HOME » NEWS » National-international » SADHGURU TO OFFER MEDITATION SESSIONS AND CONSCIOUSNESS RETREAT TO PARTICIPANTS AT WEF 2020 DAVOS SNVS

ದಾವೋಸ್ ಸಮ್ಮೇಳನ: ಧ್ಯಾನದ ಪಾಠ ಮಾಡಲಿರುವ ಸದ್ಗುರು

ವಿಶ್ವದ ಹಲವು ಪ್ರಮುಖ ಮುಖಂಡರು, ಪರಿಸರ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಸಾಕಷ್ಟು ಮರಗಳನ್ನ ನೆಡಿಸುವ ಕಾಯಕ ಮಾಡುತ್ತಿರುವ ಸದ್ಗುರು ಅವರು ಈ ವೇದಿಕೆಯಲ್ಲಿ ಭಾಷಣಕಾರರಲ್ಲೊಬ್ಬರಾಗಿದ್ದಾರೆ.

news18
Updated:January 20, 2020, 7:39 PM IST
ದಾವೋಸ್ ಸಮ್ಮೇಳನ: ಧ್ಯಾನದ ಪಾಠ ಮಾಡಲಿರುವ ಸದ್ಗುರು
ಸದ್ಗುರು ಜಗ್ಗಿ ವಾಸುದೇವ್
  • News18
  • Last Updated: January 20, 2020, 7:39 PM IST
  • Share this:
ದಾವೋಸ್, ಸ್ವಿಟ್ಜರ್​ಲೆಂಡ್(ಜ. 20): ಭಾರತದಲ್ಲಿ ಪರಿಸರ ಮತ್ತು ಜಲ ಸಂರಕ್ಷಣೆಗೆ ಹೋರಾಟ ನಡೆಸುತ್ತಿರುವ ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಈ ಬಾರಿಯ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ಧಾರೆ. ಸ್ವಿಟ್ಜರ್​ಲೆಂಡ್ ದೇಶದ ದಾವೋಸ್​ನಲ್ಲಿ ಜನವರಿ 21ರಿಂದ 24ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ ಸದ್ಗುರು ಅವರು ಧ್ಯಾನದ ಬಗ್ಗೆ ಉಪನ್ಯಾಸಗಳನ್ನು ನೀಡಲಿದ್ಧಾರೆ. ಹಾಗೆಯೇ, ಜ. 23ರಂದು ಚಾಂಪಿಯನ್ಸ್ ಆರ್ 1 ಟ್ರಿಲಿಯನ್ ಟ್ರೀಸ್ ಪ್ಲಾಟ್​ಫಾರಂ ಕಾರ್ಯಕ್ರಮದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ.

ವಿಶ್ವಸಂಸ್ಥೆಯ ಪರಿಸರ ಯೋಜನೆ(ಯುಎನ್​ಇಪಿ) ನೇತೃತ್ವದಲ್ಲಿ ನಡೆಯಲಿರುವ ಚಾಂಪಿಯನ್ಸ್ ಫಾರ್ 1 ಟ್ರಿಲಿಯನ್ ಟ್ರೀಸ್ ಪ್ಲಾಟ್​ಫಾರಂ ವೇದಿಕೆಯು 2030ರಷ್ಟರಲ್ಲಿ ಜಾಗತಿಕವಾಗಿ 1 ಲಕ್ಷ ಮರಗಳನ್ನು ನೆಟ್ಟು ಬೆಳೆಸುವ ಒಂದು ಮಹೋದ್ದೇಶದ ಯೋಜನೆ ಹಮ್ಮಿಕೊಂಡಿದೆ. ಭೂಮಿಯ ಪರಿಸರ ಸಮತೋಲನ ಸಾಧಿಸುವ ಹೆಗ್ಗುರಿ ಹೊಂದಿದೆ.

ಇದನ್ನೂ ಓದಿ: Cauvery Calling: ಕಾವೇರಿ ಕೂಗಿಗಾಗಿ ಸದ್ಗುರು ಜೊತೆ ಕೈ ಜೋಡಿಸಿದ ರಕ್ಷಿತ್​, ದಿಗಂತ್

ವಿಶ್ವದ ಹಲವು ಪ್ರಮುಖ ಮುಖಂಡರು, ಪರಿಸರ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತದಲ್ಲಿ ಸಾಕಷ್ಟು ಮರಗಳನ್ನ ನೆಡಿಸುವ ಕಾಯಕ ಮಾಡುತ್ತಿರುವ ಸದ್ಗುರು ಅವರು ಈ ವೇದಿಕೆಯಲ್ಲಿ ಭಾಷಣಕಾರರಲ್ಲೊಬ್ಬರಾಗಿದ್ದಾರೆ.

ಇಶಾ ಫೌಂಡೇಶನ್ ಮೂಲಕ ಸದ್ಗುರು ಜಗ್ಗಿ ವಾಸುದೇವ್ ಅವರು ವಿಶ್ವ ಸಂಸ್ಥೆಯ ಈ ಯೋಜನೆಯ ನಿಟ್ಟಿನಲ್ಲೇ ಹಲವು ಕಾರ್ಯಕ್ರಮಗಳನ್ನು ಭಾರತದಲ್ಲಿ ಹಮ್ಮಿಕೊಂಡಿದ್ದಾರೆ. 15 ವರ್ಷದಲ್ಲಿ 3.5 ಕೋಟಿ ಮರಗಳನ್ನು ನೆಡುವ ಕಾಯಕಕ್ಕೆ 30 ಲಕ್ಷ ಜನರನ್ನು ಸೇರಿಸಿಕೊಂಡಿದ್ಧಾರೆ. ವಿವಿಧ ನದಿಗಳ ಪುನರುತ್ಥಾನಕ್ಕೆ Rally for Rivers ಆಂದೋಲನವನ್ನೇ ಪ್ರಾರಂಭಿಸಿದ್ಧಾರೆ. ಇದಕ್ಕೆ 30 ದಿನದಲ್ಲೇ 16.2 ಕೋಟಿ ಜನರಿಂದ ಬೆಂಬಲ ವ್ಯಕ್ತವಾಗಿದೆ. ಇದು ವಿಶ್ವದಲ್ಲೇ ಅತೀ ಬೃಹತ್ ಆಂದೋಲನ ಎಂದು ಪರಿಗಣಿತವಾಗಿದೆ.

ಇದನ್ನೂ ಓದಿ: Mission Paani: ಎಲ್ಲಾ ಜೀವರಾಶಿಗಳಿಗಾಗಿ ನದಿಗಳ ರಕ್ಷಣೆಯಾಗಬೇಕಿದೆ: ಸದ್ಗುರು ಜಗ್ಗಿ ವಾಸುದೇವ್​

ರ್ಯಾಲಿ ಫಾರ್ ರಿವರ್ಸ್​ನ ಭಾಗವಾಗಿ ಕಾವೇರಿ ಕರೆ (Cauver Calling) ಎಂಬ ಇವರ ಯೋಜನೆಯಲ್ಲಿ ಕಾವೇರಿ ನದಿ ಜಲಾನಯನ ಪ್ರದೇಶದಲ್ಲಿರುವ 50 ಲಕ್ಷ ರೈತರು 12 ವರ್ಷಗಳ ಅವಧಿಯಲ್ಲಿ 242 ಕೋಟಿ ಮರಗಳನ್ನು ನೆಟ್ಟು ಹಸಿರುಪ್ರದೇಶದ ವ್ಯಾಪ್ತಿ ಹೆಚ್ಚಿಸುವ ಗುರಿ ಇಟ್ಟುಕೊಂಡಿದ್ಧಾರೆ. ಇವರ ಈ ಎಲ್ಲಾ ಯೋಜನೆಗಳು ಜಾಗತಿಕವಾಗಿ ಗಮನ ಸೆಳೆಯುತ್ತಿವೆ.ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: January 20, 2020, 7:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories