Madhya Pradesh: ಈ ಸಸ್ಯವೇ ಆದಿವಾಸಿಗಳ ಜೀವನೋಪಾಯ, ಪ್ರವಾಹದ ಮಧ್ಯೆ ಜೀವನ ಕಟ್ಟಿಕೊಂಡವರ ಕಥೆ!

ಆದಿವಾಸಿಗಳು

ಆದಿವಾಸಿಗಳು

ಸಹರಿಯಾ ಆದಿವಾಸಿ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆದಾರರಿಗೆ ಗೋಂಡ್ರಾ ಎಂಬ ಬೇರುಗಳನ್ನು ಕೊಯ್ಲು ಮಾಡಿ ಮಾರಾಟ ಮಾಡುತ್ತದೆ. ಇದೇ ಈ ಆದಿವಾಸಿ ಕುಟುಂಬಗಳಿಗೆ ಜೀವನಾಧಾರವಾಗಿದೆ.

  • Trending Desk
  • 2-MIN READ
  • Last Updated :
  • Madhya Pradesh, India
  • Share this:

ಭೋಪಾಲ್: ಆಗಸ್ಟ್ 3, 2021ರಲ್ಲಿ ಮಧ್ಯಪ್ರದೇಶದಲ್ಲಿ (Madhya Pradesh Flood) ಕಂಡು ಕೇಳರಿಯದಂತಹ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಭೀಕರ ಪ್ರವಾಹಕ್ಕೆ ಮಧ್ಯ ಭಾರತದ ಬುಂದೇಲ್‌ಖಂಡ್ ಪ್ರದೇಶದ ಹಲವಾರು ಹಳ್ಳಿಗಳು ಕೊಚ್ಚಿ ಹೋಗಿದ್ದವು. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ (Uttar Pradesh) ಮೂಲಕ ಹರಿಯುವ ಯಮುನಾ ನದಿಯ ಉಪನದಿಯಾದ ಸಿಂಧ್ ನದಿಯ ಮೇಲಿನ ಅಣೆಕಟ್ಟುಗಳ ಅಸಮರ್ಪಕ ನಿರ್ವಹಣೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗಿ ಅಪಾರ ಆಸ್ತಿ-ಪಾಸ್ತಿ, ಮನೆ, ಜನಜೀವನ ಎಲ್ಲವೂ ಅಸ್ತವ್ಯಸ್ತವಾಗಿದ್ದವು.


ಪ್ರಕೃತಿ ವಿಕೋಪ, ಹವಮಾನ ಬದಲಾವಣೆ ಅಂದರೆ ಅಲ್ಲಿ ಸುಮಾರು ವರ್ತಮಾನ ಮತ್ತು ಭವಿಷ್ಯದ ಬದಲಾವಣೆಗಳು ನಡೆಯುತ್ತವೆ. ಅಲ್ಲಿದ್ದ ಸಂಪನ್ಮೂಲ ಸೇರಿ ಇತರೆ ಅಮೂಲ್ಯವಾದ ಅಂಶ ಕೂಡ ಅಳಿಸಿ ಹೋಗಬಹುದು. ಬೆಳೆಗಳ ಮೇಲೆ ಪರಿಣಾಮ ಬೀರಬಹುದು. 2021ರಲ್ಲಿ ಉಂಟಾದ ಈ ಪ್ರವಾಹ ಕೂಡ ಮಧ್ಯಪ್ರದೇಶದ ಒಂದು ಸಮುದಾಯದ ಜೀವನೋಪಾಯವನ್ನೇ ಕಿತ್ತುಕೊಂಡಿದೆ.


ಸಹರಿಯಾ ಆದಿವಾಸಿ ಕುಟುಂಬಗಳ ಜೀವನಾಧಾರ ʻಗೋಂಡ್ರಾʼ ಸಸ್ಯ
ಹೌದು, ಈ ಪ್ರದೇಶದಲ್ಲಿ ಸಹರಿಯಾ ಆದಿವಾಸಿ ಕುಟುಂಬಗಳು ವಾಸಿಸುತ್ತಾರೆ. ಇಲ್ಲಿ ಗೋಂಡ್ರಾ (ಸೈಪರಸ್ ಎಸ್‌ಪಿಪಿ) ಎಂದು ಕರೆಯಲ್ಪಡುವ ಸಸ್ಯಗಳೇ ಇವರ ಜೀವನೋಪಾಯವಾಗಿದೆ.


ಔಷಧೀಯ ಸಸ್ಯ ಈ ಗೋಂಡ್ರಾ
ಗೋಂಡ್ರಾ ಒಂದು ಔಷಧೀಯ ಸಸ್ಯವಾಗಿದ್ದು ಇದನ್ನು ಒಣ ಅಥವಾ ಪುಡಿ ರೂಪದಲ್ಲಿ ಆಯುರ್ವೇದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಇದರ ಸಾರಭೂತ ತೈಲವನ್ನು (0.5-0.9%) ಸುಗಂಧ ದ್ರವ್ಯ, ಸಾಬೂನು ತಯಾರಿಕೆ ಮತ್ತು ಕೀಟ ನಿವಾರಕಗಳಲ್ಲಿ ಬಳಸಲಾಗುತ್ತದೆ. ಎಣ್ಣೆಯನ್ನು ತೆಗೆದ ನಂತರ ಉಳಿಯುವ ಕಚ್ಚಾ ವಸ್ತುವನ್ನು ಧೂಪ ದ್ರವ್ಯದ ತುಂಡುಗಳನ್ನು ತಯಾರಿಸಲು ಬಳಸಲಾಗುತ್ತದೆ. ಇದರ ಬೇರುಗಳನ್ನು ಸುಗಂಧ ದ್ರವ್ಯ, ಆರ್ಯುರ್ವೇದ ಔಷಧ, ಸಾರಭೂತ ತೈಲಗಳು ಮತ್ತು ಧೂಪದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.




ಸಹರಿಯಾ ಆದಿವಾಸಿ ಸಮುದಾಯವು ದೇಶದ ವಿವಿಧ ಭಾಗಗಳಲ್ಲಿ ಗುತ್ತಿಗೆದಾರರಿಗೆ ಗೋಂಡ್ರಾ ಎಂಬ ಬೇರುಗಳನ್ನು ಕೊಯ್ಲು ಮಾಡಿ ಮಾರಾಟ ಮಾಡುತ್ತದೆ. ಇದೇ ಈ ಆದಿವಾಸಿ ಕುಟುಂಬಗಳಿಗೆ ಜೀವನಾಧಾರ ಮತ್ತು ಕಸುಬಾಗಿದೆ.


ಧೂಪದ ಕಾರ್ಖಾನೆಗೆ ಬೇಕು ಈ ಬೇರುಗಳು
ಸಿಂಧ್‌ನಲ್ಲಿ ವಾಸಿಸುವ ಸಹರಿಯಾ ಜನಾಂಗದ ಜನರು ಡಿಸೆಂಬರ್‌ನಿಂದ ಜನವರಿವರೆಗೆ 12-15 ದಿನಗಳ ಅವಧಿಯಲ್ಲಿ ಸಸ್ಯದ ಬೇರುಗಳನ್ನು ಸಂಗ್ರಹಿಸುತ್ತಾರೆ. ನಂತರ ಬೇರನ್ನು ತೊಳೆದು ನಿರ್ಜಲೀಕರಣಗೊಂಡ ಗೋಂಡ್ರಾ ಬೇರುಗಳನ್ನು ವಾಹನದಲ್ಲಿ ತುಂಬಿಸಿ ಉತ್ತರ ಮಧ್ಯಪ್ರದೇಶದ ಶಿವಪುರಿಯಲ್ಲಿರುವ ಧೂಪದ ಕಾರ್ಖಾನೆಗೆ ರವಾನಿಸುತ್ತಾರೆ.


ಎಲ್ಲೆಲ್ಲಿ ಸಿಗುತ್ತೆ?
"ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಂತಹ ಆದಿವಾಸಿ ಜನಸಂಖ್ಯೆಯನ್ನು ಹೊಂದಿರುವ ದೇಶದ ರಾಜ್ಯಗಳಲ್ಲಿ ನದಿಗಳು ಅಥವಾ ಜಲಮೂಲಗಳಲ್ಲಿ ಮಾತ್ರ ಈ ಸಸ್ಯ ಕಂಡುಬರುತ್ತದೆ ಮತ್ತು ಕೊಯ್ಲು ಮಾಡಲಾಗುತ್ತದೆ. ಒಂದು ಟನ್ ಗೋಂಡ್ರಾ 10 ಕಿಲೋಗ್ರಾಂಗಳಷ್ಟು ಸಾರಭೂತ ತೈಲವನ್ನು ಉತ್ಪಾದನೆ ಮಾಡುತ್ತದೆ. ಸಾರಭೂತ ತೈಲವು ಪ್ರತಿ ಕಿಲೋಗ್ರಾಂಗೆ 25,000-30,000 ರೂ.ಗೆ ಮಾರಾಟವಾಗುತ್ತದೆ" ಎಂದು ಮಧ್ಯಪ್ರದೇಶದ ಸಗಟು ವ್ಯಾಪಾರಿ ರಾಜೀವ್ ಶರ್ಮಾ ವಿವರಿಸಿದರು.


ಸಮುದಾಯ ಮತ್ತು ಜೀವನೋಪಾಯ
ಸಹಾರಿಯಾ ಆದಿವಾಸಿಗಳು ಅತ್ಯಂತ ಬಡತನ ಮತ್ತು ಅಪೌಷ್ಟಿಕತೆಗೆ ಒಳಪಟ್ಟಿರುವ ಸಮುದಾಯಕ್ಕೆ ಸೇರಿದ್ದಾರೆ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು, ಕೋಳಿಗಳನ್ನು ಸಾಕುವುದು ಮತ್ತು ಕೃಷಿ ಕಾರ್ಮಿಕರಾಗಿ ಇವರು ಕೆಲಸ ಮಾಡುತ್ತಾರೆ. ಇದಿಷ್ಟು ಹೊರತುಪಡಿಸಿ ಇವರಿಗೆ ಕೃಷಿ ಮಾಡಲು ಭೂಮಿ ಅಥವಾ ಬೇರೆ ಮೂಲಗಳಿಲ್ಲ. ಈ ಜನಾಂಗ ಬಹುತೇಕ ಈ ಗೋಂಡ್ರಾ ಸಸ್ಯದ ಕೊಯ್ಲು ಮತ್ತು ಮಾರಾಟವನ್ನೇ ಅವಲಂಬಿಸಿ ಜೀವನ ನಡೆಸುತ್ತದೆ.


ಇದನ್ನೂ ಓದಿ: Ghost worship: ದೆವ್ವಗಳನ್ನ ಪೂಜಿಸದಿದ್ದರೆ ಈ ಊರಿಗೆ ಕೆಡಕಾಗುತ್ತಂತೆ! ಇಲ್ಲಿ ಪ್ರತೀ ಹಬ್ಬಗಳಲ್ಲೂ ಪ್ರೇತಾತ್ಮಗಳಿಗೆ ಮೊದಲ ಪೂಜೆ


ಪ್ರವಾಹ ಇವರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿತು?
ಸಿಲಾರ್‌ಪುರ ಮತ್ತು ಸುಡಾ ಪ್ರದೇಶಗಳು 2021ರಲ್ಲಿ ಭೀಕರ ಪ್ರವಾಹಕ್ಕೆ ತುತ್ತಾದವು. ಹಠಾತ್ ಪ್ರವಾಹ ಸ್ಥಳೀಯ ಸಮುದಾಯಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳಿತು. ಅವರ ಮನೆಗಳು ಕೊಚ್ಚಿ ಹೋಗಿ, ಜಾನುವಾರ, ಕೋಳಿಗಳು ಸಹ ಎಲ್ಲವೂ ನೀರಲ್ಲಿ ಕೊಚ್ಚಿ ಹೋಯಿತು. ಸಹರಿಯಾ ಆದಿವಾಸಿಗಳು ಪ್ರವಾಹದ ನಂತರ ತಮ್ಮ ಜೀವನೋಪಾಯದಲ್ಲಿ ಭಾರಿ ಬದಲಾವಣೆಯನ್ನು ಅನುಭವಿಸಿದರು. ಗೋಂಡ್ರಾ ಸಸ್ಯ ಪ್ರವಾಹ-ನಿರೋಧಕ ಜಾತಿಯಾಗಿದ್ದರೂ, ಅದರ ಆವಾಸಸ್ಥಾನ ಪ್ರವಾಹದಿಂದ ಹಾನಿಗೊಳಾಗಾಗಿತ್ತು.


ನೀರು ಹೆಚ್ಚಿದ್ದರೆ ಕಷ್ಟ
ನದಿಯು ಆಳವಿಲ್ಲದಿದ್ದಾಗ ಈ ಸಸ್ಯದ ಕೊಯ್ಲನ್ನು ಸುಲಭವಾಗಿ ಮಾಡಬಹುದು. ಅದೇ ನೀರು ಹೆಚ್ಚಿದ್ದರೆ ಇದರ ಕೊಯ್ಲು ಕಷ್ಟವಾಗುತ್ತದೆ. ಪ್ರವಾಹ ಬಂದು ಹೋದಮೇಲೂ ಇದೇ ಸ್ಥಿತಿ ಆದಿವಾಸಿಗಳಿಗೆ ಎದುರಾಯ್ತು. ಪ್ರವಾಹದ ನಂತರ ನದಿಯ ನೀರಿನ ಮಟ್ಟ ಹೆಚ್ಚಾಗಿ ಸಸ್ಯದ ಬೇರುಗಳನ್ನು ಸಂಗ್ರಹಿಸಿ ಮಾರಾಟ ಮಾಡುವುದು ಕಷ್ಟವಾಯಿತು.


ಇದನ್ನೂ ಓದಿ: China: ಭಾರತ ಜನಸಂಖ್ಯೆಯಲ್ಲಿ ನಂಬರ್ 1 ಎಂದು ಒಪ್ಪಲು ಸಾಧ್ಯವಿಲ್ಲ: ಚೀನಾದ ಹೊಸ ವಾದ


ಈ ಒಂದು ಪ್ರವಾಹದ ಪರಿಣಾಮ ಆದಿವಾಸಿಗಳನ್ನು ಮತ್ತಷ್ಟು ಬಡತನಕ್ಕೆ ತಳ್ಳಿತಲ್ಲದೇ ಅವರ ಜೀವನೋಪಾಯವನ್ನೇ ಕಿತ್ತುಕೊಂಡಿತು. ಈಗಲೂ ಸಹ ಇಲ್ಲಿನ ಜನ ಪ್ರವಾಹದ ಪರಿಣಾಮ ಎದುರಿಸುತ್ತಿದ್ದಾರೆ. ಅನೇಕರು ಬೇರೆ ಕೆಲಸ ಅರಸಿ ಕೂಡ ವಿವಿಧ ಪ್ರದೇಶಗಳಿಗೆ ತೆರಳಿದ್ದಾರೆ.

First published: