ಪುಲ್ವಾಮಾ ದಾಳಿಗೆ ಉಗ್ರ ಬಳಸಿದ್ದ ಕಾರಿನ ಮಾಲೀಕ ಸಜ್ಜದ್​ ಭಟ್​ ಸೈನಿಕರ ಗುಂಡಿಗೆ ಬಲಿ

ಈ ಗುಂಡಿನ ದಾಳಿ ನಡೆಯುತ್ತಿರುವ ಸ್ಥಳದಿಂದ ಕೇವಲ 27 ಕಿ.ಮೀ. ದೂರದಲ್ಲಿರುವ ಪುಲ್ವಾಮಾದಲ್ಲಿ ನೆನ್ನೆ ಉಗ್ರರು ಸಿಆರ್​ಪಿಎಫ್​ ವಾಹನವನ್ನು ಗುರಿಯಾಗಿಸಿಕೊಂಡು ಸುಧಾರಿತ ಬಾಂಬ್​ ಸ್ಫೋಟಿಸಿದ್ದರು. ಘಟನೆಯಲ್ಲಿ ಇಬ್ಬರು ಸೈನಿಕರು ಹುತಾತ್ಮರಾಗಿ, 18 ಮಂದಿ ಗಾಯಗೊಂಡಿದ್ದರು.

HR Ramesh | news18
Updated:June 18, 2019, 2:46 PM IST
ಪುಲ್ವಾಮಾ ದಾಳಿಗೆ ಉಗ್ರ ಬಳಸಿದ್ದ ಕಾರಿನ ಮಾಲೀಕ ಸಜ್ಜದ್​ ಭಟ್​ ಸೈನಿಕರ ಗುಂಡಿಗೆ ಬಲಿ
ಪುಲ್ವಾಮಾದಲ್ಲಿ ಉಗ್ರರು ನೆನ್ನೆ ಸಿಆರ್​ಪಿಎಫ್​ ವಾಹನ ಸ್ಫೋಟಿಸಿರುವುದು.
  • News18
  • Last Updated: June 18, 2019, 2:46 PM IST
  • Share this:

ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ನಲ್ಲಿ ಉಗ್ರರು ಮತ್ತು ಸೇನಾ ಪಡೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಸೈನಿಕರು ಇಬ್ಬರು ಉಗ್ರರನ್ನು ಸದೆಬಡಿದಿದ್ದಾರೆ.
ಮೃತರಲ್ಲಿ ಒಬ್ಬ ಸಜ್ಜದ್​ ಮಖ್ಬಾಲ್​ ಭಟ್​ ಎಂದು ಗುರುತಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಸಿಆರ್​ಪಿಎಫ್​ ವಾಹನದ ಮೇಲೆ ಆತ್ಮಾಹುತಿ ದಾಳಿಕೋರ ಬಾಂಬ್​ ದಾಳಿ ನಡೆಸಲು ವಾಹನದ ವ್ಯವಸ್ಥೆ ಮಾಡಿಕೊಟ್ಟವನು ಈತನೇ ಎಂದು ತಿಳಿದುಬಂದಿದೆ. ಮತ್ತೊಬ್ಬ ಆತ್ಮಾಹುತಿ ಬಾಂಬ್​ ದಾಳಿಕೋರ ತವಸೀಫ್​ ಭಟ್​ ಎಂದು ಮೂಲಗಳು ತಿಳಿಸಿವೆ.


ಈ ಪ್ರದೇಶದ ಕಟ್ಟಡ ಒಂದರಲ್ಲಿ ಮತ್ತೊಬ್ಬ ಉಗ್ರ ಅಡಗಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರೆಲ್ಲಾ ಪಾಕಿಸ್ತಾನ ಮೂಲದ ಜೈಷ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಭಯೋತ್ಪಾದಕರಾಗಿದ್ದಾರೆ.ಇದನ್ನು ಓದಿ: ಪುಲ್ವಾಮಾದಲ್ಲಿ ಮತ್ತೊಂದು ದಾಳಿಗೆ ಉಗ್ರರ ಸಂಚು; ಜಮ್ಮು ಕಾಶ್ಮೀರದಲ್ಲಿ ಹೈ ಅಲರ್ಟ್​

ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಉಗ್ರತ ಪತ್ತೆ ಕಾರ್ಯಾಚರಣೆ ಆರಂಭಿಸಿದೆ. ಕಾರ್ಯಾಚರಣೆ ವೇಳೆ ಉಗ್ರರು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಲು ಆರಂಭಿಸಿದ್ದಾರೆ. ಆಗ ಪ್ರತಿದಾಳಿ ಆರಂಭಿಸಿದ ಸೈನಿಕರು ಇಬ್ಬರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಸೈನಿಕರೊಬ್ಬರು ಹುತಾತ್ಮರಾಗಿದ್ದಾರೆ. ಕಾರ್ಯಾಚರಣೆ ಈಗಲೂ ಮುಂದುವರೆದಿದೆ.


 ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಕಳೆದ ಐದು ದಿನದಲ್ಲಿ 10 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ.


First published: June 18, 2019, 2:46 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading