Salary Hike: 60,000ಕ್ಕೂ ಹೆಚ್ಚು PSU ಉದ್ಯೋಗಿಗಳ ಸಂಬಳ ಶೀಘ್ರದಲ್ಲೇ ಹೆಚ್ಚಳ..!

ರಾಷ್ಟ್ರೀಯ ವಿಮಾ ಅಧಿಕಾರಿಗಳ ಸಂಘದ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ (CONFED) ವಿಜಯ್ ಪ್ರಕಾಶ್ ಶರ್ಮಾ "ಎಲ್‌ಐಸಿ ಮಾದರಿಯಲ್ಲಿ 15% ವಿಭಜನೆಯಾಗಬೇಕು ಮತ್ತು ಉದ್ಯೋಗಿ ಬಾಕಿಯನ್ನು ಸಹ ಪಡೆಯಬೇಕು" ಎಂದು ಹೇಳಿದರು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಜನರಲ್ ಇನ್ಶೂರೆನ್ಸ್ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (General Insurance public sector undertakings (PSU)) ಕೆಲಸ ಮಾಡುತ್ತಿರುವ ಸುಮಾರು 60,000 ಉದ್ಯೋಗಿಗಳಿಗೆ ಇನ್ನು ಕೆಲ ದಿನಗಳಲ್ಲೇ ಬಂಪರ್‌ ಸುದ್ದಿ ಕಾದಿದೆ. ಏಕೆಂದರೆ ಈ ಉದ್ಯೋಗಿಗಳಿಗೆ ಶೀಘ್ರದಲ್ಲೇ ವೇತನ ಹೆಚ್ಚಳವಾಗಲಿದೆಯಂತೆ. 60,000 ಪಿಎಸ್‌ಯು ಉದ್ಯೋಗಿಗಳ ವೇತನ ಪರಿಷ್ಕರಣೆ ಈ ವರ್ಷವೇ ನಡೆಯುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯದ(Finance Ministry) ಮೂಲಗಳು ತಿಳಿಸಿವೆ ಎಂದು ಝೀ ಬ್ಯುಸಿನೆ(Zee Business)ಸ್‌ ವರದಿ ಮಾಡಿದೆ. ಅಲ್ಲದೆ, ಈ ಉದ್ಯೋಗಿಗಳಿಗೆ 15% ವೇತನ ಪರಿಷ್ಕರಣೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇದರರ್ಥ ಶೀಘ್ರದಲ್ಲೇ ವೇತನ ಪರಿಷ್ಕರಣೆಯ ಬಗ್ಗೆ ಘೋಷಣೆ ಮಾಡಲಾಗುವುದು ಎಂಬ ನಿರೀಕ್ಷೆಯನ್ನು ಈ PSU ಉದ್ಯೋಗಿಗಳು ಇಟ್ಟುಕೊಳ್ಳಬಹುದು.

ಸಾಮಾನ್ಯವಾಗಿ PSU ಉದ್ಯೋಗಿಗಳಿಗೆ 5 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆಯ ವೇಳಾಪಟ್ಟಿ ನಡೆಯುತ್ತದೆ ಮತ್ತು ಇದು ಆಗಸ್ಟ್ 2017ರಿಂದ ಬಾಕಿ ಉಳಿದಿದೆ ಎಂದು ತಿಳಿದುಬಂದಿದೆ. ಅಲ್ಲದೆ, PSU ಬ್ಯಾಂಕ್‌ಗಳು ಮತ್ತು LIC ಉದ್ಯೋಗಿಗಳಿಗೆ ಈಗಾಗಲೇ ತಮ್ಮ ವೇತನ ಪರಿಷ್ಕರಣೆ ಘೋಷಿಸಿರುವುದರಿಂದ ಈ PSU ಸಂಸ್ಥೆಗಳ ಸಾವಿರಾರು ಉದ್ಯೋಗಿಗಳು ಬಹಳ ಹಿಂದಿನಿಂದಲೂ ವೇತನ ಪರಿಷ್ಕರಣೆಯನ್ನು ಕೇಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Earning Tips: ಮನೆಯಲ್ಲೇ ಕೂತು SBIನಿಂದ ತಿಂಗಳಿಗೆ 60-80 ಸಾವಿರ ಹಣ ಗಳಿಸಬಹುದು..! ಹೇಗೆ ಅಂತೀರಾ? ಇಲ್ಲಿದೆ ಮಾಹಿತಿ

ವೇತನ ಪರಿಷ್ಕರಣೆ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ

"ವೇತನ ಪರಿಷ್ಕರಣೆ ಸಮಸ್ಯೆಯನ್ನು ಬಹುಪಾಲು ಡಿಸೆಂಬರ್‌ವರೆಗೆ ಪರಿಹರಿಸಲಾಗುವುದು, ಆದರೆ ನೌಕರರು ಬಾಕಿಗಾಗಿ ಹೋರಾಟಕ್ಕೆ ಸಿದ್ಧರಾಗಿರಬೇಕು" ಎಂದು ನೌಕರರ ಗುಂಪನ್ನು ಉದ್ದೇಶಿಸಿ ಮಾತನಾಡುತ್ತಿದ್ದರು ಎಂದು ಇತ್ತೀಚೆಗೆ, GIPSA ಅಧ್ಯಕ್ಷ ಮತ್ತು ನ್ಯೂ ಇಂಡಿಯಾ ಅಶ್ಯೂರೆನ್ಸ್‌ನ CMD ಅತುಲ್ ಸಹಾಯ್ ಹೇಳಿದ್ದರು ಎಂದೂ ಝೀ ಬ್ಯುಸಿನೆಸ್‌ ವರದಿ ತಿಳಿಸಿದೆ.

ರಾಷ್ಟ್ರೀಯ ವಿಮಾ ಅಧಿಕಾರಿಗಳ ಸಂಘದ ರಾಷ್ಟ್ರೀಯ ಒಕ್ಕೂಟದ ಅಧ್ಯಕ್ಷ (CONFED) ವಿಜಯ್ ಪ್ರಕಾಶ್ ಶರ್ಮಾ "ಎಲ್‌ಐಸಿ ಮಾದರಿಯಲ್ಲಿ 15% ವಿಭಜನೆಯಾಗಬೇಕು ಮತ್ತು ಉದ್ಯೋಗಿ ಬಾಕಿಯನ್ನು ಸಹ ಪಡೆಯಬೇಕು" ಎಂದು ಹೇಳಿದರು.

60 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಸಂಬಳ ಹೆಚ್ಚಳ

ಸಾಮಾನ್ಯ ವಿಮಾ ವಲಯದಲ್ಲಿ ನ್ಯಾಷನಲ್ ಇನ್ಶೂರೆನ್ಸ್ (National Insurance), ನ್ಯೂ ಇಂಡಿಯಾ ಅಶ್ಯೂರೆನ್ಸ್ (New India Assurance), ಓರಿಯೆಂಟಲ್ ಇನ್ಶೂರೆನ್ಸ್ (Oriental Insurance) ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ (United India Insurance) ಸೇರಿ 4 PSUಗಳಿವೆ. ಈ ಸಂಸ್ಥೆಗಳೊಂದಿಗೆ 60,000ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಮಾಡುತ್ತಾರೆ ಎಂದು ತಿಳಿದುಬಂದಿದೆ.

ಇನ್ನೊಂದೆಡೆ, ಈ 4 ಸಂಸ್ಥೆಗಳ ಪೈಕಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಮಾತ್ರ ಸಾರ್ವಜನಿಕ ಪಟ್ಟಿಯಲ್ಲಿರುವ ಕಂಪನಿಯಾಗಿದೆ. ಹಾಗೂ ಈ ಸಂಸ್ಥೆ ಮಾತ್ರ ಉತ್ತಮ ಆರ್ಥಿಕ ಆರೋಗ್ಯ ಹೊಂದಿದೆ. ಮತ್ತು ಉಳಿದ 3 ವಿಮಾ ಕಂಪನಿಗಳು ಮಾರುಕಟ್ಟೆ ಷೇರಿನ ಕುಸಿತದೊಂದಿಗೆ ಉತ್ತಮ ಆರ್ಥಿಕ ಆರೋಗ್ಯವನ್ನು ಹೊಂದಿಲ್ಲ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Investment vs Savings: ಉಳಿತಾಯಕ್ಕಿಂತ ಹೂಡಿಕೆ ಏಕೆ ಉತ್ತಮ..? ಇಲ್ಲಿದೆ ವಿವರ..

ಈ ಮಧ್ಯೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಒಂದು ಜನರಲ್ ಪಿಎಸ್‌ಯು ವಿಮಾ ಕಂಪನಿಯ ಖಾಸಗೀಕರಣವನ್ನು ಘೋಷಿಸಿದ್ದರು.
Published by:Latha CG
First published: