Sadhana Gupta Passed Away: ಮುಲಾಯಂ ಸಿಂಗ್ ಯಾದವ್ ಪತ್ನಿ ಸಾಧನಾ ಗುಪ್ತಾ ನಿಧನ

ಸಾಧನಾ ಗುಪ್ತಾ ಮತ್ತು ಮುಲಾಯಂ ಸಿಂಗ್ ಯಾದವ್

ಸಾಧನಾ ಗುಪ್ತಾ ಮತ್ತು ಮುಲಾಯಂ ಸಿಂಗ್ ಯಾದವ್

Mulayam Singh Yadav Wife Passed Away: ಕೆಲವು ದಿನಗಳ ಹಿಂದೆ  ಅನಾರೋಗ್ಯದ ಕಾರಣ ಮುಲಾಯಂ ಸಿಂಗ್ ಯಾದವ್ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದರು.

 • Share this:

  ಲಕ್ನೋ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ (Mulayam Singh Yadav Wife )ಸಾಧನಾ ಗುಪ್ತಾ ಶನಿವಾರ ನಿಧನರಾಗಿದ್ದಾರೆ. ಶ್ವಾಸಕೋಶದ ಸೋಂಕಿನಿಂದಾಗಿ ಅವರನ್ನು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಧನಾ ಗುಪ್ತಾ ಅವರ ಸಾವಿನ (Sadhana Gupta Passed Away) ಮಾಹಿತಿಯ ಮೇರೆಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಗೆ ತಲುಪಿದ್ದಾರೆ. ಸಾಧನಾ ಗುಪ್ತಾ ಅವರ ಪಾರ್ಥಿವ ಶರೀರವನ್ನು ಲಕ್ನೋಗೆ ತರಲಾಗುತ್ತಿದೆ. ಮುಲಾಯಂ ಸಿಂಗ್ ಯಾದವ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವರದಿಗಳು ತಿಳಿಸಿವೆ. ಕೆಲವು ದಿನಗಳ ಹಿಂದೆ  ಅನಾರೋಗ್ಯದ ಕಾರಣ ಮುಲಾಯಂ ಸಿಂಗ್ ಯಾದವ್ ಕೂಡ ಇದೇ ಆಸ್ಪತ್ರೆಗೆ ದಾಖಲಾಗಿದ್ದರು.


  ಸಾಧನಾ ಗುಪ್ತಾ ಅವರು ಮುಲಾಯಂ ಸಿಂಗ್ ಯಾದವ್​ರ 2ನೇ ಪತ್ನಿಯಾಗಿದ್ದರು. ಮುಲಾಯಂ ಸಿಂಗ್ ಯಾದವ್ ಅವರ ಮೊದಲ ಪತ್ನಿ ಮತ್ತು ಅಖಿಲೇಶ್ ಯಾದವ್ ಅವರ ತಾಯಿ ಮಾಲ್ತಿ ಯಾದವ್ 2003 ರಲ್ಲಿ ನಿಧನರಾಗಿದ್ದರು. ಆನಂತರ ಸಾಧನಾ ಗುಪ್ತಾ  ಮುಲಾಯಂ ಸಿಂಗ್ ಯಾದವ್ ಅವರನ್ನು ವಿವಾಹವಾಗಿದ್ದರು.


  ಸಾಧನಾ ಗುಪ್ತಾ ಸೊಸೆ ಬಿಜೆಪಿ ನಾಯಕಿ!
  ಸಾಧನಾ ಗುಪ್ತಾ ಪ್ರತೀಕ್ ಯಾದವ್ ಅವರ ತಾಯಿ. ಪ್ರತೀಕ್ ಯಾದವ್ ಅವರ ಪತ್ನಿ ಬಿಜೆಪಿ ನಾಯಕಿ ಅಪರ್ಣಾ ಬಿಷ್ತ್ ಯಾದವ್!  ಪ್ರತೀಕ್ ಯಾದವ್ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾರೆ. ಪ್ರತೀಕ್ ಯಾದವ್ ರಾಜಕೀಯದಲ್ಲಿ ಸಕ್ರಿಯವಾಗಿಲ್ಲ.ಆದರೆ ಅವರ ಪತ್ನಿ ಅಪರ್ಣಾ ಯಾದವ್ ರಾಜಕೀಯ ಪ್ರವೇಶಿಸಿ ಬಿಜೆಪಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಪರ್ಣಾ ಯಾದವ್ ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಲಕ್ನೋದ ಕ್ಯಾಂಟ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.


  ಕೇಶವ್ ಪ್ರಸಾದ್ ಮೌರ್ಯ ಸಂತಾಪ
  ಸಾಧನಾ ಗುಪ್ತಾ ಅವರ ನಿಧನಕ್ಕೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಸಂತಾಪ ಸೂಚಿಸಿದ್ದಾರೆ.


  ಈ ಕುರಿತು ಟ್ವೀಟ್ ಮಾಡಿರುವ ಅವರು, ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಅವರ ನಿಧನದ ದುಃಖದ ಸುದ್ದಿ ಹೊರಬಿದ್ದಿದೆ. ಭಗವಂತ ಅವರ ಪವಿತ್ರ ಆತ್ಮಕ್ಕೆ ಅವರ ಪಾದದಲ್ಲಿ ಸ್ಥಾನ ನೀಡಲಿ, ಮುಲಾಯಂ ಸಿಂಗ್ ಅವರಿಗೆ ಧೈರ್ಯವನ್ನು ನೀಡಲಿ ಮತ್ತು ಅವರ ಕುಟುಂಬ ಸದಸ್ಯರು ಈ ನಷ್ಟವನ್ನು ಭರಿಸುವ ಶಕ್ತಿ ತುಂಬಲಿ ಎಂದು ಟ್ವೀಟ್ ಮಾಡಿದ್ದಾರೆ.


  ಇದನ್ನೂ ಓದಿ: Gotabaya Rajapaksa: ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅಧಿಕೃತ ನಿವಾಸದಿಂದ ಪರಾರಿ


  ಮೂಲಗಳ ಪ್ರಕಾರ ಮುಲಾಯಂ ಸಿಂಗ್ ಯಾದವ್ ಅವರ ಪತ್ನಿ ಸಾಧನಾ ಗುಪ್ತಾ ಬಹಳ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಔಷಧಿಗಳು ಮತ್ತು ಚಿಕಿತ್ಸೆ ನೀಡಿದರೂ ಅವರ ಪರಿಸ್ಥಿತಿ ಸುಧಾರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

  Published by:guruganesh bhat
  First published: