ಆಂಧ್ರಪ್ರದೇಶ ಕಾಂಗ್ರೆಸ್​ ಅಧ್ಯಕ್ಷರಾಗಿ ಶೈಲಜಾನಾಥನ್​ ಆಯ್ಕೆ ಮಾಡಿದ ಹೈಕಮಾಂಡ್​​

ವಿಧಾನಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ಎಪಿಸಿಸಿ ಅಧ್ಯಕ್ಷರಾಗಿದ್ದ ರಘುವೀರ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಈ ಹುದ್ದೆಗಾಗಿ ರಾಜ್ಯದಲ್ಲಿ ಭಾರೀ ಪೈಪೋಟಿ ನಡೆದಿತ್ತು.

news18-kannada
Updated:January 16, 2020, 5:19 PM IST
ಆಂಧ್ರಪ್ರದೇಶ ಕಾಂಗ್ರೆಸ್​ ಅಧ್ಯಕ್ಷರಾಗಿ ಶೈಲಜಾನಾಥನ್​ ಆಯ್ಕೆ ಮಾಡಿದ ಹೈಕಮಾಂಡ್​​
ವಿಧಾನಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ಎಪಿಸಿಸಿ ಅಧ್ಯಕ್ಷರಾಗಿದ್ದ ರಘುವೀರ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಈ ಹುದ್ದೆಗಾಗಿ ರಾಜ್ಯದಲ್ಲಿ ಭಾರೀ ಪೈಪೋಟಿ ನಡೆದಿತ್ತು.
  • Share this:
ನವದೆಹಲಿ (ಜ.16): ಆಂಧ್ರಪ್ರದೇಶ ಕಾಂಗ್ರೆಸ್​ ಸಮಿತಿ ನೂತನ ಅಧ್ಯಕ್ಷರಾಗಿ ಡಾ. ಸಾಕೇತ್​​ ಶೈಲಜಾನಾಥನ್​ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎಐಸಿಸಿ ತಿಳಿಸಿದೆ.

ವಿಧಾನಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ಎಪಿಸಿಸಿ ಅಧ್ಯಕ್ಷರಾಗಿದ್ದ ರಘುವೀರ್​ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಅಂದಿನಿಂದ ಈ ಹುದ್ದೆಗಾಗಿ ರಾಜ್ಯದಲ್ಲಿ ಭಾರೀ ಪೈಪೋಟಿ ನಡೆದಿತ್ತು.ಮೂಲಗಳ ಪ್ರಕಾರ ಈ ಸ್ಥಾನಕ್ಕೆ ಮಾಜಿ ಸಿಎಂ ಕಿರಣ್​ ಕುಮಾರ್​ ರೆಡ್ಡಿ ಭಾರೀ ಲಾಬಿ ನಡೆಸಿದ್ದರು. ಇತ್ತ ಕಾಂಗ್ರೆಸ್​ ಹೈ ಕಮಾಂಡ್​ ಕೆವಿಪಿ ರಾಮಚಂದ್ರ ರಾವ್​ ಅವರತ್ತ ಒಲವು ಹೊಂದಿದ್ದು, ಈ ಸ್ಥಾನ ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿತ್ತು.

ಇದನ್ನು ಓದಿ: ಬಗೆಹರಿಯದ ಕೆಪಿಸಿಸಿ ಬಿಕ್ಕಟ್ಟು; ಇನ್ನೊಂದು ವರದಿ ತರಿಸಿಕೊಂಡ ಹೈಕಮಾಂಡ್; ಡಿಕೆಶಿ ಕೊನೆ ಪ್ರಯತ್ನ?

ಇದಕ್ಕೆಲ್ಲಾ ತೆರೆ ಎಳೆದಿರುವ ಕಾಂಗ್ರೆಸ್​ ಹೈ ಕಮಾಂಡ್​​ ಮಾಜಿ ಸಚಿವ ಸಾಕೇತ್​​  ಶೈಲಜಾನಾಥ್​ರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ. ಇನ್ನು ಕಾರ್ಯಕಾರಿ ಅಧ್ಯಕ್ಷರನ್ನಾಗಿ ತುಳಸಿ ರೆಡ್ಡಿ ಮತ್ತು ಶೇಖ್​ ಮಸ್ತಾನ್​ ವಾಲಿ ಅವರನ್ನು ಆಯ್ಕೆ ಮಾಡಲಾಗಿದೆ.

First published:January 16, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading