Video: ತೆಂಡೂಲ್ಕರ್ ಅವರ ಶ್ರದ್ಧೆ ಹಾಗೂ ಏಕಾಗ್ರತೆ ಎಲ್ಲರಿಗೂ ಅಸಾಧ್ಯ: ಸದ್ಗುರು

Sachin Tendulkar-Sadhguru Jaggi Vasudev

Sachin Tendulkar-Sadhguru Jaggi Vasudev

Sachin Tendulkar: ಸಚಿನ್ ಅವರು ಆಟದ ಎಲ್ಲಾ ಪ್ರಕಾರಗಳಲ್ಲಿ 34,357 ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಲಿಟಲ್‌ ಮಾಸ್ಟರ್ ಎಂದೇ ಖ್ಯಾತಿ ಆಗಿರುವ ಸಚಿನ್ ಇತರೆ ಎಲ್ಲ ಆಟಗಾರರಿಗಿಂತ ಮುಂದಿದ್ದಾರೆ.

  • Share this:

ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ ಮೈದಾನವನ್ನು ಅಲಂಕರಿಸಿದ, ಸಾಧಿಸಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಟೆಸ್ಟ್ ಪಂದ್ಯಗಳಲ್ಲಿ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ತೆಂಡೂಲ್ಕರ್ ಅತಿ ಹೆಚ್ಚು ರನ್ ಗಳಿಸಿದ ಅಗ್ರಜರಾಗಿದ್ದಾರೆ. ತಮ್ಮ ವೃತ್ತಿ ಸಮಯದಲ್ಲಿ ಭಾರತದ ಬ್ಯಾಟಿಂಗ್ ಭಾರವನ್ನು ಒಂದೆರಡು ದಶಕಗಳಿಗಿಂತಲೂ ಹೆಚ್ಚು ಕಾಲ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಸಚಿನ್ ಅವರು ಆಟದ ಎಲ್ಲಾ ಪ್ರಕಾರಗಳಲ್ಲಿ 34,357 ಅಂತರರಾಷ್ಟ್ರೀಯ ರನ್ ಗಳಿಸಿದ್ದಾರೆ. ಲಿಟಲ್‌ ಮಾಸ್ಟರ್ ಎಂದೇ ಖ್ಯಾತಿ ಆಗಿರುವ ಸಚಿನ್ ಇತರೆ ಎಲ್ಲ ಆಟಗಾರರಿಗಿಂತ ಮುಂದಿದ್ದಾರೆ.


ಭಾರತದಲ್ಲಿ ಯಾರಿಗೂ ಕೂಡ ಸಚಿನ್ ತೆಂಡೂಲ್ಕರ್ ಅವರ ಪರಿಚಯದ ಅಗತ್ಯವಿಲ್ಲ. ಅವರ ಯಶಸ್ಸು ಮತ್ತು ಸಾಧನೆಗಳು ಮುಂದಿನ ಪೀಳಿಗೆಗೆ ಮಾನದಂಡವಾಗುತ್ತವೆ. ಆದ್ದರಿಂದ, ಸಚಿನ್​ಗೆ ಇಂತಹ ಸಾಧನೆ ಹೇಗೆ ಸಾಧ್ಯವಾಯಿತು ಎಂಬ ಬಗ್ಗೆ ಕುತೂಹಲ ಇರುವುದು ಸಾಮಾನ್ಯವಾಗಿದೆ. ಕ್ರಿಕೆಟ್ ಆಡಲು ಬರುವ ಎಲ್ಲ ಆಟಗಾರರೂ ಕೂಡ ಕ್ರಿಕೆಟ್​ಗೆ ಬಂದ ತಕ್ಷಣ ಶತಕಗಳನ್ನು ಹೊಡೆಯುವುದನ್ನು ನೋಡುತ್ತಾರೆ. ಆಟಗಾರರು ಹೇಗೆ ಯಶಸ್ಸನ್ನು ಗಳಿಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಅವರ ಸ್ಟಾರ್ ಗಿರಿ ನಿಂತಿರುತ್ತದೆ. ಆದರೆ ಸಚಿನ್ ಸಾಧಿಸಿದ ದೀರ್ಘಾವಧಿಯ ಯಶಸ್ಸು ಅದ್ಭುತವಾದುದು. ಯಶಸ್ಸು ಅಲ್ಪಾವಧಿಯವರೆಗೆ ಇರುವ ಈ ಯುಗದಲ್ಲಿ ಸುದೀರ್ಘ ಅವಧಿಯವರೆಗೆ ಯಶಸ್ಸನ್ನು ಗಳಿಸಿರುವುದು ವಿಶೇಷ. ಆದ್ದರಿಂದ ಸದ್ಗುರು ಎಂದು ವ್ಯಾಪಕವಾಗಿ ಕರೆಯಲ್ಪಡುವ ಜಗ್ಗಿ ವಾಸುದೇವ್ ಅವರಂತಹವರು ಸಚಿನ್ ತೆಂಡೂಲ್ಕರ್ ಅವರ ಯಶಸ್ಸಿನ ಹಿಂದಿನ ಕಾರಣದ ಬಗ್ಗೆ ಮಾತನಾಡುವಾಗ, ಹಲವು ಸಾರಿ ವಿಚಾರ ಮಾಡುತ್ತಾರೆ. ಅಲ್ಲದೆ ತೆಂಡೂಲ್ಕರ್ ಅವರ ಸಾಧನೆಯ ಕುರಿತು ಹೆಮ್ಮೆ ಪಡುತ್ತಾರೆ.


ಸಚಿನ್ ಹೇಗೆ ಕ್ರಿಕೆಟ್ ಲೋಕದ ದೇವರಾದರು ಎಂಬುದರ ಕುರಿತು ಸದ್ಗುರು ಮಾತನಾಡುತ್ತಾ, ಸಚಿನ್ ತೆಂಡೂಲ್ಕರ್ ಗೆ ಚೆಂಡನ್ನು ಹೊಡೆಯುವುದನ್ನು ಬಿಟ್ಟರೆ ಬೇರೇನೂ ತಿಳಿದಿಲ್ಲ. ಅವರಿಗೆ ಚೆಂಡನ್ನು ಬಾರಿಸುವುದು ಮಾತ್ರವೇ ಗೊತ್ತಿದೆ. ಚೆಂಡನ್ನು ಹೊಡೆಯುವುದರ ಕುರಿತು ತೆಂಡೂಲ್ಕರ್ ಬಹಳ ಶ್ರದ್ಧೆಯನ್ನು ಹೊಂದಿದ್ದಾರೆ. ಅವರು ಚೆಂಡನ್ನು ಹೊಡೆಯುವಲ್ಲಿ ಬೇರೆ ಯಾರನ್ನೂ ಕೂಡ ಅನುಕರಣೆ ಮಾಡುವುದಿಲ್ಲ. ಕ್ರಿಕೆಟ್ ಆಟವನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಆಡಿದ ಕಾರಣದಿಂದಲೇ ತೆಂಡೂಲ್ಕರ್ ಇದೀಗ ಭಾರತ ರತ್ನವಾಗಿ ಹೊರ ಹೊಮ್ಮಿದ್ದಾರೆ. ನೀವು ಸಚಿನ್ ತೆಂಡೂಲ್ಕರ್ ಅವರ ಜತೆ ಖಾಸಗಿಯಾಗಿ ಮಾತನಾಡಿದಾಗಲೇ ಕ್ರಿಕೆಟ್ ಕುರಿತಾದ ಅವರ ಪ್ರೀತಿ, ಶ್ರದ್ಧೆ ಹಾಗೂ ಅವಿನಾಭಾವ ಸಂದರ್ಭದ ಪರಿಚಯ ನಮಗೆ ಆಗುತ್ತದೆ" ಎಂದು ಹೇಳಿದ್ದಾರೆ.


 


ಸಚಿನ್ ಪಾಲಿಗೆ ಕ್ರಿಕೆಟ್ ಎನ್ನುವುದು ಧರ್ಮವೇ ಆಗಿ ಹೋಗಿದೆ. ಕ್ರಿಕೆಟ್ ಸಚಿನ್ ಪಾಲಿಗೆ ಬಹಳ ಪವಿತ್ರ ವಿಷಯ. ಕ್ರಿಕೆಟ್ ಎಂದರೆ ಸಚಿನ್ ಪಾಲಿಗೆ ಎಲ್ಲವೂ ಆಗಿದೆ. ಸಚಿನ್​ಗೆ ಕ್ರಿಕೆಟ್ ಎಂದರೆ ಚೆಂಡನ್ನು ಹೊಡೆಯುವುದು ಹಾಗೂ ಚೆಂಡನ್ನು ಹೊಡೆಯುವುದು ಅಷ್ಟೇ. ಅವರು ಕ್ರಿಕೆಟ್ ಬಗ್ಗೆ ಬಹಳ ಅಧ್ಯಯನ ಮಾಡಿದ್ದಾರೆ. ಚೆಂಡನ್ನು ಹೊಡೆಯುವುದು ಸುಲಭದ ಕಾರ್ಯವಲ್ಲ. ಎಲ್ಲರೂ ಯಶಸ್ವಿ ಕ್ರಿಕೆಟರ್ ಆಗಲು ಸಾಧ್ಯವಿಲ್ಲ. ಶ್ರದ್ಧೆ ಹಾಗೂ ಶ್ರಮದಿಂದ ತೆಂಡೂಲ್ಕರ್ ಇದನ್ನು ಸಾಧಿಸಿಕೊಂಡಿದ್ದಾರೆ ಎಂದು ಸದ್ಗುರು ಅವರು ತೆಂಡೂಲ್ಕರ್ ಅವರ ಗುಣಗಾನ ಮಾಡಿದ್ದಾರೆ.


First published: