ಸದ್ದಿಲ್ಲದೆ ಪ್ರಿಯಕರನನ್ನು ಮದುವೆಯಾಗಿ ಸರ್​ಪ್ರೈಸ್​ ನೀಡಿದ ಸೈನಾ ನೆಹ್ವಾಲ್

ಬ್ಯಾಡ್ಮಿಂಟನ್​ ಕ್ರೀಡಾಪಟುಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೈದರಾಬಾದ್​ನ ಗೋಪಿಚಂದ್​ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು.

Sushma Chakre | news18
Updated:December 14, 2018, 8:34 PM IST
ಸದ್ದಿಲ್ಲದೆ ಪ್ರಿಯಕರನನ್ನು ಮದುವೆಯಾಗಿ ಸರ್​ಪ್ರೈಸ್​ ನೀಡಿದ ಸೈನಾ ನೆಹ್ವಾಲ್
ಸೈನಾ- ಪರುಪಳ್ಳಿ ಕಶ್ಯಪ್
  • News18
  • Last Updated: December 14, 2018, 8:34 PM IST
  • Share this:
ಬಹುಕಾಲದಿಂದ ಪ್ರೀತಿಸುತ್ತಿದ್ದ ಬ್ಯಾಡ್ಮಿಂಟನ್​ ತಾರೆಗಳಾದ ಸೈನಾ ನೆಹ್ವಾಲ್​ ಮತ್ತು ಪರುಪಳ್ಳಿ ಕಶ್ಯಪ್​ ಇಂದು ಮದುವೆಯಾಗಿದ್ದಾರೆ. ಇವರಿಬ್ಬರ ಮದುವೆಯಾಗುತ್ತಿದ್ದಾರೆ ಎಂಬ ವದಂತಿಗಳು ಬಹಳ ಸಮಯದಿಂದ ಹರಿದಾಡುತ್ತಿತ್ತು. ಅದೆಲ್ಲದಕ್ಕೂ ತೆರೆ ಎಳೆದಿದ್ದ ಸೈನಾ ಆ ಸುದ್ದಿ ನಿಜ ಎಂದು ತಿಳಿಸಿದ್ದರು. ಆದರೆ, ಯಾವುದೇ ಪ್ರಚಾರವಿಲ್ಲದೆ, ಇಂದು ಮದುವೆಯಾಗುತ್ತಿರುವ ಸುಳಿವೂ ಬಿಟ್ಟುಕೊಡದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಸೈನಾ ನೆಹ್ವಾಲ್​ ಈ ವಿಷಯವನ್ನು ಟ್ವಿಟ್ಟರ್​ ಮೂಲಕ ಘೋಷಿಸಿಕೊಂಡಿದ್ದಾರೆ.

ಈಗೊಂದು ಮೂರ್ನಾಲ್ಕು ತಿಂಗಳಿಂದ ಒಂದರ ಹಿಂದೊಂದು ಸೆಲೆಬ್ರಿಟಿಗಳ ಅದ್ದೂರಿ ಮದುವೆಗಳು ನಡೆಯುತ್ತಲೇ ಇವೆ. ಬಾಲಿವುಡ್​ನಲ್ಲಿ ಭಾರೀ ಕುತೂಹಲ ಮೂಡಿಸಿದ್ದ ದೀಪಿಕಾ ಪಡುಕೋಣೆ- ರಣವೀರ್ ಸಿಂಗ್ ಸಪ್ತಪದಿ ತುಳಿದ ನಂತರ ಪ್ರಿಯಾಂಕಾ ಚೋಪ್ರಾ- ನಿಕ್​ ಜೋನಸ್​ ಮದುವೆಯಾಗಿದ್ದರು. ಬಳಿಕ, ಬಾಲಿವುಡ್​ ಕಾಮಿಡಿ ಕಿಂಗ್​ ಕಪಿಲ್ ಶರ್ಮ ಕೂಡ ನಿನ್ನೆ ಮದುವೆಯಾಗಿದ್ದರು.

ಇದನ್ನೂ ಓದಿ: 'ಡಿ. 16ಕ್ಕೆ ಮದುವೆ': ಕೊನೆಗೂ ಗುಟ್ಟು ರಟ್ಟು ಮಾಡಿದ ಸೈನಾ ನೆಹ್ವಾಲ್

ದೇಶದ ಶ್ರೀಮಂತ ಉದ್ಯಮಿ ಮುಖೇಶ್​- ನೀತಾ ಅಂಬಾನಿ ಅವರ ಮಗಳು ಇಶಾ ಅಂಬಾನಿ ಮದುವೆಯ ಅದ್ದೂರಿತನ ಮೂರ್ನಾಲ್ಕು ದಿನಗಳಿಂದ ಬಹು ಚರ್ಚಿತ ವಿಷಯವಾಗಿತ್ತು. ಇದೆಲ್ಲದರ ನಡುವೆ ಸ್ಯಾಂಡಲ್​ವುಡ್​ ನಟರಾದ ದಿಗಂತ್​ ತನ್ನ ಪ್ರೇಯಸಿ ಐಂದ್ರಿತಾ ರೇ ಜೊತೆಗೆ ವಿವಾಹವಾದರು. ಇಂದು ಸದ್ದಿಲ್ಲದೆ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ತನ್ನ ಪ್ರಿಯಕರ ಹಾಗೂ ಬ್ಯಾಡ್ಮಿಂಟನ್​ ಆಟಗಾರ ಪರುಪಳ್ಳಿ ಕಶ್ಯಪ್​ ಜೊತೆಗೆ ವಿವಾಹವಾಗಿದ್ದಾರೆ.ಬ್ಯಾಡ್ಮಿಂಟನ್​ ಕ್ರೀಡಾಪಟುಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ 10 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಹೈದರಾಬಾದ್​ನ ಗೋಪಿಚಂದ್​ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಇಬ್ಬರಲ್ಲೂ ಪ್ರೇಮಾಂಕುರವಾಗಿತ್ತು. ಆದರೆ, ಇಬ್ಬರಿಗೂ ವೃತ್ತಿಯಲ್ಲಿ ತಮ್ಮ ಗುರಿ ಮುಟ್ಟಬೇಕೆಂಬ ಹಂಬಲವಿದ್ದುದರಿಂದ ಮದುವೆಯನ್ನು ಮುಂದೂಡಿದ್ದರು. ತೆಲಂಗಾಣದ ಕೆಲ ಸಚಿವರು, ಶಾಸಕರು, ಚಿರಂಜೀವಿ ಸೇರಿದಂತೆ ಕೆಲವು ತೆಲುಗು ನಟರನ್ನು ಭೇಟಿಯಾಗಿದ್ದ ಸೈನಾ- ಪರುಪಳ್ಳಿ ಕಶ್ಯಪ್ ಮದುವೆಗೆ ಆಮಂತ್ರಿಸಿದ್ದರು. ಆದರೆ, ಮದುವೆಯ ದಿನವನ್ನು ಸಾರ್ವಜನಿಕ ವಲಯದಿಂದ ಗುಟ್ಟಾಗಿಟ್ಟಿದ್ದರು. ಆದರೂ, ಡಿಸೆಂಬರ್​ 16ರಂದು ಸೈನಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿತ್ತು.

ಆದರೆ, ಇಂದು ತಮ್ಮ ಕುಟುಂಬದ ಆಪ್ತರ ಸಮ್ಮುಖದಲ್ಲಿ ಗುಟ್ಟಾಗಿ ಮದುವೆಯಾಗಿರುವ ಸೈನಾ ನೆಹ್ವಾಲ್​- ಪರುಪಳ್ಳಿ ಕಶ್ಯಪ್ ತಮ್ಮಿಬ್ಬರ ಫೋಟೋವನ್ನು ಸ್ವತಃ ಟ್ವಿಟ್ಟರ್​ನಲ್ಲಿ ಹಾಕಿಕೊಂಡಿದ್ದಾರೆ. ನನ್ನ ಜೀವನದ ಬೆಸ್ಟ್​ ಜೊತೆಗಾರ ಎಂದು ಬರೆದುಕೊಂಡಿರುವ ಸೈನಾ ಜಸ್ಟ್​ ಮ್ಯಾರೀಡ್​ ಎಂದು ಹಾಕುವ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ.

ಡಿಸೆಂಬರ್​ 20ರಿಂದ ಬ್ಯಾಡ್ಮಿಂಟನ್​ ಪ್ರೀಮಿಯರ್​ ಲೀಗ್​ ಜೊತೆಗೆ ಟೋಕಿಯೋ ಗೇಮ್ಸ್​ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿರುವುದರಿಂದ ಡಿಸೆಂಬರ್​ 16ರಂದು ಮದುವೆಯಾಗುವುದಾಗಿ ಸೈನಾ ಕೆಲ ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ, ನಿಗದಿತ ದಿನಕ್ಕಿಂತ 2 ದಿನ ಮೊದಲೇ ಸೈನಾ ಮದುವೆಯಾಗಿದ್ದಾರೆ.

First published: December 14, 2018, 8:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading