ಕೇಸರಿಧಾರಿ ರೇಪಿಸ್ಟ್​ಗಳನ್ನು ಸನಾತನ ಧರ್ಮ ಸಮರ್ಥಿಸಿಕೊಳ್ಳುವುದಿಲ್ಲ; ದಿಗ್ವಿಜಯ್ ಸಿಂಗ್

ಭಾರತದ ಸನಾತನ ಧರ್ಮ, ವಿಶ್ವದ ಅತ್ಯಂತ ಪ್ರಾಚೀನ ಧರ್ಮ. ಆದರೆ, ಇಂತಹ ಧರ್ಮದ ಹೆಸರನ್ನು ಬಳಸಿಕೊಂಡಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆಯಂತಹ ಹೀನ ಕೆಲಸಕ್ಕೆ ಮುಂದಾಗುವವರನ್ನು ಯಾವ ದೇವರೂ ಕ್ಷಮಿಸಲಾರ ಮತ್ತು ಅಂತವರನ್ನು ಯಾವ ಧರ್ಮವೂ ರಕ್ಷಣೆ ಮಾಡಲಾರದು ಎಂದು ದ್ವಿಗ್ವಿಜಯ್​ ಸಿಂಗ್ ಕಿಡಿಕಾರಿದ್ದಾರೆ.

MAshok Kumar | news18-kannada
Updated:September 17, 2019, 5:33 PM IST
ಕೇಸರಿಧಾರಿ ರೇಪಿಸ್ಟ್​ಗಳನ್ನು ಸನಾತನ ಧರ್ಮ ಸಮರ್ಥಿಸಿಕೊಳ್ಳುವುದಿಲ್ಲ; ದಿಗ್ವಿಜಯ್ ಸಿಂಗ್
ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕ ದಿಗ್ವಿಜಯ್​ ಸಿಂಗ್.
  • Share this:
ಭೋಪಾಲ್ (ಸೆಪ್ಟೆಂಬರ್.17); ಇಂದಿನ ದಿನಗಳಲ್ಲಿ ಕೇಸರಿ ಬಟ್ಟೆ ಉಟ್ಟುಕೊಂಡು ಧರ್ಮ ರಕ್ಷಕರಂತೆ ಬಿಂಬಿಸಿಕೊಂಡಿರುವವರು ಸಹ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಿದ್ದಾರೆ. ಇಂತವರ ಅತ್ಯಾಚಾರ ಕೃತ್ಯಕ್ಕೆ ದೇವಾಲಯವಾದರೂ ಅಡ್ಡಿಯಿಲ್ಲ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ ಸನಾತನ ಧರ್ಮ ಇಂತಹ ರೇಪಿಸ್ಟ್​ಗಳನ್ನು ಸಮರ್ಥಿಸಿಕೊಳ್ಳುವುದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಮಧ್ಯಪ್ರದೇಶದ ಭೋಪಾಲ್​ನಲ್ಲಿ ಇಂದು ನಡೆದ “ಸಂತ್ ಸಮಾಗಮ್” ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಬಿಜೆಪಿ ಪಕ್ಷದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ಕುರಿತು ವಾಗ್ದಾಳಿ ನಡೆಸಿದ ಅವರು, “ಕಾನೂನು ವಿದ್ಯಾರ್ಥಿನಿಯೊಬ್ಬಳು ಈ ಸ್ವಯಂ ಘೋಷಿತ ದೇವಮಾನವ ತನ್ನ ಮೇಲೆ ಲೈಂಗಿಕ ಶೋಷಣೆ ಎಸಗಿದ್ದಾನೆ ಎಂದು ಆರೋಪಿಸಿದ್ದಾಳೆ.

ಭಾರತದ ಸನಾತನ ಧರ್ಮ, ವಿಶ್ವದ ಅತ್ಯಂತ ಪ್ರಾಚೀನ ಧರ್ಮ. ಆದರೆ, ಇಂತಹ ಧರ್ಮದ ಹೆಸರನ್ನು ಬಳಸಿಕೊಂಡಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಶೋಷಣೆಯಂತಹ ಹೀನ ಕೆಲಸಕ್ಕೆ ಮುಂದಾಗುವವರನ್ನು ಯಾವ ದೇವರೂ ಕ್ಷಮಿಸಲಾರ ಮತ್ತು ಅಂತವರನ್ನು ಯಾವ ಧರ್ಮವೂ ರಕ್ಷಣೆ ಮಾಡಲಾರದು” ಎಂದು ದ್ವಿಗ್ವಿಜಯ್​ ಸಿಂಗ್ ಕಿಡಿಕಾರಿದ್ದಾರೆ.

ಇದೇ ಸಂದರ್ಭದಲ್ಲಿ ರಾಮ್ ದೇವ್​ಬಾಬಾ ವಿರುದ್ಧವೂ ಟೀಕಾಪ್ರಹಾರ ನಡೆಸಿರುವ ಅವರು, “ಧರ್ಮಕ್ಕೆ ಆಧ್ಯಾತ್ಮಿಕವೇ ಸೂಕ್ತ ದಾರಿ. ಆದರೆ, ಕೆಲವರು ಧರ್ಮದ ಕುರಿತ ಆಧ್ಯಾತ್ಮಿಕ ದಾರಿಯನ್ನು ಅನುಸರಿಸುವ ಬದಲಾಗಿ ಧರ್ಮದ ಹೆಸರಿನಲ್ಲಿ ವಸ್ತುಗಳ ಮಾರಾಟಕ್ಕೆ ಇಳಿದಿದ್ದಾರೆ. ಪರಿಣಾಮ ಇಂದು ಪತಂಜಲಿ ಹೆಸರಿನಲ್ಲಿ ರಾಮ್ ದೇವ್​ಬಾಬಾ ಕೋಟಿ ಕೋಟಿ ಹಣ ಲಾಭ ಗಳಿಸುವ ಉದ್ಯಮವನ್ನೇ ನಿರ್ಮಿಸಿದ್ದಾರೆ” ಎಂದು ಕಿಡಿಕಾರಿದರು.

“ದೇಶದ ಮಠಗಳು ಹಾಗೂ ದೇವಾಲಯಗಳ ಮೇಲೆ ಹಕ್ಕು ಸಾಧಿಸಲು ಅವುಗಳನ್ನು ರಾಜಕೀಯ ಕೇಂದ್ರಗಳನ್ನಾಗಿಸುವ ಏಕೀಕೃತ ಪ್ರಯತ್ನಗಳು ಇಂದಿನ ದಿನಗಳಲ್ಲಿ ನಡೆಯುತ್ತಿವೆ. ಇಂತಹ ಧಾರ್ಮಿಕ ಮುಖ್ಯಸ್ಥರು ಯಾರನ್ನೂ ಶೋಷಿಸದಂತೆ ರಾಜಕೀಯ ನಾಯಕರು ನೋಡಿಕೊಳ್ಳಬೇಕು. ಇಂತವರ ವಿರುದ್ಧ ನಿರಂತರ ಹೋರಾಟ ನಡೆಸಬೇಕು ಮತ್ತು ಮಧ್ಯಪ್ರದೇಶದ ಕಮಲ್​ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿರುವ ಮಠ ಮತ್ತು ದೇವಾಲಯಗಳ ಸಮೀಕ್ಷೆ ನಡೆಸಿ ಭೂ ದಾಖಲೆಗಳನ್ನು ಧಾರ್ಮಿಕ ಸ್ಥಳಗಳ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು” ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಮಾಜಿ ಸಂಸದ ದಿಗ್ವಿಜಯ್​ ಸಿಂಗ್ 2019ರ ಲೋಕಸಭಾ ಚುನಾವಣೆಯಲ್ಲಿ ಭೋಪಾಲ್​ ನಿಂದ ಸ್ಪರ್ಧಿಸಿ ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾ ಸಿಂಗ್​ ಠಾಕೂರ್​ ವಿರುದ್ಧ ಸೋಲನುಭವಿಸಿದ್ದರು.

ಇದನ್ನೂ ಓದಿ : ಪಾಕಿಸ್ತಾನದ ವೈದ್ಯಕೀಯ ಕಾಲೇಜು ಹಾಸ್ಟೆಲ್​ನಲ್ಲಿ ಶವವಾಗಿ ಪತ್ತೆಯಾದ ಹಿಂದೂ ವಿದ್ಯಾರ್ಥಿನಿ; ಕೊಲೆ ಶಂಕೆ!
First published:September 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading