗ ಆರಂಭಿಕ ಹಂತದಲ್ಲಿರುವುದನ್ನು ಸೂಚಿಸುತ್ತದೆ. ಅಂದರೆ, ಭೂಮಿಯಂಥ ವಾತಾವರಣ ನಿರ್ಮಾಣ ಈಗ ಮಂಗಳದಲ್ಲಿ ಆರಂಭವಾಗುತ್ತಿದೆ ಎಂದರ್ಥ. ಮಂಗಳ ಗ್ರಹದಲ್ಲಿ ವಾಸಹತು ಸ್ಥಾಪಿಸಲು ಹಾತೊರೆಯುತ್ತಿರುವ ಮನುಷ್ಯನಿಗೆ ಈ ಅಧ್ಯಯನ ಬಹಳಷ್ಟು ನೆರವಾಗಲಿದೆ.
Published by: Vijayasarthy SN
First published: August 2, 2020, 11:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories