• Home
  • »
  • News
  • »
  • national-international
  • »
  • Karwa Chauth: ಮುಸ್ಲಿಮರು ಹಚ್ಚೋ ಮೆಹಂದಿ ಬೇಡ! ಗೋರಂಟಿ ಕೇಂದ್ರ ತೆರೆದ ಕೇಸರಿ ಪಡೆ

Karwa Chauth: ಮುಸ್ಲಿಮರು ಹಚ್ಚೋ ಮೆಹಂದಿ ಬೇಡ! ಗೋರಂಟಿ ಕೇಂದ್ರ ತೆರೆದ ಕೇಸರಿ ಪಡೆ

ಮೆಹೆಂದಿ

ಮೆಹೆಂದಿ

ಮುಸ್ಲಿಂ ಹೆಣ್ಣುಮಕ್ಕಳು ಸುಂದರವಾಗಿ ಮೆಹಂದಿ ಹಚ್ಚುತ್ತಾರೆ. ಆದರೆ ಈ ಬಾರಿ ಹಿಂದೂ ಹೆಣ್ಣುಮಕ್ಕಳು ಮುಸ್ಲಿಮರಿಂದ ಮೆಹಂದಿ ಹಚ್ಚಿಸಿಕೊಳ್ಳುವಂತಿಲ್ಲ. ಅದಕ್ಕಾಗಿಯೇ ಮೆಹಂದಿ ಕೇಂದ್ರ ತೆರೆದಿದೆ ಕೇಸರಿ ಪಡೆ.

  • News18 Kannada
  • Last Updated :
  • Uttar Pradesh, India
  • Share this:

    ದೇಶದ ವಿವಿಧೆಡೆ (Hindu Muslim)ಹಿಂದೂ ಮುಸ್ಲಿಂ ಸಂಘರ್ಷ ಆಗಾಗ ಆಗ್ತಾನೇ ಇರುತ್ತೆ. ಅದರಲ್ಲೂ ಕೆಲವೊಂದಿಷ್ಟು(sensitive area) ಸೂಕ್ಷ್ಮ ಪ್ರದೇಶಗಳಲ್ಲಿ ಸಣ್ಣ ಸಣ್ಣ ಕ್ಷುಲ್ಲಕ ವಿಚಾರಗಳಿಗೂ ದೊಡ್ಡ ಪ್ರಮಾಣದಲ್ಲಿ(Conflicts) ಘರ್ಷಣೆಗಳು ಸಂಭವಿಸುತ್ತವೆ. ಇದರಿಂದ ಅಪಾರ ಪ್ರವಾಣದ  (Possession)ಆಸ್ತಿಪಾಸ್ತಿ ಹಾನಿಯ ಜೊತೆಗೆ ಜೀವಹಾನಿಯೂ ಸಂಭವಿಸುತ್ತೆ. ಈ ಮಧ್ಯೆ, ಮುಸ್ಲಿವರಿಂದ (Love Jihad)ಲವ್‌ ಜಿಹಾದ್‌ ನಡೆಯುತ್ತದೆ ಅನ್ನೋ ಆರೋಪ ಮೊದಲಿನಿಂದಲೂ ಕೇಳಿಬರುತ್ತಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ಆಗಾಗ ಎಚ್ಚರಿಕೆಯನ್ನು ನೀಡುತ್ತಲೇ ಇವೆ. ಇದೀಗ (Uttar Pradesh) ಉತ್ತರ ಪ್ರದೇಶದಲ್ಲಿ ಮುಸ್ಲಿಮರಿಂದ ಕೈಗೆ (Mehendi)  ಮೆಹೆಂದಿ ಹಾಕಿಸಿಕೊಳ್ಳಬಾರದೆಂಬ ಬಗ್ಗೆ ಹಿಂದೂ ಮಹಿಳೆಯರಿಗೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.


    ಉತ್ತರ ಭಾರತದ ವಿವಾಹಿತ ಮಹಿಳೆಯರಿಗೆ ಇಂದು ಮತ್ತು ನಾಳೆ ಕರ್ವಾಚೌತ್‌ ಸಂಭ್ರಮ. ವಿವಾಹಿತ ಮಹಿಳೆಯರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುವ ಜನಪ್ರಿಯ ಹಿಂದೂ ಹಬ್ಬವಾದ ಕರ್ವಾ ಚೌತ್ ಪತಿಯ ಸುರಕ್ಷತೆ ಮತ್ತು ದೀರ್ಘಾಯುಷ್ಯಕ್ಕಾಗಿ ಆಚರಿಸಲಾಗುತ್ತದೆ. ಹಿಂದೂ ವಿವಾಹಿತ ಮಹಿಳೆಯರು 'ಕರ್ವಾ ಚೌತ್' ಆಚರಣೆಗಳ ಭಾಗವಾಗಿ ಬಗೆ ಬಗೆಯ ವಿನ್ಯಾಸಗಳಲ್ಲಿ ಮೆಹಂದಿ ಹಾಕಿಸಿಕೊಳ್ಳುತ್ತಾರೆ.


    ಮುಸ್ಲಿಮರು ಹಿಂದೂ ಹೆಣ್ಮಕ್ಕಳ ಕೈಗೆ ಮೆಹಂದಿ ಹಚ್ಚುವಂತಿಲ್ಲ


    ಅಂದಹಾಗೆ, ಈ ಸಂಭ್ರಮಕ್ಕೆ ಕಳೆ ಕಟ್ಟೋದೇ ಮಹಿಳೆಯರ ಕೈಗೆ ಹಾಕಲಾಗುವ ಮೆಹೆಂದಿಯಿಂದ. ಮೆಹೆಂದಿ ಹಾಕುವ ಕಲೆಯಲ್ಲಿ ಮುಸ್ಲಿಮರು ನಿಸ್ಸೀಮರು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ.


    ಆದರೆ, ಈ ಬಾರಿ ಉತ್ತರ ಪ್ರದೇಶದಲ್ಲಿ ಹಿಂದೂ ಮಹಿಳೆಯರ ಕೈಗೆ ಮುಸ್ಲಿಮರು ಮೆಹೆಂದಿ ಹಾಕಬಾರದು ಎಂಬಂತೆ ಎಚ್ಚರಿಕೆ ನೀಡಲಾಗಿದೆಯಂತೆ. ಆದರೆ ಮುಸ್ಲಿಮರು ಲವ್ ಜಿಹಾದ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೇಸರಿ ಪಡೆಗಳು, ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಹಿಂದೂ ಮಹಿಳೆಯರ ಕೈಗಳಿಗೆ ಮೆಹೆಂದಿ ಹಚ್ಚದಂತೆ ವಾರ್ನಿಂಗ್‌ ನೀಡಿವೆ.


    Representative image. Credit: DH Photo


    ಸೂಕ್ಷ್ಮ ಜಿಲ್ಲೆಗಳಲ್ಲಿ ಮೆಹೆಂದಿ ಕೇಂದ್ರ!


    ಹೆಚ್ಚಾಗಿ ಮುಸ್ಲಿಮರೇ ಹಾಕುವ ಈ ಮೆಹೆಂದಿ ಕಾರ್ಯಕ್ರಮವನ್ನು ಬದಲಾಯಿಸಬೇಕೆಂಬ ಕಾರಣದಿಂದ ವಿಶ್ವ ಹಿಂದೂ ಪರಿಷತ್ (V H P) ಮತ್ತು ಇತರ ಕೇಸರಿ ಸಂಘಟನೆಗಳು ಕೋಮು ಸೂಕ್ಷ್ಮ ಜಿಲ್ಲೆಯಾದ್ಯಂತ ಹಲವು ಮೆಹೆಂದಿ ಕೇಂದ್ರಗಳನ್ನು ತೆರೆದಿವೆ.


    ಅಲ್ಲಿ ಮಹಿಳೆಯರು ಹಿಂದೂ ಹುಡುಗಿಯರಿಂದ ತಮ್ಮ ಕೈಗಳಿಗೆ ಗೋರಂಟಿ ಹಚ್ಚಿಸಿಕೊಳ್ಳಬಹುದಾಗಿದೆ. "ನಾವು 13 ಗೋರಂಟಿ ಕೇಂದ್ರಗಳನ್ನು ತೆರೆದಿದ್ದೇವೆ. ನಮ್ಮ ಹೆಣ್ಣುಮಕ್ಕಳ ಕೈಗೆ ಗೋರಂಟಿ ಹಚ್ಚಲು ಕೇವಲ ಹಿಂದೂ ಹುಡುಗಿಯರನ್ನು ಮಾತ್ರ ನೇಮಿಸಿಕೊಳ್ಳಲಾಗಿದೆ" ಎಂದು ವಿಎಚ್‌ಪಿಯ ಹಿರಿಯ ಜಿಲ್ಲಾ ನಾಯಕರೊಬ್ಬರು ಮುಜಾಫರ್‌ ನಗರದಲ್ಲಿ ಹೇಳಿದ್ದಾರೆ.


    ಇದನ್ನೂ ಓದಿ: Bidar: ಮಸೀದಿಗೆ ನುಗ್ಗಿ ದಸರಾ ಪೂಜೆ! 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲು


    ಅಲ್ಲದೇ, “ಈ ಕ್ರಮವು ಲವ್ ಜಿಹಾದ್ ಮತ್ತು ಮತಾಂತರವನ್ನು ತಡೆಯಲು ಸಹಾಯ ಮಾಡುತ್ತದೆ. ಮುಸ್ಲಿಂ ಯುವಕರು ಗೋರಂಟಿ ಹಚ್ಚುವಾಗ ಹಿಂದೂ ಹುಡುಗಿಯರೊಂದಿಗೆ ಸ್ನೇಹ ಬೆಳೆಸುವ ಮೂಲಕ ಆಮಿಷ ಒಡ್ಡುತ್ತಾರೆ ಎಂಬುದನ್ನು ಗಮನಿಸಲಾಗಿದೆ" ಎಂದು ಅವರು ಹೇಳಿದ್ದಾರೆ.


    ಮಾರ್ಕೆಟ್​ಗಳ ಮೇಲೆ ನಿಗಾ


    ಇಷ್ಟೇ ಅಲ್ದೇ, ಹಿಂದೂ ಮಹಿಳೆಯರ ಮೇಲೆ ಗೋರಂಟಿ ಹಾಕುವ ಮುಸ್ಲಿಂ ಯುವಕರಿಗೆ ವಿಎಚ್‌ಪಿ ಕಾರ್ಯಕರ್ತರು ಒಳ್ಳೆಯ ಪಾಠ ಕಲಿಸುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ. ನಾವು ಜಿಲ್ಲೆಯ ಪ್ರಮುಖ ಮಾರುಕಟ್ಟೆಗಳ ಮೇಲೆ ನಿಗಾ ಇಡುತ್ತಿದ್ದೇವೆ. ಮುಸ್ಲಿಂ ಯುವಕರು ಹಿಂದೂ ಮಹಿಳೆಯರ ಮೇಲೆ ಗೋರಂಟಿ ಹಾಕುವಂತಿಲ್ಲ ಎಂದು ನಮ್ಮ ಕಾರ್ಯಕರ್ತರು ಖಾತ್ರಿಪಡಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದರು.


    ಇದನ್ನೂ ಓದಿ: Love Jihad Case: ನಮ್ದು ಲವ್ ಜಿಹಾದ್ ಅಲ್ಲ; ನಾನೇ ಮೆಚ್ಚಿ ಮದುವೆಯಾಗಿದ್ದು ಎಂದ ಚೈತ್ರಾ!


    ಆದಾಗ್ಯೂ, ವಿಎಚ್‌ಪಿಯ ಈ ಎಚ್ಚರಿಕೆ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ. "ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ" ಎಂದು ಮುಜಾಫರ್‌ನಗರ ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


    ಈ ಮಧ್ಯೆ, 2013 ರಲ್ಲಿ, ಮುಜಫರ್‌ನಗರವು ದೊಡ್ಡ ಪ್ರಮಾಣದ ಕೋಮು ಹಿಂಸಾಚಾರಕ್ಕೆ ಸಾಕ್ಷಿಯಾಗಿತ್ತು. ಇದರಲ್ಲಿ 60 ಜನರು ಸಾವನ್ನಪ್ಪಿದ್ದರು. ನೂರಾರು ಜನರಿಗೆ ಗಾಯಗಳಾಗಿದ್ದವು.

    First published: