• Home
 • »
 • News
 • »
 • national-international
 • »
 • ಲಂಡನ್​​ನಿಂದ ಬೈಕ್​​ನಲ್ಲಿ ಹೊರಟು ಭಾರತ ತಲುಪಲಿರುವ Sadhguru.. ಇದರ ಹಿಂದಿನ ಉದ್ದೇಶವೇನು?

ಲಂಡನ್​​ನಿಂದ ಬೈಕ್​​ನಲ್ಲಿ ಹೊರಟು ಭಾರತ ತಲುಪಲಿರುವ Sadhguru.. ಇದರ ಹಿಂದಿನ ಉದ್ದೇಶವೇನು?

ಸದ್ಗುರು ಬೈಕ್​ ಸವಾರಿ

ಸದ್ಗುರು ಬೈಕ್​ ಸವಾರಿ

ಸದ್ಗುರು  ಮಣ್ಣು ಸಂರಕ್ಷಣಾ ಅಭಿಯಾನಕ್ಕಾಗಿ ಬೈಕ್ ಏರಿ ಪ್ರವಾಸ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಅವರು 30,000 ಕಿ.ಮೀ ಗಳಷ್ಟು ಪ್ರವಾಸವನ್ನು ಬೈಕ್ ಮೂಲಕವೇ ಮಾಡಲಿದ್ದು, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಹಾದು ಕೊನೆಗೆ ಭಾರತ ತಲುಪಲಿದ್ದಾರೆಂದು ತಿಳಿದು ಬಂದಿದೆ.

 • Share this:

  ಜಗ್ಗಿ ವಾಸುದೇವ್ (Jaggi Vasudev) ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದಿನ ದಿನಮಾನಗಳಲ್ಲಿ ಯುವ ಸಮುದಾಯದವರಿಂದ ಹಿಡಿದು ಹಿರಿಯರವರೆಗೂ ಅತಿ ನೆಚ್ಚಿನ ಚಿಂತಕರಾಗಿಯೂ, ಯೋಗ ಶಿಕ್ಷಕರಾಗಿಯೂ(Yoga Teacher) , ಸಾಮಾಜಿಕ ಕಾರ್ಯಕರ್ತರಾಗಿಯೂ(Social Activist), ಪರಿಸರವಾದಿಯಾಗಿಯೂ(Environmentalist) , ಆಧ್ಯಾತ್ಮಿಕ ಗುರುಗಳಾಗಿಯೂ (Spiritual Guru) , ಬುದ್ಧಿಜೀವಿಯಾಗಿಯೂ ಇನ್ನೂ ಏನೇನೋ ಸ್ತರಗಳಲ್ಲಿ ಜನಪ್ರಿಯ ಸಾಧಕರಾಗಿ ಹೆಸರುವಾಸಿಯಾಗಿದ್ದಾರೆ. ಜಗತ್ತಿನಾದ್ಯಂತ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಜಗ್ಗಿ ವಾಸುದೇವ್ ಅವರನ್ನು ಎಲ್ಲರೂ ಪ್ರೀತಿ ಹಾಗೂ ಗೌರವದಿಂದ 'ಸದ್ಗುರು' ( Sadhguru ) ಎಂದೇ ಸಂಭೋದಿಸುತ್ತಾರೆ. ಸಮಾಜ ಹಾಗೂ ಮಾನವ ಕಲ್ಯಾಣಕ್ಕೆ ಸಂಬಂಧಿಸಿದಂತೆ ಸದ್ಗುರು ಮೊದಲಿನಿಂದಲೂ ತಮ್ಮ ಕೊಡುಗೆ ನೀಡುತ್ತಲೇ ಬಂದಿದ್ದು, ಹಲವಾರು ಅಭಿಯಾನಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದಾರೆ. ಈ ಹಿಂದೆ 'ಕಾವೇರಿ ಕರೆ' ಎಂಬ ಅಭಿಯಾನವನ್ನು ಕರ್ನಾಟಕ-ತಮಿಳುನಾಡು ರಾಜ್ಯಗಳ ಮಧ್ಯೆ ಮಾಡಿ ಜನರಲ್ಲಿ ಬರಿದಾಗುತ್ತಿರುವ ಕಾವೇರಿ ನದಿಯ ಸಂರಕ್ಷಣೆಯ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದ್ದರು.


  ಇದನ್ನೂ ಓದಿ: PHOTOS : ಬೆಳ್ಳುಳ್ಳಿಯಿಂದಲೇ ಲಕ್ಷ ಲಕ್ಷ ಆದಾಯ; ಗ್ರಾಮೀಣ ಮಹಿಳೆಯರ ಬದುಕೇ ಬದಲಾಯಿತು


  30 ಸಾವಿರ ಕಿ.ಮೀ.  ಬೈಕ್ ಸವಾರಿ


  ಇದೀಗ ಮತ್ತೊಂದು ಪರಿಸರ ಸ್ನೇಹಿಯಾದ ಅಭಿಯಾನದೊಂದಿಗೆ ಸದ್ಗುರು ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಮಣ್ಣಿನ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದು ಅದಕ್ಕಾಗಿ ಬೈಕ್ ಸವಾರಿ ಮೂಲಕ ಅಭಿಯಾನವನ್ನು ಕೈಗೊಂಡಿದ್ದಾರೆ. ಬೈಕ್ ಸವಾರಿ ಎಂದ ಮಾತ್ರಕ್ಕೆ ನೀವು ಇದು ಸುಮ್ಮನೆ ಬೈಕ್ ಒಂದನ್ನು ತೆಗೆದುಕೊಂಡು ಅಲ್ಲಿಂದಿಲ್ಲಿಗೆ ಹೋಗುವ ಅಭಿಯಾನ ಎಂದು ತಿಳಿದುಕೊಳ್ಳಬೇಡಿ. ಸದ್ಗುರು ಈ ಅಭಿಯಾನದಡಿ ಯುಕೆ ದೇಶದಿಂದ ಭಾರತದವರೆಗೂ ಬೈಕ್ ಸವಾರಿ ಮಾಡಲಿದ್ದಾರೆ.


  ಸೋಮವಾರ, ಲಂಡನ್​​ನ ಪಾರ್ಲಿಮೆಂಟ್ ಸ್ಕ್ವೇರ್ ನಲ್ಲಿ ಅಪಾರ ಅಭಿಮಾನಿಗಳು ಹಾಗೂ ಅನುಯಾಯಿಗಳ ಮಧ್ಯೆ ಸದ್ಗುರು  ಮಣ್ಣು ಸಂರಕ್ಷಣಾ ಅಭಿಯಾನಕ್ಕಾಗಿ ಬೈಕ್ ಏರಿ ಪ್ರವಾಸ ಆರಂಭಿಸಿದ್ದಾರೆ. ಈ ಅಭಿಯಾನದಲ್ಲಿ ಅವರು 30,000 ಕಿ.ಮೀ ಗಳಷ್ಟು ಪ್ರವಾಸವನ್ನು ಬೈಕ್ ಮೂಲಕವೇ ಮಾಡಲಿದ್ದು, ಯುರೋಪ್ ಹಾಗೂ ಮಧ್ಯಪ್ರಾಚ್ಯ ರಾಷ್ಟ್ರಗಳ ಮೂಲಕ ಹಾದು  ಕೊನೆಗೆ ಭಾರತ ತಲುಪಲಿದ್ದಾರೆಂದು ತಿಳಿದು ಬಂದಿದೆ.


  ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ


  64ರ ವಯೋಮಾನದವರಾದ ಸದ್ಗುರು ಇಂದಿಗೂ ಆರೋಗ್ಯದ ವಿಷಯದಲ್ಲಿ ಸಾಕಷ್ಟು ಫಿಟ್ ಆಗಿದ್ದು ತಮ್ಮ ನೂರು ದಿನಗಳ ಪ್ರವಾಸಕ್ಕಾಗಿ ಬೈಕಿಂಗ್ ವಸ್ತ್ರಗಳೊಂದಿಗೆ ಸಜ್ಜಾಗಿ ತಮ್ಮ ಪ್ರವಾಸ ಆರಂಭಿಸಿದರು. ಅವರು ಈ ಅಭಿಯಾನದಲ್ಲಿ ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತ ಆ್ಯಮ್‌ಸ್ಟರ್‌ಡ್ಯಾಮ್‌, ಬರ್ಲಿನ್, ಪ್ರೇಗ್ ಮುಂತಾದ ದೇಶಗಳ ಮೇಲೆ ಹಾದು ಹೋಗಲಿದ್ದಾರೆ. ಸದ್ಗುರು ಈ ಪ್ರವಾಸಕ್ಕಾಗಿ BMW K1600 GT ಮೋಟರ್ ಸೈಕಲ್ ಬಳಸುತ್ತಿದ್ದಾರೆ.


  ಸದ್ಗುರು ತಮ್ಮ ಈ ಪ್ರವಾಸಾಭಿಯಾನದಲ್ಲಿ ಮೊದಲೇ ನಿಗದಿಪಡಿಸಲಾಗಿರುವಂತೆ ಕೆಲವು ಪ್ರಮುಖ ನಗರಗಳಲ್ಲಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು ಈ ಮುಂಚೆಯೇ ಯೋಜಿಸಲಾಗಿರುವಂತೆ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಸುಸಂದರ್ಭದ ಸಮಯದಲ್ಲಿ 75 ದಿನಗಳ ಮುನ್ನ ನವದೆಹಲಿಗೆ ಬಂದು ಸೇರಲಿದ್ದಾರೆಂದು ತಿಳಿದುಬಂದಿದೆ.


  ಸದ್ಗುರು ಮಾತು 


  ತಮ್ಮ ಪ್ರಯಾಣ ಆರಂಭಿಸುವುದಕ್ಕೂ ಮುಂಚೆ ಲಂಡನ್ನಿನ ಭಾರತೀಯ ರಾಯಭಾರಿ ಕಚೇರಿ ಎದುರು ಮಾಧ್ಯಮದವರೊಂದಿಗೆ ಮಾತನಾಡಿದ ಸದ್ಗುರು ಅವರು, "ನಾವು ಈಗಲೇ ಈ ಬಗ್ಗೆ ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಾಗಿದೆ. ನಾನು ಈ ಬಗ್ಗೆ ಕಳೆದ 24 ವರ್ಷಗಳಿಂದ ಮಾತನಾಡುತ್ತಿದ್ದೇನೆ. ಆದರೆ, ಇದಕ್ಕೆ ಪರಿಹಾರ ಎಂಬುದು ಸಿಗಬೇಕೆಂದರೆ ಈ ಬಗ್ಗೆ ಪ್ರತಿಯೊಂದು ರಾಷ್ಟ್ರಗಳು ಧನಾತ್ಮಕ ನೀತಿಯನ್ನು ರೂಪಿಸಿದಾಗ ಮಾತ್ರವೇ ಸಾಧ್ಯವಾಗುತ್ತದೆ" ಎಂದು ನುಡಿದರು.


  ಇದನ್ನೂ ಓದಿ: Viral Video: ನಂಗೆ ಸ್ಕೂಲ್​ಗೆ ಹೋಗೋಕೆ ಆಗ್ತಿಲ್ಲ, ಪ್ಲೀಸ್​ ಬಂದು ನೋಡಿ ಸರ್​.. ಠಾಣೆ ಮೆಟ್ಟಿಲೇರಿದ ಪುಟ್ಟ ಬಾಲಕ


  ಮಣ್ಣಿನ ಸಂರಕ್ಷಣೆ ಏಕೆ ಮಾಡಬೇಕು? 


  ಹಾಗೂ "ಈಗಲೂ ನಾನು ಪ್ರಯಾಣಿಸುವ ಯುರೋಪಿನ ಕೆಲವು ಭಾಗಗಳಲ್ಲಿ ಹಿಮ ಸುರಿಯುತ್ತಿದೆ. ಆದರೂ, ನಾನು ಬೈಕ್ ಮೂಲಕ ಪ್ರಯಾಣಿಸುತ್ತಿದ್ದೇನೆ. ನನ್ನ ಈ ವಯಸ್ಸಿಗೆ ಇದು ಖಂಡಿತ ಜಾಲಿ ರೈಡ್ ಆಗಲು ಸಾಧ್ಯವಿಲ್ಲ. ಆದರೂ ನಾನು ಇದನ್ನು ಏಕೆ ಮಾಡುತ್ತಿದ್ದೇನೆ..? ಏಕೆಂದರೆ ಮಣ್ಣಿನ ಸಂರಕ್ಷಣೆ ಎಂಬುದು ಬಹಳ ಮಹತ್ವವಾಗಿದೆ. ಕಳೆದ 20 ವರ್ಷಗಳಲ್ಲಿ ಭಾರತ ಸೇರಿದಂತೆ ಜಗತ್ತಿನಾದ್ಯಂತ 3 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಹಿಂದೆ ಮಣ್ಣಿನ ಸವಕಳಿ ಅಥವಾ ನಶಿಸಿ ಹೋಗುತ್ತಿರುವಿಕೆ ಒಂದು ಪ್ರಮುಖ ಕಾಳಜಿ ಹಾಗೂ ಕಾರಣವಾಗಿದೆ. ಹಾಗಾಗಿ ಇಂದು ಮಣ್ಣಿನ ಸಂರಕ್ಷಣೆ ಅತ್ಯಂತ ಮಹತ್ವವಾಗಿದೆ" ಎಂದು ಸದ್ಗುರು ತಮ್ಮ ಅಭಿಯಾನದ ಹಿಂದಿರುವ ಉದ್ದೇಶದ ಬಗ್ಗೆ ವಿವರಣೆ ನೀಡಿದ್ದಾರೆ.


  ಭೂಗೃಹವನ್ನು ಸಂರಕ್ಷಿಸುವ ಸದ್ಗುರು ಅವರ ವಿಶಾಲ ದೂರದೃಷ್ಟಿಯ ಭಾಗವಾಗಿ ಮಣ್ಣಿನ ಸಂರಕ್ಷಣೆ ಅಭಿಯಾನವು ರೂಪುಗೊಂಡಿದ್ದು ಇದರ ಮೂಲಕ ಸದ್ಗುರು ಅವರು ಪ್ರತಿಯೊಂದು ರಾಷ್ಟ್ರಗಳು ಮಣ್ಣಿನ ಸಂರಕ್ಷಣೆಗೆ ಸಂಬಂಧಿಸಿದಂತೆ ಧನಾತ್ಮಕ ನೀತಿಗಳನ್ನು ರೂಪಿಸಬೇಕೆಂದು ಆಶಯ ಹೊಂದಿದ್ದಾರೆ. ಫಲವತ್ತಾದ ಭೂಮಿಯಲ್ಲಿ ಸಾವಯವಗಳ ಅಂಶವನ್ನು ವೃದ್ಧಿಸಬೇಕೆಂಬುದು ಸದ್ಗುರು ಅವರ ವಿಚಾರವಾಗಿದೆ.ಈ ಬಗ್ಗೆ ಸದ್ಗುರು ಅವರು, "ಕ್ರಿಕೆಟ್ ಮೈದಾನವೇ ಇರಲಿ ಅಥವಾ ಜೀವನದ ಮೈದಾನವೇ ಇರಲಿ ನಾವು ಉತ್ತಮವಾಗಿ ಆಡಬೇಕೆಂದರೆ ಮಣ್ಣು ಸಹ ಉತ್ತಮವಾಗಿರಬೇಕು" ಎಂದು ಹೇಳುವ ಮೂಲಕ ಸದ್ಗುರು ತಮ್ಮ ಪರಿಸರ ಪರ ಇರುವ ಕಾಳಜಿ ಎತ್ತಿ ತೋರಿಸಿದ್ದಾರೆ.

  Published by:Kavya V
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು